By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
    ArticlesShow More
    ಉಡುಗೊರೆ ಹೊರೆಯಾಗದಿರಲಿ
    May 16, 2026
    ಅಸಹಾಯಕತೆಗೆ ಸ್ಪಂದಿಸುವ ಕನ್ನಡಿಗರ ಸೌಜನ್ಯಕ್ಕೆ ಸಾಟಿಯುಂಟೇ……?
    May 16, 2026
    ” ರಿಜೆಕ್ಷನ್ ಟು ರೆವಲ್ಯೂಷನ್ “
    May 5, 2026
    “ಸೂರ್ಯನಿಗೆ ಸವಾಲೆಸೆದವರು”
    May 3, 2026
    ಸ್ವಭಾವದ ಸ್ವರೂಪ
    May 3, 2026
  • Sports
  • National
  • International
  • Crime
Reading: ಕೆಲಸ ಮತ್ತು ಹಸಿವು
Share
Font ResizerAa
VarthamanVarthaman
  • Home
  • Karnataka
  • Articles
  • Sports
  • National
  • International
  • Crime
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
  • Sports
  • National
  • International
  • Crime
Follow US
Varthaman > Karnataka – Latest Breaking News > Articles > ಕೆಲಸ ಮತ್ತು ಹಸಿವು
Articles

ಕೆಲಸ ಮತ್ತು ಹಸಿವು

Team Varthaman
Last updated: June 1, 2025 4:24 AM
Team Varthaman
Published: June 1, 2025
Share
SHARE
  • ಸಮರ್ಥನೆಯಲ್ಲ… ನೇರ ನುಡಿ..!

ಪಕ್ಕದಲ್ಲಿ ನಿಂತಿದ್ದ ಒಬ್ಬ ವ್ಯೆಕ್ತಿ ನೀಟಾಗಿ ಪ್ಯಾಂಟು ಶರ್ಟು ಶೂ ಹಾಕ್ಕೋಂಡು ಒಂದು ಬ್ಯಾಗ್ ಬೆನ್ನಿಗೆ ಹಾಕ್ಕೋಂಡು ನಿಂತಿದ್ದ. ನೋಡ್ತಿದ್ದಾಂಗೆ ತಿಳಿಯಿತು ಇವನು ಕೆಲಸ ಹರಸಿಕೊಂಡು ಬಂದಿದ್ದಾನೆ ಯಾವುದೋ ಇಂಟರ್ವ್ಯೂವ್ ಗೆ ಹೋಗಿಬಂದಿರಬೇಕು ಅಂತ. ಫೋನ್ ನಲ್ಲಿ ಯಾರೊಂದಿಗೋ ಮಾತಾಡ್ತಿದ್ದ. ಸಿಗ್ನಲ್ ಇತ್ತು ಹಾಗಾಗಿ ರೋಡ್ ಕ್ರಾಸ್ ಮಾಡೋಕೆ ಅಂತ ನಿಂತಿದ್ದರಿಂದ ನಾನೂ ಕೂಡ ಅವನ ಪಕ್ಕದಲ್ಲಿಯೇ ನಿಂತುಕೊಂಡಿದ್ದೆ. ಅದೇನೇನೋ ಮಾತಾಡ್ತಿದ್ದ ಆದರೆ ಎರೆಡು ವಿಚಾರ ನನ್ನ ಕಿವಿಗೆ ಬಿದ್ದಿದ್ದು “ಅವರು ಕಾಲ್ ಬ್ಯಾಕ್ ಮಾಡ್ತೀನಿ ಅಂದ್ರು” ಅಂತ ಇನ್ನೊಂದು “ಇಲ್ಲಪ್ಪ ಇನ್ನೂ ಆಗಿಲ್ಲ ಊಟ ಮಾಡೋಕೆ ದುಡ್ಡೇ ಇಲ್ಲ, ಇದ್ದಿದ್ 80ರೂಪಾಯಿ ಪಾಸಿಗೇ ಆಯ್ತು” ಎಂಬುದು.

ಈ ಎರೆಡು ಮಾತು ನನ್ನ ಜೀವನದಲ್ಲಿಯೂ ಆದಂತಹ ಅನುಭವ. ಬೆಂಗಳೂರಿನಲ್ಲಿ ಇಂಟರ್ವ್ಯೂವ್ ಅಟೇಂಡ್ ಮಾಡಿ ಅವತೇನಾದ್ರು ಕಾಲ್ ಬ್ಯಾಕ್ ಮಾಡ್ತೀನಿ ಅಂದ್ರೆ ರಿಜೆಕ್ಟ್ ಆಗಿದ್ದಾನೆ ಎಂದರ್ಥ. ಅವನು ಮಾತಿಂದ ಆ ಹುಡುಗ ರಿಜೆಕ್ಟ್ ಆಗಿದ್ದಾನೆ ಎಂಬುದು ನನಗೆ ಸ್ಪಷ್ಟವಾಯಿತು ಆದರೆ ಅವನಿಗೆ ಏನು ಅನ್ನಿಸಿದೆಯೋ ಗೊತ್ತಿಲ್ಲ. ಒಂದ್ಸಲ ಹೇಳೋಣ ಎಂದು ಬಾಯಿ ತೆಗೆದೆ ಮತ್ತೊಂದ್ ಸಲ ಒಂದು ವೇಳೆ ಅವನು ಸೆಲೆಕ್ಟ್ ಆಗುತ್ತಾನೇನೋ ಎನ್ನುವ ಆಸೆ ಅವನಲ್ಲಿದ್ದು ಅವನಿಗೆ ನಾ ಹೇಳಿ ಮತ್ತೆ ರಿಜೆಕ್ಟ್ ಆಗಿದ್ದಾನೆಂದು ತಿಳಿದು ನನ್ನ ಮೇಲೆ ಇಡಿ ಶಾಪ ಹಾಕಬಹುದು ಎಂದು ಯೋಚಿಸುತ್ತಿದ್ದೆ..ಅಷ್ಟರಲ್ಲಿ ಸಿಗ್ನಲ್ ಬೀಡ್ತು. ಅವನು ಅವನ ಪಾಡಿಗೆ ಮುಂದುವರೆದೆರೆ ನಾನು ನನ್ನ ಪಾಡಿಗೆ ಯೋಚಿಸುತ್ತಾ ಮುಂದುವರೆದೆ. ಆದರೂ ಇವನಿಗೆ ನನ್ನಿಂದೇನಾದರೂ ಸಹಾಯವಾಗಬಹುದ ಎಂದು ಯೋಚಿಸಿದೆ ಆದ್ರೆ ಅವನು ಅಷ್ಟೊತ್ತಿಗಾಗಲೆ ಮರೆಯಾಗಿಬಿಟ್ಟಿದ್ದ. ಬೆಂಗಳೂರಿನಲ್ಲಿ ಕೆಲಸ ಪಡೆಯಲು ಇಂಟರ್ವ್ಯೂವ್ ಗೆ ಅಲೆಯುವುದರ ಕಷ್ಟ ಮತ್ತು ನರಕಯಾತನೆ ನನಗೂ ಅಭ್ಯಾಸವಾಗಿತ್ತು. ಮೂರು ತಿಂಗಳುಗಳ ಕಾಲ ನಾನೂ ಇದೇ ರೀತಿ ಅಲೆದಿದ್ದೆ.

Join WhatsApp Group

ಅದಿರಲಿ ಅವನು ಊಟ ಮಾಡೋಕೆ ದುಡ್ಡಿಲ್ಲ ಅಂತ ಬೇರೆ ಹೇಳುತ್ತಿದ್ದ. ಅನ್ನದ ಬೆಲೆ ಮತ್ತು ಹಸಿದ ಹೊಟ್ಟೆ ಇವೆರೆಡು ಒಂದು ರೀತಿಯ ಆತ್ಮೀಯರಿದ್ದಂತೆ. ಹೊಟ್ಟೆ ಹಸಿದವನಿಗೆ ಅನ್ನದ ಬೆಲೆ ಚೆನ್ನಾಗಿಯೇ ಗೊತ್ತಿರುತ್ತದೆ. ಕೆಲ ವರ್ಷಗಳ ಹಿಂದೆ ಹೊಸದಾಗಿ ಕೆಲಸ ಸಿಕ್ಕಾಗ ತಿಂಗಳ ಕೊನೆಯಲ್ಲಿ ನಾನೂ ಮತ್ತು ನನ್ನ ಗೆಳೆಯ ಊಟ ಮಾಡಲು ದುಡ್ಡಿಲ್ಲದೆ ಮಧ್ಯಾಹ್ನದ ಸಮಯ ಇಬ್ಬರು ಒಂದೊಂದು ರೂಪಾಯಿ ಕೂಡಿಸಿ ಒಂದು ಬಾಳೆ ಹಣ್ಣನ್ನು ಕೊಂಡು ಇಬ್ಬರೂ ಪಾಲುದಾರರಾಗಿ ತಿಂದದ್ದು ನೆನಪಾಯಿತು. ಕೆಲಸ ಸಿಗುವುದಕ್ಕೆ ಮುಂಚೆ ಎಷ್ಟೋ ಸಲ ತಿನ್ನದೆ ತಿರುಗಿದ್ದೂ ಇದೆ ಬಿಡಿ. ಇದು ಸಾಮಾನ್ಯವಾಗಿ ಬೇರೆ ಊರುಗಳಿಂದ ಕೆಲಸ ಹರಸಿ ಬೆಂಗಳೂರಿಗೆ ಬಂದವರಿಗೆ ಚೆನ್ನಾಗಿಯೇ ಅನುಭವವಾಗಿರುತ್ತೆ.

ನೋಡುನೋಡುತ್ತಿದ್ದಂತೆ ಆ ಹುಡುಗ ಮತ್ತೆ ನಾನು ಬರುತ್ತಿದ್ದ ದಾರಿಯಲ್ಲಿ ಎದುರಾದ. ನೋಡೋಣ ಏನಾದರು ಆಗಲಿ ಒಮ್ಮೆ ಕೇಳಿಯೇ ಬಿಡೋಣ ಎಂದು ಕೇಳಿಯೇಬಿಟ್ಟೆ..”ಹಾಯ್ ಬ್ರದರ್ ನಿಮ್ಮ ಹೆಸರೇನು?”
ಒಮ್ಮೆಲೆ ನನ್ನನ್ನು ಚಕಿತನಾದಂತೆ ನೋಡಿದ. ಅವನಿಗನಿಸಿರಬೇಕು ಇವನ್ಯಾವನಪ್ಪ ಯಾರು ಅಂತಾನೆ ಗೊತ್ತಿಲ್ಲ ಮಾತಾಡಿಸ್ತಿದ್ದಾನೆ ಅಂತ.. ಮತ್ತೊಮ್ಮೆ ಕೇಳಿದೆ “ಏನು ಕೆಲಸ ಹುಡುಕುತ್ತಿದ್ದೀರಾ.?”

ಅದಕ್ಕವನು ಜೀವ ಬಂದಂತಾಗಿ “ಹೌದು ಹೌದು ಸರ್.. ಯಾವುದಾದರು ಕೆಲಸ ಇದ್ದರೆ ಹೇಳಿ ಡಿಗ್ರಿ ಮುಗಿಸಿದ್ದೇನೆ” ಅವನನ್ನು ನೋಡುತ್ತಲೇ ತಿಳಿದಿದ್ದರಿಂದ ಅವನ ಹಳೇ ಇತಿಹಾಸವೇನು ನಾನು ಕೇಳಲಿಲ್ಲ. ನನಗೆ ತಿಳಿದ ಕೆಲವರ ನಂಬರ್ ಕೊಟ್ಟೆ “ಈ ನಂಬರಿಗೆ ಕಾಲ್ ಮಾಡಿ ನೋಡಿ, ಅಶ್ವಾಕ್ ನಿಮ್ಮ ನಂಬರ್ ಕೊಟ್ಟಿದ್ದು ಅಂತ ಹೇಳಿ ಅಂತಂದೆ”.. ಅವನಿಗೆ ಖುಷಿಯಾಯಿತು ಮತ್ತೆ ನಾನು “ಊಟ ಮಾಡ್ತೀರ” ಎಂದು ಕೇಳಿದೆ..ಅವನು ಕಷ್ಟದಲ್ಲಿದ್ದರೂ ಹೊಟ್ಟೆ ಹಸಿದಿದ್ದರೂ ಕೂಡ ದೊಡ್ಡ ಸ್ವಾಭಿಮಾನಿ ಅನ್ಸುತ್ತೆ.. “ಅಯ್ಯೊ ಬೇಡ ಸರ್ ಇಷ್ಟು ಕೇಳಿದ್ರಲ್ಲ ಅಷ್ಟೇ ಸಾಕು..ತುಂಬಾ ತುಂಬಾ ಥ್ಯಾಂಕ್ಸ್ ಸರ್ ” ಅಂದ.
ಅದಕ್ಕೆ ನಾನು “ಸರಿ ನಿಮ್ಮ ಹೆಸರೇನು ? ಯಾವ ಊರು”
“ಅಭೀಷೇಕ್ ಅಂತ, ಬೇಲೂರು ಸರ್” ಅಂತಂದ.
“ಓಕೆ..ಕ್ಯಾರಿ ಆನ್” ಅಂತ ಹೇಳಿ ನಡೆದೆ. ಕನಿಷ್ಟ ಪಕ್ಷ ನಾನು ಅಷ್ಟಾದರು ಮಾತನಾಡಿಸಿದೆನಲ್ಲಾ ಎಂಬುದು ಸಾರ್ಥಕತೆ ನನ್ನಲ್ಲಿತ್ತು.

ನೋಡಿ ಎಂತ ವಿಪರ್ಯಾಸ ಅಲ್ವ?.. ಮನುಷ್ಯ ಮನುಷ್ಯನಿಗೆ ಆಗಲಿಲ್ಲವೆಂದರೆ ಏನು ಪ್ರಯೋಜನ ಹೇಳಿ. ಕೊಡೋದೇನು ಬೇಡ ಅಟ್ಲೀಸ್ಟ್ ಸಮಧಾನಕ್ಕಾದರು ಒಂದೆರೆಡು ಮಾತು ಒಂದು ದೊಡ್ಡ ಪ್ರೋತ್ಸಾಹವಿದ್ದಂತೆ. ಹಾಗೆಯೇ ಅನ್ನವನ್ನು ನಮಗೆ ಎಷ್ಟು ಬೇಕೋ ಅಷ್ಟೆ ಹಾಕೋಂಡು ತಿನ್ನಬೇಕು, ಯಾಕೆಂದರೆ ಅನ್ನ ಎಸೆಯುವ ಮುನ್ನ ನಾವು ನಡೆದು ಬಂದ ದಾರಿಯನ್ನು ಮರೆಯಬಾರದು. ಹಸಿದವರಿಗೆ ಒಂದು ಹೊತ್ತಿನ ಅನ್ನ ನೀಡುವ ಪುಣ್ಯ ನಮಗೆ ಬಹುಶಃ ಯಾವುದರಲ್ಲಿಯೂ ಸಿಗುವುದಿಲ್ಲ. ಪ್ರಾರ್ಥನಾಲಯಗಳಲ್ಲಿ ಶ್ರದ್ದೆಯಿಂದ ನಾವು ಮಾಡುವ ಪ್ರಾಥನೆಗಿಂತ ಮಿಗಿಲು ಹಸಿದವರಿಗೆ ಅನ್ನ ಕೊಡುವುದಾಗಿದೆ. ಮಾನವೀಯನ್ನು ಬೆಳಗಿಸುವಲ್ಲಿ ನೆರವಾಗೋಣ ಎನ್ನುವ ಆಶಯ.

ಪ್ರೀತಿಯಿಂದ..
ಅಶ್ವಾಕ್ ಶಾಹ್ ಕನ್ನಡಿಗ

  • ರಾಜ್ಯದಲ್ಲಿ ಮತ್ತೆ ಬಸ್‌ ಟಿಕೆಟ್ ದರ ಏರಿಕೆ ಸಾಧ್ಯತೆ
    by Team Varthaman
    June 27, 2026
  • ಪಾಸ್‌ಪೋರ್ಟ್ ಶುಲ್ಕ ಏರಿಕೆ: ಹೊಸ ದರಗಳು ತಕ್ಷಣದಿಂದಲೇ ಜಾರಿ
    by Team Varthaman
    June 25, 2026
  • ಪೋಕ್ಸೊ ಪ್ರಕರಣ: ವಚನಾನಂದ ಶ್ರೀಗಳಿಗೆ ಹಿನ್ನಡೆ
    by Team Varthaman
    June 25, 2026
  • 13 ಸಚಿವರಿಗೆ ಜಿಲ್ಲಾ ಉಸ್ತುವಾರಿ ಜವಾಬ್ದಾರಿ
    by Team Varthaman
    June 25, 2026
  • ಅಬಕಾರಿ ಇಲಾಖೆಯ ಹಿರಿಯ ಅಧಿಕಾರಿಗೆ ಇಡಿ ಶಾಕ್: 6 ಕಡೆ ದಾಳಿ
    by Team Varthaman
    June 24, 2026
“ಹಾಸನಾಂಬ ದೇವಿ” ದರ್ಶನ
ಸೊಪ್ಪು ತರಕಾರಿ ಕೊಂಡು ಫೋನ್ ಪೇ ಮಾಡುವ‌ ಮುನ್ನ…!!
ಯೋಗಾ ಯೋಗ..
ಮಹಾಲಯ ಅಮಾವಾಸ್ಯೆ ಅಥವಾ ಸರ್ವಪಿತ್ರೀ ಅಮಾವಾಸ್ಯೆ
ಗಣೇಶ ಚತುರ್ಥಿ 2024 (Ganesha Chaturthi 2024)
TAGGED:hungerKannada Articlemental healthwork life
Share This Article
Facebook Email Print
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
BengaluruKarnatakaPolitics

ಸ್ಥಳೀಯ ಸಂಸ್ಥೆ ಚುನಾವಣೆ ಒಂದೇ ಬಾರಿಗೆ ನಡೆಸಲು ಚಿಂತನೆ: ಡಿ ಕೆ ಶಿವಕುಮಾರ್

Team Varthaman
Team Varthaman
January 19, 2026
ಬೆಂಗಳೂರು ಅಗ್ನಿ ದುರಂತ – 5 ಸಾವು: ಕಟ್ಟಡ ಮಾಲೀಕ ಸೇರಿ 2 ಬಂಧನ
ಶಬರಿಮಲೆ ದೇಗುಲದ ವಿಗ್ರಹದಿಂದ 4.5 ಕೆಜಿ ಚಿನ್ನ ನಾಪತ್ತೆ – ಹೈಕೋರ್ಟ್ ತನಿಖೆಗೆ ಆದೇಶ
ಅಮರನಾಥ ಯಾತ್ರೆಗೆ ಭದ್ರತಾ ಬಲಗಳು ಸಜ್ಜು
ಹೇಮಾವತಿ ಜಲಾಶಯಕ್ಕೆ ಒಳಹರಿವು ಗಣನೀಯವಾಗಿ ಹೆಚ್ಚಳ
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?