By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
    ArticlesShow More
    ” ರಿಜೆಕ್ಷನ್ ಟು ರೆವಲ್ಯೂಷನ್ “
    May 5, 2026
    “ಸೂರ್ಯನಿಗೆ ಸವಾಲೆಸೆದವರು”
    May 3, 2026
    ಸ್ವಭಾವದ ಸ್ವರೂಪ
    May 3, 2026
    “ರೈಟ್ ಟು ಡ್ರೈ”
    May 3, 2026
    ಸುಡುವ ಸೂರ್ಯನಿಗೊಂದು ಪತ್ರ
    May 3, 2026
  • Sports
  • National
  • International
  • Crime
Reading: ಅನರ್ಹ ಬಿಪಿಎಲ್ ಕಾರ್ಡ್‌ಗಳ ರದ್ದು
Share
Font ResizerAa
VarthamanVarthaman
  • Home
  • Karnataka
  • Articles
  • Sports
  • National
  • International
  • Crime
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
  • Sports
  • National
  • International
  • Crime
Follow US
Varthaman > Karnataka – Latest Breaking News > Karnataka > Bengaluru > ಅನರ್ಹ ಬಿಪಿಎಲ್ ಕಾರ್ಡ್‌ಗಳ ರದ್ದು
BengaluruKarnatakaMain News

ಅನರ್ಹ ಬಿಪಿಎಲ್ ಕಾರ್ಡ್‌ಗಳ ರದ್ದು

Team Varthaman
Last updated: October 6, 2025 10:21 AM
Team Varthaman
Published: October 6, 2025
Share
SHARE
  • ನ್ಯಾಯಬೆಲೆ ಅಂಗಡಿಗಳ ಮುಂದೆ ‘ಡಿಲೀಟ್ ನೋಟಿಸ್’ ಪ್ರದರ್ಶನ

ಬೆಂಗಳೂರು: ಉಚಿತ ಅನ್ನಭಾಗ್ಯ ಯೋಜನೆಯಡಿ ಪಡಿತರ ಪಡೆಯುತ್ತಿರುವ ಹಲವರ ಕಾರ್ಡ್‌ಗಳನ್ನು ಸರ್ಕಾರ ಪರಿಷ್ಕರಣೆ ವೇಳೆ ಅನರ್ಹವೆಂದು ಗುರುತಿಸಿ ರದ್ದುಗೊಳಿಸಿದೆ.

ಹಲವೆಡೆ ಪಡಿತರ ಕಾರ್ಡ್‌ಗಳನ್ನು ರದ್ದುಪಡಿಸುವ ಕಾರ್ಯ ನಡೆಯುತ್ತಿದ್ದು, ಡಿಲೀಟ್ ಮಾಡಲಾದ ಕಾರ್ಡ್‌ಗಳ ಪಟ್ಟಿ ನ್ಯಾಯಬೆಲೆ ಅಂಗಡಿಗಳ ನೋಟಿಸ್ ಬೋರ್ಡ್‌ಗಳ ಮೇಲೆ ಅಂಟಿಸಲಾಗಿದೆ. ನೋಟಿಸ್‌ನಲ್ಲಿ, “ನಿಮ್ಮ ಕುಟುಂಬದ ವಾರ್ಷಿಕ ಆದಾಯ ₹1.20 ಲಕ್ಷ ಮೀರಿದೆ. ಹೀಗಾಗಿ ಪಡಿತರ ಚೀಟಿಯನ್ನು ರದ್ದುಗೊಳಿಸಲಾಗುತ್ತಿದೆ. ಈ ಬಾರಿ ಕೊನೆಯ ಬಾರಿಗೆ ಪಡಿತರ ನೀಡಲಾಗುತ್ತದೆ; ಮುಂದಿನ ತಿಂಗಳಿನಿಂದ ನೀಡಲಾಗುವುದಿಲ್ಲ” ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

Contents
  • ಬೆಂಗಳೂರು: ಉಚಿತ ಅನ್ನಭಾಗ್ಯ ಯೋಜನೆಯಡಿ ಪಡಿತರ ಪಡೆಯುತ್ತಿರುವ ಹಲವರ ಕಾರ್ಡ್‌ಗಳನ್ನು ಸರ್ಕಾರ ಪರಿಷ್ಕರಣೆ ವೇಳೆ ಅನರ್ಹವೆಂದು ಗುರುತಿಸಿ ರದ್ದುಗೊಳಿಸಿದೆ.
  • ಐಟಿ ಫೈಲಿಂಗ್ ಮಾಡಿದ ರೈತರು ಮತ್ತು ಸಾಲ ಪಡೆಯುವವರು ಸಂಕಷ್ಟದಲ್ಲಿ
  • ಒಬ್ಬರ ಫೈಲಿಂಗ್ – ಇಡೀ ಕುಟುಂಬದ ಕಾರ್ಡ್ ರದ್ದು
  • ಬಡವರಿಗೂ ಹೊಡೆತ – ಸರ್ಕಾರದ ಮರುಪರಿಶೀಲನೆ ಯೋಚನೆ
  • ರೇಷನ್ ಕಾರ್ಡ್ ರದ್ದಾದರೆ ಏನು ಮಾಡಬೇಕು?
Join WhatsApp Group

ಐಟಿ ಫೈಲಿಂಗ್ ಮಾಡಿದ ರೈತರು ಮತ್ತು ಸಾಲ ಪಡೆಯುವವರು ಸಂಕಷ್ಟದಲ್ಲಿ

ಕೃಷಿ ಸಾಲ, ವಾಹನ ಖರೀದಿ ಅಥವಾ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಾಲ ಪಡೆಯಲು ಬ್ಯಾಂಕ್‌ಗಳ ಸಲಹೆಯ ಮೇರೆಗೆ ಐಟಿ ಫೈಲಿಂಗ್ ಮಾಡಿದ ರೈತರು ಇದೀಗ ಈ ರದ್ದತಿಗೆ ಬಲಿಯಾಗಿದ್ದಾರೆ. ಬ್ಯಾಂಕ್‌ಗಳು “ಐಟಿ ಫೈಲಿಂಗ್ ಮಾಡಿದರೆ ಸಾಲ ಸುಲಭವಾಗಿ ಸಿಗುತ್ತದೆ” ಎಂದು ಹೇಳಿದ ಹಿನ್ನೆಲೆಯಲ್ಲಿ ಹಲವರು 1 ರಿಂದ 3 ಲಕ್ಷ ರೂ. ಆದಾಯ ತೋರಿಸಿ ಫೈಲಿಂಗ್ ಮಾಡಿದ್ದರು.

ಈ ಮಾಹಿತಿಯನ್ನು ಪ್ಯಾನ್ ಸಂಖ್ಯೆಯ ಆಧಾರದ ಮೇಲೆ ಆದಾಯ ತೆರಿಗೆ ಇಲಾಖೆ ಸಂಗ್ರಹಿಸಿ, ಪಟ್ಟಿ ರೂಪದಲ್ಲಿ ಕೇಂದ್ರ ಸರ್ಕಾರಕ್ಕೆ ನೀಡಿದೆ. ಬಳಿಕ ಆ ಪಟ್ಟಿ ರಾಜ್ಯ ಸರ್ಕಾರದ ಕೈಗೆ ತಲುಪಿದ್ದು, “ಆದಾಯ ತೆರಿಗೆ ಪಾವತಿದಾರರು ಬಿಪಿಎಲ್ ಪಡಿತರ ಪಡೆಯುತ್ತಿದ್ದಾರೆ, ಅವರ ಕಾರ್ಡ್‌ಗಳನ್ನು ರದ್ದುಪಡಿಸಿ” ಎಂಬ ಸೂಚನೆ ನೀಡಲಾಗಿದೆ ಎಂದು ಮೂಲಗಳು ಹೇಳುತ್ತವೆ.

ಒಬ್ಬರ ಫೈಲಿಂಗ್ – ಇಡೀ ಕುಟುಂಬದ ಕಾರ್ಡ್ ರದ್ದು

ಒಬ್ಬ ಕುಟುಂಬ ಸದಸ್ಯರು ಸಾಲಕ್ಕಾಗಿ ಅಥವಾ ಇತರೆ ಕಾರಣಕ್ಕಾಗಿ ಐಟಿ ಫೈಲಿಂಗ್ ಮಾಡಿದ್ದರೂ, ಅವರ ಪೂರ್ತಿ ಕುಟುಂಬದ ಪಡಿತರ ಕಾರ್ಡ್ ರದ್ದುಗೊಂಡಿರುವುದು ವಿವಾದಕ್ಕೆ ಕಾರಣವಾಗಿದೆ. ಆ ಕುಟುಂಬದ ಇತರರು ಆದಾಯ ತೆರಿಗೆ ಪಾವತಿದಾರರಲ್ಲದಿದ್ದರೂ, ಸರ್ಕಾರವು ಸಂಪೂರ್ಣ ಕುಟುಂಬವನ್ನು ಸ್ಥಿತಿವಂತರೆಂದು ಪರಿಗಣಿಸಿ ಅವರ ಕಾರ್ಡ್ ರದ್ದುಗೊಳಿಸಿದೆ.

ಬಡವರಿಗೂ ಹೊಡೆತ – ಸರ್ಕಾರದ ಮರುಪರಿಶೀಲನೆ ಯೋಚನೆ

ರಾಜ್ಯಾದ್ಯಂತ ರದ್ದಾದ ಕಾರ್ಡ್‌ಗಳಲ್ಲಿ ಬಹುತೇಕವು ನಿಜವಾದ ಬಡ ಕುಟುಂಬಗಳದ್ದೇ ಆಗಿವೆ ಎಂದು ಮೂಲಗಳು ಹೇಳುತ್ತವೆ. ಬ್ಯಾಂಕ್‌ಗಳ ಸಲಹೆಯಿಂದ ಕಡಿಮೆ ಮೊತ್ತದ ಆದಾಯ ತೋರಿಸಿ ಐಟಿ ಫೈಲ್ ಮಾಡಿದವರ ಕಾರ್ಡ್‌ಗಳನ್ನು ಸಹ ರದ್ದುಪಡಿಸಿರುವುದರಿಂದ ಜನರ ಆಕ್ರೋಶ ಹೆಚ್ಚಾಗಿದೆ.

ಆದರೆ ಸರ್ಕಾರ ಈಗ ಇಂತಹ ಪ್ರಕರಣಗಳನ್ನು ಮರುಪರಿಶೀಲನೆ ಮಾಡುವ ಯೋಚನೆ ಮಾಡುತ್ತಿದೆ. ನಿಜವಾದ ಆದಾಯ ತೆರಿಗೆ ಪಾವತಿದಾರರ ಕಾರ್ಡ್‌ಗಳನ್ನು ಮಾತ್ರ ಶಾಶ್ವತವಾಗಿ ರದ್ದುಗೊಳಿಸಿ, ಸಾಲ ಸೌಲಭ್ಯಕ್ಕಾಗಿ ತಾತ್ಕಾಲಿಕವಾಗಿ ಐಟಿ ಫೈಲ್ ಮಾಡಿದ ಬಡ ಕುಟುಂಬಗಳಿಗೆ ಪಡಿತರ ಕಾರ್ಡ್ ಮರಳಿ ನೀಡುವ ಪ್ರಯತ್ನ ಮುಂದುವರಿಯುತ್ತಿದೆ ಎನ್ನಲಾಗಿದೆ.

ರೇಷನ್ ಕಾರ್ಡ್ ರದ್ದಾದರೆ ಏನು ಮಾಡಬೇಕು?

ಈಗಾಗಲೇ ರದ್ದಾದ ರೇಷನ್ ಕಾರ್ಡ್‌ಗಳನ್ನು ಪುನಃ ನೀಡುವ ಸಾಧ್ಯತೆ ಕಡಿಮೆ. ಆದರೆ ಕುಟುಂಬದ ಸದಸ್ಯರಲ್ಲಿ ಒಬ್ಬನಾದರೂ ಆದಾಯ ತೆರಿಗೆ ಪಾವತಿದಾರನಾಗಿದ್ದರೆ, ಆ ವ್ಯಕ್ತಿಯನ್ನು ಕಾರ್ಡ್‌ನಿಂದ ತೆಗೆಸಿದ ಬಳಿಕ ಕಾರ್ಡ್ ಮುಂದುವರಿಯಬಹುದು ಎಂದು ಅಧಿಕಾರಿಗಳು ಸೂಚಿಸಿದ್ದಾರೆ.ಇದನ್ನು ಓದಿ –ರಾಜ್ಯದ 9 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ

ಒಟ್ಟಾರೆಯಾಗಿ, ಈ ಕ್ರಮಕ್ಕೆ ಕೇಂದ್ರ ಸರ್ಕಾರದ ಆದಾಯ ತೆರಿಗೆ ಪಟ್ಟಿ ಕಾರಣವಾಗಿದ್ದು, ರಾಜ್ಯ ಸರ್ಕಾರ ಅದರ ಆಧಾರದ ಮೇಲೆ ಕ್ರಮ ಕೈಗೊಂಡಿದೆ. ಆದರೆ ಸಾಲ ಸೌಲಭ್ಯಕ್ಕಾಗಿ ಐಟಿ ಫೈಲಿಂಗ್ ಮಾಡಿದ ಬಡ ಕುಟುಂಬಗಳ ಕಾರ್ಡ್ ರದ್ದುಗೊಂಡಿರುವುದರಿಂದ ಜನರು ಅಸಮಾಧಾನಗೊಂಡಿದ್ದಾರೆ.

  • ನೂತನ ಅಬಕಾರಿ ನೀತಿ: ಬಿಯರ್‌, ಪ್ರೀಮಿಯಂ ವಿಸ್ಕಿ ದರ ಇಳಿಕೆ
    by Team Varthaman
    May 15, 2026
  • ಪೆಟ್ರೋಲ್‌, ಡೀಸೆಲ್‌ ದರ ಲೀಟರ್‌ಗೆ 3 ರೂ. ಏರಿಕೆ
    by Team Varthaman
    May 15, 2026
  • ಜೂನ್‌ 21ರಂದು NEET-UG ಮರು ಪರೀಕ್ಷೆ
    by Team Varthaman
    May 15, 2026
  • ಸಂಪುಟ ಪುನಾರಚನೆ ಅಗತ್ಯ: ಸಿದ್ದರಾಮಯ್ಯ
    by Team Varthaman
    May 14, 2026
  • ಸರ್ಕಾರದ ‘ರಿಯಲ್ ಎಸ್ಟೇಟ್’ ಕೆಲಸ :ಡಿಕೆಶಿ ವಿರುದ್ಧ ಹೆಚ್.ಡಿ.ಕೆ ವಾಗ್ದಾಳಿ
    by Team Varthaman
    May 14, 2026
ಜೂನ್ 23ರಿಂದ 28ರ ವರೆಗೆ ಭಾರೀ ಮಳೆಯ ಎಚ್ಚರಿಕೆ
NPS ನಿವೃತ್ತರಿಗೆ ಹೆಚ್ಚುವರಿ UPS ಪಿಂಚಣಿ ಸೌಲಭ್ಯ
ಚಾಂಪಿಯನ್‌ ಭಾರತಕ್ಕೆ ಬಿಸಿಸಿಐ 21 ಕೋಟಿ ಘೋಷಣೆ
ರಾಜ್ಯಾದ್ಯಂತ ಇಂದಿನಿಂದ SSLC ಪರೀಕ್ಷೆ ಆರಂಭ: ಅಕ್ರಮ ತಡೆಯಲು ವೆಬ್ ಸ್ಟ್ರೀಮಿಂಗ್ ವ್ಯವಸ್ಥೆ
ಐಷಾರಾಮಿ ವಸ್ತುಗಳ ಮಾರಾಟಕ್ಕೆ TCS ಅನಿವಾರ್ಯ
TAGGED:BPL CardbreakingnewsKarnataka Govtlatestnewsಬಿಪಿಎಲ್ ಪಡಿತರ ಕಾರ್ಡ್‌
Share This Article
Facebook Email Print
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
Articles

ಮಹಿಳಾ ಶಿಕ್ಷಣ ಕ್ರಾಂತಿಯ ಸಾವಿತ್ರಿ ಬಾಯಿ ಫುಲೆ

Team Varthaman
Team Varthaman
January 5, 2026
ಶಾಲೆಗೆ ಮನೋವೈದ್ಯ ಮನೆಗೆ ಅಜ್ಜಿ-ತಾತ ಬೇಕು
ನಟಿ ರಮ್ಯಾ ಗೆ ಅಶ್ಲೀಲ ಮೆಸೇಜ್ : 48 ಐಪಿ ವಿಳಾಸ ಪತ್ತೆ ಹಚ್ಚಿದ ಸಿಸಿಬಿ
ಪೊಲೀಸ್ ಸಿಬ್ಬಂದಿಗಳಿಗೆ ಊಟದ ಭತ್ಯೆ ₹200ರಿಂದ ₹300ಕ್ಕೆ ಹೆಚ್ಚಳ
ಇಂದು ರಾಮನಗರಕ್ಕೆ ನಿರ್ಮಲಾ ಸೀತಾರಾಮನ್ ಭೇಟಿ
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?