- ರಾಜ್ಯ ಸರ್ಕಾರಕ್ಕೆ ತೀವ್ರ ಹಿನ್ನಡೆ
ನವದೆಹಲಿ : ಅರಮನೆ ಮೈದಾನ (Palace Ground) ಭೂಮಿ ವಿವಾದದಲ್ಲಿ ಕರ್ನಾಟಕ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಭಾರೀ ಹಿನ್ನಡೆ ನೀಡಿದ್ದು, ಮೈಸೂರು ರಾಜಮನೆತನಕ್ಕೆ ₹3,400 ಕೋಟಿ ಮೌಲ್ಯದ ಟಿಡಿಆರ್ (Transferable Development Rights) ನೀಡುವಂತೆ ನಿರ್ಧರಿಸಿದೆ.
ನ್ಯಾಯಮೂರ್ತಿ ಅರವಿಂದ್ ಕುಮಾರ್ ನೇತೃತ್ವದ ದ್ವಿಸದಸ್ಯ ಪೀಠ ಈ ಮಹತ್ವದ ಆದೇಶವನ್ನು ಹೊರಡಿಸಿದೆ. ಬೆಂಗಳೂರು ನಗರದ ಬಳ್ಳಾರಿ ರಸ್ತೆ ಮತ್ತು ಜಯಮಹಲ್ ರಸ್ತೆಗಳ ವಿಸ್ತರಣೆಗಾಗಿ ಸರ್ಕಾರ ಸ್ವಾಧೀನಪಡಿಸಿಕೊಂಡ 15 ಎಕರೆಗೂ ಹೆಚ್ಚು ಭೂಮಿಗೆ ಪರಿಹಾರವಾಗಿ ಈ ಟಿಡಿಆರ್ ನೀಡಬೇಕು ಎಂದು ಸೂಚಿಸಲಾಗಿದೆ.
ಇದರ ಹಿಂದೆಯೇ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ಒಂದು ವಾರದೊಳಗೆ ಟಿಡಿಆರ್ ಠೇವಣಿ ಇಡಬೇಕು ಎಂದು ಸೂಚಿಸಿತ್ತು. ಈ ಆದೇಶದ ಮೂಲಕ ಸರ್ಕಾರವು ₹3,400 ಕೋಟಿಯ ಟಿಡಿಆರ್ ಅನ್ನು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ಕಚೇರಿಯಲ್ಲಿ ಠೇವಣಿಯಾಗಿಡಿಸಿಗಿತ್ತು.ಆದರೆ ಈ ಟಿಡಿಆರ್ ಅನ್ನು ರಾಜಮನೆತನಕ್ಕೆ ನೀಡಬಾರದು ಎಂದು ಮಧ್ಯಂತರ ಅರ್ಜಿಯೊಂದರ ಮೂಲಕ ರಾಜ್ಯ ಸರ್ಕಾರ ಮನವಿ ಮಾಡಿತ್ತು.
ಈ ಕುರಿತು ರಾಜಮನೆತನದ ಪರ ವಕೀಲರು ವಿರೋಧ ವ್ಯಕ್ತಪಡಿಸಿದ್ದರು. ಸರ್ಕಾರದ ವಾದ ಪ್ರಕಾರ ಟಿಡಿಆರ್ ಅನ್ನು ರಿಜಿಸ್ಟ್ರಾರ್ ಬಳಿ ಇಡಬೇಕೆಂದು ಹೇಳಿದರು. ಆದರೆ ಸುಪ್ರೀಂ ಕೋರ್ಟ್ ಇದೀಗ ಟಿಡಿಆರ್ ಅನ್ನು ನೇರವಾಗಿ ಮೈಸೂರು ರಾಜವಂಶಸ್ಥರಿಗೆ ಹಸ್ತಾಂತರಿಸಲು ಅಂತಿಮ ಆದೇಶ ನೀಡಿದೆ.ಇದನ್ನು ಓದಿ –ಈ ವರ್ಷ ಮೇ 27ರಿಂದ ರಾಜ್ಯಕ್ಕೆ ಮುಂಗಾರು ಪ್ರವೇಶಿಸುವ ಸಾಧ್ಯತೆ!
ಈ ಪ್ರಕರಣದಲ್ಲಿ, ಭೂಮಿಯ ಮೇಲೆ ರಾಜಮನೆತನಕ್ಕೆ ಹಕ್ಕಿಲ್ಲ ಎಂಬ ರಾಜ್ಯ ಸರ್ಕಾರದ ಮುಖ್ಯ ಅರ್ಜಿ ಇನ್ನೂ ಬಾಕಿ ಇದೆ. ಆದರೂ, ಅಂತಿಮ ತೀರ್ಪು ಬಂದರೂ ಟಿಡಿಆರ್ ಸ್ವೀಕರಿಸಬಹುದೆಂಬ ಶರತ್ತಿನೊಂದಿಗೆ ಈಗಲೇ ಟಿಡಿಆರ್ ನೀಡಲು ಕೋರ್ಟ್ ಸೂಚನೆ ನೀಡಿರುವುದು ಗಮನಾರ್ಹ.