– ಮರುಮೌಲ್ಯಮಾಪನ ಹಾಗೂ ಸ್ಕ್ಯಾನ್ಡ್ ಪ್ರತಿಗೆ ಅರ್ಜಿ ಸಲ್ಲಿಸಲು ಅವಕಾಶ!
ಬೆಂಗಳೂರು: ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ-1 (2025)ರ ಫಲಿತಾಂಶ ಪ್ರಕಟವಾಗಿದೆ. ಒಟ್ಟು 6,37,805 ವಿದ್ಯಾರ್ಥಿಗಳಲ್ಲಿ 4,68,439 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಒಟ್ಟಾರೆ ಉತ್ತೀರ್ಣ ಪ್ರಮಾಣ ಶೇಕಡಾ 73.45 ಆಗಿದೆ.
ಫಲಿತಾಂಶ ನೋಡಲು ವೆಬ್‌ಸೈಟ್:
Contents
- ಬೆಂಗಳೂರು: ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ-1 (2025)ರ ಫಲಿತಾಂಶ ಪ್ರಕಟವಾಗಿದೆ. ಒಟ್ಟು 6,37,805 ವಿದ್ಯಾರ್ಥಿಗಳಲ್ಲಿ 4,68,439 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಒಟ್ಟಾರೆ ಉತ್ತೀರ್ಣ ಪ್ರಮಾಣ ಶೇಕಡಾ 73.45 ಆಗಿದೆ.
- ಫಲಿತಾಂಶ ನೋಡಲು ವೆಬ್‌ಸೈಟ್:
- ಮರುಮೌಲ್ಯಮಾಪನ ಹಾಗೂ ಸ್ಕ್ಯಾನ್ ಪ್ರತಿಗೆ ಅರ್ಜಿ ಸಲ್ಲಿಕೆ ವಿವರ !
- ಈ ವರ್ಷ ಪರೀಕ್ಷೆಯ ವಿವರ:
- ಜಿಲ್ಲಾವಾರು ಶ್ರೇಣಿಯಲ್ಲಿ ಉತ್ತೀರ್ಣ ಶೇಕಡಾ ಹಂಚಿಕೆ:
ಮರುಮೌಲ್ಯಮಾಪನ ಹಾಗೂ ಸ್ಕ್ಯಾನ್ ಪ್ರತಿಗೆ ಅರ್ಜಿ ಸಲ್ಲಿಕೆ ವಿವರ !
ಫಲಿತಾಂಶದ ಬಗ್ಗೆ ಅನುಮಾನವಿದ್ದರೆ ವಿದ್ಯಾರ್ಥಿಗಳು ಮರುಮೌಲ್ಯಮಾಪನ (Revaluation), ಮರುಪರಿಶೀಲನೆ (Retotalling) ಮತ್ತು ಸ್ಕ್ಯಾನ್ ಮಾಡಲಾದ ಉತ್ತರಪತ್ರ (Scanned Copy) ಪಡೆಯಲು ಅರ್ಜಿ ಹಾಕಬಹುದು.
ಈ ವರ್ಷ ಪರೀಕ್ಷೆಯ ವಿವರ:
- ಪರೀಕ್ಷೆ ದಿನಾಂಕ: 01-03-2025 ರಿಂದ 20-03-2025ರವರೆಗೆ
- ಮೌಲ್ಯಮಾಪನ: 21-03-2025 ರಿಂದ 02-04-2025ರವರೆಗೆ
- ಮೌಲ್ಯಮಾಪಕರು: 28,092
- ಕೇಂದ್ರಗಳು: 1,171
- ಮೌಲ್ಯಮಾಪನ ಕೇಂದ್ರಗಳು: 76
ಜಿಲ್ಲಾವಾರು ಶ್ರೇಣಿಯಲ್ಲಿ ಉತ್ತೀರ್ಣ ಶೇಕಡಾ ಹಂಚಿಕೆ:
| ಜಿಲ್ಲಾ | ಶೇಕಡಾವಾರು ಫಲಿತಾಂಶ |
|---|---|
| ಉಡುಪಿ | 93.90% |
| ದಕ್ಷಿಣ ಕನ್ನಡ | 93.57% |
| ಬೆಂಗಳೂರು ದಕ್ಷಿಣ | 85.36% |
| ಕೊಡಗು | 83.84% |
| ಬೆಂಗಳೂರು ಉತ್ತರ | 83.31% |
| ಉತ್ತರ ಕನ್ನಡ | 82.93% |
| ಶಿವಮೊಗ್ಗ | 79.91% |
| ಬೆಂಗಳೂರು ಗ್ರಾಮಾಂತರ | 79.70% |
| ಚಿಕ್ಕಮಗಳೂರು | 79.56% |
| ಹಾಸನ | 77.56% |
| ಚಿಕ್ಕಬಳ್ಳಾಪುರ | 75.80% |
| ಮೈಸೂರು | 74.30% |
| ಚಾಮರಾಜನಗರ | 73.27% |
| ಬಾಗಲಕೋಟೆ | 72.83% |
| ಕೋಲಾರ | 72.45% |
| ಧಾರವಾಡ | 72.32% |
| ತುಮಕೂರು | 72.02% |
| ರಾಮನಗರ | 69.71% |
| ದಾವಣಗೆರೆ | 69.45% |
| ಹಾವೇರಿ | 67.56% |
| ಬೀದರ್ | 67.31% |
| ಕೊಪ್ಪಳ | 67.20% |
| ಚಿಕ್ಕೋಡಿ | 66.76% |
| ಗದಗ | 66.64% |
| ಬೆಳಗಾವಿ | 65.37% |
| ಬಳ್ಳಾರಿ | 64.41% |
| ಚಿತ್ರದುರ್ಗ | 59.87% |
| ವಿಜಯಪುರ | 58.81% |
| ರಾಯಚೂರು | 58.75% |
| ಕಲಬುರಗಿ | 55.70% |
| ಯಾದಗಿರಿ | 48.45% |








