By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
    ArticlesShow More
    “ಅಕ್ಷರಗಳ ಮೇಲಿನ‌ ಅತ್ಯಾಚಾರ”
    April 25, 2026
    “ಸವಾಲು ಎದುರಿಸಿ,ಸಾರ್ಥಕತೆ ಪಡೆಯಿರಿ”
    April 25, 2026
    ಅಗಣಿತ ಆರೋಗ್ಯ ಭಾಗ್ಯಗಳ ರಾಜ ಈ ಕರಬೂಜ ಬೀಜ
    April 25, 2026
    “ಅಂಕಗಳಿಗಿಂತ ಅಚೀವ್ಮೆಂಟ್ ದೊಡ್ಡದು”
    April 24, 2026
    ಹಳ್ಳಿಗಳ ಪಾಲಿನ ನಡೆದಾಡುವ ಸಂಜೀವಿನಿ
    April 22, 2026
  • Sports
  • National
  • International
  • Crime
Reading: ಆರೋಗ್ಯ ಭಾಗ್ಯ
Share
Font ResizerAa
VarthamanVarthaman
  • Home
  • Karnataka
  • Articles
  • Sports
  • National
  • International
  • Crime
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
  • Sports
  • National
  • International
  • Crime
Follow US
Varthaman > Karnataka – Latest Breaking News > Articles > ಆರೋಗ್ಯ ಭಾಗ್ಯ
Articles

ಆರೋಗ್ಯ ಭಾಗ್ಯ

Team Varthaman
Last updated: February 28, 2026 10:11 PM
Team Varthaman
Published: March 1, 2026
Share
SHARE

ಆರೋಗ್ಯ ಮಿತ್ರ ಲಾವಂಚ

ನಮ್ಮ ಸುತ್ತಮುತ್ತಲು ಹಲವು ಪ್ರಾಕೃತಿಕ ಗಿಡಮೂಲಿಕೆಗಳಿವೆ, ಅವುಗಳನ್ನು ನಾವು ಹೆಚ್ಚಾಗಿ ಸೇವಿಸುವುದಿಲ್ಲ, ಅಷ್ಟೇ ಯಾಕೆ ಅವುಗಳನ್ನು ನಾವು ವಿಶೇಷವೆಂದೂ ಕೂಡ ಪರಿಗಣಿಸುವುದಿಲ್ಲ. ಹಿಂದೆ ಮಣ್ಣಿನ ಪಾತ್ರೆಯಲ್ಲಿ ಕುಡಿಯಲೆಂದು ಇರಿಸಿದ್ದ ನೀರಿಗೆ, ತಲೆಗೆ ಹಾಕಲೆಂದು ಇಟ್ಟ ಎಣ್ಣೆಗೆ, ಮನೆಯ ಕಿಟಕಿಗಳಿಗೆ ಜಾಲರಿಯಂತೆ ಈ ಬೇರನ್ನು ಬಳಸುತ್ತಿದ್ದರು. ಕುಡಿಯುವ ನೀರು ಶುದ್ಧವಾಗುವ ಜೊತೆ ತಂಪಾಗಿ ಸುವಾಸನೆ ಹೊಂದಿದರೆ ಎಣ್ಣೆಯು ತಲೆಗೆ ತಂಪು ನೀಡುತ್ತಿತ್ತು. ಕಿಟಕಿಯಿಂದ ಬರುವ ಗಾಳಿ ಹಿತವಾಗಿರುತ್ತಿತ್ತು. ಹಾಗಾದರೆ ಈ ಬೇರನ್ನು ನೀಡುವ ಸಸ್ಯ ಯಾವುದೆಂಬ ಅಚ್ಚರಿಯೆ? 

ಅದೊಂದು ಬರಿಯ ಹುಲ್ಲು ! ಈ ನಿಷ್ಪಾಪಿ ಸಸ್ಯ ಅಥವಾ ಹುಲ್ಲಿನ ಹೆಸರೇ ಲಾವಂಚ. ಕನ್ನಡದಲ್ಲಿ ಲಾವಂಚ, ಕಾಡುದಪ್ಪ, ಕರಿಸಜ್ಜೆ ಹುಲ್ಲು, ಮಡಿವಾಳ ಗಿಡ ಎಂದೆಲ್ಲ ಕರೆಸಿಕೊಳ್ಳುವ ಇದನ್ನು ತುಳುವಿನಲ್ಲಿ ಮಲ್ಲಿವಾಳ್, ಮುಡ್ಯಲ, ರಾಮಂಚ ವೆನ್ನುವರು. ನಮ್ಮ ಹಿರಿಯರು ಈ ಹುಲ್ಲಿನ ಬೇರನ್ನು ಚೆನ್ನಾಗಿ ತೊಳೆದು ಒಣಗಿಸಿ ತಮ್ಮ ಮನೆಗಳಲ್ಲಿ ಮರದ ಕಲೆಂಬಿ (ದೊಡ್ಡ ಪೆಟ್ಟಿಗೆ) ಯಲ್ಲಿದ್ದ ಅಕ್ಕಿ, ದಿಂಬು, ಹೊದಿಕೆ, ಬಟ್ಟೆಗಳ ನಡುವೆ ಮಾತ್ರವಲ್ಲದೆ ಅಜ್ಜಿ, ಅಮ್ಮ ಕಬ್ಬಿಣದ ಪೆಟ್ಟಿಗೆಯೊಳಗಿಟ್ಟ ತಮ್ಮ ಸೀರೆಗಳ ನಡುವೆ ಜೋಪಾನವಾಗಿ ಜೋಡಿಸಿಡುತ್ತಿದ್ದರು. ಸೊಳ್ಳೆ, ಕೀಟ, ತಿಗಣೆ, ಜಿರಳೆಗಳ ನಿವಾರಣೆಗೆ ಈ ಬೇರು ಉಪಯುಕ್ತವಾಗಿತ್ತು.

Join WhatsApp Group

ಇತ್ತೀಚಿಗೆ ಜನರು ಲಾವಂಚ ಅಥವಾ ಮಡಿವಾಳ ಹುಲ್ಲಿನ ಬೇರುಗಳನ್ನು ಬಳಸುವುದನ್ನೇ ಮರೆತು ಬಿಟ್ಟಿದ್ದಾರೆ. ಫ್ರಿಡ್ಜ್ ಇಲ್ಲದ ಕಾಲದಲ್ಲಿ ದೇಹವನ್ನು ತಂಪಾಗಿಸಲು ಲಾವಂಚ ಬಳಸಲಾಗುತ್ತಿತ್ತು. ಅದರಲ್ಲಿಯೂ ವಿಶೇಷವಾಗಿ ಬೇಸಿಗೆ ಕಾಲದಲ್ಲಿ ಲಾವಂಚ ಬಳಸುವುದರಿಂದ ಬೇಸಿಗೆಯಲ್ಲಿ ಬರುವ ರೋಗಗಳಿಂದ ರಕ್ಷಣೆ ಸಿಗುತ್ತಿತ್ತು. ಲಾವಂಚ ಅಥವಾ ವೇಟಿವೆರ್ ನೀರನ್ನು ಸೇವಿಸುವ ಮೂಲಕ ದೇಹವನ್ನು ತಂಪಾಗಿರಿಸಿಕೊಳ್ಳಬಹುದು. ಲಾವಂಚದ ಬೇರು ಹಲವು ಆಯುರ್ವೇದ ಔಷಧಿಗಳಲ್ಲಿ ಬಳಸಲ್ಪಡುತ್ತದೆ. ಮೈಕೈ ನೋವು, ವಾತ, ಹೊಟ್ಟೆ ನೋವು, ಜಂತುಹುಳದ ಸಮಸ್ಯೆ, ಮಲಬದ್ಧತೆ, ತಲೆನೋವು, ನರಮಂಡಲದ ಶಾಂತತೆ, ಒತ್ತಡ ನಿವಾರಣೆ, ರಕ್ತ ಪರಿಚಲನೆಯ ಸುಧಾರಣೆ, ಜೀರ್ಣಾಂಗ ವ್ಯವಸ್ಥೆ ಸರಿಪಡಿಸಲು, ಉರಿಮೂತ್ರ, ಕೈಕಾಲು ನೋವು, ನರಗಳ ನಿಶ್ಯಕ್ತಿ, ಮೊಡವೆ, ಸಂಧಿವಾತ, ನಂಜು ನಿವಾರಕ, ಜ್ವರ, ಬೆನ್ನು ನೋವು ಇತ್ಯಾದಿಗಳಿಗೆ ಔಷಧಿಯಾಗಿದೆ. ಬೇಸಿಗೆಯಲ್ಲಿ ಬಿಸಿಲಬೇಗೆಯಿಂದ ಉಂಟಾಗುವ ಕಾಯಿಲೆಗೆ ರಕ್ಷಣೆ ಲಾವಂಚದ ಬೇರು ಹಾಕಿರಿಸಿದ ನೀರು. ತೈಲವು ಚರ್ಮ ರಕ್ಷಣೆಗೆ ಪ್ರಮುಖವಾಗಿರುವುದರಿಂದ ಕ್ರೀಮ್, ಸಾಬೂನುಗಳಲ್ಲಿ ಬಳಸುತ್ತಾರೆ.

ಬೇಸಿಗೆ ಕಾಲದಲ್ಲಿ ಲಾವಂಚ ನೀರನ್ನು ಸೇವಿಸುವ ಲಾಭಗಳು

  1. ಬೇಸಿಗೆಯಲ್ಲಿ ದೇಹದ ದುರ್ವಾಸನೆ ಒಂದು ಸಾಮಾನ್ಯ ಸಮಸ್ಯೆಯಾಗಿರುತ್ತದೆ, ಇದನ್ನು ತಪ್ಪಿಸಲು ಲಾವಂಚ ನೀರನ್ನು ಸೇವಿಸಬಹುದು .
  2. ಹೊಟ್ಟೆಯನ್ನು ಸ್ವಚ್ಛಗೊಳಿಸಲು ಲಾವಂಚ ನೀರನ್ನು ಕುಡಿಯಬಹುದು. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಮಲಬದ್ಧತೆಯಿಂದ ಬಳಲುತ್ತಿರುವವರು ಈ ನೀರನ್ನು ಕುಡಿದರೆ ಉತ್ತಮ ಪರಿಹಾರ ದೊರಕುತ್ತದೆ. ಈ ನೀರು ಹೊಟ್ಟೆಯನ್ನು ತಂಪಾಗಿಸುತ್ತದೆ ಮತ್ತು ಹೊಟ್ಟೆಯಲ್ಲಿನ ಗ್ಯಾಸ್, ಮಲಬದ್ಧತೆ ಇತ್ಯಾದಿ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ.
  3. ಲಾವಂಚ ಬೇರಿನ ನೀರನ್ನು ಸೇವಿಸಿದರೆ ಬೇಸಿಗೆಯಲ್ಲಿನ ಕೂದಲು ಉದುರುವಿಕೆ ಸಮಸ್ಯೆ ದೂರಾಗುತ್ತದೆ. ಬೇಸಿಗೆಯಲ್ಲಿ ತಲೆಯಲ್ಲಿ ತುರಿಕೆಯ ಸಮಸ್ಯೆ ಇರುವವರು ಈ ನೀರನ್ನು ಕುಡಿಯಬಹುದು .

4.ಲಾವಂಚ ಬೇರುಗಳನ್ನು ನೀರಿನಲ್ಲಿ ಹಾಕಿ ಕುದಿಸಿ ಭಟ್ಟಿ ಇಳಿಸುವ ಮೂಲಕ ಅದರಿಂದ ತೈಲವನ್ನು ತಯಾರಿಸಲಾಗುತ್ತದೆ. ಈ ತೈಲವನ್ನು ಸಾಮಾನ್ಯವಾಗಿ ಸಾಬೂನು, ಸುಗಂಧವರ್ಧಕ, ಅಗರಬತ್ತಿ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಈ ತೈಲವನ್ನು ಮೈ-ಕೈ ನೋವು ನಿವಾರಿಸಲು ಕೂಡ ಬಳಸಲಾಗುತ್ತದೆ. ಇದಲ್ಲದೆ ವಾತ, ಹೊಟ್ಟೆಯಲ್ಲಿ ಜಂತುವಿನ ಸಮಸ್ಯೆ, ಹೊಟ್ಟೆಶೂಲೆ ಇತ್ಯಾದಿಗಳ ಸಮಸ್ಯೆ ನಿವಾರಣೆಗೆ ಲಾವಂಚ ಬೆರೆಸಿದ ನೀರನ್ನು ಕುದಿಸಿ, ನಂತರ ಸೋಸಿ ಕುಡಿಯಬಹುದು. ಹಲವಾರು ಆಯುರ್ವೇದ ಔಷಧಿಗಳಲ್ಲಿ ಇದನ್ನು ಬಳಸಲಾಗುತ್ತದೆ.

ಲಾವಂಚದ ಬೇರಿನ ಉಪಯೋಗಗಳ ಬಗ್ಗೆ ನಮಗೆಲ್ಲಾ ತಿಳಿದೇ ಇದೆ. ಇದನ್ನು ಬಿಸಿನೀರಿಗೆ ಹಾಕಿ ಕುದಿಸಿ ತಣಿಸಿ ಕುಡಿಯುವುದರಿಂದ ಹಲವು ಆರೋಗ್ಯದ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.ಅದರ ಹೊರತಾಗಿ ಅದನ್ನು ಕೊಠಡಿಯಲ್ಲಿ ಇಟ್ಟುಕೊಳ್ಳುವುದರಿಂದ ಮನೆಯನ್ನು ತಂಪಾಗಿಸಬಹುದು. ಲಾವಂಚದ ಹುಲ್ಲನ್ನು ಕೋಣೆಗೆ ಕಿಟಕಿಗಳಿಗೆ ಕಟ್ಟಿ. ದಿನಕ್ಕೆರಡು ಬಾರಿ ಅದಕ್ಕೆ ನೀರು ಸಿಂಪಡಿಸಿ.ಕುಡಿಯುವ ನೀರಿನ ಪಾತ್ರೆಗೆ ಅಥವಾ ಹೂಜಿಗೆ ಲಾವಂಚದ ಬೇರನ್ನು ಹಾಕಿಟ್ಟು ಅರ್ಧ ಗಂಟೆ ಬಳಿಕ ಕುಡಿಯಿರಿ. ಇದು ತಂಪಾಗಿ, ಶುದ್ಧವಾಗಿರುತ್ತದೆ.
ನೆನೆಸಿಟ್ಟ ಲಾವಂಚದ ಮೇಲೆ ತರಕಾರಿ ಹಣ್ಣುಗಳನ್ನು ಇಟ್ಟರೆ ಅದು ಬೇಗ ಕೆಡುವುದಿಲ್ಲ. ಕಾಲುಗಳು ವಿಪರೀತ ಸುಸ್ತಾಗಿದ್ದರೆ ಲಾವಂಚದ ಬೇರಿನ ಮೇಲೆ ಐದು ನಿಮಿಷ ಇಟ್ಟು ನೋಡಿ, ನೋವು ಮಾಯವಾಗಿ ಕಾಲುಗಳಿಗೆ ತಂಪಾದ ಅನುಭವವಾಗುತ್ತದೆ.

ಹಲವಾರು ಗೃಹಾಲಂಕಾರ ವಸ್ತುಗಳ ತಯಾರಿಕೆಗೂ ಕೂಡ ಲಾವಂಚ ಬೇರನ್ನು ಬಳಸಲಾಗುತ್ತದೆ. ಇದರಿಂದ ಚಾಪೆ, ಬುತ್ತಿ, ಬೀಸಣಿಕೆ ಇತ್ಯಾದಿ ವಸ್ತುಗಳನ್ನು ತಯಾರಿಸಬಹುದು. ಲಾವಂಚ ಬೇರುಗಳಿಗೆ ನೀರು ಮತ್ತು ಮಣ್ಣನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವಿದೆ. ಹೀಗಾಗಿ ಕೆಲ ಇಳಿಜಾರು ಪ್ರದೇಶಗಳಲ್ಲಿನ ರೈತರು ನೀರನ್ನು ಭೂಮಿಯಲ್ಲಿ ಇಂಗಿಸಲು ಲಾವಂಚ ಹುಲ್ಲನ್ನು ಬೆಳೆಯುತ್ತಾರೆ. ಇದೆ ಕಾರಣಕ್ಕೆ ಇದನ್ನು ‘ಬಡವ ನಿರಾವರಿ’ ಎಂದೂ ಕೂಡ ಕರೆಯಲಾಗುತ್ತದೆ. ಈ ಹುಲ್ಲನ್ನು ಜಾನುವಾರುಗಳಿಗೆ ತಿನ್ನಲೂ ಕೂಡ ಕೊಡಬಹುದು. 

ಲಾವಂಚದ ಬೇರುಗಳಿಂದ ಹೆಣೆದ ಬೀಸಣಿಗೆಗೆ ನೀರು ಚಿಮುಕಿಸಿ ಗಾಳಿ ಹಾಕುವ ಕ್ರಮ ಮೊಗಲ್ ದೊರೆಗಳ ಕಾಲದಲ್ಲಿತ್ತು ಎನ್ನುತ್ತದೆ ಇತಿಹಾಸ.

ಪ್ರಭು ಶ್ರೀರಾಮ ಚಂದ್ರ ಸೀತೆ, ಲಕ್ಷ್ಮಣರ ಜೊತೆ ವನವಾಸದಲ್ಲಿದ್ದಾಗ ಕುಡಿಯುವ ನೀರು ಶುದ್ಧೀಕರಿಸಲು ಲಾವಂಚ ಬಳಸುತ್ತಿದ್ದರೆನ್ನಲಾಗುತ್ತದೆ. ಆದ್ದರಿಂದಲೇ ರಾಮಾಂಚ ಎಂಬ ಹೆಸರು ಬಂದಿದೆ ಎಂಬ ಪ್ರತೀತಿಯಿದೆ.

ಹಿರಿಯ ಕಾದಂಬರಿಕಾರ ಎಸ್ ಎಲ್ ಭೈರಪ್ಪನವರ “ಪರ್ವ” ಕಾದಂಬರಿಯಲ್ಲಿ ದ್ರೌಪದಿ ತನ್ನ ಮಕ್ಕಳಿಗೆ ತಂಪಾಗಲೆಂದು ಬೇಸಿಗೆಯಲ್ಲಿ ಕಿಟಕಿಗಳಿಗೆ ಲಾವಂಚದ ಬೇರಿನ ಹೆಣೆದ ಪರದೆ ಹಾಕಿ ಆಗಾಗ ನೀರು ಚಿಮುಕಿಸುತ್ತಿದ್ದಳೆಂದಿದ್ದಾರೆ. ಗುಬ್ಬಿ ಗೋಸಲ ಚನ್ನ ಬಸವೇಶ್ವರರಿಗೆ ಭೀಮನ ಅಮವಾಸ್ಯೆ ಪ್ರಯುಕ್ತ ಲಾವಂಚದ ಅಲಂಕಾರವನ್ನು ಮಾಡಿದ್ದರು. ತುಮಕೂರಿನಲ್ಲಿ ಶನಿದೇವರಿಗೂ ಲಾವಂಚದ ಬೇರಿನ ಅಲಂಕಾರ ಮಾಡಿ ಪೂಜಿಸುತ್ತಾರೆ. ಉಡುಪಿ ಜಿಲ್ಲೆಯ ದೇವಸ್ಥಾನ ವೊಂದರಲ್ಲಿ ಲಾವಂಚದ ಬೇರು ಪ್ರಸಾದ ರೂಪದಲ್ಲಿ ದೊರಕುವುದಂತೆ. ಭಟ್ಕಳದ “ಉಶಿರಾ” ಕಂಪನಿ ದಶಕಗಳಿಂದ ಲಾವಂಚದ ಕರಕುಶಲ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ.

ದೇವರ ಕಲಾಕೃತಿ, ಯಕ್ಷಗಾನ ಮುಖವಾಡ, ಹೂದಾನಿ, ಹಾರ, ಚಾಪೆ, ವ್ಯಾನಿಟಿ ಬ್ಯಾಗ್, ಪರ್ಸ್, ಮಕ್ಕಳ ಆಟಿಕೆ, ಕುರ್ಚಿ, ಮಂಚವನ್ನೂ ಲಾವಂಚದ ಬೇರಿನಿಂದ ತಯಾರಿಸುತ್ತಾರೆ. ಇದರ ಬೇರಿನ ಟೊಪ್ಪಿಯಂತೂ ಎಲ್ಲರಿಗೂ ಅಚ್ಚುಮೆಚ್ಚು. ಸ್ವಲ್ಪ ನೀರು ಚಿಮುಕಿಸಿ ತಲೆಗೇರಿಸಿದರೆ ಶೀತಲ ಪೆಟ್ಟಿಗೆ ತಲೆಗಿರಿಸಿಂದತೆಯೇ ಸರಿ. ಶೀತ ಸಮಸ್ಯೆ ಇರುವವರು ಕಿವಿನೋವು, ಅಸ್ತಮಾ ಇರುವವರು ಲಾವಂಚದಿಂದ ದೂರವಿದ್ದರೆ ಒಳಿತು.

ಸೌಮ್ಯ ಸನತ್

  • “ಅಕ್ಷರಗಳ ಮೇಲಿನ‌ ಅತ್ಯಾಚಾರ”
    by Team Varthaman
  • “ಸವಾಲು ಎದುರಿಸಿ,ಸಾರ್ಥಕತೆ ಪಡೆಯಿರಿ”
    by Team Varthaman
  • ಮೇ 1ರಿಂದ ಮದ್ಯದ ದರ ಭಾರಿ ಏರಿಕೆ ಸಾಧ್ಯತೆ
    by Team Varthaman
  • ಅಗಣಿತ ಆರೋಗ್ಯ ಭಾಗ್ಯಗಳ ರಾಜ ಈ ಕರಬೂಜ ಬೀಜ
    by Team Varthaman
  • AAP ಗೆ ಬಿಗ್ ಶಾಕ್: 7 ರಾಜ್ಯಸಭಾ ಸಂಸದರು ಬಿಜೆಪಿಗೆ ಬೆಂಬಲ ಘೋಷಣೆ
    by Team Varthaman
ಬೋರ್ಡ್ ಪರೀಕ್ಷೆಗಳು ಹಾಗೂ ಮಕ್ಕಳ ಮನಸ್ಥಿತಿ 
ಯೋಗಾ ಯೋಗ..
ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ
ಆತ್ಮಹತ್ಯೆ …. ಆಯ್ಕೆಯೇ ಅಲ್ಲ.
(ಬ್ಯಾಂಕರ್ಸ್ ಡೈರಿ)
TAGGED:Lavanchaಆರೋಗ್ಯಲಾವಂಚ
Share This Article
Facebook Email Print
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
KarnatakaLatest NewsMandya

ಕೆಆರ್‌ಎಸ್ ಡ್ಯಾಂ ಭರ್ತಿಗೆ ಇನ್ನು 11 ಅಡಿ ಬಾಕಿ

Team Varthaman
Team Varthaman
June 18, 2025
ಐದು ಜಿಲ್ಲೆಗಳಲ್ಲಿ ಗುಡುಗು ಮಳೆ – ಬೆಂಗಳೂರಿನಲ್ಲಿ ಬಿಸಿಲು ಹೆಚ್ಚಳ
ಅಕ್ರಮ ಹಣ ವರ್ಗಾವಣೆ ಪ್ರಕರಣ: ತೆಲುಗು ನಟ ಮಹೇಶ್ ಬಾಬುಗೆ ಇ.ಡಿ ಸಮನ್ಸ್
ಪೊಲೀಸ್ ಠಾಣೆಯಲ್ಲೇ ಹೆಡ್ ಕಾನ್‌ಸ್ಟೇಬಲ್ ಆತ್ಮಹತ್ಯೆ
ಮಧ್ಯರಾತ್ರಿ DCM ಆದೇಶದ ನಂತರ ಬಿಗ್‌ ಬಾಸ್‌ ಮನೆ ತೆರೆ
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?