By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
    ArticlesShow More
    ” ರಿಜೆಕ್ಷನ್ ಟು ರೆವಲ್ಯೂಷನ್ “
    May 5, 2026
    “ಸೂರ್ಯನಿಗೆ ಸವಾಲೆಸೆದವರು”
    May 3, 2026
    ಸ್ವಭಾವದ ಸ್ವರೂಪ
    May 3, 2026
    “ರೈಟ್ ಟು ಡ್ರೈ”
    May 3, 2026
    ಸುಡುವ ಸೂರ್ಯನಿಗೊಂದು ಪತ್ರ
    May 3, 2026
  • Sports
  • National
  • International
  • Crime
Reading: “ಬುದ್ಧ ಪೌರ್ಣಮಿ ವಿಶೇಷ “
Share
Font ResizerAa
VarthamanVarthaman
  • Home
  • Karnataka
  • Articles
  • Sports
  • National
  • International
  • Crime
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
  • Sports
  • National
  • International
  • Crime
Follow US
Varthaman > Karnataka – Latest Breaking News > Articles > “ಬುದ್ಧ ಪೌರ್ಣಮಿ ವಿಶೇಷ “
ArticlesTrending

“ಬುದ್ಧ ಪೌರ್ಣಮಿ ವಿಶೇಷ “

Team Varthaman
Last updated: May 11, 2025 5:33 AM
Team Varthaman
Published: May 11, 2025
Share
SHARE

ಕಿಸಾ ಗೌತಮಿ.

ಇದೊಂದು ಗೌತಮ ಬುದ್ಧರ ಜೀವನದಲ್ಲಿ ಸಂಭವಿಸಿದ ಚಮತ್ಕಾರಿ ಘಟನೆ. ಈ ಕಥೆ ಸುಮಾರಾಗಿ ಎಲ್ಲರಿಗೂ ಗೊತ್ತಿರುವಂತದ್ದೇ.

ತಾಯಿಯೊಬ್ಬಳಿಗೆ , ತನ್ನ ಸರ್ವಸ್ವ ಎಂಬಂತಿದ್ದ , ತನ್ನ ಒಬ್ಬನೇ ಮಗ ತೀರಿಕೊಂಡಾಗ, ಆಕೆಗೆ ದಿಕ್ಕೇ ತೋಚದಂತಾಯಿತು. ಇದಕ್ಕೆ ಮೊದಲೇ ಆಕೆಯ ಪತಿ , ಇನ್ನೆರಡು ಮಕ್ಕಳು ತೀರಿಹೋಗಿದ್ದರು. ಆಕೆ ದುಃಖ ತಡೆಯಲಾರದೇ, ಸಿಕ್ಕ ಸಿಕ್ಕವರೊಂದಿಗೆ, ಯಾರಾದರೂ ನನ್ನ ಮಗನನ್ನು ಹೇಗಾದರೂ ಬದುಕಿಸಿಕೊಡಿ, ‌ ಇವನನ್ನು ಬದುಕಿಸಿ ಕೊಡುವಂತವರು ಯಾರಾದರೂ ಇದ್ದರೆ ದಯವಿಟ್ಟು ನನಗೆ ತಿಳಿಸಿ, ನನಗೀಗ ಇವನಲ್ಲದೇ , ಇನ್ಯಾರೂ ದಿಕ್ಕಿಲ್ಲ. ನನಗೆ ಇವನಿಲ್ಲದೇ , ಬದುಕುವ ಆಸೆ ಇಲ್ಲವಾಗಿದೆ. ಯಾರಾದರೂ ನನ್ನ ಈ ಒಂದು ಕುಡಿಯನ್ನು ಬದುಕಿಸುವಂಥ ಮಹಾತ್ಮರು ಎಲ್ಲಿದ್ದಾರೆ ಎಂಬುದನ್ನು ತಿಳಿಸಿ, ಎಂದು ದುಃಖದಿಂದ ಯಾಚಿಸುತ್ತಾ, ಅಲೆದಾಡುತ್ತಿದ್ದಳು.

Join WhatsApp Group


ಆಗ ಅವಳಿಗೆ ಯಾರೋ ಒಬ್ಬರು, ಗೌತಮ ಬುದ್ಧರು, ತಮ್ಮ ಹಳ್ಳಿಗೆ ಆಗಮಿಸಿ ಒಂದು ಮಾವಿನ ತೋಪಿನಲ್ಲಿ ತಮ್ಮ ಶಿಷ್ಯರೊಂದಿಗೆ ತಂಗಿದ್ದಾರೆ, ನೀನು ಅವರ ಬಳಿಗೆ ಹೋಗಿ, ನಿನ್ನ ಸತ್ತ ಮಗನನ್ನು ಅವರ ಪಾದದ ಬಳಿಗೆ ಇಡು, ಅವರಿಂದ ಇವನನ್ನು ಬದುಕಿಸಲು ಸಾಧ್ಯವಾಗಬಹುದು,ಎಂದು ಹೇಳಿದರು.

‌ ಈ ಮಾತನ್ನು ಕೇಳಿದ ಅವಳು ಬಹಳ ಹಂಬಲದಿಂದ, ತಕ್ಷಣ ತನ್ನ ಮಗನ ಶವವನ್ನು ಹೊತ್ತುಕೊಂಡು ಬುದ್ಧರ ಬಳಿಗೆ ಓಡಿ ಹೋಗಿ,ಅವರ ಪಾದದ ಬಳಿಗೆ ಇಡುತ್ತಾ, ಹೇ ಪ್ರಭುವೇ, ಹೇಗಾದರೂ ಮಾಡಿ ನನ್ನ ಮಗನನ್ನು ಜೀವಂತವಾಗಿ ಉಳಿಸಿ ಎಂದು ಬೇಡಿಕೊಂಡಳು.

ಆಗ ಬುದ್ಧರು, ತಾಯಿ, ಇದೇನು ಅಷ್ಟು ಕಷ್ಟದ ವಿಷಯವಲ್ಲ, ಆದರೆ ನೀನೊಂದು ಚಿಕ್ಕ ನಿಯಮವನ್ನು ಪಾಲಿಸಬೇಕಾಗುತ್ತದೆ ಅಷ್ಟೇ, ಎಂದರು.

‌ ನಿಮ್ಮ ನಿಯಮ ಏನೇ ಇದ್ದರೂ, ನನ್ನ ಮಗನಿಗಾಗಿ ಅದನ್ನು ನಾನು ಪಾಲಿಸುತ್ತೇನೆ, ದಯವಿಟ್ಟು ತಿಳಿಸಿ ಎಂದಳು ತಾಯಿ. ಅದೇನು ಅಷ್ಟು ದೊಡ್ಡ ನಿಯಮವಲ್ಲಾ, ಈ ಹಳ್ಳಿಯಲ್ಲಿ ಹೇರಳವಾಗಿ ಸಾಸಿವೆಯನ್ನು ಬೆಳೆಯುತ್ತಾರೆಂದು ಕೇಳಿದ್ದೇನೆ, ನೀನು ಹೋಗಿ ,ಯಾರ ಮನೆಯಲ್ಲಿ ಅವರ ಕುಟುಂಬದ ಯಾರೊಬ್ಬರೂ ಕೂಡ ಸತ್ತಿಲ್ಲವೋ ಅಂಥವರ ಮನೆಯಲ್ಲಿ ಒಂದು ಮುಷ್ಟಿ ಸಾಸವೆ ಕಾಳುಗಳನ್ನು ತೆಗೆದುಕೊಂಡು ಬಾ, ಆಗ ನಿನ್ನ ಮಗ ಬದುಕುತ್ತಾನೆ ಎಂದು ಹೇಳಿದರು ಬುದ್ಧ.

ಆಕೆ ಮಗನ ಅಗಲುವಿಕೆಯಿಂದ ಬಹಳ ದುಃಖಿತಳಾಗಿ, ಹುಚ್ಚಿಯಂತಾಗಿದ್ದಳು.ಮಗ ಹೇಗಾದರೂ ಬದುಕಿದರೆ ಸಾಕೆಂದು ಯಾರು ಏನು ಹೇಳಿದರೂ ಅದನ್ನು ಕೇಳುತ್ತಿದ್ದಳು.ಆಕೆಗೆ ಬುದ್ಧರ ಮಾತಿನ ಗುಟ್ಟು ಅವಳ ಅರಿವಿಗೆ ಬರಲೇ ಇಲ್ಲ. ತಕ್ಷಣ ಅಲ್ಲಿಂದ ಓಡುತ್ತಾ , ಪ್ರತಿಯೊಂದು ಮನೆ ಮನೆಗೂ ಹೋಗಿ ಸಾಸಿವೆ ಬೇಡಲಾರಂಭಿಸಿದಳು. ಆಗ ಅವಳಿಗೆ , ಜನರು, ನಾವು ನಿನಗೆ ಸಾಸಿವೆಕಾಳನ್ನು ಎಷ್ಟು ಬೇಕಾದರೂ ಕೊಡಬಹುದು, ಆದರೆ ಅದು ನಿನಗೆ ಉಪಯೋಗಕ್ಕೆ ಬರುವುದಿಲ್ಲ, ಏಕೆಂದರೆ ನಮ್ಮ ಮನೆಗಳಲ್ಲಿ ಅನೇಕರು ಸಾವನ್ನಪ್ಪಿದ್ದಾರೆ, ಸಾವಿಲ್ಲದ ಯಾವ ಕುಟುಂಬವೂ ಇಲ್ಲ ತಾಯಿ, ಎಂದು ಹೇಳಿದರು.

ಪ್ರತಿಯೊಂದು ಕುಟುಂಬದಲ್ಲೂ ಬದುಕಿರುವವರಿಗಿಂತ ಸತ್ತಿರುವವರೇ ಜಾಸ್ತಿ. ತಂದೆ ತಾಯಿ, ಅಜ್ಜಿ ,ತಾತಂದಿರು ಲೆಕ್ಕವಿಲ್ಲದಷ್ಟು ಮಂದಿ ಸತ್ತಿರುವರು. ಪ್ರತಿಯೊಬ್ಬ ಮನುಷ್ಯನ ಮನೆಯಲ್ಲೂ ಬದುಕಿರುವವರಿಗಿಂತ ಅಳಿದು ಹೋದವರೇ ಜಾಸ್ತಿ ಇದ್ದರು.ಈಕೆ ಸಂಜೆಯ ತನಕ ಮನೆ ಮನೆಗೆ ಹೋಗಿ ಸಾಸಿವೆ ಬೇಡಿದಳು. ಬಹಳ ದಣಿದಳು.ಆದರೆ ಸಾವಿಲ್ಲದ ಮನೆಯ ಸಾಸಿವೆ ಎಲ್ಲೂ ಅವಳಿಗೆ ಸಿಗಲೇ ಇಲ್ಲ .

ಆಗ ಆಕೆಗೆ ಬುದ್ಧರ ಮಾತಿನ ಅರ್ಥವಾಯಿತು, ಆಕೆಯ ಕಣ್ಣೀರೆಲ್ಲಾ ಬತ್ತಿ ಹೋಗಿದ್ದವು. ಆಕೆ ಬುದ್ಧರ ಬಳಿಗೆ ಹಿಂತಿರುಗಿ ಬಂದು ಅವರ ಪಾದಕ್ಕೆರಗಿದಳು. ನಂತರ ಹೇಳಿದಳು, ಪ್ರತಿಯೊಬ್ಬರೂ ಈ ಜಗತ್ತಿನಲ್ಲಿ, ಒಂದಲ್ಲ ಒಂದು ದಿನ ಸಾಯಲೇಬೇಕು, ನನ್ನ ಮಗನೂ ಅಷ್ಟೇ, ನಾಳೆ ನಾನೂ ಅಷ್ಟೇ, ಅದರ ಬಗ್ಗೆ ಚಿಂತಿಸುವುದರಲ್ಲಿ ಯಾವುದೇ ಅರ್ಥವಿಲ್ಲ, ಇದನ್ನು ನೀವು ನನಗೆ ಅರ್ಥ ಮಾಡಿಸಿದ್ದೀರಿ.ನೀವೀಗ ನನಗೆ ದಯವಿಟ್ಟು ಸನ್ಯಾಸ ದೀಕ್ಷೆಯನ್ನು ನೀಡಿ, ಯಾವುದು ಶಾಶ್ವತವೂ, ಅಮರವೊ, ಆದಿ ಅಂತ್ಯ ರಹಿತವಾಗಿ ಇರುವಂತದ್ದೊ, ಅದರ ಅನುಭವವನ್ನು ಹೊಂದುವ ಪಥದಲ್ಲಿ ನಾನೀಗ ಸಾಗುವೆ ,ಎಂದು ಹೇಳಿದಳು.

ಬುದ್ಧರು, ಆಕೆಗೆ, ತಾಯೇ, ನೀನೊಬ್ಬ , ಪ್ರತಿಭಾವಂತೆ, ನಿನಗೆ ಬಲು ಬೇಗನೆ ನನ್ನ ಮಾತಿನ ಇಂಗಿತ ಅರ್ಥವಾಗಿರುವುದು, ಎಂದು ಹೇಳಿ ಅವಳನ್ನು ಹರಸಿದರು. ಮುಂದೆ ಆಕೆ ಸನ್ಯಾಸಿನಿಯಾದಳು, ಆಕೆ ಏನು ಸಾಮಾನ್ಯ ಸನ್ಯಾಸಿನಿ ಅಲ್ಲ! ಬುದ್ಧರು ಜೀವಂತವಾಗಿದ್ದಾಗಲೇ ಸಂಬುದ್ಧತ್ವವನ್ನು ಹೊಂದಿದಂತ ಮಹಿಳೆ . ಬುದ್ಧರ ಮಹಿಳಾ ಸನ್ಯಾಸಿನಿಯರಲ್ಲಿ ಸಂಬುದ್ಧತ್ವವನ್ನು ಹೊಂದಿದ ಮೊದಲ ಮಹಿಳೆ ಈಕೆ. ಈಕೆಯ ಹೆಸರು, “ಕಿಸಾ ಗೌತಮಿ” ಎಂದು.

ಹೀಗೆ ಜನರು ತಮ್ಮ ತಮ್ಮ ಅಂತರಾಳಕ್ಕೆ ಯಾತ್ರಿಸಿದಾಗ ತಮ್ಮ ಮೂಲಕ್ಕೆ ತಲುಪುವರು. ತಮ್ಮ ತಮ್ಮ ಸ್ವಯಂ ಅನ್ನು ಕಂಡುಕೊಳ್ಳುವುದೇ ಒಂದು ಉತ್ಕೃಷ್ಟವಾದ ಚಮತ್ಕಾರ. ಇಂಥಹ ಕ್ಷಣದಲ್ಲಿ ದೈವತ್ವದ, ಭಗವತ್ತತೆಯ ಬಾಗಿಲುಗಳು ತೆರೆಯುತ್ತವೆ. ಈ ಸಮಯದಲ್ಲಿ ನಾನು ಎಂಬುದು ಅಳಿದು, ಅಸ್ತಿತ್ವದ ಇರುವಿಕೆಯ ಒಂದು ಭಾಗವೇ ನಾವಾಗಿ ಬಿಡುತ್ತೇವೆ.

ವಂದನೆಗಳು,

ಸುವರ್ಣಾ ಮೂರ್ತಿ.

  • ದೌರ್ಜನ್ಯ ಆರೋಪ: ವಚನಾನಂದ ಶ್ರೀ ವಿರುದ್ಧ ಪೋಕ್ಸೊ ಪ್ರಕರಣ
    by Team Varthaman
    May 13, 2026
  • ಹೃದಯಾಘಾತದಿಂದ ನಟ ದಿಲೀಪ್ ರಾಜ್ ನಿಧನ
    by Team Varthaman
    May 13, 2026
  • ರಾಜ್ಯದಲ್ಲಿ ಜಲಕಂಟಕ :ಕೋಡಿ ಶ್ರೀ ಭವಿಷ್ಯ
    by Team Varthaman
    May 12, 2026
  • ಕೆಪಿಎಸ್‌ಸಿ ಹಾಳಾಗಲು ಕಾಂಗ್ರೆಸ್ ಕಾರಣ – ಹೆಚ್.ಡಿ.ಕೆ
    by Team Varthaman
    May 12, 2026
  • ಅಕ್ರಮ ಆರೋಪ: NEET ಪರೀಕ್ಷೆ ರದ್ದು
    by Team Varthaman
    May 12, 2026
“ತುಂಗಾ ತೀರದಲಿ ನಿಂತ ಯತಿವರ್ಯ “
ಗ್ರಾಹಕರಿಗೆ ವಂಚನೆ: 2,334 ಕಂಪನಿಗಳ ವಿರುದ್ಧ ಪ್ರಕರಣಗಳು ದಾಖಲು
ಪೌರಕಾರ್ಮಿಕರಿಗೆ ಉಚಿತ ಬಟ್ಟೆ ವಿತರಣೆ, ಸಹಪಂಕ್ತಿ ಭೋಜನ
ಶಾಲಿನಿ ರಜನೀಶ್ ಬಗ್ಗೆ ಅಸಭ್ಯ ಹೇಳಿಕೆ: MLC ರವಿಕುಮಾರ್ ವಿರುದ್ಧ FIR ದಾಖಲು
ಆಹಾರಕ್ಕೆ ರುಚಿ ಹಾಗೂ ವಿಶಿಷ್ಟ ಸುವಾಸನೆ ನೀಡುವ ಜಾಯಿಕಾಯಿ
TAGGED:ArticleKannada ArticleKissa Gautamiಕಿಸಾ ಗೌತಮಿಬುದ್ಧ ಪೌರ್ಣಮಿ
Share This Article
Facebook Email Print
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
Latest News

ಇಂದು ತಮಿಳುನಾಡು, ಪಶ್ಚಿಮ ಬಂಗಾಳದಲ್ಲಿ ಮತದಾನ

Team Varthaman
Team Varthaman
April 23, 2026
ಇರಾನ್ ಯುದ್ಧದ ಪರಿಣಾಮ: ಚಿನ್ನ–ಬೆಳ್ಳಿ ದರದಲ್ಲಿ ಭಾರೀ ಇಳಿಕೆ
ಇಂದು ಪ್ರಧಾನಿ ಮೋದಿಯಿಂದ ಭಾರತದ ಅತಿದೊಡ್ಡ ಕ್ರೂಸ್ ಟರ್ಮಿನಲ್ ಉದ್ಘಾಟನೆ
ಗೋವಾ ನೈಟ್‌ಕ್ಲಬ್ ದುರಂತ : ಲೂಥ್ರಾ ಸಹೋದರರ ಬಂಧನ
ಮಳೆನಾಡದ ಮೈಸೂರು!
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?