By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
    ArticlesShow More
    ಅಜವಾನ ಅಜೀರ್ಣಕ್ಕೆ ಪ್ರಕೃತಿ ನೀಡಿದ ವರದಾನ
    February 1, 2026
    ಹೀಗೆ ಬಂದು ಹಾಗೆ ಹೋಗುವ ಸ್ನೇಹ ಸಾವಿರ
    February 1, 2026
    ಸಾವು ಬದುಕಿನ ನಡುವೆ
    January 28, 2026
    ವಾಸ್ತವ ವರ್ತಮಾನ
    January 24, 2026
    ಅರೋಗ್ಯ ಭಾಗ್ಯ
    January 24, 2026
  • Sports
  • National
  • International
  • Crime
Reading: ಕೆಂಪೇಗೌಡ ಜಯಂತಿ ಪ್ರಚಾರ ರಥಕ್ಕೆ ಅದ್ಧೂರಿ ಚಾಲನೆ  
Share
Font ResizerAa
VarthamanVarthaman
  • Home
  • Karnataka
  • Articles
  • Sports
  • National
  • International
  • Crime
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
  • Sports
  • National
  • International
  • Crime
Follow US
Varthaman > Karnataka – Latest Breaking News > Karnataka > Mysore > ಕೆಂಪೇಗೌಡ ಜಯಂತಿ ಪ್ರಚಾರ ರಥಕ್ಕೆ ಅದ್ಧೂರಿ ಚಾಲನೆ  
KarnatakaMysoreTrending

ಕೆಂಪೇಗೌಡ ಜಯಂತಿ ಪ್ರಚಾರ ರಥಕ್ಕೆ ಅದ್ಧೂರಿ ಚಾಲನೆ  

Team Varthaman
Last updated: June 17, 2025 1:39 PM
Team Varthaman
Published: June 17, 2025
Share
SHARE

ಮೈಸೂರು: ಇದೇ ತಿಂಗಳು ೨೭ಕ್ಕೆ ಆಯೋಜಿಸಿರುವ ನಾಡಪ್ರಭು ಕೆಂಪೇಗೌಡ ಜಯಂತಿ ಮಹೋತ್ಸವದ ಪ್ರಚಾರ ರಥಕ್ಕೆ ಅದ್ಧೂರಿಯಾಗಿ ಚಾಲನೆ ದೊರೆಯಿತು. ಪಕ್ಷಾತೀತವಾಗಿ ಒಗ್ಗೂಡಿದ ಸಮುದಾಯದ ನಾಯಕರು ವಿಜೃಂಭಸಿ ಗಮನ ಸೆಳೆದರು.

ಮೈಸೂರಿನ ಕೆಜಿ ಕೊಪ್ಪಲಿನ ಬಂದಂತಮ್ಮ ಕಾಳಮ್ಮ ದೇವಾಲಯದಲ್ಲಿ ಆಯೋಜಿಸಿದ್ದ ಪ್ರಚಾರ ರಥಕ್ಕೆ ಚಾಲನೆ ಕಾರ್ಯಕ್ರಮದಲ್ಲಿ ಶ್ರೀ ಆದಿಚುಂಚನಗಿರಿಯ ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಸಾನಿದ್ಯದೊಂದಿಗೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಬಳಿಕ ಮಾತನಾಡಿದ ಸ್ವಾಮೀಜಿಗಳು, ಎಲ್ಲರೂ ಜಯಂತಿಯಲ್ಲಿ ಭಾಗವಹಿಸಿ ಮಹನೀಯರ ಸದ್ಗುಣಗಳನ್ನು ಯುವ ಪೀಳಿಗೆಗೆ ಬಿತ್ತುವ ಕೆಲಸವನ್ನು ಎಲ್ಲರೂ ಮಾಡೋಣ ಎಂದು ಹೇಳಿದರು.

ಈ ವೇಳೆ ಶಾಸಕರಾದ ಜಿ.ಟಿ.ದೇವೇಗೌಡ, ಹರೀಶ್‌ಗೌಡ, ಶ್ರೀವತ್ಸ, ಮಾಜಿ ಶಾಸಕ ಎಲ್‌.ನಾಗೇಂದ್ರ, ಮಾಜಿ ಸಂಸದ ಪ್ರತಾಪಸಿಂಹ ಸೇರಿ ರಥಕ್ಕೆ ಪುಷ್ಪಾರ್ಚನೆ ಮಾಡಿದರು.

Join WhatsApp Group

ಈ ವೇಳೆ ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ಕೆಂಪೇಗೌಡ ಜಯಂತಿಯನ್ನು ಮೈಸೂರಿನಲ್ಲಿ ವಿಜೃಂಭಣೆಯಿಂದ ಆಚರಿಸಿಕೊಂಡು ಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಸಂಭ್ರಮದಿಂದ ಚಾಲನೆ ನೀಡಿದ್ದೇವೆ. ಕೆಂಪೇಗೌಡ ಇನ್ನೂ ಸಿಎಂ ಬದಲಾವಣೆ, ಜಾತಿಗಣತಿ ಕುರಿತ ಪ್ರಶ್ನೆಗಳಿಗೆ ಎಲ್ಲವನ್ನೂ ತಾಯಿ ಚಾಮುಂಡೇಶ್ವರಿ ನೋಡಿಕೊಳ್ಳುತ್ತಾರೆಂದು ಹೇಳಿದರು.  

ಶಾಸಕ ಹರೀಶ್‌ಗೌಡ ಮಾತನಾಡಿ, ಪ್ರತಿ ವರ್ಷದಂತೆ ಈ ಬಾರಿಯೂ ಅದ್ಧೂರಿ ಕೆಂಪೇಗೌಡ ಜಯಂತಿ ಆಚರಣೆಗೆ ತೀರ್ಮಾನಿಸಿ ಪ್ರಚಾರಕ್ಕೆ ಚಾಲನೆ ನೀಡಿದ್ದೇವೆ. ಕೆಂಪೇಗೌಡರು ಒಂದು ಸಮುದಾಯಕ್ಕೆ ಸೀಮಿತರಲ್ಲಾ ಎಲ್ಲಾ ಸಮುದಾಯಕ್ಕೂ ಅವರು ನೆರಳಾಗಿದ್ದಾರೆ. ಹೀಗಾಗಿ ಪ್ರತಿಯೊಬ್ಬರು ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜಯಂತಿ ಯಶಸ್ವಿಗೊಳಿಸುವಂತೆ ಕೋರಿದರು.

ಮಾಜಿ ಸಂಸದ ಪ್ರತಾಪಸಿಂಹ ಮಾತನಾಡಿ, ರಾಜ್ಯದ ಪಾಲಿಗೆ ಪುಣ್ಯಕೋಟಿಯಾಗಿರುವ ಬೆಂಗಳೂರನ್ನು ಕಟ್ಟಿ ಬೆಳೆಸಿ ಎಲ್ಲರಿಗೂ ಅವಕಾಶ ಮಾಡಿಕೊಟ್ಟವರು ಕೆಂಪೇಗೌಡರಾಗಿದ್ದಾರೆ. ದೊಡ್ಡ ಸಂಖ್ಯೆಯಲ್ಲಿ ಎಲ್ಲರೂ ಬಂದು ಜಯಂತಿ ಯಶಸ್ವಿಗೊಳಿಸಿಕೊಡಬೇಕೆಂದು ಕೋರಿದರು.  

ಕೆಂಪೇಗೌಡ ಜಯಂತಿ ಆಚರಣಾ ಸಮಿತಿ ಅಧ್ಯಕ್ಷ ಹಾಗೂ ನಗರಪಾಲಿಕೆ ಮಾಜಿ ಸದಸ್ಯ ಪ್ರಶಾಂತ್‌ ಗೌಡ, ಮಾಜಿ ಮೇಯರ್‌ ಪುಷ್ಪಲತಾ ಜಗನ್ನಾಥ್‌, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಸಿ.ಜಿ.ಗಂಗಾಧರ್‌ಗೌಡ, ಕೆ.ವಿ.ಶ್ರೀಧರ್‌, ಎಂ.ಬಿ.ಮಂಜೇಗೌಡ, ಮೈಸೂರು-ಚಾಮರಾಜನಗರ ಒಕ್ಕಲಿಗರ ಸಂಘದ ಅಧ್ಯಕ್ಷ ಪಿ.ಮರಿಸ್ವಾಮಿ,ಗೌರವಾಧ್ಯಕ್ಷರಾದ ಅಲತೂರು ಜಯರಾಮ್, ಪ್ರಧಾನ ಕಾರ್ಯದರ್ಶಿ ಎಂ.ಈ.ಚೇತನ್‌, ಖಚಾಂಚಿ ಆರ್.ಲೋಕೇಶ್, ನಿರ್ದೇಶಕರಾದ ನಾಗಣ್ಣ,ಪ್ರಕಾಶ್ ಎನ್.ಉಮೇಶ್, ಬೋರೇಗೌಡ, ಎ.ರವಿ, ಗುರುರಾಜ್‌, ಕುಮಾರಗೌಡ, ಸುಶೀಲಾ ನಂಜಪ್ಪ, ಗಿರೀಶ್‌ಗೌಡ, ಒಕ್ಕಲಿಗ ಸಂಘ ಪೂರ್ವ ವಲಯದ ಅಧ್ಯಕ್ಷ ಸುರೇಶ್ ಗೌಡ , ಕವೀಶ್‌ಗೌಡ, ಜೆಡಿಎಸ್‌ ಮುಖಂಡ ಎಚ್‌.ಕೆ.ರಾಮು, ಮೈಸೂರು ವಕೀಲರ ಸಂಘದ ಅಧ್ಯಕ್ಷರಾದ ಎಸ್ ಲೋಕೇಶ್ ,ಕರ್ನಾಟಕ ಕಾವಲುಪಡೆ ರಾಜ್ಯಾಧ್ಯಕ್ಷ ಮೋಹನ್‌ಕುಮಾರ್‌ ಗೌಡ, ನಗರಪಾಲಿಕೆ ಮಾಜಿ ಸದಸ್ಯರಾದ ಎಸ್‌.ಬಿ.ಎಂ.ಮಂಜು, ಪ್ರೇಮಾಶಂಕರೇಗೌಡ, ಜಿಪಂ ಮಾಜಿ ಸದಸ್ಯ ಮಾದೇಗೌಡ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯೆ ಲಕ್ಷ್ಮಿದೇವಿ, ನಮ್ಮೂರು ನಮ್ಮೋರು ಟ್ರಸ್ಟ್‌ ಅಧ್ಯಕ್ಷ ಬೀಡನಹಳ್ಳಿ ಸತೀಶ್‌ಗೌಡ, ಮೈಸೂರು  ಕೋ ಅಪರೇಟಿವ್‌ ಬ್ಯಾಂಕ್‌ ಅಧ್ಯಕ್ಷ ಯೋಗೇಶ್, ರಾಜಕುಮಾರ್, ಬಿಜೆಪಿ ಮಹಿಳಾ ಮೋರ್ಚಾ ನಗರದ ಮಾಜಿ ಅಧ್ಯಕ್ಷ ಹೇಮಾನಂದೀಶ್‌, ನೇಗಿಲಯೋಗಿ ರವಿಕುಮಾರ್, ಸಿದ್ಧರ್ಥಾನಗರ ಒಕ್ಕಲಿಗ ಶಂಕಿ ಗೌಡ  ಇನ್ನಿತರರು ಉಪಸ್ಥಿತರಿದ್ದರು. 

ಜೂನ್ 16ರಿಂದ RTI ಅರ್ಜಿಗಳಿಗೆ ಓಟಿಪಿ ಮೂಲಕ ಇ-ಮೇಲ್ ಪರಿಶೀಲನೆ ಕಡ್ಡಾಯ
“ಟನಲ್‌ ಯೋಜನೆ ವಿಐಪಿ ಕಾರಿಡಾರ್‌, ಸಾರ್ವಜನಿಕರ ಹಿತವಲ್ಲ”
ಶೀಘ್ರದಲ್ಲೇ 402 PSI ನೇಮಕಾತಿ ಅಧಿಸೂಚನೆ: ಗೃಹ ಸಚಿವ ಡಾ.ಜಿ. ಪರಮೇಶ್ವರ್
ಬಿಹಾರ ಚುನಾವಣೆ ಬಳಿಕ ರಾಜ್ಯ ಸಚಿವ ಸಂಪುಟ ಪುನರ್‌ರಚನೆ ಖಚಿತ
ರಾಜ್ಯದಲ್ಲಿ ಮೂವರು IAS ಅಧಿಕಾರಿಗಳ ವರ್ಗಾವಣೆ
TAGGED:Kempegowda JayantilatestnewsMysore Newsಕೆಂಪೇಗೌಡ ಜಯಂತಿ
Share This Article
Facebook Email Print
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
BengaluruKarnatakaTrendingWeather

ಕರ್ನಾಟಕದಾದ್ಯಂತ ಭಾರೀ ಮಳೆ ಮುನ್ಸೂಚನೆ

Team Varthaman
Team Varthaman
April 16, 2025
ಭಾರತದಲ್ಲಿ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ
ಸಾರಿಗೆ ನೌಕರರಿಗೆ ಬಿಗ್ ಶಾಕ್ – ಮುಷ್ಕರದ ಅವಧಿಯಲ್ಲಿ ರಜೆ ಇಲ್ಲ
ಡಿಕೆಶಿ ದೆಹಲಿಗೆ ಪ್ರಯಾಣ: ಅಧಿಕಾರ ಹಂಚಿಕೆ ವಿಚಾರ ಮತ್ತೆ ಚರ್ಚೆಗೆ
ನೈಸ್ ರಸ್ತೆಯಲ್ಲಿ ಹಿಟ್-ಅಂಡ್-ರನ್ : ಇಬ್ಬರ ದುರ್ಮರಣ
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?