ಲಂಡನ್: ನಾಟಕೀಯ ತಿರುವುಗಳ ನಡುವೆ ನಡೆದ ಟೆಸ್ಟ್ ಸರಣಿಯ ಐದನೇ ಮತ್ತು ಅಂತಿಮ ಪಂದ್ಯದಲ್ಲಿ ಭಾರತ ಇಂಗ್ಲೆಂಡ್ ವಿರುದ್ಧ ಕೇವಲ 6 ರನ್‌ಗಳ ರೋಚಕ ಜಯ ಸಾಧಿಸಿದೆ. ಈ ಜಯದೊಂದಿಗೆ ಟೆಸ್ಟ್ ಸರಣಿ 2-2 ಸಮಬಲಗೊಂಡಿದೆ.
ಓವಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ನೀಡಿದ್ದ 374 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ಕೊನೆಯ ದಿನ 85.1 ಓವರ್‌ಗಳಲ್ಲಿ 367 ರನ್‌ಗೆ ಆಲೌಟ್ ಆಗಿ ಸೋಲು ಅನುಭವಿಸಿತು.
ಇಂಗ್ಲೆಂಡ್‌ಗೆ ಗೆಲ್ಲಲು ಕೊನೆಯ ದಿನ 4 ವಿಕೆಟ್ ಕೈಯಲ್ಲಿದ್ದು, 35 ರನ್ ಬೇಕಿತ್ತು. ಆದರೆ ಸ್ಮಿತ್ ಕೇವಲ 2 ರನ್ ಸೇರಿಸಿದ ಕೂಡಲೇ ಸಿರಾಜ್ ಬೌಲಿಂಗ್‌ನಲ್ಲಿ ಕ್ಯಾಚ್ ಆಗಿ ಔಟಾದರು. ಓವರ್‌ಟನ್ 8 ರನ್ ಗಳಿಸಿ ಸಿರಾಜ್‌ಗೆ ಎಲ್‌ಬಿ ಆಗಿ ಪೆವಿಲಿಯನ್ ಸೇರಿದರು. ಜೋಶ್ ಟಂಗ್ ಪ್ರಸಿದ್ಧ್ ಕೃಷ್ಣ ಬೌಲಿಂಗ್‌ನಲ್ಲಿ ಕ್ಲೀನ್ ಬೋಲ್ಡ್ ಆದರು. ಕೊನೆಯ ಬ್ಯಾಟ್ಸ್ಮನ್ ಆಗಿ ಗಂಭೀರವಾಗಿ ಗಾಯಗೊಂಡಿದ್ದ ಕ್ರಿಸ್ ವೋಕ್ಸ್ ಮೈದಾನಕ್ಕೆ ಇಳಿದರು.
ಗಸ್ ಅಟ್ಕಿನ್ಸನ್ ಕ್ರಿಸ್ ವೋಕ್ಸ್‌ಗೆ ಸ್ಟ್ರೈಕ್ ಕೊಡದೇ ಆಟ ಸಾಗಿಸುತ್ತಿದ್ದರು. ಕೆಲವೊಮ್ಮೆ ಸ್ಟ್ರೈಕ್ ಬದಲಿಸಿಕೊಂಡು 1 ಕೈ ಬ್ಯಾಟ್ ಬೀಸುತ್ತಿದ್ದರು. ಆದರೆ ಕೊನೆಯದಾಗಿ ಸಿರಾಜ್ ಅವರ ಬೌಲಿಂಗ್‌ನಲ್ಲಿ ಅಟ್ಕಿನ್ಸನ್ ಬೌಲ್ಡ್ ಆಗಿ ಭಾರತಕ್ಕೆ ಉತ್ಸಾಹಭರಿತ ಜಯ ತಂದುಕೊಟ್ಟರು.
ಇದನ್ನು ಓದಿ –ಡೆತ್ ನೋಟ್ ಬರೆದಿಟ್ಟು 13ರ ಬಾಲಕ ಆತ್ಮಹತ್ಯೆಗೆ ಶರಣು
ಸಂಕ್ಷಿಪ್ತ ಸ್ಕೋರ್:
- ಭಾರತ ಮೊದಲ ಇನ್ನಿಂಗ್ಸ್: 224/10
- ಇಂಗ್ಲೆಂಡ್ ಮೊದಲ ಇನ್ನಿಂಗ್ಸ್: 247/10
- ಭಾರತ ಎರಡನೇ ಇನ್ನಿಂಗ್ಸ್: 396/10
- ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್: 367/10