ಚಾಮರಾಜನಗರ: ಜಿಲ್ಲೆಯ ಯಳಂದೂರು ತಾಲ್ಲೂಕಿನ ಗುಂಬಳ್ಳಿ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ನಡೆಯಿದ್ದು, ಈಜಲು ಕೆರೆಯಲ್ಲಿ ಹೋದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ದುರ್ಮರಣಕ್ಕೊಳಗಾಗಿದ್ದಾರೆ.
ಮೃತ ಬಾಲಕರನ್ನು ಅಭಯ್ ಗೌಡ ಹಾಗೂ ವೃಷಭೇಂದ್ರ ಎಂದು ಗುರುತಿಸಲಾಗಿದೆ. ಈಜು ಬಾರದೇ ನೀರಿನಲ್ಲಿ ಮುಳುಗಿದ ಇಬ್ಬರಲ್ಲಿ ವೃಷಭೇಂದ್ರನ ಶವವನ್ನು ಈಗಾಗಲೇ ಪತ್ತೆ ಹಚ್ಚಲಾಗಿದೆ.
ಇನ್ನೊಬ್ಬ ಬಾಲಕ ಅಭಯ್ ಗೌಡನ ಶವಕ್ಕಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ.ಇದನ್ನು ಓದಿ –ರೈತರಿಗೆ ಸಂತಸದ ಸುದ್ದಿ: ಮನೆಬಾಗಿಲಿಗೇ ಪೋಡಿ ದುರಸ್ತಿ ಸೇವೆ
ಘಟನೆಯ ಮಾಹಿತಿ ದೊರಕಿದ ತಕ್ಷಣವೇ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಈ ದುರ್ಘಟನೆ ಸ್ಥಳೀಯರಲ್ಲಿ ಆಘಾತ ಉಂಟುಮಾಡಿದ್ದು, ಗ್ರಾಮದಲ್ಲಿ ಶೋಕಾವಸ್ಥೆ ನಿರ್ಮಾಣವಾಗಿದೆ.