By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
    ArticlesShow More
    ಅಜವಾನ ಅಜೀರ್ಣಕ್ಕೆ ಪ್ರಕೃತಿ ನೀಡಿದ ವರದಾನ
    February 1, 2026
    ಹೀಗೆ ಬಂದು ಹಾಗೆ ಹೋಗುವ ಸ್ನೇಹ ಸಾವಿರ
    February 1, 2026
    ಸಾವು ಬದುಕಿನ ನಡುವೆ
    January 28, 2026
    ವಾಸ್ತವ ವರ್ತಮಾನ
    January 24, 2026
    ಅರೋಗ್ಯ ಭಾಗ್ಯ
    January 24, 2026
  • Sports
  • National
  • International
  • Crime
Reading: ಕನ್ನಡ ನಾಡಿನ ಬೆಳ್ಳಿಚುಕ್ಕಿ ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮ
Share
Font ResizerAa
VarthamanVarthaman
  • Home
  • Karnataka
  • Articles
  • Sports
  • National
  • International
  • Crime
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
  • Sports
  • National
  • International
  • Crime
Follow US
Varthaman > Karnataka – Latest Breaking News > Articles > ಕನ್ನಡ ನಾಡಿನ ಬೆಳ್ಳಿಚುಕ್ಕಿ ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮ
Articles

ಕನ್ನಡ ನಾಡಿನ ಬೆಳ್ಳಿಚುಕ್ಕಿ ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮ

Team Varthaman
Last updated: October 22, 2025 5:12 PM
Team Varthaman
Published: October 22, 2025
Share
SHARE

(೧೭೭೮-೧೮೨೯ ಜಯಂತ್ಯೋತ್ಸವದ ಅಂಗವಾಗಿ )

ಇಂದಿನ ಬೆಳಗಾವಿ ಮತ್ತು ಧಾರವಾಡ ನಗರಗಳ ಮಧ್ಯದಲ್ಲಿರುವ ಸಣ್ಣ ಪ್ರದೇಶವೇ ಕಿತ್ತೂರು ಸಂಸ್ಥಾನ ಸುಮಾರು 250ವರ್ಷಕ್ಕೂ ಹೆಚ್ಚು ಕಾಲ ಸಂಸಾರ ರಾಜಧಾನಿಯಾಗಿ ಮೆರೆದ ಊರು. ಕಿತ್ತೂರು ಇಂದಿನ ಬೆಳಗಾವಿ, ಕಾರವಾರ,ಧಾರವಾಡ, ಕಿತ್ತೂರು, ಖಾನಾಪುರ, ಕಲಘಟಗಿ, ಮನೋಳಿ ಮತ್ತು ನರಗುಂದ ಪ್ರದೇಶಗಳನ್ನು ಒಳಗೊಂಡ ರಾಜ್ಯವಾಗಿತ್ತು. ವಿಜಾಪುರದ ಆದಿಲಶಾಹಿಗಳ ಬಳಿ ಕಾರ್ಯ ನಿರ್ವಹಿಸುತ್ತಿದ್ದ ಹಿರೇಮಲ್ಲ ಶೆಟ್ಟಿ ಎಂಬ ಸೇನಾ ನಿಗೆ ರಾಜರು ಹುಬ್ಬಳ್ಳಿಯ ಈ ಭಾಗವನ್ನು ಬಳುವಳಿಯಾಗಿ ನೀಡಿದರು ಮುಂದೆ ಆತನ ಉತ್ತರಾಧಿಕಾರಿಯದ ಅಲ್ಲಪ್ಪ ಗೌಡನು ಗೀಜಗನಹಳ್ಳಿ ಎಂದು ಕರೆಯಲ್ಪಡುತ್ತಿದ್ದ ಹಳ್ಳಿಗೆ ರಾಜಧಾನಿಯನ್ನು ಸ್ಥಳಾಂತರಿಸಿ ಅದನ್ನು ಕಿತ್ತೂರು ಎಂದು ಕರೆದನು.

Join WhatsApp Group

ಕಿತ್ತೂರು ಸಂಸ್ಥಾನವನ್ನು ಆಳಿದ ರಾಜರಲ್ಲಿಯೇ ಅತ್ಯಂತ ಯಶಸ್ವಿ ಆಡಳಿತಗಾರ ಮಲ್ಲಸರ್ಜ. ಸುಧರ್ಮಿಯು, ಶೂರನು, ನೀತಿವಂತನು ಆಗಿದ್ದ ಮಲ್ಲಸರ್ಜನು ಕಿತ್ತೂರು ರಾಜ್ಯವನ್ನು ಸುಮಾರು 34 ವರ್ಷಗಳ ಕಾಲ ಆಳ್ವಿಕೆ ನಡೆಸಿದನು. ಮಲ್ಲಸರ್ಜನ ಮೊದಲ ಹೆಂಡತಿ ರುದ್ರಮ್ಮ. ಎರಡನೆಯ ಪತ್ನಿಯೇ ನಮ್ಮ ಸ್ವಾತಂತ್ರದ ಸಂಗ್ರಾಮದ ಮೇರು ಮುಕುಟಮಣಿ ಕಿತ್ತೂರು ರಾಣಿ ಚೆನ್ನಮ್ಮ.

ಕಾಕತಿಯ ದೇಸಾಯಿಯವರಾದ ಧೂಳಪ್ಪ ಗೌಡರ ಮಗಳು ಚೆನ್ನಮ್ಮ. ಸ್ವಭಾವತಹ ಸ್ತ್ರೀಪರ ಚಿಂತಕರಾದ ಧೂಳಪ್ಪ ಗೌಡರು ತಮ್ಮ ಮಗಳು ಚೆನ್ನಮ್ಮಳನ್ನು ಸಾಹಿತ್ಯ ಸಂಗೀತ ಸಂಸ್ಕೃತಿ ಇತಿಹಾಸದಂತಹ ಸಾಂಪ್ರದಾಯಿಕ ವಿದ್ಯೆಗಳ ಜೊತೆ ಜೊತೆಗೆ ಬಿಲ್ವಿದ್ಯೆ, ಕುದುರೆ ಸವಾರಿ, ಕತ್ತಿವರಸೆ, ಭರ್ಜಿ ಎಸೆತಗಳಂತಹ ಯುದ್ಧವಿದ್ಯೆಗಳಲ್ಲಿಯೂ ತರಬೇತಿ ಕೊಡಿಸಿದರು. ಮುಂದೆ ಕಿತ್ತೂರಿನ ರಾಜನಾದ ಮಲ್ಲಸರ್ಜನಿಗೆ ವಿವಾಹ ಮಾಡಿಕೊಟ್ಟನು.

ಅತ್ಯುತ್ತಮ ಆಡಳಿತಗಾರನಾಗಿದ್ದ ಮಲ್ಲಸರ್ಜನಿಂದ ಯಾವತ್ತೂ ತನ್ನ ಅರಸೊತ್ತಿಗೆಗೆ ಅಪಾಯ ಎಂಬ ಭಯದಿಂದ ಮರಾಠರ ಪೇಶ್ವೆ ಬಾಜಿರಾಯನು ಮಲ್ಲಸರ್ಜನನ್ನು ಬಂದು ಭೇಟಿಯಾಗಲು ಕೇಳಿಕೊಂಡನು. ಹೀಗೆ ಭೇಟಿಯಾಗಲು ಬಂದ ಮಲ್ಲಸರ್ಜನನ್ನು ಮೋಸದಿಂದ ಪುಣೆಯ ಮುಧೋಳಕರವಾಡದಲ್ಲಿ ಸೆರೆಹಿಡಿದು ಚಿತ್ರ ಹಿಂಸೆಗೆ ಗುರಿಪಡಿಸಿದನು. ಪರಿಣಾಮವಾಗಿ ಕಿತ್ತೂರನ್ನು ತಲುಪುವ ಮೊದಲೇ ಕ್ರಿ.ಶ.೧೮೧೬ರಲ್ಲಿ ಮಲ್ಲಸರ್ಜನು ಮರಣಕ್ಕೀಡಾದನು. ಆತನ ಹಿಂದೆ ಆತನ ಇಬ್ಬರು ಪತ್ನಿಯರು ಮತ್ತು ಮೊದಲ ಪತ್ನಿ ರುದ್ರಮ್ಮನ ಮಗ ಶಿವಲಿಂಗಸರ್ಜ ಮಾತ್ರವೇ ಇದ್ದರು.

ಶೋಕದಲ್ಲಿ ಮುಳುಗಿದ ಕಿತ್ತೂರನ್ನು ಅರಾಜಕವಾಗದಂತೆ ಎತ್ತಿ ಹಿಡಿದಳು ಚೆನ್ನಮ್ಮ. ಶಿವಲಿಂಗ ರುದ್ರಸರ್ಜನಿಗೆ ಚೆನ್ನಮ್ಮ ಪಟ್ಟ ಕಟ್ಟಿದಳು. ಮುಂದೆ 1816 ರಿಂದ 1824ರವರೆಗೂ ರಾಜ್ಯಭಾರ ಮಾಡಿದ ಶಿವಲಿಂಗ ರುದ್ರಸರ್ಜನ ಆರೋಗ್ಯ ನಿಧಾನವಾಗಿ ಕೆಡಲಾರಂಭಿಸಿತು. ಮುಂದಾಲೋಚನೆಯಿಂದ ಚೆನ್ನಮ್ಮ ಮಾಸ್ತ ಮರಡಿಯ ಬಾಳಪ್ಪ ಗೌಡರ ಮಗ ಶಿವಲಿಂಗಪ್ಪನನ್ನು ದತ್ತಕ ತೆಗೆದು ಕೊಂಡಳು. ಶಿವಲಿಂಗ ರುದ್ರಸರ್ಜ ಮರಣ ಹೊಂದಿದ ನಂತರ ಚೆನ್ನಮ್ಮ ದತ್ತಕ ಪುತ್ರನು ಇನ್ನೂ ಚಿಕ್ಕವನಾಗಿದ್ದರಿಂದ ಆತನಿಗೆ ಯುವರಾಜ ಪಟ್ಟಾಭಿಷೇಕ ಮಾಡಿದರೂ ರಾಜ್ಯದ ಸಮಸ್ತ ಹೊಣೆಗಾರಿಕೆಯನ್ನು ಹೊತ್ತು ಕೊಳ್ಳಬೇಕಾಯಿತು. ಇದೇ ಸಮಯದಲ್ಲಿ ಬ್ರಿಟಿಷರು ಜಾರಿಗೆ ತಂದ ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ಪದ್ಧತಿಯು ಕಿತ್ತೂರು ಸಂಸ್ಥಾನಕ್ಕೆ ಕುತ್ತು ತಂದಿತು. ಲಾರ್ಡ್ ಡಾಲ್ ಹೌಸಿಯ ಕಾಯ್ದೆಯ ಪ್ರಕಾರ ಅಂದಿನ ಧಾರವಾಡದ ಕಲೆಕ್ಟರ್ ಆಗಿದ್ದ ಠಾಕರೆ ಎಂಬ ಬ್ರಿಟಿಷ್ ಅಧಿಕಾರಿ ಕಿತ್ತೂರಿನ ಶಿವಲಿಂಗಪ್ಪನ ದತ್ತಕ ವನ್ನು ಅಸಿಂಧುವೆಂದು ಘೋಷಿಸಿದನು.

ಇದರಿಂದ ಸಿಡಿಮಿಡಿಗೊಂಡ ಚೆನ್ನಮ್ಮನ ನಮ್ಮ ರಾಜ್ಯದ ವಿಷಯಕ್ಕೆ ತಲೆ ಹಾಕಲು ಬ್ರಿಟಿಷರು ಯಾರು? ಅವರಿಗೆ ನಾವು ಕಪ್ಪವನ್ನು ಕೊಡಬೇಕು ಮತ್ತು ಅವರ ಪರವಾನಿಗೆಯನ್ನು ಏಕೆ ಪಡೆಯಬೇಕು ಎಂದು ದಿಟ್ಟತನದಿಂದ ಪ್ರಶ್ನಿಸಿದಳು.
ಆದರೆ ಥ್ಯಾಕರೆ ಸಾಹೇಬನು ಮಲ್ಲಮ್ಮನ ವಿರುದ್ಧ ಕಿತ್ತೂರಿನ ಮಲ್ಲಪ್ಪ ಶೆಟ್ಟಿ ಮತ್ತು ಹಾವೇರಿಯ ವೆಂಕಟರಾಯರನ್ನು ಬಳಸಿಕೊಂಡು ಪಿತೂರಿಯನ್ನು ಆರಂಭಿಸಿದನು. ವೈಯುಕ್ತಿಕ ಹಿತ ಸಾಧನೆ ಮತ್ತು ಹಣದ ಆಸೆಗೆ ಒಳಗಾದ ಮಲ್ಲಪ್ಪ ಶೆಟ್ಟಿ ಮತ್ತು ವೆಂಕಟರಾಯರು ಥ್ಯಾಕರೆಗೆ ಕಿತ್ತೂರು ಸಂಸ್ಥಾನದ ಎಲ್ಲಾ ಒಳಗುಟ್ಟುಗಳನ್ನು ಹೇಳಿಕೊಟ್ಟರು. ಜೊತೆ ಜೊತೆಗೆ ಥ್ಯಾಕರೆಯು ಮಲ್ಲಮ್ಮನ ವಿರುದ್ಧ ಪುಣೆಯಲ್ಲಿದ್ದ ಡೆಕ್ಕನ್ ಕಮಿಷನರ್ ಚಾಪ್ಲಿನ್ ಗೆ ಇಲ್ಲಸಲ್ಲದ ವಿಷಯಗಳನ್ನು ಪತ್ರದಲ್ಲಿ ಬರೆದು ತಿಳಿಸಿದ. ಇತ್ತ ಮಲ್ಲಪ್ಪ ಶೆಟ್ಟಿಯ ಸಹಾಯದಿಂದ ಅರಮನೆಯ ತುಂಬಾ ಗೂಢಚಾರರನ್ನು ನೇ ಮಿಸಿದನಲ್ಲದೇ ರಾಣಿ ರುದ್ರಮ್ಮ ದೇವಿ ಮತ್ತು ಚನ್ನಮ್ಮರ ಮಧ್ಯದಲ್ಲಿ ಮನಸ್ತಾಪವನ್ನು ತಂದಿರಿಸಿದ. ರಾಣಿ ಚೆನ್ನಮ್ಮನು ಸಾರ್ವಜನಿಕರನ್ನು ಭೇಟಿಯಾಗದಂತೆ ನಿರ್ಬಂಧ ವಿಧಿಸಿದ.

ಯಾವುದಕ್ಕೂ ಅಂಜದ ಕಿತ್ತೂರು ರಾಣಿ ಚೆನ್ನಮ್ಮ 1824ರಲ್ಲಿ ತಮ್ಮೆಲ್ಲ ಮುಖಂಡರನ್ನು, ಸೈನಿಕರನ್ನು ಮತ್ತು ಸಾರ್ವಜನಿಕರನ್ನು ಸೇರಿಸಿ ಕಿತ್ತೂರು ರಾಜ್ಯ ಮತ್ತು ಅದರ ಮೇಲಿನ ಒಡೆತನ ಕೇವಲ ತಮ್ಮದು ಮಾತ್ರ.. ಕಿತ್ತೂರಿನ ಮೇಲೆ ಕಣ್ಣು ಹಾಕಿದವರ ವಿರುದ್ಧ ನಾವು ಹೋರಾಡುವ ಎಂದು ಹುರಿದುಂಬಿಸಿದಳು. ಚೆನ್ನಮ್ಮನ ಸ್ಪೂರ್ತಿದಾಯಕ ಮಾತುಗಳಿಂದ ಪ್ರಭಾವಿತರಾದ ಎಲ್ಲರೂ ಕಿತ್ತೂರಿನ ಸ್ವಾತಂತ್ರ್ಯಕ್ಕಾಗಿ ಕಟಿಬದ್ಧರಾದರು. ಅತ್ಯಂತ ವೀರ ಸ್ವಾತಂತ್ರ್ಯ ಯೋಧರ ಪಡೆಯೇ ತಯಾರಾಯಿತು ಕಿತ್ತೂರಿನಲ್ಲಿ. ಆದರೆ ಯುದ್ಧದಲ್ಲಿ ಆಸ್ತಿಪಾಸ್ತಿ ನಷ್ಟವಾಗಬಾರದು ಎಂದು ಸಂಧಾನದ ಪ್ರಯತ್ನವನ್ನು ಕೂಡ ಮಾಡುತ್ತಿದ್ದಳು ಚೆನ್ನಮ್ಮ. ಆದರೆ ಆಕೆಯ ಪ್ರಯತ್ನ ನಿಷ್ಫಲವಾಯಿತು 1824ರ ಅಕ್ಟೋಬರ್ 23 ರಂದು ಥ್ಯಾಕರೆಯ ಸೈನ್ಯ ಕಿತ್ತೂರಿನ ಕೋಟೆಗೆ ಮುತ್ತಿಗೆ ಹಾಕಿತ್ತು. ಅದು ಹಿಂದುಗಳ ಪಾಲಿನ ಅತಿ ದೊಡ್ಡ ಹಬ್ಬ ಮಹಾನವಮಿ ಯ ದಿನ. ಚೆನ್ನಮ್ಮನ ಸಂಗೊಳ್ಳಿ, ಅಂಬಡಗಟ್ಟಿ, ಅಂಕಲಗಿ, ಹೆಗ್ಗೇರಿ, ಹೂಲಿ ಮುಂತಾದೆಡೆಗಳಿಂದ ಸೈನಿಕ ಸಹಾಯ ದೊರೆಯಿತು.
ಥ್ಯಾಕರೆ ಸಾಹೇಬನು ಕಿತ್ತೂರಿನ ಕೋಟೆಯನ್ನು ಬಿಟ್ಟುಕೊಡಲು ಕೇವಲ 20 ನಿಮಿಷಗಳ ಸಮಯಾವಕಾಶ ನೀಡಿ, ತನ್ನ ಸೇನೆಯ ಕ್ಯಾಪ್ಟನ್ ಬ್ಲಾಕ್ ನಿಗೆ ಹೇಳಿ ತುಪಾಕಿಗಳನ್ನು ಇಡಿಸಿದನು. ಥ್ಯಾಕರೆ ಎಚ್ಚರವನ್ನು ಕೇಳಿ ಸ್ವಾತಂತ್ರ್ಯ ಪ್ರೇಮಿಗಳಾದ ಸಂಗೊಳ್ಳಿ ರಾಯಣ್ಣ, ಗುರುಸಿದ್ದಪ್ಪ ಅಮಟೂರು ಬಾಳಪ್ಪ ರ ನೇತೃತ್ವದಲ್ಲಿ ಕಿತ್ತೂರಿನ ರಾಣಿ ಚೆನ್ನಮ್ಮ ಹರ ಹರ ಮಹಾದೇವ ಎಂಬ ಜಯ ಘೋಷ ಮಾಡುತ್ತಾ ಬ್ರಿಟಿಷ್ ಸೈನ್ಯದ ವಿರುದ್ಧ ತನ್ನ ಸೈನ್ಯವನ್ನು ಹುರಿದುಂಬಿಸುತ್ತ ಖಡ್ಗ ಚಲಾಯಿಸಿದಳು. ಅಂದಿನ ಆ ಸಮಯದ ಚೆನ್ನಮ್ಮನ ಆವೇಶವನ್ನು ಕಂಡ ಪ್ರತ್ಯಕ್ಷ ದರ್ಶಿ ಗಳು ಹೀಗೆಂದು ಬರೆದರು.

ಕಿತ್ತೂರು ಚೆನ್ನಮ್ಮ ಸುತ್ತೂರ ಒಡತ್ಯಾಗೀ
ಕತ್ತಿ ಕವಚಗಳ ಉಡುಪುಟ್ಟು
ಅಬ್ಬರದಿ ಬತ್ತಲಗುದುರಿ ಜಿಗದಾಳ

ಕಿತ್ತೂರಿನ ಸೈನ್ಯವನ್ನು, ಅವರ ಕೆಚ್ಚನ್ನು ಎದುರಿಸಲಾರದೆ ಇಂಗ್ಲೀಷರ ಸೈನ್ಯ ನುಚ್ಚು ನೂರಾಗಿ ಹೋಯಿತು. ಥ್ಯಾಕರೆಯು ರಾಣಿಗೆ ಗುಂಡಿಟ್ಟು ಸಾಯಿಸಲು ನೋಡಿದಾಗ ರಾಣಿಯ ಅಂಗರಕ್ಷಕ ಅಮಟೂರು ಬಾಳಪ್ಪ ಥ್ಯಾಕರೆಯ ಮೇಲೆ ಗುಂಡು ಹಾರಿಸಿ ಆತನನ್ನು ನೆಲಕ್ಕೊರಗಿಸಿದ. ಬ್ರಿಟಿಷ್ ಸೈನಿಕರನ್ನು ಸೆರೆಯಲ್ಲಿರಿಸಿದರು. ಆಗ ಪುಣೆಯಲ್ಲಿದ್ದ ಚಾಪ್ಲಿನ್ಗೆ ಈ ಸುದ್ದಿ ತಿಳಿದು ಆತುರದ ನಿರ್ಧಾರ ಮಾಡದೆ ತನ್ನ ಸೈನಿಕರನ್ನು ಬಿಡುಗಡೆಗೊಳಿಸುವಂತೆ ಕೇಳಿಕೊಂಡ. ಇದಕ್ಕೆ ಉತ್ತರವಾಗಿ ಚೆನ್ನಮ್ಮ ತನ್ನ ಕಿತ್ತೂರಿನ ಆಡಳಿತದಲ್ಲಿ ಕೈ ಹಾಕದಿದ್ದರೆ ಮಾತ್ರ ಮಾತನ್ನು ಆಡುವುದಾಗಿ ಹೇಳಿ ಕಳಿಸಿದಳು ಜೊತೆ ಜೊತೆಗೆ ಚಾಪ್ಲಿನ್ ನ ದ್ವಿಮುಖ ನೀತಿಯನ್ನು ಅರಿತ ಆಕೆ ಯುದ್ಧದ ಮರು ತಯಾರಿಗೆ ತೊಡಗಿದ್ದಳು. ರಕ್ತಪಾತವಾಗದಂತೆ ಎರಡು ಕಡೆಯ ನಾಯಕರು ಸಂಧಾನವನ್ನು ಮಾಡಲು ಚೆನ್ನಮ್ಮ ಪ್ರಯತ್ನಿಸಿದರು ಸಾಧ್ಯವಾಗಲಿಲ್ಲ ಮತ್ತೆ ಅಗಾಧ ಸೈನ್ಯದೊಂದಿಗೆ ಕಿತ್ತೂರಿನ ಮೇಲೆ ದಾಳಿ ಮಾಡಿದರು ಬ್ರಿಟಿಷರು. ಆಗ ಚೆನ್ನಮ್ಮನ ಅತ್ಯಂತ ನಂಬಿಗಸ್ತ ಬಂಟನಾದ ಗುರುಸಿದ್ದಪ್ಪನನ್ನು ಸರಿ ಹೇಳಿದ ಬ್ರಿಟಿಷರು ಚೆನ್ನಮ್ಮನನ್ನು ಸೆರೆ ಹಿಡಿದು ಬೈಲಹೊಂಗಲದ ಜೈಲಿನಲ್ಲಿ ಇಟ್ಟರು.

ಸೆರೆಯಲ್ಲಿದ್ದಾಗಲೂ ಕೂಡ ಚೆನ್ನಮ್ಮ ತನ್ನ ಆತ್ಮಸ್ಥೈರ್ಯವನ್ನು ಕಳೆದುಕೊಳ್ಳಲಿಲ್ಲ. ಆಧ್ಯಾತ್ಮ ಶಿವ ಪೂಜೆ ಪ್ರಾರ್ಥನೆ ಪಾರಾಯಣಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಳು. ಸಂಗೊಳ್ಳಿ ರಾಯಣ್ಣನನ್ನು ಮೊದಲ್ಗೊಂಡು ಆಕೆಯ ನಿಕಟವರ್ತಿ ಬಂಟರು ಆಗಾಗ ಮಾರುವೇಷದಲ್ಲಿ ಆಕೆಯನ್ನು ಬಂದು ಭೇಟಿಯಾಗುತ್ತಿದ್ದರು. ದಿನಗಳು,ವರ್ಶಗಳುರುಳಿದವು ಆದರೆ ಸ್ವಾತಂತ್ರ್ಯದ ಯಾವ ಆಶಯವು ಈಡೇರಲಿಲ್ಲ. ಇಂಗ್ಲಿಷರ ಪ್ರಾಬಲ್ಯ ಹೆಚ್ಚಾಗುತ್ತಾ ಹೋದಂತೆ ಕಿತ್ತೂರಿನ ಸ್ವಾತಂತ್ರ್ಯದ ಕನಸು ಕನಸಾಗಿಯೇ ಉಳಿದು ಹೋಗಬಹುದು ಎಂಬ ನೋವಿನಲ್ಲಿ ಚೆನ್ನಮ್ಮ ಕುಗ್ಗತೊಡಗಿದಳು. ಇದೇ ದುಃಖದಲ್ಲಿ ರಾಣಿ ಚೆನ್ನಮ್ಮ 1829 ಫೆಬ್ರುವರಿ 22ರಂದು ಮರಣ ಹೊಂದಿದಳು.

ಭಾರತದ ಸ್ವಾತಂತ್ರ್ಯ ಇತಿಹಾಸದ ಸುವರ್ಣ ಪುಟಗಳಲ್ಲಿ ಚೆನ್ನಮ್ಮ ಸ್ಥಾನ ಪಡೆದಿದ್ದಾಳೆ ಸ್ಥಾನ ಪಡೆದಿದ್ದಾಳೆ. 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ 30 ವರ್ಷ ಮುಂಚೆಯೇ ಚೆನ್ನಮ್ಮ ಕಿತ್ತೂರಿನ ಸ್ವಾತಂತ್ರ್ಯಕ್ಕಾಗಿ ಹೋರಾಡಿದಳು. ಚೆನ್ನಮ್ಮ ಸ್ವಾತಂತ್ರ್ಯದ ಕಿಚ್ಚು ಸಹಸ್ರಾರು ಜನರನ್ನು ಹುರಿದುಂಬಿಸಿ ಸ್ವಾತಂತ್ರ್ಯದ ಮಹಾಯಜ್ಞಕ್ಕೆ ಸಮಿತ್ತಾಗಿಸಿತು. ಕಿತ್ತೂರು ಚೆನ್ನಮ್ಮನ ಈ ಬಲಿದಾನ ಶತಶತಮಾನಗಳ ಕಾಲ ಕನ್ನಡ ನಾಡು ನೆನಪಿಡುತ್ತದೆ. ಚೆನ್ನಮ್ಮನ ಸ್ವಾತಂತ್ರ್ಯದ ಕಿಚ್ಚು, ಶೌರ್ಯ ದೇಶಭಕ್ತಿ ನಮ್ಮ ಯುವಜನಾಂಗಕ್ಕೆ ಮಾದರಿಯಾಗಲಿ ಎಂಬ ಆಶಯದೊಂದಿಗೆ.

ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್

  • ಅಜವಾನ ಅಜೀರ್ಣಕ್ಕೆ ಪ್ರಕೃತಿ ನೀಡಿದ ವರದಾನ
    by Team Varthaman
  • ಹೀಗೆ ಬಂದು ಹಾಗೆ ಹೋಗುವ ಸ್ನೇಹ ಸಾವಿರ
    by Team Varthaman
  • ಐಟಿ ದಾಳಿ ಭೀತಿ: ಕಾನ್ಫಿಡೆಂಟ್ ಅಧ್ಯಕ್ಷ ಡಾ.ಸಿ.ಜೆ.ರಾಯ್ ಆತ್ಮಹತ್ಯೆ
    by Team Varthaman
  • ಅಕ್ರಮ ವಲಸಿಗರ ಪತ್ತೆ–ಗಡಿಪಾರಿಗೆ ವಿಶೇಷ ತಂಡ ರಚನೆ: ರಾಜ್ಯ ಸರ್ಕಾರ
    by Team Varthaman
  • ತಿರುಪತಿ ಲಡ್ಡು ಕಲಬೆರಕೆ ಪ್ರಕರಣ: ₹234 ಕೋಟಿ ವಂಚನೆ ಬಯಲು
    by Team Varthaman
ದೊಡ್ಡ ವಿದ್ಯಾವಂತರೆಲ್ಲಾ ವಿವೇಕಿಗಳೇ……….?
ಕಳೆದು ಹೋದ ಸಂಪತ್ತು ಪ್ರದಾಯಕ ‘ಅನಂತ ಪದ್ಮನಾಭ ವ್ರತ”
ಎಲ್ಲಾ ಧರ್ಮಗಳಿಗೂ ಸಮನ್ವಯತೆಯೇ ನಮ್ಮ ಮಂತ್ರ
ಸಾವು ಬದುಕಿನ ನಡುವೆ
ಒಳ್ಳೆಯವರಿಗೇಕೆ ಸಾವು ಬೇಗ ಬರುತ್ತೆ…..?
TAGGED:Kittur Rani Chennammaಕಿತ್ತೂರು ರಾಣಿ ಚೆನ್ನಮ್ಮಜಯಂತ್ಯೋತ್ಸವರಾಣಿ ಚೆನ್ನಮ್ಮ
Share This Article
Facebook Email Print
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
Articles

ಚಾತುರ್ಮಾಸ

Team Varthaman
Team Varthaman
June 27, 2025
ಮಂಗ್ಲಿ ಪಾರ್ಟಿಯಲ್ಲಿ ಡ್ರಗ್ಸ್, ಗಾಂಜಾ ಪತ್ತೆ
ವಿದ್ಯುತ್ ಶಾಕ್‌ಗೆ 5 ವರ್ಷದ ಬಾಲಕ ಬಲಿ
ರಾಜ್ಯದಲ್ಲಿ ಭಾರಿ ಮಳೆ ಎಚ್ಚರಿಕೆ – 9 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್
ಭಾರಿ ಮಳೆ ಅಬ್ಬರ: ಹಲವು ಜಿಲ್ಲೆಗಳಿಗೆ ಅಲರ್ಟ್ ಘೋಷಣೆ
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?