ಬೆಂಗಳೂರು: ಕನ್ನಡ ಕಿರುತೆರೆ ಮತ್ತು ಚಲನಚಿತ್ರ ಕ್ಷೇತ್ರದ ನಟ ಶ್ರೀಧರ್ ನಾಯಕ್ (47) ಅವರು ಮೇ 26ರಂದು ನಿಧನರಾದರು. ಅವರು ಕಳೆದ ಕೆಲ ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಮತ್ತು ಇತ್ತೀಚೆಗೆ ಅವರ ಆರೋಗ್ಯ ಇನ್ನಷ್ಟು ಕುಸಿದಿತ್ತು.
ಗುರುತೇ ಸಿಗದಷ್ಟು ಶರೀರ ಕ್ಷೀಣಗೊಂಡಿದ್ದ ಶ್ರೀಧರ್ ಅವರನ್ನು ಬೆಂಗಳೂರಿನ ಹೆಬ್ಬಾಳದ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಅವರ ಅಸ್ವಸ್ಥತೆಯ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಹರಡಿದ್ದವು, ಇದರಿಂದ ಅವರ ಅಭಿಮಾನಿಗಳು ಮತ್ತು ಸಹನಟರು ದಿಗ್ಭ್ರಮೆಗೊಂಡಿದ್ದರು. ಅನೇಕರು ಅವರಿಗೆ ನೆರವು ನೀಡುವಂತೆ ಮುಂದಾಗಿದ್ದರು.
ಶ್ರೀಧರ್ ನಾಯಕ್ ‘ಪಾರು’ ಮತ್ತು ‘ವಧು’ ಧಾರಾವಾಹಿಗಳ ಮೂಲಕ ಪ್ರಖ್ಯಾತರಾಗಿದ್ದರು. ಆ ಧಾರಾವಾಹಿಗಳಲ್ಲಿ ಅವರ ನಟನೆಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಅವರು ‘ಮ್ಯಾಕ್ಸ್’ ಎಂಬ ಚಿತ್ರದಲ್ಲಿಯೂ ಅಭಿನಯಿಸಿದ್ದರು.ಇದನ್ನು ಓದಿ –ಗಣಪತಿ ಶ್ರೀಗಳ 83ನೇ ಜನ್ಮದಿನ: ಆರ್ ಬಿಐನಿಂದ ವಿಶೇಷ ನಾಣ್ಯ ಬಿಡುಗಡೆ
ಈಗ ಬೆಂಗಳೂರಿನ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಅವರ ಮೃತದೇಹವನ್ನು ಅಂತಿಮ ದರ್ಶನಕ್ಕೆ ಇರಿಸಲಾಗಿದೆ. ಕುಟುಂಬದವರು, ಸ್ನೇಹಿತರು, ಹಾಗೂ ಅಭಿಮಾನಿಗಳು ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ.