ನವದೆಹಲಿ: ಪಶ್ಚಿಮ ಬಂಗಾಳದ ಕಲ್ಲಿದ್ದಲು ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ದೆಹಲಿ, ಹೈದರಾಬಾದ್ ಮತ್ತು ಬೆಂಗಳೂರಿನ ಐಪ್ಯಾಕ್ ಕಚೇರಿಗಳ ಮೇಲೆ ದಾಳಿ ನಡೆಸಿದೆ.
ಇಂದು (ಏಪ್ರಿಲ್ 2) ಹಲವು ನಗರಗಳಲ್ಲಿ ಇಡಿ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿ ದಾಖಲೆಗಳ ಪರಿಶೀಲನೆ ಮಾಡಿದ್ದಾರೆ. ಐಪ್ಯಾಕ್ ಸಹ-ಸಂಸ್ಥಾಪಕ ಹಾಗೂ ನಿರ್ದೇಶಕ ರಿಷಿ ರಾಜ್ ಸಿಂಗ್ ಅವರಿಗೆ ಸಂಬಂಧಿಸಿದ ಕೆಲವು ಸ್ಥಳಗಳಲ್ಲಿಯೂ ತಪಾಸಣೆ ನಡೆಸಲಾಗಿದೆ. ಬೆಂಗಳೂರಿನ ನಿವಾಸವನ್ನೂ ಪರಿಶೀಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದೆ ಜನವರಿಯಲ್ಲಿ ಇದೇ ಪ್ರಕರಣ ಸಂಬಂಧ ಐಪ್ಯಾಕ್ ಕಚೇರಿ ಹಾಗೂ ಸಂಸ್ಥಾಪಕ ಪ್ರತೀಕ್ ಗಾಂಧಿ ಅವರ ಕೋಲ್ಕತ್ತಾ ನಿವಾಸ ಸೇರಿದಂತೆ ಹಲವು ಕಡೆ ಇಡಿ ದಾಳಿ ನಡೆಸಿ, ವಿಚಾರಣೆಗೆ ಸಮನ್ಸ್ ನೀಡಿತ್ತು.ಇದನ್ನು ಓದಿ –SSLC ತೃತೀಯ ಭಾಷೆ ಗ್ರೇಡಿಂಗ್ ವಿವಾದ: ‘ಹೈ’ ಮೆಟ್ಟಿಲೇರಿದ ನಿರ್ಧಾರ
ಇದರ ನಡುವೆ, ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನ ಚುನಾವಣಾ ಕಾರ್ಯಗಳಲ್ಲಿ ತೊಡಗಿರುವ ಹಿನ್ನೆಲೆಯಲ್ಲಿ ಇಡಿ ನೀಡಿದ ನೋಟಿಸ್ ರದ್ದುಗೊಳಿಸಬೇಕೆಂದು ಇಬ್ಬರು ದೆಹಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.








