ಬೆಂಗಳೂರು: ನೈಸ್ ರಸ್ತೆ ಹಾಗೂ ಎಲೆಕ್ಟ್ರಾನಿಕ್ಸ್ ಸಿಟಿ ಫ್ಲೈಓವರ್‌ನಲ್ಲಿ ಇಂದಿನಿಂದ ಹೊಸ ಟೋಲ್ ದರ ಜಾರಿಯಾಗಿದೆ. ನಿರ್ವಹಣಾ ವೆಚ್ಚ ಸೇರಿದಂತೆ ವಿವಿಧ ಕಾರಣಗಳಿಂದ ಟೋಲ್ ಶುಲ್ಕವನ್ನು ಪರಿಷ್ಕರಿಸಲಾಗಿದ್ದು, ಕಾರು, ಬೈಕ್, ಬಸ್ ಹಾಗೂ ಟ್ರಕ್‌ಗಳಿಗೆ ಹೊಸ ದರ ಅನ್ವಯವಾಗಲಿದೆ.
ನೈಸ್ ರಸ್ತೆಯಲ್ಲಿ ಹೊಸೂರು ರಸ್ತೆಯಿಂದ ಬನ್ನೇರುಘಟ್ಟ ರಸ್ತೆಯವರೆಗೆ ಸಂಚರಿಸುವ ಕಾರುಗಳ ಟೋಲ್ ಶುಲ್ಕ 65 ರೂಪಾಯಿಯಿಂದ 72 ರೂಪಾಯಿಗೆ ಏರಿಕೆಯಾಗಿದೆ. ಮೈಸೂರು ರಸ್ತೆ-ಮಾಗಡಿ ರಸ್ತೆ ನಡುವಿನ ಟೋಲ್ ಶುಲ್ಕ 70 ರೂಪಾಯಿಯಿಂದ 77 ರೂಪಾಯಿಗೆ ಹೆಚ್ಚಿಸಲಾಗಿದೆ. ಮಾರ್ಗವನ್ನು ಅವಲಂಬಿಸಿ ಕಾರುಗಳ ಟೋಲ್ ಶುಲ್ಕದಲ್ಲಿ 3ರಿಂದ 8 ರೂಪಾಯಿವರೆಗೆ ಹೆಚ್ಚಳ ಮಾಡಲಾಗಿದೆ.
ದ್ವಿಚಕ್ರ ವಾಹನಗಳಿಗೂ ಟೋಲ್ ದರ ಏರಿಕೆಯಾಗಿದ್ದು, ಹೊಸೂರು ರಸ್ತೆ-ಬನ್ನೇರುಘಟ್ಟ ರಸ್ತೆ ಮಾರ್ಗದಲ್ಲಿ 30 ರೂಪಾಯಿಯಿಂದ 33 ರೂಪಾಯಿಗೆ ಹಾಗೂ ಬನ್ನೇರುಘಟ್ಟ ರಸ್ತೆ-ಕನಕಪುರ ರಸ್ತೆ ಮಾರ್ಗದಲ್ಲಿ 15 ರೂಪಾಯಿಯಿಂದ 17 ರೂಪಾಯಿಗೆ ಹೆಚ್ಚಿಸಲಾಗಿದೆ.
ಬಸ್ ಹಾಗೂ ಟ್ರಕ್‌ಗಳ ಟೋಲ್ ಶುಲ್ಕದಲ್ಲಿಯೂ ಹೆಚ್ಚಳವಾಗಿದೆ. ಹೊಸೂರು ರಸ್ತೆ-ಬನ್ನೇರುಘಟ್ಟ ರಸ್ತೆ ಮಾರ್ಗದಲ್ಲಿ ಬಸ್‌ಗಳ ಟೋಲ್ 195 ರೂಪಾಯಿಯಿಂದ 215 ರೂಪಾಯಿಗೆ, ಟ್ರಕ್‌ಗಳ ಟೋಲ್ 128 ರೂಪಾಯಿಯಿಂದ 141 ರೂಪಾಯಿಗೆ ಏರಿಕೆಯಾಗಿದೆ. ಟೋಲ್ ವೆಚ್ಚ ಹೆಚ್ಚಿರುವ ಹಿನ್ನೆಲೆಯಲ್ಲಿ ಬಿಎಂಟಿಸಿ ಪ್ರಯಾಣ ದರ ಪರಿಷ್ಕರಿಸುವ ಸಾಧ್ಯತೆಯೂ ಇದೆ.
ನೈಸ್ ರಸ್ತೆಯ ಹೊಸ ಟೋಲ್ ದರಗಳು (ರೂ.)
| ಮಾರ್ಗ | ಕಾರು | ಬಸ್ | ಬೈಕ್ | ಟ್ರಕ್ |
|---|---|---|---|---|
| ಹೊಸೂರು ರಸ್ತೆ – ಬನ್ನೇರುಘಟ್ಟ ರಸ್ತೆ | 72 | 215 | 33 | 141 |
| ಬನ್ನೇರುಘಟ್ಟ ರಸ್ತೆ – ಕನಕಪುರ ರಸ್ತೆ | 53 | 171 | 17 | 108 |
| ಕನಕಪುರ ರಸ್ತೆ – ಕ್ಲೋವರ್ ಲೀಫ್ ಜಂಕ್ಷನ್ | 39 | 105 | 11 | 66 |
| ಕ್ಲೋವರ್ ಲೀಫ್ ಜಂಕ್ಷನ್ – ಮೈಸೂರು ರಸ್ತೆ | 36 | 94 | 11 | 55 |
| ಮೈಸೂರು ರಸ್ತೆ – ಮಾಗಡಿ ರಸ್ತೆ | 77 | 226 | 33 | 154 |
| ಮಾಗಡಿ ರಸ್ತೆ – ತುಮಕೂರು ರಸ್ತೆ | 61 | 176 | 17 | 116 |
| ಲಿಂಕ್ ರಸ್ತೆ | 83 | 220 | 25 | 146 |
ಎಲೆಕ್ಟ್ರಾನಿಕ್ಸ್ ಸಿಟಿ ಫ್ಲೈಓವರ್ ಟೋಲ್‌ಗೂ ಪರಿಷ್ಕರಣೆ
ಎಲೆಕ್ಟ್ರಾನಿಕ್ಸ್ ಸಿಟಿ ಫ್ಲೈಓವರ್‌ನಲ್ಲಿ ಏಕಮುಖ ಪ್ರಯಾಣದ ಟೋಲ್ ದರದಲ್ಲಿ ಯಾವುದೇ ಬದಲಾವಣೆ ಇಲ್ಲ. ಆದರೆ, ಬಹು ಪ್ರಯಾಣ (ಮಲ್ಟಿಪಲ್ ಟ್ರಿಪ್) ಮಾಡುವ ವಾಹನಗಳಿಗೆ 5 ರೂಪಾಯಿ ಹೆಚ್ಚಳ ಮಾಡಲಾಗಿದೆ.
ಫ್ಲೈಓವರ್ ಟೋಲ್ ದರ (ರೂ.)
| ವಾಹನ | ಏಕಮುಖ | ಬಹು ಪ್ರಯಾಣ |
|---|---|---|
| ದ್ವಿಚಕ್ರ ವಾಹನ | 25 | 40 |
| ಕಾರು, ಜೀಪ್, ವ್ಯಾನ್ | 65 | 100 |
| ಲಘು ವಾಣಿಜ್ಯ ವಾಹನ | 90 | 130 |



