ವಾಷಿಂಗ್ಟನ್, ಏಪ್ರಿಲ್ 24: ಅಮೆರಿಕದ ನ್ಯೂಕ್ಯಾಸಲ್‌ನಲ್ಲಿ ಭೀಕರ ಘಟನೆ ನಡೆದಿದ್ದು, ಮಂಡ್ಯ ಮೂಲದ ಟೆಕ್ ಉದ್ಯಮಿ ಹರ್ಷವರ್ಧನ್ ಎಸ್ ಕಿಕ್ಕೇರಿ (ವಯಸ್ಸು 57) ಅವರು ತಮ್ಮ ಪತ್ನಿ ಶ್ವೇತಾ ಪನ್ಯಂ (44) ಮತ್ತು 14 ವರ್ಷದ ಮಗನನ್ನು ಗುಂಡು ಹಾರಿಸಿ ಹತ್ಯೆಗೈದು ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ವೇಳೆ ದಂಪತಿಯ ಇನ್ನೊಬ್ಬ ಮಗ ಮನೆಯಲ್ಲಿ ಇಲ್ಲದ ಕಾರಣ ಅವನು ಬಚಾವಾಗಿದ್ದಾನೆ. ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದು, ಘಟನೆಯ ಹಿನ್ನೆಲೆ ಇನ್ನೂ ಸ್ಪಷ್ಟವಾಗಿಲ್ಲ. ಈ ಹತ್ಯೆ-ಆತ್ಮಹತ್ಯೆ ಪ್ರಕರಣಕ್ಕೆ ಕಾರಣ ಏನೆಂಬುದರ ಬಗ್ಗೆ ಯಾವುದೇ ಸ್ಪಷ್ಟತೆ ಸಿಕ್ಕಿಲ್ಲ. ಸ್ಥಳೀಯರು ದಂಪತಿಯನ್ನು ಸ್ನೇಹಪರರು ಹಾಗೂ ನೆರೆಹೊರೆಯವರೊಂದಿಗೆ ಉತ್ತಮ ಸಂಪರ್ಕ ಹೊಂದಿದ್ದವರು ಎಂದು ಹೇಳಿದ್ದಾರೆ.
ಘಟನೆಯು ಏಪ್ರಿಲ್ 24 ರಂದು ನ್ಯೂಕ್ಯಾಸಲ್‌ನಲ್ಲಿ ನಡೆದಿದೆ.
ಮೃತರು:
- ಹರ್ಷವರ್ಧನ್ ಎಸ್ ಕಿಕ್ಕೇರಿ (57)
- ಶ್ವೇತಾ ಪನ್ಯಂ (44)
- 14 ವರ್ಷದ ಪುತ್ರ

ಇದರಲ್ಲಿ 14 ವರ್ಷದ ಬಾಲಕನನ್ನು ಗುರುತಿಸಲಾಗಿದ್ದು, ಆದರೆ ಇನ್ನೊಬ್ಬ ಮಗನ ಹೆಸರು ಮತ್ತು ವಿಳಾಸವನ್ನು ಪೊಲೀಸರು ಹೊರಪಡಿಸಿಲ್ಲ.
ಹರ್ಷವರ್ಧನ್ ಅವರ ವೃತ್ತಿಜೀವನ:
ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲೂಕಿನಿಂದ ಬಂದ ಹರ್ಷವರ್ಧನ್ ಅವರು 2017ರಲ್ಲಿ ಅಮೆರಿಕದಿಂದ ಭಾರತಕ್ಕೆ ವಾಪಸ್ ಬಂದು, ಮೈಸೂರಿನಲ್ಲಿ “ಹೋಲೋವರ್ಲ್ಡ್” ಎಂಬ ತಂತ್ರಜ್ಞಾನ ಕಂಪನಿಯನ್ನು ಆರಂಭಿಸಿದ್ದರು. ಅವರ ಪತ್ನಿ ಶ್ವೇತಾ ಪನ್ಯಂ ಸಹ ಸಂಸ್ಥಾಪಕರಾಗಿದ್ದರು. 2022ರ ಕೋವಿಡ್-19 ಕಾಲದಲ್ಲಿ ಕಂಪನಿ ಬಂದ್ ಆದ ನಂತರ, ದಂಪತಿ ಮತ್ತೆ ಅಮೆರಿಕದತ್ತ ಮರಳಿದ್ದರು.
ವೃತ್ತಿ ಜೀವನ:
ಹರ್ಷವರ್ಧನ್ ರೊಬೊಟಿಕ್ಸ್ ಕ್ಷೇತ್ರದಲ್ಲಿ ಪರಿಣಿತರಾಗಿದ್ದರು. ಅವರು ಭಾರತದಲ್ಲಿ ಗಡಿ ಭದ್ರತೆಗಾಗಿ ರೊಬೋಟಿಕ್ ಪರಿಹಾರಗಳ ಬಗ್ಗೆ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದರು. ಅಲ್ಲದೆ, ಅವರು ಅಮೆರಿಕದ ಮಾಯಕ್ರೋಸಾಫ್ಟ್ ಕಂಪನಿಯಲ್ಲಿಯೂ ಕೆಲಸ ಮಾಡಿದ್ದರು.ಇದನ್ನು ಓದಿ –ಮದ್ಯದ ಬೆಲೆ ಹೆಚ್ಚಳ ಖಚಿತ, ಹೊಸ ಬೆಲೆ ಏರಿಕೆ ಅಧಿಸೂಚನೆ ಹೊರಡಿಕೆ
ಈ ದುರ್ಘಟನೆ ಹಿನ್ನೆಲೆಯಲ್ಲಿ ದಂಪತಿಯ ಬಾಳಿನ ಹಿಂದಿನ ಘಟನೆಗಳು ಮತ್ತು ಮಾನಸಿಕ ಒತ್ತಡಗಳ ಬಗ್ಗೆ ಈಗ ಪೊಲೀಸರು ಸುತ್ತಮುತ್ತದವರಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ.