- ಎಸ್‌ಸಿಒ ಶೃಂಗಸಭೆಗೆ ಪ್ರಧಾನಿ ಮೋದಿ ನಿರೀಕ್ಷೆ
ನವದೆಹಲಿ: ಕಳೆದ 10 ತಿಂಗಳ ಅವಧಿಯಲ್ಲಿ ಭಾರತ-ಚೀನಾ ಸಂಬಂಧಗಳು ಸ್ಥಿರ ಪ್ರಗತಿಯನ್ನು ಸಾಧಿಸಿವೆ, ಕಾರಣ ಪರಸ್ಪರರ ಹಿತಾಸಕ್ತಿಗಳು ಹಾಗೂ ಸೂಕ್ಷ್ಮತೆಗಳನ್ನು ಗೌರವಿಸುವ ನಿಲುವು ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಪ್ರಧಾನಿ ಮೋದಿ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರನ್ನು ಭೇಟಿಯಾದ ನಂತರ, ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಈ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಕಳೆದ ವರ್ಷದ ಅಕ್ಟೋಬರ್‌ನಲ್ಲಿ ರಷ್ಯಾದ ಕಜಾನ್ ನಗರದಲ್ಲಿ ನಡೆದ ಬಹುಪಕ್ಷೀಯ ಕಾರ್ಯಕ್ರಮದ ವೇಳೆ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ನಡೆಸಿದ ಮಾತುಕತೆಗಳನ್ನು ಮೋದಿ ಇಲ್ಲಿ ಸ್ಮರಿಸಿದರು. “ವಿದೇಶಾಂಗ ಸಚಿವ ವಾಂಗ್ ಯಿ ಅವರನ್ನು ಭೇಟಿಯಾದದ್ದು ಸಂತೋಷ ತಂದಿತು. ಕಳೆದ ವರ್ಷ ಕಜಾನ್‌ನಲ್ಲಿ ಅಧ್ಯಕ್ಷ ಕ್ಸಿ ಅವರನ್ನು ಭೇಟಿ ಮಾಡಿದ ನಂತರ ಭಾರತ-ಚೀನಾ ಸಂಬಂಧಗಳು ಸ್ಥಿರವಾಗಿ ಮುಂದೆ ಸಾಗುತ್ತಿವೆ” ಎಂದು ಮೋದಿ ಅಭಿಪ್ರಾಯಪಟ್ಟರು.ಇದನ್ನು ಓದಿ –ಲೋ ಬಿಪಿಯಿಂದ 6 ವರ್ಷದ ಬಾಲಕ ದುರ್ಮರಣ
ಮುಂದಿನ ದಿನಗಳಲ್ಲಿ ಚೀನಾದ ಟಿಯಾಂಜಿನ್ನಲ್ಲಿ ನಡೆಯಲಿರುವ ಸಭೆಗೆ ತಾವು ನಿರೀಕ್ಷೆಯಲ್ಲಿರುವುದಾಗಿ ಅವರು ತಿಳಿಸಿದರು. “ಭಾರತ ಮತ್ತು ಚೀನಾ ನಡುವಿನ ಸ್ಥಿರ, ಊಹಿಸಬಹುದಾದ ಹಾಗೂ ರಚನಾತ್ಮಕ ಸಂಬಂಧಗಳು ಪ್ರಾದೇಶಿಕ ಮತ್ತು ಜಾಗತಿಕ ಶಾಂತಿ ಹಾಗೂ ಸಮೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತವೆ” ಎಂದು ಪ್ರಧಾನಿ ಮೋದಿ ಹೇಳಿದರು.