By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
    ArticlesShow More
    ದ್ವೇಷಕ್ಕೆ ಬೆಂಕಿ ಹಚ್ಚಬೇಕು
    March 8, 2026
    ಮಹಿಳಾ ದಿನಾಚರಣೆ
    March 8, 2026
    ಮಹಿಳಾ ದಿನಾಚರಣೆ ವಿಶೇಷ
    March 8, 2026
    ಸ್ತ್ರೀ ಚಿತ್ರ-ಕಾವ್ಯ
    March 8, 2026
    ಆರೋಗ್ಯ ಭಾಗ್ಯ
    March 1, 2026
  • Sports
  • National
  • International
  • Crime
Reading: ಗಿಳಿಶಾಸ್ತ್ರ ವಂಚನೆ : 35 ಲಕ್ಷ ಚಿನ್ನಾಭರಣ ದೋಚಿದ ಗಿಳಿರಾಮ
Share
Font ResizerAa
VarthamanVarthaman
  • Home
  • Karnataka
  • Articles
  • Sports
  • National
  • International
  • Crime
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
  • Sports
  • National
  • International
  • Crime
Follow US
Varthaman > Karnataka – Latest Breaking News > Karnataka > Bengaluru > ಗಿಳಿಶಾಸ್ತ್ರ ವಂಚನೆ : 35 ಲಕ್ಷ ಚಿನ್ನಾಭರಣ ದೋಚಿದ ಗಿಳಿರಾಮ
BengaluruCrimeKarnataka

ಗಿಳಿಶಾಸ್ತ್ರ ವಂಚನೆ : 35 ಲಕ್ಷ ಚಿನ್ನಾಭರಣ ದೋಚಿದ ಗಿಳಿರಾಮ

Team Varthaman
Last updated: March 10, 2026 3:25 PM
Team Varthaman
Published: March 10, 2026
Share
SHARE

ಬೆಂಗಳೂರು: ವರ್ಗಾವಣೆ ಮತ್ತು ಪ್ರಮೋಷನ್ ಆಗಲೆಂದು ಗಿಳಿಶಾಸ್ತ್ರದ ಮೇಲೆ ನಂಬಿಕೆ ಇಟ್ಟಿದ್ದ ನಗರದಲ್ಲಿನ ಆದಾಯ ತೆರಿಗೆ ಇಲಾಖೆಯ ಅಧಿಕಾರಿಯೊಬ್ಬರು 35 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಕಳೆದುಕೊಂಡು ಮೋಸಹೋಗಿರುವ ಘಟನೆ ಬೆಳಕಿಗೆ ಬಂದಿದೆ.

ಕಳೆದ ಹಲವು ವರ್ಷಗಳಿಂದ ಬೆಂಗಳೂರಿನ ಇನ್‌ಕಮ್ ಟ್ಯಾಕ್ಸ್ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗೆ ಕಳೆದ ಡಿಸೆಂಬರ್ ತಿಂಗಳಲ್ಲಿ ರಸ್ತೆ ಮೇಲೆ ಗಿಳಿಶಾಸ್ತ್ರ ಹೇಳುತ್ತಿದ್ದ ಶೇಖರ್ ಎಂಬ ವ್ಯಕ್ತಿಯ ಪರಿಚಯವಾಗಿತ್ತು. ಭಾರತಿನಗರದ ಶ್ರೀ ಸರ್ಕಲ್ ಬಳಿ ಗಿಳಿಶಾಸ್ತ್ರ ಹೇಳುತ್ತಿದ್ದ ಶೇಖರ್, ನಿಮ್ಮ ಮುಖ ನೋಡಿ ಜಾತಕ ಭವಿಷ್ಯ ಹೇಳುತ್ತೇನೆ, ನಿಮ್ಮ ಜೀವನದಲ್ಲಿ ಒಳ್ಳೆಯ ಬದಲಾವಣೆ ಆಗಲಿದೆ ಎಂದು ನಂಬಿಸಿದ್ದ.

Join WhatsApp Group

ಜೀವನ ಸುಧಾರಣೆಗಾಗಿ ವಿಶೇಷ ಪೂಜೆ ಮಾಡಿಸಬೇಕು ಎಂದು ಹೇಳಿ ಮೊದಲು 50 ಸಾವಿರ ರೂಪಾಯಿ ಹಣ ಪಡೆದು ಪೂಜೆ ನಡೆಸಿದ್ದಾನೆ.

ಪೂಜೆಯ ನಂತರವೂ ಶೇಖರ್ ಪದೇಪದೇ ಐಟಿ ಅಧಿಕಾರಿಗೆ ಕರೆ ಮಾಡಿ ಅವರ ವರ್ಗಾವಣೆ ವಿಚಾರವಾಗಿ ಮಾತನಾಡುತ್ತಿದ್ದ. ನಂತರ ಗಿಳಿಶಾಸ್ತ್ರ ನೋಡಿ ನಿಮ್ಮ ವರ್ಗಾವಣೆಗಾಗಿ ಮತ್ತೊಂದು ದೊಡ್ಡ ಪೂಜೆ ಮಾಡಬೇಕು ಎಂದು ಹೇಳಿ, ಅದಕ್ಕಾಗಿ ಮನೆಯಲ್ಲಿರುವ ಚಿನ್ನಾಭರಣಗಳನ್ನು ತರಲು ಸೂಚಿಸಿದ್ದಾನೆ.

ಶೇಖರ್ ಮಾತನ್ನು ನಂಬಿದ ಐಟಿ ಅಧಿಕಾರಿ ಸುಮಾರು 35 ಲಕ್ಷ ರೂಪಾಯಿ ಮೌಲ್ಯದ 194 ಗ್ರಾಂ ಚಿನ್ನಾಭರಣ ಹಾಗೂ ಸುಮಾರು 1 ಕೆಜಿ 300 ಗ್ರಾಂ ಬೆಳ್ಳಿಯನ್ನು ಆತನಿಗೆ ನೀಡಿದ್ದಾರೆ.

ಒಂದು ದಿನದಲ್ಲೇ ಚಿನ್ನಾಭರಣಗಳನ್ನು ಹಿಂದಿರುಗಿಸುವುದಾಗಿ ಹೇಳಿದ್ದ ಶೇಖರ್, ಪೂಜೆ ಇನ್ನೂ ಮುಗಿದಿಲ್ಲ ಎಂದು ಹೇಳುತ್ತಾ ನಾಳೆ–ನಾಡಿದ್ದು ಎಂದು ಒಂದು ವಾರದ ಕಾಲ ಅಧಿಕಾರಿಯನ್ನು ಅಲೆಸಿದ್ದಾನೆ.

ಕೊನೆಗೆ ಐಟಿ ಅಧಿಕಾರಿ ಭಾರತಿನಗರದ ಶ್ರೀ ಸರ್ಕಲ್ ಬಳಿ ತೆರಳಿದಾಗ, ಗಿಳಿಶಾಸ್ತ್ರ ಹೇಳುತ್ತಿದ್ದ ಶೇಖರ್ ಅಲ್ಲಿಂದಲೇ ನಾಪತ್ತೆಯಾಗಿರುವುದು ತಿಳಿದುಬಂದಿದೆ.ಇದನ್ನು ಓದಿ –ವಾಣಿಜ್ಯ ಎಲ್‌ಪಿಜಿ ಕೊರತೆ:ಕೇಂದ್ರ ಸಚಿವರಿಗೆ ಸಿಎಂ ಪತ್ರ

ತಾನು ಮೋಸಹೋಗಿರುವುದನ್ನು ಅರಿತ ಐಟಿ ಅಧಿಕಾರಿ ಭಾರತಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಶೇಖರ್‌ಗಾಗಿ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.

  • ಗಿಳಿಶಾಸ್ತ್ರ ವಂಚನೆ : 35 ಲಕ್ಷ ಚಿನ್ನಾಭರಣ ದೋಚಿದ ಗಿಳಿರಾಮ
    by Team Varthaman
  • ವಾಣಿಜ್ಯ ಎಲ್‌ಪಿಜಿ ಕೊರತೆ:ಕೇಂದ್ರ ಸಚಿವರಿಗೆ ಸಿಎಂ ಪತ್ರ
    by Team Varthaman
  • IPL 2026: ಮಾರ್ಚ್ 28ರಿಂದ ಆರಂಭ
    by Team Varthaman
  • ಯುದ್ಧದ ಪರಿಣಾಮ: ಅಡುಗೆ ಎಣ್ಣೆ ಬೆಲೆ ಏರಿಕೆ
    by Team Varthaman
  • ಡಿಕೆಶಿ ಪರವಾಗಿ ನಾವಿದ್ದೇವೆ: ಸತೀಶ್ ಜಾರಕಿಹೊಳಿ
    by Team Varthaman
ಮಂಡ್ಯ: ಎಂಜಿನಿಯರಿಂಗ್ ವಿದ್ಯಾರ್ಥಿ ಹೃದಯಾಘಾತದಿಂದ ದುರ್ಮರಣ
ಮೇ 24 ರಂದು ಸಿಇಟಿ ಫಲಿತಾಂಶ ಪ್ರಕಟ
ಶೋಷಣೆಯ ಮತ್ತೊಂದು ಮುಖ 
ಮೈಸೂರು : 40 ಕ್ಕೂ ಹೆಚ್ಚು ತರಬೇತಿದಾರರನ್ನು ವಜಾಗೊಳಿಸಿದ ಇನ್ಫೋಸಿಸ್
ಛತ್ತೀಸ್‌ಗಢ : ಎನ್‌ಕೌಂಟರ್‌ನಲ್ಲಿ 14 ನಕ್ಸಲೀಯರ ಹತ್ಯೆ
TAGGED:breakingnewscrimelatestnewsrobbed
Share This Article
Facebook Email Print
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
KarnatakaTrending

ಮಾ. 7ರಂದು ರಾಜ್ಯ ಬಜೆಟ್, ಮಾ.3ರಿಂದ ವಿಧಾನಮಂಡಲ ಅಧಿವೇಶನ: ಸಿಎಂ ಸಿದ್ದರಾಮಯ್ಯ

Varthaman_Admin
Varthaman_Admin
February 18, 2025
ಇಸ್ರೇಲ್ ದಾಳಿ: ಇರಾನ್ ಪ್ಯಾರಾಮಿಲಿಟರಿ ಮುಖ್ಯಸ್ಥ ಸೇರಿದಂತೆ 3 ಜನ ಸಾವು
ಬಿಗ್ ಬಾಸ್ ಮಾಜಿ ಸ್ಪರ್ಧಿಗಳಾದ ರಜತ್, ವಿನಯ್ ಗೌಡ ವಿರುದ್ಧ ಆರ್ಮ್ಸ್ ಆಕ್ಟ್ ಅಡಿ FIR
ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ
ಕೆಂಪೇಗೌಡ ಜಯಂತಿ ಪ್ರಚಾರ ರಥಕ್ಕೆ ಅದ್ಧೂರಿ ಚಾಲನೆ  
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?