ತೆಹ್ರಾನ್: ಅಮೆರಿಕ ಮತ್ತು ಇಸ್ರೇಲ್ ಜಂಟಿ ಸೈನಿಕ ಕಾರ್ಯಾಚರಣೆ ವೇಳೆ ಇರಾನ್‌ನ ನತಾಂಜ್ ಪರಮಾಣು ಸೌಲಭ್ಯ ಮೇಲೆ ದಾಳಿ ನಡೆದಿದೆ ಎಂದು ಇರಾನ್ ಆರೋಪಿಸಿದೆ. ಈ ದಾಳಿಯಿಂದ ವಿಕಿರಣ ಸೋರಿಕೆಯ ಆತಂಕ ವ್ಯಕ್ತವಾಗಿದೆ.
ಅಂತರರಾಷ್ಟ್ರೀಯ ಪರಮಾಣು ಇಂಧನ ಸಂಸ್ಥೆ (IAEA)ಯಲ್ಲಿ ಇರಾನ್‌ನ ರಾಯಭಾರಿ ರೆಜಾ ನಜಾಫಿ ವಿಯೆನ್ನಾದಲ್ಲಿ ನಡೆದ 35 ರಾಷ್ಟ್ರಗಳ ಆಡಳಿತ ಮಂಡಳಿ ಸಭೆಯಲ್ಲಿ ಈ ಮಾಹಿತಿ ನೀಡಿದ್ದಾರೆ.
ವಿಯೆನ್ನಾದಲ್ಲಿ ಶಾಂತಿ ಮಾತುಕತೆಗಳು ನಡೆಯುತ್ತಿರುವ ಸಂದರ್ಭದಲ್ಲೇ, ಶಾಂತಿಯುತ ಉದ್ದೇಶಕ್ಕಾಗಿ ಪರಮಾಣು ಕಾರ್ಯಕ್ರಮ ಮುಂದುವರಿಸುತ್ತಿದ್ದಾಗ ದಾಳಿ ನಡೆದಿದೆ ಎಂದು ಅವರು ಆರೋಪಿಸಿದರು.ಇದನ್ನು ಓದಿ –RTO ದಂಧೆ; 10,210 ವಾಹನಗಳಿಗೆ ಅಕ್ರಮ FC, ಎಫ್‌ಐಆರ್ ದಾಖಲು
ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಪ್ರತಿಕ್ರಿಯೆ ನೀಡಿ, ಪರಮಾಣು ಮೂಲಸೌಕರ್ಯವನ್ನು ಪುನರ್ ನಿರ್ಮಿಸುವುದಾಗಿ ತಿಳಿಸಿದ್ದಾರೆ. ಕಟ್ಟಡಗಳು ಹಾಗೂ ಕಾರ್ಖಾನೆಗಳನ್ನು ನಾಶಮಾಡಿದರೂ ಅದು ನಮ್ಮನ್ನು ತಡೆಯುವುದಿಲ್ಲ; ಇನ್ನಷ್ಟು ಬಲದಿಂದ ಪುನಃ ನಿರ್ಮಿಸುತ್ತೇವೆ ಎಂದು ಹೇಳಿದ್ದಾರೆ.








