ಇಸ್ಲಾಮಾಬಾದ್ : ಭಾರತ ನಡೆಸಿದ ಖಚಿತ ಗುರಿ ದಾಳಿ “ಆಪರೇಷನ್ ಸಿಂಧೂರ” ನಲ್ಲಿ ಜೈಶ್-ಎ-ಮೊಹಮ್ಮದ್ ಸಂಘಟನೆಯ ಭಯೋತ್ಪಾದಕ ಮತ್ತು ಕಂದಹಾರ್ ವಿಮಾನ ಹೈಜಾಕ್‌ನ ಪ್ರಮುಖ ಮಾಸ್ಟರ್‌ಮೈಂಡ್ ಅಬ್ದುಲ್ ರೌಫ್ ಅಜರ್ ಸಾವಿಗೀಡಾದ ವಿಚಾರವನ್ನು ಭಾರತೀಯ ಗುಪ್ತಚರ ಸಂಸ್ಥೆಗಳು ದೃಢಪಡಿಸಿವೆ.
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಬಹವಾಲ್ಪುರದಲ್ಲಿ ನಡೆದ ಏರ್‌ಸ್ಟ್ರೈಕ್ ವೇಳೆ ಅಜರ್ ಮಸೂದ್‌ನ ಕುಟುಂಬದ 13 ಮಂದಿ ಹತರಾಗಿದ್ದು, ಈ ಪೈಕಿ ರೌಫ್ ಅಜರ್ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಈ ದಾಳಿಯು ಭದ್ರತಾ ದೃಷ್ಟಿಯಿಂದ ಮಹತ್ವದ್ದಾಗಿದ್ದು, ಹಲವಾರು ಭಯೋತ್ಪಾದನಾ ಶಕ್ತಿಗಳಿಗೆ ದೊಡ್ಡ ಹೊಡೆತ ನೀಡಿದ ಕಾರ್ಯಾಚರಣೆಯಾಗಿದೆ.
ಭಾರತಕ್ಕೆ ಮೋಸ್ಟ್ ವಾಂಟೆಡ್ ಉಗ್ರ:
ಅಬ್ದುಲ್ ರೌಫ್ ಅಜರ್ ಹಲವು ಭಯೋತ್ಪಾದಕ ದಾಳಿಗಳ ಹಿಂದೆ ಇದ್ದ ಪ್ರಮುಖ ಸಂಚುಕೋರ. 1999ರ ಕಂದಹಾರ್ ವಿಮಾನ ಹೈಜಾಕ್, 2001ರ ಸಂಸತ್ ದಾಳಿ, ಉರಿ, ಪುಲ್ವಾಮಾ, ಪಠಾಣ್‌ಕೋಟ್ ದಾಳಿ ಹಾಗೂ ಅಕ್ಷರಧಾಮ ದಾಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ. ಲಷ್ಕರ್-ಎ-ತೈಬಾ ಹಾಗೂ ಜೈಶ್-ಎ-ಮೊಹಮ್ಮದ್ ಸಂಘಟನೆಗಳೊಂದಿಗೆ ನಂಟು ಹೊಂದಿದ್ದ ಈ ಉಗ್ರ, ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರೀ ಹಿಂಸಾತ್ಮಕ ಚಟುವಟಿಕೆಗಳನ್ನು ನಡೆಸುತ್ತಿದ್ದನು.
ಐಸಿ-814 ವಿಮಾನ ಅಪಹರಣದ ಹಿನ್ನೆಲೆ:
ಅಬ್ದುಲ್ ರೌಫ್ ಅಜರ್ 1999ರ ಡಿಸೆಂಬರ್ 24ರಂದು ನಡೆದ ಇಂಡಿಯನ್ ಏರ್‌ಲೈನ್ಸ್ ಐಸಿ-814 ವಿಮಾನ ಅಪಹರಣದ ಪ್ರಮುಖ ಮಾಸ್ಟರ್‌ಮೈಂಡ್ ಆಗಿದ್ದ. ನೇಪಾಳದ ಕಠ್ಮಂಡುವಿನಿಂದ ದೆಹಲಿಗೆ ಬರುತ್ತಿದ್ದ ವಿಮಾನವನ್ನು ಪಾಕಿಸ್ತಾನ ಮೂಲದ ಉಗ್ರರು ಅಪಹರಿಸಿ, ಅದನ್ನು ಅಫ್ಘಾನಿಸ್ತಾನದ ಕಂದಹಾರ್‌ಗೆ ತೆಗೆದುಕೊಂಡು ಹೋಗಿದ್ದರು. ವಿಮಾನದಲ್ಲಿ 176 ಪ್ರಯಾಣಿಕರಿದ್ದರು.
ಅಪಹರಣದ ನಂತರ ಉಗ್ರರು ಮೌಲಾನಾ ಮಸೂದ್ ಅಜರ್ ಸೇರಿದಂತೆ ಮೂವರು ಭಯೋತ್ಪಾದಕರನ್ನು ಬಿಡುಗಡೆ ಮಾಡಬೇಕೆಂದು ಬೇಡಿಕೆ ಇಟ್ಟಿದ್ದರು. ಏಳು ದಿನಗಳ ಕಾಲ ಯತ್ನಗಳ ನಂತರ, ವಾಜಪೇಯಿ ನೇತೃತ್ವದ ಸರ್ಕಾರ ಹತಾಶೆಯಾಗಿ ಅವರು ಬಯಸಿದ ಮೂವರು ಭಯೋತ್ಪಾದಕರನ್ನು ಬಿಡುಗಡೆ ಮಾಡಿ ಅಪಹೃತರನ್ನು ರಕ್ಷಿಸಿತು.ಇದನ್ನು ಓದಿ –ಹಲವು ಜಿಲ್ಲೆಗಳಲ್ಲಿ ಸರ್ವೇ ಸೂಪರ್‌ವೈಸರ್ ಮನೆ ಹಾಗೂ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ
ಅಂತರ್ಜಾತೀಯ ಮಟ್ಟದಲ್ಲಿ ಇಂತಹ ಉಗ್ರರ ನಾಶವು ಭದ್ರತೆಗೆ ಆಶಾಕಿರಣವನ್ನು ತರುತ್ತದೆ. ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಯಶಸ್ಸು ಭಾರತದ ಗಂಭೀರ ಭದ್ರತಾ ಬದ್ಧತೆಯ ಸಾಕ್ಷಿಯಾಗಿದೆ.