ಮೈಸೂರು: ಆಷಾಢ ಮಾಸದ ನಾಲ್ಕನೇ ಶುಕ್ರವಾರದ ಪ್ರಯುಕ್ತ ಮೈಸೂರಿನ ನಾಡದೇವಿ ಚಾಮುಂಡೇಶ್ವರಿಗೆ ಸಿಂಹವಾಹಿನಿ ಅಲಂಕಾರ ಮಾಡಲಾಗಿದೆ. ಈ ವಿಶೇಷ ಅಲಂಕಾರದಲ್ಲಿ ಉತ್ಸವ ಮೂರ್ತಿಗೆ ವಿವಿಧ ಬಗೆಯ ಹೂವುಗಳು ಮತ್ತು ನವಿಲಿನಗರಿ ಹಾರದೊಂದಿಗೆ ಶೋಭೆ ನೀಡಲಾಗಿದೆ.
ಚಾಮುಂಡಿ ದೇವಾಲಯದ ಆವರಣವನ್ನೂ ವಿವಿಧ ಪುಷ್ಪಗಳಿಂದ ಸಿಂಗರಿಸಲಾಗಿದೆ. ಮುಂಜಾನೆ 4:30ರಿಂದ ತಾಯಿಗೆ ವಿಶೇಷ ಪೂಜೆ ನೆರವೇರಿಸಲಾಗಿದ್ದು, ಮುಂಜಾನೆಯಿಂದಲೇ ಭಕ್ತರು ತಾಯಿಯ ದರ್ಶನಕ್ಕೆ ಸರತಿ ಸಾಲಿನಲ್ಲಿ ನಿಂತಿದ್ದಾರೆ.
ಭಕ್ತರು ಹೆಚ್ಚೆಚ್ಚು ಸಂಖ್ಯೆಯಲ್ಲಿ ಆಗಮಿಸುತ್ತಿರುವುದರಿಂದ, ಚಾಮುಂಡಿ ಬೆಟ್ಟದ ಮಾರ್ಗದಲ್ಲಿ ಖಾಸಗಿ ವಾಹನ ಸಂಚಾರಕ್ಕೆ ನಿಷೇಧ ಜಾರಿಗೊಳಿಸಲಾಗಿದೆ. ಇದನ್ನು ಓದಿ –ಕಾಲ್ತುಳಿತ ದುರಂತ: RCB ಮತ್ತು KSCA ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಸರ್ಕಾರ ತೀರ್ಮಾನ
ಸಾರ್ವಜನಿಕರಿಗೆ ವಾಹನ ನಿಷೇಧದ ಬಗ್ಗೆ ಮುನ್ನೆಚ್ಚರಿಕೆ ನೀಡಲಾಗಿದ್ದು, ಭಕ್ತರ ನಿರ್ವಹಣೆಗೆ ಸೂಕ್ತ ಭದ್ರತೆ ಕಲ್ಪಿಸಲಾಗಿದೆ.