ಹೆಚ್ಚಿನ ಆರೈಕೆ ಯಿಲ್ಲದೇ ಬಳ್ಳಿಯಲ್ಲಿ ಬೆಳೆಯುವ ಹಾಗೂ ಅಗ್ಗದ ತರಕಾರಿಗಳಲ್ಲಿ ಪ್ರಮುಖ ಹೆಸರು ಕೇಳಿ ಬರುವ ಹೆಸರು ಕುಂಬಳ ಕಾಯಿ. ಇದರಲ್ಲೊಂದು ಪ್ರಬೇಧದಲ್ಲಿ ಹೊರಮೈ ಬೂದಿ ಚಿಮುಕಿಸಿಕೊಂಡಂತೆ ನಸುವಾದ ಪುಡಿಯನ್ನು ಲೇಪಿಸಿಕೊಂಡಿರುವ ಕಾರಣ ಬೂದು ಕುಂಬಳ ಅಥವಾ ಬೂದುಗುಂಬಳ ಎಂಬ ಹೆಸರನ್ನು ಪಡೆದುಕೊಂಡಿದೆ. ಕಲ್ಲಂಗಡಿ ಮತ್ತು ಕುಂಬಳ ಇವೆರಡೂ ಒಂದೇ ಜಾತಿಯ ಫಲಗಳಾಗಿವೆ. ಕಲ್ಲಂಗಡಿಯಂತೆಯೇ ಕುಂಬಳದಲ್ಲಿಯೂ ಶೇಖಡಾ 96 ನೀರಿನಂಶವಿದೆ. ಈ ತರಕಾರಿ ದೇಹಕ್ಕೆ ತಂಪು ನೀಡುವುದಲ್ಲದೆ ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಬೂದು ಕುಂಬಳ ಮಕ್ಕಳ ಆರೋಗ್ಯಕ್ಕೆ ಬಹಳ ಉತ್ತಮವಾಗಿದೆ. ಇಷ್ಟೇ ಅಲ್ಲ ಆಯುರ್ವೇದ ಔಷಧದಲ್ಲಿ ಬೂದು ಕುಂಬಳವನ್ನು ಬಹಳಷ್ಟು ಕಡೆ ಬಳಸುತ್ತಾರೆ.
ಯಾವುದೇ ಪರ್ಯಾಯ ವ್ಯವಸ್ಥೆಗಳಿಲ್ಲದೆ ಹಲವಾರು ತಿಂಗಳುಗಳ ಕಾಲ ಕೆಡದೆ ಉಳಿಯುವಂತಹ ಒಂದು ತರಕಾರಿ ಎಂದರೆ ಈ ಬೂದು ಕುಂಬಳಕಾಯಿ. ಇದರಿಂದ ಹಲವಾರು ಬಗೆಯ ಖಾದ್ಯಗಳನ್ನು ತಯಾರಿಸಬಹುದು. ಪಲ್ಯ, ಸಾಂಬಾರು, ಗೊಜ್ಜು, ಕುಂಬಳಕಾಯಿಹುಳಿ ಇತ್ಯಾದಿ ಬಗೆಯ ಖಾದ್ಯಗಳಾಗಿ ಕುಂಬಳಕಾಯಿಯನ್ನು ಸೇವಿಸಬಹುದು. ಇದರಿಂದ ತಯಾರಿಸುವ ಹಲ್ವ ಬಹಳ ರುಚಿಯಾಗಿರುತ್ತದೆ.
ಬೂದು ಕುಂಬಳಕಾಯಿಯು ಪೋಷಕಾಂಶಗಳಿಂದ ತುಂಬಿದ್ದು ಕಬ್ಬಿಣ, ಕ್ಯಾಲ್ಸಿಯಂ, ಫಾಸ್ಫರಸ್, ಸತು, ಮೆಗ್ನೀಸಿಯಮ್, ತಾಮ್ರ ಮತ್ತು ಮ್ಯಾಂಗನೀಸ್ನಂತಹ ಖನಿಜಗಳನ್ನು ಹೊಂದಿದೆ ಮತ್ತು ನಿಯಾಸಿನ್, ಥಯಾಮಿನ್, ವಿಟಮಿನ್ ಸಿ ಮತ್ತು ರೈಬೋಫ್ಲಾವಿನ್ನಂತಹ ವಿಟಮಿನ್ಗಳ ಮೂಲಗಳನ್ನು ಒಳಗೊಂಡಿರುವ ಬೂದು ಕುಂಬಳಕಾಯಿ ಆರೋಗ್ಯದ ರಕ್ಷಣೆಗೆ ಉತ್ತಮ ತರಕಾರಿ. ಬೂದು ಕುಂಬಳಕಾಯಿಯಲ್ಲಿ ಬಹಳಷ್ಟು ಔಷಧೀಯ ಸತ್ವಗಳಿವೆ.
ಬೂದು ಕುಂಬಳಕಾಯಿಯಲ್ಲಿ ನಾವು ಸಾಂಬಾರ್ ಇಲ್ಲವೆ ಹಲ್ವಾ ಅಥವಾ ಪಲ್ಯವನ್ನೂ ಮಾಡಿ ಸೇವಿಸಿರುತ್ತೇವೆ. ಆದರೆ ನಾವಿಂದು ಬೂದು ಕುಂಬಳದಿಂದ ಮಾಡುವ ಜ್ಯೂಸ್ ಸೇವನೆ ನಮ್ಮ ಆರೋಗ್ಯಕ್ಕೆ ಎಷ್ಟರ ಮಟ್ಟಿಗೆ ಉಪಯೋಗವಾಗಲಿದೆ ಎಂಬುದನ್ನು ತಿಳಿಯೋಣ.
ಬೂದು ಕುಂಬಳಕಾಯಿ ಜ್ಯೂಸ್ ತಯಾರಿಸುವ ಬಗೆ

ಬೂದು ಕುಂಬಳಕಾಯಿಯ ಸಿಪ್ಪೆ ಹಾಗೂ, ಬೀಜಗಳನ್ನು ತೆಗೆದು ಅವುಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಕತ್ತರಿಸಿದ ತುಂಡುಗಳನ್ನು ಮಿಕ್ಸಿಯಲ್ಲಿ ಹಾಕಿ ನಯವಾಗಿ ರುಬ್ಬಿ. ಈ ಮಿಶ್ರಣದಿಂದ ಸೋಸಿ ರಸವನ್ನು ತೆಗೆಯಿರಿ. ಈ ರಸದ ಪರಿಮಳವನ್ನು ಹೆಚ್ಚಿಸಲು ಸ್ವಲ್ಪ ನಿಂಬೆ ರಸ ಮತ್ತು ಚಿಟಿಕೆ ಕಲ್ಲು ಉಪ್ಪು ಸೇರಿಸಿ. ಪ್ರತಿದಿನ ಬೆಳಿಗ್ಗೆ ತಪ್ಪದೇ ಖಾಲಿ ಹೊಟ್ಟೆಗೆ ಸೇವಿಸಿದಾಗ ಕೆಲವೇ ದಿನಗಳಲ್ಲಿ ವ್ಯತ್ಯಾಸವನ್ನು ಕಾಣಬಹುದು.
- ಬೂದು ಕುಂಬಳ ಜ್ಯೂಸ್ ಅನ್ನು ಪ್ರತಿನಿತ್ಯ ಕುಡಿಯುವುದರಿಂದ ನಮಗೆ ಹಲವಾರು ಲಾಭಗಳಿವೆ. ಅದರಲ್ಲಿ ಸಾಕಷ್ಟು ಪ್ರಮಾಣದ ನೀರಿನಾಂಶ ಇರುವುದಿರಂದ ನಮ್ಮ ದೇಹವು ಒಳಗಿನಿಂದ ತಂಪಾಗಿರುತ್ತದೆ ಹಾಗೂ ದೇಹವನ್ನು ಡಿ ಹೈಡ್ರೇಷನ್ ಆಗುವುದರಿಂದ ತಪ್ಪಿಸುತ್ತದೆ.
2.ಈ ಅದ್ಭುತ ತರಕಾರಿ ಶೇಕಡಾ 96 ರಷ್ಟು ನೀರಿನಿಂದ ಕೂಡಿರುವುದರಿಂದ ತೂಕ ಇಳಿಸಿಕೊಳ್ಳುವವರು ಆ ಪ್ರಯತ್ನದಲ್ಲಿದ್ದರೆ ಇದು ಆದರ್ಶ ಆಹಾರವಾಗಿಸುತ್ತದೆ.
- ಕೆಂಪು ರಕ್ತ ಕಣಗಳ ವೃದ್ಧಿಸುವಲ್ಲಿ ಮತ್ತು ಅದನ್ನು ಉತ್ತೇಜಿಸುವಲ್ಲಿ ಬೂದು ಕುಂಬಳ ಬಹಳಷ್ಟು ಉಪಯೋಗಕಾರಿಯಾಗಿದೆ.
- ಬೂದ ಕುಂಬಳಕಾಯಿಯನ್ನು ಯಾವುದೇ ರೂಪದಲ್ಲಿ ಸೇವಿಸಿದರೂ Arthritis ಹಾಗೂ ಥೈರೊಯ್ಡ್ ತೊಂದರೆ ನಿವಾರಣೆಯಾಗುತ್ತೆ.
5.ಬೂದು ಕುಂಬಳಕಾಯಿ ರಸವು ದೇಹದಿಂದ ವಿಷಕಾರಿ ಪದಾರ್ಥಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇದರಿಂದ ಕರಳು ಕೂಡ ಸ್ವಚ್ಛವಾಗಿ ಹೊಟ್ಟೆಯು ಉತ್ತಮ ಸ್ಥಿತಿಯಲ್ಲಿರುತ್ತದೆ.
- ಬೂದು ಕುಂಬಳ ಕಡಿಮೆ ಕಡಿಮೆ ಪ್ರಮಾಣದ ಕ್ಯಾಲೋರಿ ಹೊಂದಿದ್ದು, ತೂಕ ಇಳಿಸುವಲ್ಲಿ ಇದರ ಜ್ಯೂಸ್ ಸೇವನೆ ಪ್ರಮುಖ ಪಾತ್ರ ವಹಿಸಲಿದೆ.
7.ಕೆಂಪು ರಕ್ತ ಕಣಗಳ ವೃದ್ಧಿಸುವಲ್ಲಿ ಮತ್ತು ಅದನ್ನು ಉತ್ತೇಜಿಸುವಲ್ಲಿ ಬೂದು ಕುಂಬಳ ಬಹಳಷ್ಟು ಉಪಯೋಗಕಾರಿಯಾಗಿದೆ.
- ಬೂದು ಕುಂಬಳಕಾಯಿ ಜ್ಯೂಸ್ ಅನ್ನು ನಿಯಮಿತವಾಗಿ ಕುಡಿಯುವುದರಿಂದ ಅಸಿಡಿಟಿ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಬಲವಾಗಿಡಲು ಸಹಾಯ ಮಾಡುತ್ತದೆ ಹಾಗೂ ಮೂಲವ್ಯಾದಿ ಸಮಸ್ಯೆಗೆ ಇದು ಪರಿಹಾರ ನೀಡಲಿದೆ.
- ಈ ರಸವು ಶಕ್ತಿಯ ಮಟ್ಟವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಮತ್ತು ಹೀಗಾಗಿ, ನಿಯಮಿತವಾಗಿ ದೇಹದ ದೌರ್ಬಲ್ಯವನ್ನು ಅನುಭವಿಸುವವರು ತಮ್ಮ ಆಹಾರದಲ್ಲಿ ನಿಯಮಿತವಾಗಿ ಬೂದುಕುಂಬಳಕಾಯಿ ರಸವನ್ನು ಕುಡಿಯಬೇಕು.
- ಈ ತರಕಾರಿ ಮಧುಮೇಹ ಇರುವವರಿಗೆ ವಿಶೇಷವಾಗಿ ಒಳ್ಳೆಯದು. ಬೂದುಗುಂಬಳ ರಕ್ತದಲ್ಲಿನ ಸಕ್ಕರೆ, ಟ್ರೈಗ್ಲಿಸರೈಡ್ ಮತ್ತು ಇನ್ಸುಲಿನ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
- ಅಕಾಲಿಕ ವಯಸ್ಸಾದ ಅಪಾಯವನ್ನು ಕಡಿಮೆ ಮಾಡಲು ಮತ್ತು ಆರೋಗ್ಯಕರ ಮೈಬಣ್ಣವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ ಎಂದು ಕನ್ಸಲ್ಟೆಂಟ್ ಡರ್ಮಟಾಲಜಿಸ್ಟ್, ಕಾಸ್ಮೆಟಿಕ್ ಡರ್ಮಟಾಲಜಿಸ್ಟ್ ಮತ್ತು ಡರ್ಮಟಲಾಜಿಕಲ್ ಸರ್ಜನ್ ಡಾ ರಿಂಕಿ ಕಪೂರ್ ಹೇಳುತ್ತಾರೆ.
12.ಬೂದು ಕುಂಬಳಕಾಯಿ ರಸದ ಮತ್ತೊಂದು ಆರೋಗ್ಯ ಪ್ರಯೋಜನವೆಂದರೆ ಅದು ಗಾಯಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ ಮತ್ತು ರಕ್ತಸ್ರಾವ ಅಥವಾ ಆಂತರಿಕ ರಕ್ತಸ್ರಾವಕ್ಕೆ ಚಿಕಿತ್ಸೆ ನೀಡುತ್ತದೆ.
- ಬೂದು ಕುಂಬಳಕಾಯಿ ದೇಹದಿಂದ ಕೊಬ್ಬು ಮತ್ತು ಪಿತ್ತರಸವನ್ನು ಹೊರಹಾಕಲು ಸಹಾಯ ಮಾಡುವುದರಿಂದ ಯಕೃತ್ತಿನ ಅಸ್ವಸ್ಥತೆಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ.
14.ಬೂದಿ ಕುಂಬಳಕಾಯಿ ಜ್ಯೂಸ್ ಕುಡಿಯುವುದರಿಂದ ಫುಡ್ ಪಾಯ್ಸನಿಂಗ್ ಆಗಿದ್ದರೆ ಅದು ಗುಣವಾಗಲು ಸಹಾಯ ಮಾಡುತ್ತದೆ.
- ಕೊಬ್ಬರಿ ಎಣ್ಣೆಯಲ್ಲಿ ಬೂದುಕುಂಬಳ ಕಾಯಿಯ ಸಿಪ್ಪೆಯನ್ನು ಕುದಿಸಿ ತಲೆಗೆ ಹಚ್ಚುವುದರಿಂದ ಕೂದಲು ಸೊಂಪಾಗಿ ಬೆಳೆಯುತ್ತೆ. ಸಿಪ್ಪೆ ಮತ್ತು ಬೀಜಗಳನ್ನು ತೆಗೆದು, ರುಬ್ಬಿ ತಲೆಗೆ ಹಚ್ಚಿಕೊಂಡು ಒಂದು ಘಂಟೆ ಬಿಟ್ಟು ತೊಳೆದುಕೊಂಡರೂ ಸಹ ಒಣ ಮತ್ತು ಒರಟು ತಲೆಕೂದಲಿಗೆ ಮೃದುತ್ವ ನೀಡುತ್ತದೆ. ಇದರ ತಿರುಳಿನಿಂದ ಆಯುರ್ವೇದ ಲೇಹ ಮತ್ತು ತೈಲವನ್ನು ತಯಾರಿಸುತ್ತಾರೆ ( ಕುಶ್ಮಾನ್ಡ ತೈಲ ).
ಸೂಚನೆ :- ಎಳೆಯದಾದ ಕಾಯಿ ಮಾತ್ರ ಅತೀ ಸಣ್ಣದಾದ ಕೈಗೆ ಆಂಟಿಕೊಳ್ಳುವ ಕೂದಲುಗಳ ಸಹಿತ ಹಸಿರಾಗಿರುತ್ತೆ. ಆದರೆ ಬಲಿತ ಕಾಯಿಗಳು ಬೂದು ಬಣ್ಣದ್ದಾಗಿದ್ದು ಮೇಲ್ಬಾಗದಲ್ಲಿ ಒಂದು ಅಂಟಿನ ಪದರ ಇರುತ್ತೆ ( ಅದಕ್ಕಾಗಿ wax gourd ಎಂಬ ಹೆಸರೂ ಇದೆ ). ಅಡುಗೆಗೆ, ಔಷದಕ್ಕೆ ಯಾವಾಗಲೂ ಬಲಿತ ಕಾಯಿ ಉಪಯೋಗಿಸಿ.

ಸೌಮ್ಯ ಸನತ್ ✍️.








