ಅಂದು ಶುಕ್ರವಾರ. ಸಾಮಾನ್ಯವಾಗಿ ಎಲ್ಲ ಕಡೆಗಳಲ್ಲೂ ಶುಕ್ರವಾರ ಲಕ್ಷ್ಮೀ ಪೂಜೆಯನ್ನು ಮಾಡುವ ಕ್ರಮ ಇದೆ. ಅದು ಮನೆಯಾಗಿರಲಿ, ಕಛೇರಿಗಳಾಗಿರಲಿ, ಬ್ಯಾಂಕಾಗಿರಲಿ, ಅಂಗಡಿಗಳಾಗಿರಲಿ. ಲಕ್ಷ್ಮೀ ದೇವಿಗೆ ಹೂ ಇಟ್ಟು ಅರಿಶಿನ ಕುಂಕುಮ ಹಚ್ಚಿ ಕರ್ಪೂರದಾರತಿ ಬೆಳಗಿ ನಮಿಸುವುದು ವಾಡಿಕೆ.
ಬ್ಯಾಂಕುಗಳಲ್ಲ ತೂ ಸಾಕ್ಷಾತ್ ಲಕ್ಷ್ಮೀ ದಿನ ಬೆಳಗೂ ಬೆಳಗುತ್ತಿರುತ್ತಾಳೆ. ಬಂದವರು ನಾವು ಎಣಿಸುವ, ನೋಡುವ, ಮುಟ್ಟುವ ನಮ್ಮನ್ನು ಕಾಣದಂತೆ ಮುಚ್ಚುವ ಕಂತೆ ಕಂತೆ ಹಣವನ್ನು ನೋಡುವ ಗ್ರಾಹಕರು ‘ನೀವು ಬಿಡಿ ಮೇಡಂ, ಸಾಕ್ಷಾತ್ ಲಕ್ಷ್ಮೀ ಪುತ್ರಿ, ನೀವು ಬಿಡಿ ಸರ್, ಸಾಕ್ಷಾತ್ ಲಕ್ಷ್ಮೀ ಪುತ್ರ’ ಎಂದು ಹೇಳುವುದುಂಟು. ಆಗೆಲ್ಲಾ ನಾನಂತೂ ‘ನಾವು ಹಣವನ್ನು ಮುಟ್ಟುತ್ತೇವೆ, ನೋಡುತ್ತೇವೆ, ಎಣಿಸುತ್ತೇವೆ. ಆದರೆ ಅದು ನಮ್ಮದಲ್ಲವಲ್ಲಾ. ಒಂದು ನೋಟು ಕಡಿಮೆಯಾದರೂ ಕೈಯ್ಯಿಂದ ಹಾಕಬೇಕು. ನೋಡಿದ್ದೆಲ್ಲವೂ ನಮ್ಮದಾಗುವುದಿಲ್ಲವಲ್ಲಾ’ ಎನ್ನುತ್ತಿರುತ್ತೇನೆ. ಆದರು ಕೆಲವು ಗ್ರಾಹಕರಿಗೆ ಅಷ್ಟು ಹಣದ ನಡುವೆ ಕುಳಿತುಕೊಳ್ಳುವ ನಮ್ಮನ್ನು ಕಂಡರೆ ಅದೇನೋ ಅಸೂಯೆಯ ಭಾವ ಇರುವುದು ನಮ್ಮ ಗಮನಕ್ಕೆ ಬರುತ್ತಾ ಇರುತ್ತದೆ.
ಇರಲಿ ಅದೊಂದು ವಿಶಿಷ್ಟ ಭಾವ.
ಹೀಗೊಂದು ಶುಕ್ರವಾರ ನಮ್ಮ ಶಾಖೆಗೆ ಬಂದ ಗ್ರಾಹಕರೊಬ್ಬರು ಭಾಗ್ಯದ ಲಕ್ಷ್ಮೀ ಬಾರಮ್ಮಾ ಎಂಬ ಗೀತೆಯನ್ನು ತಮ್ಮ ಮೊಬೈಲಿನಲ್ಲಿ ಹಾಕಿಕೊಂಡು ಕುಳಿತಿದ್ದರು. ಬಹುಶಃ ಅವರ ಟೋಕನ್ ಬರಲು ಇನ್ನೂ ಸಮಯ ಇತ್ತು ಎಂದು ಕಾಣುತ್ತದೆ. ಹಾಗಾಗಿ ಹೊತ್ತು ಹೋಗಲು ಹಾಕಿಕೊಂಡಿದ್ದರೆAದುಕೊAಡೆ.
ಎಷ್ಟೋ ವರ್ಷಗಳಿಂದ ಈ ಹಾಡನ್ನು ಕೇಳಿದ್ದರೂ, ಅವತ್ತು ಕೇಳಿದಾಗ ನನ್ನಲ್ಲೊಂದು ಹೊಸ ಆಲೋಚನಾ ಸುರುಳಿ ಬಿಚ್ಚಿಕೊಳ್ಳತೊಡಗಿತು. ಆರ್ಕೆಮಿಡೀಸ್ ನೀರಿನ ತೊಟ್ಟಿಯೊಳಗೆ ಇಳಿದಾಗ ಬಹಳ ಕಾಲದಿಂದ ಯೋಚಿಸುತ್ತಿದ್ದ ತತ್ತ÷್ವವೊಂದು ಹೊಳೆದು ‘ಯುರೇಕಾ’ ಎಂದು ಕೂಗಿಕೊಂಡAತೆ ನನಗೂ ಕೂಗಿಕೊಳ್ಳಬೇಕೆನಿಸಿತು. ನಾನೇ ನನ್ನೊಳಗೆ ಆ ಹಾಡನ್ನು ಹಾಡಿಕೊಳ್ಳುತ್ತಾ ವಿಶ್ಲೇಷಣೆ ಮಾಡಿಕೊಳ್ಳತೊಡಗಿದೆ. ಒಂದೊAದು ಸಾಲನ್ನು ಹಾಡಿಕೊಳ್ಳುವಾಗಲೂ ನನ್ನೊಳಗೇ ಹೊಸತು ಹೊಸತು ಆಯಾಮ ಗೋಚರಿಸುತ್ತಾ ಹೋಯಿತು.
‘ಭಾಗ್ಯದ ಲಕ್ಷ್ಮೀ ಬಾರಮ್ಮ ನಮ್ಮಮ್ಮ ನೀ ಸೌಭಾಗ್ಯದ ಲಕ್ಷ್ಮೀ ಬಾರಮ್ಮ’ ಹಾಡನ್ನು ಕೇಳದ ಕನ್ನಡಿಗರು ಅತ್ಯಂತ ವಿರಳ. ದಾಸ ಶ್ರೇಷ್ಠ್ಠ ಪುರಂದರ ದಾಸರ ಈ ಗೀತೆ ಭಕ್ತಿ ಪ್ರಧಾನ ಆಗಿರುವುದರ ಜೊತೆಗೆ ಸಾಮಾಜಿಕವಾಗಿ ಮನುಷ್ಯ್ಯರು ಸಿರಿವಂತಿಕೆಯನ್ನು ಹೇಗೆ ಸ್ವೀಕರಿಸಬೇಕು, ಹೇಗೆ ನಿರ್ವಹಿಸಬೇಕು ಎನ್ನುವ ಸೂಕ್ಷ್ಮತೆಯನ್ನು ಕೂಡ ತೋರುತ್ತದೆ.
ನೇರ ನೋಟಕ್ಕೆ ತಾಯಿ ಮಹಾಲಕ್ಷ್ಮೀಯನ್ನು ನಮ್ಮ ಮನೆಗೆ ಆಹ್ವಾನಿಸಿ, ನಮ್ಮಲ್ಲಿಯೇ ನೆಲೆ ನಿಲ್ಲು, ನಮ್ಮನ್ನು ಸಿರಿವಂತರಾಗಿಸು ಎಂದು ಬೇಡುವ ಹಾಗೆ ಕಂಡರೂ ಆ ಸಿರಿ ಹೇಗೆ ಬರಬೇಕು ಎನ್ನುವ ಸ್ಪಷ್ಟ, ನೇರ, ನ್ಯಾಯ, ಸತ್ಯ, ಧರ್ಮದ ದಾರಿಯನ್ನೂ ತೋರುತ್ತದೆ.
‘ಹೆಜ್ಜೆಯ ಮೇಲೊಂದು ಹೆಜ್ಜೆಯನಿಕ್ಕುತ ಗೆಜ್ಜೆ ಕಾಲ್ಗಳ ದನಿಯ ತೋರುತ’ ಎನ್ನುವಾಗ ಯಾರಿಗೂ ಕಾಣದ ಹಾಗೆ ಕದ್ದು ಮುಚ್ಚಿ ಸದ್ದಿಲ್ಲದೆ ಮನೆ ಸೇರುವ ಕಳ್ಳ ನೋಟು, ಕಪ್ಪು ಹಣದ ಕುರಿತು ಮಾತನಾಡುವ ಹಾಗೆ ತೋರುತ್ತದೆ. ಹಾಗೆ ಕಳ್ಳಗಿಂಡಿಯಿAದ ಸದ್ದಿಲ್ಲದೆ ಬರಬೇಡ; ಗೆಜ್ಜೆ ಕಾಲ್ಗಳ ದನಿಯ ತೋರುತ ಎಲ್ಲರಿಗೂ ಮಹಾಲಕ್ಷ್ಮಿ ಬರುತ್ತಿದ್ದಾಳೆ ಎನ್ನುವ ಸದ್ದು ತಿಳಿಯಬೇಕು ಎಂದರೆ ಅದು ಶ್ರಮದ ಮಾರ್ಗವೇ ಹೌದು, ನ್ಯಾಯದ ಮಾರ್ಗವೇ ಹೌದು. ಹೆಜ್ಜೆಯ ಮೇಲೊಂದು ಹೆಜ್ಜೆ ಎಂದರೆ ರಾತ್ರಿ ಕಳೆದು ಬೆಳಗಾವುದರ ಒಳಗೆ ಧನಿಕ ಆಗಬೇಕು ಎಂದು ಬಯಸುವ ಆಸೆ ತಪು.್ಪ ನಿಧಾನಕ್ಕೆ ನಿಧಾನಕ್ಕೆ ಪ್ರಗತಿ ಹೊಂದಬೇಕು. ತಿಂಗಳು ತಿಂಗಳು – ವರ್ಷ ವರ್ಷವೂ – ಕಾಲಕ್ರಮೇಣ ಹಣವನ್ನು ಸಂಪಾದಿಸಬೇಕು. ಅದನ್ನು ಬಿಟ್ಟು ರಾತ್ರಿ ಕಳೆದು ಬೆಳಗಾಗುವುದರೊಳಗಡೆ ಲಕ್ಷಗಟ್ಟಲೆ, ಕೋಟಿಗಟ್ಟಲೆ ದಢ ದಢ ಎಂದು ಸಂಪಾದಿಸಬಾರದು ಎನ್ನುವ ಸ್ವಚ್ಛ ನಿರ್ದೇಶನವೂ ಇದೆ.
ಇನ್ನು ‘ಮಜ್ಜಿಗೆ ಒಳಗಿನ ಬೆಣ್ಣೆಯಂತೆ’ ಎನ್ನುವ ಸಾಲುಗಳನ್ನು ಮಾಡಿಕೊಳ್ಳುವಾಗ ಅದೆಷ್ಟು ಸೂಕ್ಷ್ಮಮತಿಯ ಗುಣಾತಿಶಯದ ಮಾತುಗಳಿವು ಎಂದು ಅಚ್ಚರಿಯೂ ಆಗುತ್ತದೆ. ಈ ಕ್ಷಣ ಹಾಲು ತಂದು, ಅದನ್ನು ಬೆಣ್ಣೆ ಮಾಡಲಾಗುವುದಿಲ್ಲ. ಹಾಲು ಕಾಯಿಸಿ ತಣ್ಣಗಾದ ಮೇಲೆ ಮೊಸರನ್ನು ಹೆಪ್ಪು ಹಾಕಿ ಅದು ಮೊಸರಾದ ಮೇಲೆ ಸ್ವಲ್ಪ ಸ್ವಲ್ಪವೇ ನೀರನ್ನು ಹಾಕುತ್ತಾ ಕಡೆಯುತ್ತಾ ಕಡೆಯುತ್ತಾ ಇದ್ದಂತೆ ನಿಧಾನಕ್ಕೆ ಬೆಣ್ಣೆ ತೇಲಿಕೊಂಡು ಬರುತ್ತದೆ.
ಅದಕ್ಕೆ ತಾಳ್ಮೆ, ಸಮಯ ಎಲ್ಲವೂ ಬೇಕು. ಅಂತೆಯೇ ಲಕ್ಷ್ಮೀಯನ್ನು ಸಂಪಾದಿಸಲು ಅಷ್ಟು ತಾಳ್ಮೆಯೂ ಬೇಕು; ಅಷ್ಟು ಸಮಯವನ್ನೂ ಕೊಡಬೇಕು ಮತ್ತು ಅಷ್ಟು ಪರಿಶ್ರಮವೂ ಬೇಕು. ಕೋಟಿಗಟ್ಟಲೆ ಬಾಚಿಕೊಂಡು ಬಿಡಬೇಕು ಎನ್ನುವ ದುರಾಸೆ ಸಲ್ಲದು ಎನ್ನುವುದನ್ನೂ ಈ ಸಾಲು ಬಿಂಬಿಸುತ್ತದೆ.
’ಶoಕೆ ಇಲ್ಲದ ಭಾಗ್ಯವ ಕೊಟ್ಟು ಕಂಕಣ ಕೈಯ ತಿರುಗುತ ಬಾ” ಎನ್ನುವ ಸಾಲನ್ನು ಕೇಳುವಾಗ (ಕೆಲವು ಕಡೆ ಸಂಖ್ಯೆ ಇಲ್ಲದ ಭಾಗ್ಯವ ಕೊಟ್ಟು ಎಂದು ಹೇಳುವುದುಂಟು. ಅಂದರೆ ಅಸಂಖ್ಯಾತವಾಗಿ, ಅಪರಿಮಿತವಾಗಿ ಎಂದು) ಆದರೆ ನನ್ನ ವೈಯಕ್ತಿಕ ಅನಿಸಿಕೆ ಶಂಕೆ ಇಲ್ಲದ ಭಾಗ್ಯವನ್ನು ಆಕೆ ಕೊಡಬೇಕು. ಮನೆಗೆ ಹೇಗೆ ಹಣ ಬಂದಿದೆ ಎನ್ನುವುದರ ಕುರಿತು ಅನುಮಾನ ಬಾರದ ಹಾಗೆ ಸಿರಿ ಬರಬೇಕು. ಈಗೊಂದು ದಶಕದಿಂದಲAತೂ ಸಿರಿತನದ ಪೆಡಂಭೂತ ಹಲವರ ಮೈ ಹೊಕ್ಕು, ಯಾವ ಹೀನ ಕೃತ್ಯಕ್ಕೂ ಹೇಸದ ಹಾಗೆ ಮಾಡಿದೆ. ಅಕ್ರಮ ಹಣ ಎನ್ನುವುದು ಹೊಳೆಯಂತೆ ಹರಿದೂ, ಐ.ಟಿ ರೈಡ್ ಆಗಿ, ಇ.ಡಿ ರೈಡ್ ಆಗಿ ಜೈಲಿಗೆ ಹೋಗಿ ಬಂದರೂ ಹೊರಬಂದವರನ್ನು ಹೂವಿನ ಹಾರ ಹಾಕಿ ಮೆರವಣಿಗೆ ಮಾಡಿ ಮೆರೆಸುವುದೂ, ತಾವು ಏನೂ ಅಪರಾಧವೋ, ಅಕೃತ್ಯವನ್ನೋ ಮಾಡೇ ಇಲ್ಲ ಎನ್ನುವಂತೆ ರಾಜಾರೋಷವಾಗಿ ಎಲ್ಲರೆದುದು ತಲೆಯೆತ್ತಿ ತಿರುಗುತ್ತಾ, ತಾವೇ ಶ್ರೇಷ್ಟ ಎಂಬAತೆ ಮೆರೆಯುವುದನ್ನು ಕಂಡಾಗ, ಸಮಾಜ ನಡೆಯುತ್ತಿರುವ ದಾರಿ ತೀರಾ ಯೂ ಟರ್ನ್ ತೆಗೆದುಕೊಂಡಿದೆ ಎನಿಸುತ್ತದೆ. ಹಿಂದೆಲ್ಲಾ ಪಂಚಾಯಿತಿ ಕಟ್ಟೆಯಲ್ಲಿ ಇಂಥವರು ತಪ್ಪು ಮಾಡಿದ್ದಾರೆ ಎಂದು ತೀರ್ಮಾನ ಮಾಡಿದರೆ ಶಿಕ್ಷೆಯ ಜೊತೆಗೆ ಇಡೀ ಗ್ರಾಮದವರ ಕಣ್ಣಿನಲ್ಲಿ ಅವರು ಭಿನ್ನವಾಗಿ ಕಾಣುತ್ತಿದ್ದರು. ಕೆಲವೊಮ್ಮೆ ಊರಿನವರು ಅಂಥವರ ಜೊತೆ ಮಾತನಾಡುವುದೂ ತಪ್ಪು ಎನ್ನುವಂತೆ ವರ್ತಿಸುತ್ತಿದ್ದರೆ. ಶಿಕ್ಷೆ ಎಂದರೆ ಅದೇನೇ. ತಮ್ಮವರಿಂದ ದೂರೀಕರಿಸಲ್ಪಡುವುದು. ಆದರೆ ಈಗ ಹಣವೊಂದಿದ್ದರೆ ಸಾಕು ಅವರ ಹಿಂದೆ ಹೇಸಿಗೆಗೆ ನೊಣ ಮುತ್ತುವ ಹಾಗೆ ಅಂಥವರನ್ನು ಮುತ್ತಿಕೊಂಡು ಅವರನ್ನೇ ಓಲೈಸಿಕೊಂಡು ಅವರೇನೂ ತಪ್ಪೇ ಮಾಡಿಲ್ಲ ಎನ್ನುವ ಭಾವ ಅವರಲ್ಲಿಯೂ ಮೂಡುವಂತೆ ಮಾಡುತ್ತಾರೆ.
‘‘ಅತ್ತಿತ್ತಗಲದೆ ಭಕ್ತರ ಮನೆಯಲಿ ನಿತ್ಯ ಮಹೋತ್ಸವ ನಿತ್ಯ ಸುಮಂಗಲ, ಸತ್ಯವ ತೋರುವ ಸಾಧು ಸಜ್ಜನರ ಚಿತ್ತದಿ ಹೊಳೆಯುವ ಪುತ್ಥಳಿ ಗೊಂಬೆ’… ಇಲ್ಲಿ ಧರ್ಮಾ-ಧರ್ಮಗಳ ವಿಶ್ಲೇಷಣೆ ಇದೆ. ಅಧರ್ಮದ ನೆಲೆಯಿಂದ ಲಕ್ಷ್ಮಿ ಬರಬಾರದು ಎನ್ನುವ ಸ್ಪಷ್ಟ ನಿಲುವಿದೆ. ರಜೋ ಗುಣ, ತಮೋ ಗುಣ, ಸತ್ವ ಗುಣ – ಈ ಮೂರರಲ್ಲಿ ಸತ್ವಗುಣಕ್ಕೆ ಮೊದಲ ಪ್ರಾಧಾನ್ಯತೆ. ಹಾಗಾಗಿ ಸತ್ಯವ ತೋರಿಸುವಂತಹ ಸಾಧು ಸಜ್ಜನರ ಒಳ್ಳೆಯ ನಡವಳಿಕೆ ಏನಿದೆ ಅದರಿಂದ ಉಳಿದವರ ಮನದೊಳಗೆ ಇಂತಹ ಸದ್ಭಾವಗಳು ಸಚ್ಚಿಂತನೆಗಳು ಉಂಟಾಗುತ್ತವೆಯೋ, ಆ ಚಿಂತನೆಗಳಿAದ ಉದ್ಭವಿಸುವ ಪುತ್ಥಳಿ ಗೊಂಬೆಯೇ ಲಕ್ಷಿ ಎನ್ನುವಲ್ಲಿ ವಸ್ತುರೂಪದ ಲಕ್ಷ್ಮೀಗಿಂತಲೂ ಸದ್ಭಾವಗಳು ಸಚ್ಚಿಂತನೆಗಳ ಲಕ್ಷಿ ಮನದೊಳಗೆ ರೂಪುಗೊಳ್ಳಲಿ ಎಂಬ ಸದಾಶಯವಿದೆ. ಸಜ್ಜನರಲ್ಲದವರ ಕೈಗೆ ಅಧಿಕಾರವಾಗಲಿ, ಅಂತಸ್ತಾಗಲಿ, ಸಿರಿವಂತಿಕೆಯಾಗಲಿ ಸಿಕ್ಕರೆ ಅದು ಎಷ್ಟೆಲ್ಲಾ ದುರ್ಘಟನೆಗಳಿಗೆ ನಾಂದಿ ಆಗಬಹುದು ಎನ್ನುವ ಗೂಡಾರ್ಥವನ್ನು ಒಳಗೊಂಡಿದೆ.
ಭಕ್ತರೆAದರೆ ಕೇವಲ ಹೂ ಹಣ್ಣುಗಳಿಂದ ಪೂಜೆ ಮಾಡುವವರು ಮಾತ್ರವಲ್ಲ. ಸದ್ಗುಣಗಳನ್ನು ರೂಢಿಸಿಕೊಂಡು ಪರೋಪಕಾರವನ್ನು ಮಾಡುವವರೂ ಮಾನವತಾಲಕ್ಷಿಯ ಭಕ್ತರೂ ಹೌದು. ‘ಲಕ್ಷ್ಮೀ’ ಎಂಬ ಪದದ ಮೂಲ ಸಂಸ್ಕöÈತದ ಲಕ್ಷ್ಮೀ ಎಂಬ ಪದದಿಂದ ಬಂದಿರುವುದು. ಲಕ್ಷ÷್ಯ ಎಂದರೆ ಗುರಿ. ಒಳ್ಳೆಯ ಗುರಿ ಮತ್ತು ಆ ಗುರಿ ಸಾಧಿಸುವಲ್ಲಿನ ದಾರಿ ಕೂಡಾ ಒಳ್ಳೆಯದೇ ಇದ್ದರೆ ಅದೂ ಲಕ್ಷಿ ಯ ಪೂಜೆಯೇ.
ಲಕ್ಷ್ಮೀ ಎಂದರೆ ಸಂಪತ್ತು, ಅದೃಷ್ಟ ಮತ್ತು ಸಮೃದ್ಧಿಯ ದೇವತೆ ಎಂದು. ಲಕ್ಷಿ ಎಂದರೆ ಕೇವಲ ಧನಕನಕ ಅಷ್ಟೆöÊಶ್ವರ್ಯ ಮಾತ್ರವಲ್ಲದೆ ಅನ್ನಲಕ್ಷ್ಮೀ , ಧೈರ್ಯಲಕ್ಷ್ಮೀ , ಧಾನ್ಯಲಕ್ಷ್ಮೀ , ಪ್ರಕೃತಿಲಕ್ಷ್ಮೀ , ಯಶೋಲಕ್ಷ್ಮೀ , ಸಹನಾಲಕ್ಷ್ಮೀ , ಸೌಂದರ್ಯಲಕ್ಷ್ಮೀ , ಮಮತಾಲಕ್ಷ್ಮೀ , ಅಕ್ಷರಲಕ್ಷ್ಮೀ , ನಾಟ್ಯಲಕ್ಷ್ಮೀ , ಸಂಗೀತಲಕ್ಷ್ಮೀ , ಶಕ್ತಿಲಕ್ಷ್ಮೀ , ಮುಕ್ತಿಲಕ್ಷ್ಮೀ ಯರೂ. ಇಂತಹ ಲಕ್ಷ್ಮೀಯರು ಬರುವುದೇ, ನಮ್ಮೊಳಗಿರುವುದೇ ಭಾಗ್ಯ.
ಸರಿಯಾಗಿ ಅರ್ಥಮಾಡಿಕೊಂಡರೆ ದಾಸರ ಈ ‘ಭಾಗ್ಯದ ಲಕ್ಷ್ಮೀ ಬಾರಮ್ಮಾ’ ಎನ್ನುವ ಗೀತೆ ನಮ್ಮೊಳಗೆ ಇರಬೇಕಾದ ಸಕಾರಾತ್ಮಕ ಮನೋಭಾವ, ಪ್ರಯತ್ನಶೀಲತೆ, ಕ್ರಿಯಾಶೀಲತೆ, ಧನಾತ್ಮಕ ಚಿಂತನೆ, ಮೂಲಭೂತ ಮಾನವತೆ, ಅಂತಃಕರಣ, ಸತ್ಯ ಹಾಗೂ ಧರ್ಮವನ್ನು ಉದ್ದೀಪನಗೊಳಿಸುವ ದಾರಿದೀಪ.

shubhashreeprasadmandya@gmail.com
9844498432



