ಬೆಂಗಳೂರು: ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಬಳಲುತ್ತಿರುವ ಜನತೆಗೆ ಇದೀಗ ಜಲಮಂಡಳಿ ಮತ್ತೊಂದು ಶಾಕ್ ನೀಡಿದೆ. ಏಪ್ರಿಲ್ 1ರಿಂದ ನೀರಿನ ದರವನ್ನು ಶೇ.3ರಷ್ಟು ಹೆಚ್ಚಿಸಲು ನಿರ್ಧರಿಸಲಾಗಿದೆ.
ಸಮಿತಿಯ ತೀರ್ಮಾನದಂತೆ ಸಾಂಪ್ರದಾಯಿಕವಾಗಿ ದರ ಪರಿಷ್ಕರಣೆ ಮಾಡಲಾಗುತ್ತಿದ್ದು, ಜನರಿಗೆ ಹೆಚ್ಚಿನ ಭಾರವಾಗದಂತೆ ಕೇವಲ ಶೇ.3ರಷ್ಟು ಮಾತ್ರ ಏರಿಕೆ ಮಾಡಲು ನಿರ್ಧರಿಸಲಾಗಿದೆ.
ಈ ಏರಿಕೆಯಿಂದ ಪ್ರತಿ ಲೀಟರ್ ನೀರಿಗೆ 1 ಪೈಸೆ ಹೆಚ್ಚಳವಾಗಲಿದೆ. ವಾಣಿಜ್ಯ ಬಳಕೆದಾರರಿಗೆ ಪ್ರತಿ ಲೀಟರ್ ನೀರಿಗೆ 1.9 ಪೈಸೆ ಹೆಚ್ಚಳವಾಗುತ್ತದೆ. ಇದರ ಜೊತೆಗೆ ಸ್ಯಾನಿಟರಿ ಚಾರ್ಜ್ ಕೂಡ ಹೆಚ್ಚಳವಾಗಲಿದೆ.
ಬೋರ್‌ವೆಲ್ ಇರುವ ಮನೆಗಳಿಗೆ ತಿಂಗಳಿಗೆ 30 ರೂ. ಹಾಗೂ ಕೈಗಾರಿಕೆಗಳಿಗೆ 120 ರೂ. ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ.ಇದನ್ನು ಓದಿ –ಹಾರ್ಮುಜ್ ಜಲಸಂಧಿ ತೆರೆ :ಭಾರತಕ್ಕೆ ಇರಾನ್ ಸಡಿಲಿಕೆ
ಜಲಮಂಡಳಿ ಪ್ರತಿದಿನ ಸುಮಾರು 12 ಲಕ್ಷ ಮನೆಗಳಿಗೆ ನೀರು ಸರಬರಾಜು ಮಾಡುತ್ತಿದ್ದು, ಮೇ ತಿಂಗಳ ಬಿಲ್ಲಿನಿಂದ ಹೊಸ ದರ ಜಾರಿಗೆ ಬರಲಿದೆ.








