ಚಳಿಗಾಲದಲ್ಲಿ ಬೆಚ್ಚಗೆ ಹೊದ್ದುಕೊಂಡು ಬೆಂಕಿಯ ಶಾಖವನ್ನು ಆಸ್ವಾದಿಸುತ್ತಾ ಬಿಸಿಬಿಸಿಯಾದ ಮಸಾಲಾ ಟೀ ಹೀರುತ್ತಿದ್ದರೆ ಸ್ವರ್ಗವೇ ಧರೆಗಿಳಿದಂತಹ ಅನುಭವ.
ಕೆಲವೊಮ್ಮೆ ಬೆಚ್ಚಗಿನ ದಿರಿಸು ಧರಿಸಿಯೂ, ಬೆಂಕಿಯ ಶಾಖವನ್ನು ಸಾಕಷ್ಟು ಪಡೆದರೂ ದೇಹ ಶೀತ ನೆಗಡಿಯಿಂದ ಬಳಲಿ ಸುಸ್ತು, ತಲೆಸುತ್ತುವುದು ಮೊದಲಾದ ತೊಂದರೆಗಳನ್ನು ಎದುರಿಸಿದರೆ ಅದು ಚಳಿಯ ತಪ್ಪಲ್ಲ, ನಮ್ಮ ದೇಹದೊಳಗಿನ ಬಿಸಿ ಸಾಕಷ್ಟಿಲ್ಲದಿರುವುದೇ ಕಾರಣ. ಏಕೆಂದರೆ ಬಿಸಿರಕ್ತಪ್ರಾಣಿಗಳಾದ ನಮ್ಮ ಶರೀರ ಪ್ರತಿಕ್ಷಣ ಒಳಗಿನಿಂದ ಬೆಚ್ಚಗಿರುವುದು ಅವಶ್ಯ.
ಇದಕ್ಕಾಗಿ ಶರೀರ ಸದಾ ಕೆಲವು ಕ್ಯಾಲೋರಿಗಳನ್ನು ಸುಡುತ್ತಾ ಇರುತ್ತದೆ. ನಾವು ಸೇವಿಸುವ ಆಹಾರದಲ್ಲಿರುವ ಕ್ಯಾಲೋರಿಗಳು ಕಡಿಮೆ ಪ್ರಮಾಣದಲ್ಲಿದ್ದರೆ ಅವು ಕೆಲಕ್ಷಣಗಳಲ್ಲಿಯೇ ಉರಿದು ಖಾಲಿಯಾಗಿ ದೇಹಕ್ಕೆ ಶಾಖ ಉತ್ಪಾದಿಸಿಕೊಳ್ಳಲು ಅಥವಾ ತಕ್ಕ ಪ್ರಮಾಣದಲ್ಲಿ ಉತ್ಪಾದಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಹಾಗಾಗಿ ಚಳಿಗಾಲದಲ್ಲಿ ದೇಹ ಬೆಚ್ಚಗಿರಲು ನಮಗೆ ವಿಶೇಷ ಆಹಾರಗಳ ಅಗತ್ಯವಿದೆ. ಈ ಆಹಾರಗಳ ಮೂಲಕ ನಮ್ಮ ಕರುಳುಗಳು ಕ್ಯಾಲೋರಿಗಳನ್ನು ಒಮ್ಮೆಲೇ ನೀಡದೇ ನಿಧಾನವಾಗಿ ಬಿಡುಗಡೆ ಮಾಡುತ್ತವೆ. ಒಂದು ಮೇಣದಬತ್ತಿ ಬೆಂಕಿಗೆ ನಿಧಾನವಾಗಿ ಕರಗಿದ ಹಾಗೆ. ತನ್ಮೂಲಕ ದೇಹ ಹೆಚ್ಚು ಹೊತ್ತು ಬೆಚ್ಚರಿಗಲು ಹಾಗೂ ಆರೋಗ್ಯದಿಂದಿರಲು ಸಾಧ್ಯವಾಗುತ್ತದೆ. ವೈದ್ಯಕೀಯ ಭಾಷೆಯಲ್ಲಿ ಇದಕ್ಕೆ ಆಹಾರದ ನಿರ್ದಿಷ್ಟ ಕ್ರಿಯಾತ್ಮಕ ಕ್ರಿಯೆ ಎಂದು ಕರೆಯುತ್ತಾರೆ.
1.ಶುಂಠಿ ಮತ್ತು ಬೆಳ್ಳುಳ್ಳಿ

ಶುಂಠಿ ಮತ್ತು ಬೆಳ್ಳುಳ್ಳಿ ಶೀತವಾದರೆ ಶುಂಠಿ ಹಾಕಿ ಬೇಯಿಸಿದ ಕಷಾಯ ಮಾಡಿಕೊಟ್ಟಿದ್ದು ನೆನಪಿದೆಯೇ? ಚಳಿಗಾಲಕ್ಕೆ ಹಸಿಶುಂಠಿ ಮತ್ತು ಬೆಳ್ಳುಳ್ಳಿ ಅತ್ಯುತ್ತಮವಾಗಿದೆ. ನಿಮ್ಮ ಆಹಾರಗಳಲ್ಲಿ ಶುಂಠಿ ಮತ್ತು ಬೆಳ್ಳುಳ್ಳಿಗಳನ್ನು ಬಳಸಲಾದ ಆಹಾರಗಳನ್ನು ಹೆಚ್ಚು ಹೆಚ್ಚಾಗಿ ಸೇವಿಸಿ. ಬಿಸಿಬಿಸಿಯಾದ ತಿಳಿಸಾರು (ರಸಂ), ಬಿಸಿಬಿಸಿ ಚಹಾದಲ್ಲಿ ಹಸಿಶುಂಠಿ.
2 ಶುಂಠಿ ಮತ್ತು ಜೇನು

ಶುಂಠಿ ಮತ್ತು ಜೇನಿನ ಕಷಾಯ ಶುಂಠಿ ಮತ್ತು ಜೇನನ್ನು ಅನೇಕ ಆರೊಗ್ಯ ಸಮಸ್ಯೆಗಳಿಗೆ ಮನೆಮದ್ದಾಗಿ ಬಳಸುತ್ತೇವೆ. ಸಾಮಾನ್ಯ ಕೆಮ್ಮು-ಶೀತ ಶುಂಠಿ ಮತ್ತು ಟೀ ಕಷಾಯಕ್ಕೆ ಹೆದರಿ ದೂರಾಗುವುದು. ಪ್ರಯೋಜನಗಳು *ದೇಹವನ್ನು ಬೆಚ್ಚಗಿಡುತ್ತದೆ ಶೀತ, ಕೆಮ್ಮು ತಡೆಗಟ್ಟುತ್ತೆ ರೋಗ ನಿರೊಧಕ ಶಕ್ತಿ ಹೆಚ್ಚಿಸುವುದು ಬೇಕಾಗುವ ಸಾಮಗ್ರಿ ಶುಂಠಿ ಚಕ್ಕೆ ಜೇನು ಮಾಡುವ ಶುಂಠಿ, ಚಕ್ಕೆ ಹಾಕಿದ ನೀರನ್ನು ಕುದಿಸಿ, ಅದಕ್ಕೆ ಜೇನು ಸೇರಿಸಿ ಕುಡಿಯಿರಿ.
3 ಬಾದಾಮಿ ಹಾಲು

ಚಳಿಗಾಲದಲ್ಲಿ ಬಾದಾಮಿ ಹಾಲು ಕುಡಿಯುವುದು ತುಂಬಾ ಒಳ್ಳೆಯದು. ಬೇಸಿಗೆಯಲ್ಲಿ ತಣ್ಣನೆಯ ಬಾದಾಮಿ ಹಾಲು ಕುಡಿದರೆ ಚಳಿಗಾಲದಲ್ಲಿ ಬಿಸಿ-ಬಿಸಿಯಾದ ಬಾದಾಮಿ ಹಾಲನ್ನು ಹೀರಿ. ಪ್ರಯೋಜನಗಳು ದೇಹವನ್ನು ಬೆಚ್ಚಗಿಡುವುದು ಪ್ರೊಟೀನ್ ಹಾಗೂ ಒಳ್ಳೆಯ ಕೊಬ್ಬಿನಂಶ ಸಿಗುವುದು ರೋಗ ನಿರೋಧಕ ಶಕ್ತಿ ಹೆಚ್ಚುವುದು ಬೇಕಾಗುವ ಸಾಮಗ್ರಿ ಹಾಲು 7-8 ಬಾದಾಮಿ (ಚಿಕ್ಕದಾಗಿ ಕತ್ತರಿಸಿದ್ದು ಅಥವಾ ಪುಡಿ ಮಾಡಿದ್ದು) ಚಿಟಿಕೆಯಷ್ಟು ಕೇಸರಿ ಏಲಕ್ಕಿ ಮಾಡುವ ವಿಧಾನ ಹಾಲಿಗೆ ಪುಡಿ ಮಾಡಿದ ಬಾದಾಮಿ ಹಾಕಿ ಕುದಿಸಿ ಅದಕ್ಕೆ ಕೇಸರಿ ಹಾಗೂ ಏಲಕ್ಕಿ ಸೇರಿಸಿ ಮತ್ತೆ ಸ್ವಲ್ಪ ಹೊತ್ತು ಕುದಿಸಿ ಕುಡಿಯಿರಿ.
4 ಅರಿಶಿಣ ಹಾಲು

ಅರಿಶಿಣ ಹಾಕಿದ ಹಾಲು ಕೆಲವರಿಗೆ ಹಾಲು ಇಷ್ಟವಾಗುವುದಿಲ್ಲ, ಅಂಥವರು ಬಾದಾಮಿ ಅಥವಾ ತೆಂಗಿನಕಾಯಿ ಹಾಲು ಜೊತೆ ಸವಿಯಬಹುದು. ಇದನ್ನು ಕುಡಿಯುವುದರಿಂದ ದೊರೆಯುವ ಪ್ರಯೋಜನಗಳು
- ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು
- ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡುವುದು
- ತೂಕ ಇಳಿಕೆಗೆ ಸಹಕಾರಿ
- ಒಳ್ಲೆಯ ನಿದ್ದೆಗೆ ಸಹಕಾರಿ.
ಏನೆಲ್ಲಾ ಸಾಮಗ್ರಿ ಬೇಕು?
- 1/2 ಚಮಚ ಅರಿಶಿಣ ಪುಡಿ
- ಚಿಟಿಕೆಯಷ್ಟು ಕಾಳು ಮೆಣಸಿನ ಪುಡಿ
- ಸ್ವಲ್ಪ ಚಕ್ಕೆ ಪುಡಿ,ಲವಂಗ, ಶುಂಠಿ, ಜೇನು,ನಕ್ಷತ್ರ ಮೊಗ್ಗು
ಈ ಎಲ್ಲಾ ಸಾಮಗ್ರಿ ಹಾಲಿನಲ್ಲಿ ಹಾಕಿ ಕುದಿಸಿ ಕುಡಿಯಿರಿ.
5 ಹಾಟ್ ಆ್ಯಪಲ್ ಸಿಡರ್ ವಿನೆಗರ್
ಚಳಿಗಾಲದಲ್ಲಿ ಆ್ಯಪಲ್ ಸಿಡೆಗರ್ ವಿನಗೆರ್‌ಗೆ ಸ್ವಲ್ಪ ಮಸಾಲೆ ಪದಾರ್ಥ ಸೇರಿಸಿ ಕುಡಿದರೆ ತುಂಬಾನೇ ಒಳ್ಳೆಯದು. ಇದರಿಂದ ದೊರೆಯುವ ಪ್ರಯೋಜನಗಳು
- ಉರಿಯೂತ ಕಡಿಮೆಯಾಗುವುದು
- ಜೀರ್ಣಕ್ರಿಯೆಗೆ ಒಳ್ಳೆಯದು
- ಚಯಪಚಯ ಕ್ರಿಯೆ ಉತ್ತಮವಾಗುವುದು
- ದೇಹವನ್ನು ಡಿಟಾಕ್ಸ್ ಮಾಡುವುದು
ತಯಾರಿಸಲು ಬೇಕಾಗುವ ಸಾಮಗ್ರಿಗಳು
- 7-8 ಸೇಬು
- 1 ನಿಂಬೆ ಹಣ್ಣು
- 1 ಕಿತ್ತಳೆ
- ಕ್ರೇನ್‌ಬೆರ್ರಿ
- ಲವಂಗ
- 1 ನಕ್ಷತ್ರ ಮೊಗ್ಗು
ಸ್ವೀಟ್ನರ್ ಮಾಡುವ ವಿಧಾನ
- ಸೇಬಿನ ಸಿಪ್ಪೆ ಸುಲಿದು ಒಂದು ಕಿತ್ತಳೆ, ನಿಂಬೆಯನ್ನು ಚಿಕ್ಕದಾಗಿ ಕತ್ತರಿಸಿ ಕ್ರೇನ್‌ಬೆರ್ರಿ ಸೇರಿಸಿ 2 ಇಂಚಿನಷ್ಟು ದೊಡ್ಡದಾದ ಚಕ್ಕೆ, 1 ಲವಂಗ, 1 ನಕ್ಷತ್ರ ಮೊಗ್ಗು ಸೇರಿಸಿ ಸ್ವೀಟ್ನರ್ ಸೇರಿಸಿ ( ಕೋಕನಟ್ ಶುಗರ್, ಮ್ಯಾಪ್ಲೆ ಸಿರಪ್ ಹೀಗೆ ಯಾವುದೇ ಸ್ವೀಟ್ನರ್ ಸೇರಿಸಬಹುದು) ನಂತರ ದೊಡ್ಡ ಪ್ಯಾನ್‌ನಲ್ಲಿ 2-3 ಲೀಟರ್, ಈ ಸಾಮಗ್ರಿ ಹಾಕಿ ನೀರು ಸೇರಿಸಿ ಕುದಿಸಿ, 3 ಲೀಟರ್ ನೀರು ಒಂದೂವರೆ ಲೀಟರ್ ಆಗುವಷ್ಟು ಹೊತ್ತು ಆರಿದ ಮೇಲೆ ಕುದಿಸಿ ಫ್ರಿಡ್ಜ್‌ನಲ್ಲಿಟ್ಟು ಕುಡಿಯಿರಿ. ಒಮ್ಮೆ ಮಾಡಿದರೆ 2 ವಾರಗಳವರೆಗೆ ಬಳಸಬಹುದು.
ಸಲಹೆ: ಈ ಎಲ್ಲಾ ಪಾನೀಯ ಒಂದೇ ದಿನ ಟ್ರೈ ಮಾಡಬೇಡಿ, ನಿಮಗೆ ಯಾವುದು ಸೂಕ್ತ ಅನಿಸುವುದೋ ಅದನ್ನು ಮಾಡಿ ಕುಡಿಯಿರಿ.

ಸೌಮ್ಯ ಸನತ್








