ಬೆಂಗಳೂರು, ಜು. 24: ನಗರದ ಹೆಣ್ಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗರ್ಭಿಣಿಯೊಬ್ಬರ ಅನುಮಾನಾಸ್ಪದ ಸಾವು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಮೃತ ಮಹಿಳೆ ಸುಮನಾ (22) ಅವರು ಉತ್ತರ ಪ್ರದೇಶ ಮೂಲದವರಾಗಿದ್ದು, ತಮ್ಮ ಪತಿ ಶಿವಂ ಜೊತೆಗೆ ಥಳಿಸಂದ್ರದ ಬಾಡಿಗೆ ಮನೆಯಲ್ಲಿ ವಾಸವಿದ್ದರು.
ಮೂರು ದಿನಗಳ ಹಿಂದೆ ಸೊಮನಾ ಮೃತಪಟ್ಟಿದ್ದು, ಶವದ ಬಳಿ ಪತಿ ಇಬ್ಬರು ದಿನ ಕಾಲ ಕಳೆದಿದ್ದಾನೆ ಎಂಬ ಅಘಾತಕಾರಿ ಮಾಹಿತಿ ಲಭ್ಯವಾಗಿದೆ. ಮೊದಲ ದಿನ ಪತಿ ಕೆಲಸಕ್ಕೆ ಹೋಗಿ ಬಂದು ಶವದ ಜೊತೆಗೆ ರಾತ್ರಿ ಕಳೆದಿದ್ದಾನೆ. ಎರಡನೇ ದಿನ ರಾತ್ರಿ ಮದ್ಯಪಾನ ಮಾಡಿ, ಪತ್ನಿಯ ಮೃತದೇಹದ ಮುಂದೆ ಮೊಟ್ಟೆ ಪಲ್ಯ ತಿಂದು ಊಟ ಮಾಡಿದಿದ್ದಾನೆ.
ನಿನ್ನೆ ಮಧ್ಯಾಹ್ನದಿಂದ ಮೃತದೇಹದಿಂದ ದುರ್ವಾಸನೆ ಬರುತ್ತಿದ್ದುದರಿಂದ ನೆರೆಹೊರೆಯವರು ಅನುಮಾನಿಸಿ ಮನೆಯ ಒಳಗೆ ಹೋಗಿ ನೋಡಿದಾಗ ಸೊಮನಾ ಮೃತಪಟ್ಟಿರುವುದು ಪತ್ತೆಯಾಗಿದೆ. ಈ ಸಮಯದಲ್ಲಿ ಪತಿ ಶಿವಂ ನಾಪತ್ತೆಯಾಗಿದ್ದಾನೆ. ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪೊಲೀಸರು ನೀಡಿದ ಪ್ರಾಥಮಿಕ ಮಾಹಿತಿಯ ಪ್ರಕಾರ, ಮೃತದೇಹದ ಮೇಲೆ ಯಾವುದೇ ಹೊರಗಿನ ಗಾಯದ ಗುರುತುಗಳು ಇಲ್ಲ. ಆದರೆ ಮೂಗಿನಿಂದ ರಕ್ತಸ್ರಾವವಾಗಿರುವುದು ಗಮನಕ್ಕೆ ಬಂದಿದೆ. ಸಾವು ಹೇಗೆ ನಡೆದಿದೆ ಎಂಬುದು ಇನ್ನೂ ನಿಗೂಢವಾಗಿದ್ದು, ಪತ್ತೆಯಾಗಬೇಕಾದ ಶಿವಂನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.ಇದನ್ನು ಓದಿ –ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ
ಹೆಣ್ಣೂರು ಪೊಲೀಸ್ ಠಾಣೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸುತ್ತಿದ್ದಾರೆ.