- ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೋ ವೈರಲ್
ಬೆಂಗಳೂರು: BMTC ಬಸ್ಸಿನಲ್ಲಿ ವೃದ್ಧನೊಬ್ಬ ಮಹಿಳೆಯ ಮೇಲೆ ಲೈಂಗಿಕ ಕಿರುಕುಳ ನೀಡಿದ ಘಟನೆ ನಡೆದಿದೆ. ಈ ಸಂಬಂಧದ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ವೃದ್ಧನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಈ ಘಟನೆ ವಿದ್ಯಾರಣ್ಯಪುರದ ಬಳಿ ನಡೆದಿದ್ದು, ಬಸ್‌ನ ಹಿಂಬದಿ ಸೀಟ್‌ನಲ್ಲಿ ಕುಳಿತಿದ್ದ ವೃದ್ಧನೊಬ್ಬ, ತನ್ನ ಮುಂದೆ ಕುಳಿತಿದ್ದ ಮಹಿಳೆಗೆ ಹಿಂಬದಿಯಿಂದ ಕಿರುಕುಳ ನೀಡಿದ್ದಾನೆ.
ಸಮಾನ್ಯವಾಗಿ ತನ್ನ ಫೋನ್ ನೋಡುತ್ತಾ ಕುಳಿತಿದ್ದ ಮಹಿಳೆ, ಈ ವರ್ತನೆಗೆ ಕೋಪಗೊಂಡು ವೃದ್ಧನಿಗೆ ಕಪಾಳಮೋಕ್ಷ ನೀಡಿದ್ದಾಳೆ.
ವೀಡಿಯೋದಲ್ಲಿ ವೃದ್ಧನು ಪದೇ ಪದೇ ಮಹಿಳೆಯ ಸೀಟಿನ ಹಿಂಭಾಗವನ್ನು ಸ್ಪರ್ಶಿಸುತ್ತಿರುವುದು, ಹಾಗೆಯೇ ಬೆರಳುಗಳಿಂದ ಅವಳನ್ನು ಚುಚ್ಚಲು ಯತ್ನಿಸುತ್ತಿರುವುದು ಕಂಡುಬರುತ್ತದೆ ಎಂದು ತಿಳಿದುಬಂದಿದೆ.ಇದನ್ನು ಓದಿ –75 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಪಡಿತರ ಸೌಲಭ್ಯ
ಈ ಕಿರುಕುಳದ ಘಟನೆಯ ವಿರುದ್ಧ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಮಹಿಳೆಯ ಧೈರ್ಯಕ್ಕೆ ಬೆನ್ನುಡಿಸುತ್ತಿದ್ದಾರೆ. ಸಾರ್ವಜನಿಕ ಸಾರಿಗೆ ವಾಹನಗಳಲ್ಲಿ ಇಂತಹ ಅಸಭ್ಯ ನಡೆಗಳಿಗೆ ಸ್ಥಳದಲ್ಲೇ ಕ್ರಮ ಕೈಗೊಳ್ಳಬೇಕೆಂಬ ಬೇಡಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚುತ್ತಿದೆ.