By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
    ArticlesShow More
    “ಅಕ್ಷರಗಳ ಮೇಲಿನ‌ ಅತ್ಯಾಚಾರ”
    April 25, 2026
    “ಸವಾಲು ಎದುರಿಸಿ,ಸಾರ್ಥಕತೆ ಪಡೆಯಿರಿ”
    April 25, 2026
    ಅಗಣಿತ ಆರೋಗ್ಯ ಭಾಗ್ಯಗಳ ರಾಜ ಈ ಕರಬೂಜ ಬೀಜ
    April 25, 2026
    “ಅಂಕಗಳಿಗಿಂತ ಅಚೀವ್ಮೆಂಟ್ ದೊಡ್ಡದು”
    April 24, 2026
    ಹಳ್ಳಿಗಳ ಪಾಲಿನ ನಡೆದಾಡುವ ಸಂಜೀವಿನಿ
    April 22, 2026
  • Sports
  • National
  • International
  • Crime
Reading: IPL 2026: ಮಾರ್ಚ್ 28ರಿಂದ ಆರಂಭ
Share
Font ResizerAa
VarthamanVarthaman
  • Home
  • Karnataka
  • Articles
  • Sports
  • National
  • International
  • Crime
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
  • Sports
  • National
  • International
  • Crime
Follow US
Varthaman > Karnataka – Latest Breaking News > Sports > IPL 2026: ಮಾರ್ಚ್ 28ರಿಂದ ಆರಂಭ
SportsTrending

IPL 2026: ಮಾರ್ಚ್ 28ರಿಂದ ಆರಂಭ

Team Varthaman
Last updated: March 10, 2026 1:48 PM
Team Varthaman
Published: March 10, 2026
Share
SHARE
  • ವೇಳಾಪಟ್ಟಿ ಮತ್ತು ಪ್ರಮುಖ ಮಾಹಿತಿ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ಆವೃತ್ತಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಟಿ20 ವಿಶ್ವಕಪ್ ಮುಗಿದ ಬಳಿಕ ಕ್ರಿಕೆಟ್ ಅಭಿಮಾನಿಗಳು ಎರಡು ತಿಂಗಳುಗಳ ಕಾಲ ನಡೆಯುವ ಕ್ರಿಕೆಟ್ ಹಬ್ಬವನ್ನು ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ.

ಐಪಿಎಲ್–2026ರ ಪಂದ್ಯಾವಳಿ ಮಾರ್ಚ್ 28ರಿಂದ ಆರಂಭವಾಗಲಿದೆ ಎಂದು ಪ್ರಸಾರ ಸಂಸ್ಥೆ ಸ್ಟಾರ್ ಸ್ಪೋರ್ಟ್ಸ್ ಭಾನುವಾರ (ಮಾರ್ಚ್ 8) ದೃಢಪಡಿಸಿದೆ. ಆದರೆ ಸಂಪೂರ್ಣ ವೇಳಾಪಟ್ಟಿ ಇನ್ನೂ ಅಧಿಕೃತವಾಗಿ ಪ್ರಕಟವಾಗಿಲ್ಲ.

ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈ ಬಾರಿ ಕೂಡ ಟ್ರೋಫಿ ಉಳಿಸಿಕೊಳ್ಳುವ ಗುರಿಯೊಂದಿಗೆ ಕಣಕ್ಕಿಳಿಯಲಿದೆ.

Join WhatsApp Group

ಈ ಆವೃತ್ತಿಯ ಪ್ಲೇಆಫ್ ಪಂದ್ಯಗಳು ಮೇ 26ರಿಂದ ಆರಂಭವಾಗಲಿವೆ. ಕ್ವಾಲಿಫೈಯರ್–1 ಹಾಗೂ ಫೈನಲ್ ಪಂದ್ಯಗಳು ಮೇ 31ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಸಾಧ್ಯತೆ ಇದೆ.

ಎಲಿಮಿನೇಟರ್ ಹಾಗೂ ಕ್ವಾಲಿಫೈಯರ್–2 ಪಂದ್ಯಗಳು ಅಹಮದಾಬಾದ್ ಮತ್ತು ರಾಯ್‌ಪುರದಲ್ಲಿ ನಡೆಯುವ ಸಾಧ್ಯತೆ ಇದೆ. ಆದರೆ ಈ ಕುರಿತು ಬಿಸಿಸಿಐ ಇನ್ನೂ ಅಧಿಕೃತ ಮಾಹಿತಿ ಪ್ರಕಟಿಸಿಲ್ಲ.

ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬಿಸಿಸಿಐ ಪಂದ್ಯಗಳ ವೇಳಾಪಟ್ಟಿಯನ್ನು ಎರಡು ಹಂತಗಳಲ್ಲಿ ಪ್ರಕಟಿಸುವ ಸಾಧ್ಯತೆ ಇದೆ. ಮೊದಲ ಹಂತದಲ್ಲಿ ಮೊದಲ 15 ದಿನಗಳ ವೇಳಾಪಟ್ಟಿಯನ್ನು ಪ್ರಕಟಿಸಿ, ನಂತರ ಉಳಿದ ಪಂದ್ಯಗಳ ದಿನಾಂಕಗಳನ್ನು ಘೋಷಿಸುವ ಸಾಧ್ಯತೆ ಇದೆ.

ಸಂಪ್ರದಾಯದಂತೆ, ಕಳೆದ ಆವೃತ್ತಿಯ ಫೈನಲ್ ಆಡಿದ ತಂಡಗಳ ನಡುವೆ ಉದ್ಘಾಟನಾ ಪಂದ್ಯ ನಡೆಯುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ತಂಡಗಳ ನಡುವೆ ಮೊದಲ ಪಂದ್ಯ ನಡೆಯಬಹುದು ಎಂಬ ನಿರೀಕ್ಷೆ ಇದೆ. ಆದರೆ ಇದಕ್ಕೂ ಅಧಿಕೃತ ಘೋಷಣೆ ಬಾಕಿಯಿದೆ.

ಐಪಿಎಲ್ 2026ರಲ್ಲಿ ಒಟ್ಟು 10 ತಂಡಗಳು ‘ಡಬಲ್ ರೌಂಡ್-ರಾಬಿನ್’ ಸ್ವರೂಪದಲ್ಲಿ ಆಡಲಿವೆ. ಪ್ರತಿ ತಂಡವು ಇತರ ತಂಡಗಳ ವಿರುದ್ಧ ಎರಡು ಬಾರಿ ಮುಖಾಮುಖಿಯಾಗಲಿದೆ – ಒಮ್ಮೆ ತಮ್ಮ ತವರಿನಲ್ಲಿ ಮತ್ತು ಮತ್ತೊಮ್ಮೆ ಎದುರಾಳಿಯ ಮೈದಾನದಲ್ಲಿ.

ಪಂದ್ಯಾವಳಿ ಬೆಂಗಳೂರು, ದೆಹಲಿ, ಮುಂಬೈ, ಹೈದರಾಬಾದ್, ರಾಯ್‌ಪುರ ಸೇರಿದಂತೆ 10 ಪ್ರಮುಖ ನಗರಗಳಲ್ಲಿ ನಡೆಯಲಿದೆ.ಇದನ್ನು ಓದಿ –ಯುದ್ಧದ ಪರಿಣಾಮ: ಅಡುಗೆ ಎಣ್ಣೆ ಬೆಲೆ ಏರಿಕೆ

ಈ ಬಾರಿ ಐಪಿಎಲ್‌ನಲ್ಲಿ ಪಂದ್ಯಗಳ ಸಂಖ್ಯೆಯೂ ಹೆಚ್ಚಳವಾಗಿದೆ. ಸಾಮಾನ್ಯವಾಗಿ 74 ಪಂದ್ಯಗಳು ನಡೆಯುತ್ತಿದ್ದರೆ, 2026ರ ಆವೃತ್ತಿಯಲ್ಲಿ 80 ಲೀಗ್ ಪಂದ್ಯಗಳು ಹಾಗೂ 4 ಪ್ಲೇಆಫ್ ಪಂದ್ಯಗಳು ಸೇರಿ ಒಟ್ಟು 84 ಪಂದ್ಯಗಳು ನಡೆಯಲಿವೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚು ಪಂದ್ಯಗಳು ನಡೆಯುವ ಆವೃತ್ತಿಯಾಗಲಿದೆ.

  • “ಅಕ್ಷರಗಳ ಮೇಲಿನ‌ ಅತ್ಯಾಚಾರ”
    by Team Varthaman
  • “ಸವಾಲು ಎದುರಿಸಿ,ಸಾರ್ಥಕತೆ ಪಡೆಯಿರಿ”
    by Team Varthaman
  • ಮೇ 1ರಿಂದ ಮದ್ಯದ ದರ ಭಾರಿ ಏರಿಕೆ ಸಾಧ್ಯತೆ
    by Team Varthaman
  • ಅಗಣಿತ ಆರೋಗ್ಯ ಭಾಗ್ಯಗಳ ರಾಜ ಈ ಕರಬೂಜ ಬೀಜ
    by Team Varthaman
  • AAP ಗೆ ಬಿಗ್ ಶಾಕ್: 7 ರಾಜ್ಯಸಭಾ ಸಂಸದರು ಬಿಜೆಪಿಗೆ ಬೆಂಬಲ ಘೋಷಣೆ
    by Team Varthaman
ಹೋಟೆಲ್‌ಗಳಿಗೆ ಹೆಚ್ಚುವರಿ 1,000 ಕಮರ್ಷಿಯಲ್ ಸಿಲಿಂಡರ್: ಸಚಿವ ಮುನಿಯಪ್ಪ
ಸಿಡಿಲು ಬಡಿದು ಒಂದೇ ಕುಟುಂಬದ ಇಬ್ಬರ ದುರ್ಮರಣ
ಭಾರತ ವಿರುದ್ಧ ಸುಳ್ಳು ಆರೋಪ ಮಾಡಿದ ಪಾಕಿಸ್ತಾನಕ್ಕೆ ವಿಶ್ವಸಂಸ್ಥೆಯಲ್ಲಿ ಮತ್ತೆ ಮುಖಭಂಗ
ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳ ಶುಲ್ಕ ಶೇ.7.5 ರಷ್ಟು ಏರಿಕೆ
ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ವಿರಾಟ್ ಕೊಹ್ಲಿ
TAGGED:Indian Premier LeagueIPL 2026RCBಇಂಡಿಯನ್ ಪ್ರೀಮಿಯರ್ ಲೀಗ್
Share This Article
Facebook Email Print
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
BengaluruKarnatakaTrending

ವಿವಿಧ ಇಲಾಖೆ ನೇಮಕಾತಿ ಪರೀಕ್ಷೆ: ಅಂತಿಮ ಪಟ್ಟಿ ಪ್ರಕಟ

Team Varthaman
Team Varthaman
March 16, 2026
ಡಿಜಿಟಲ್ ಪಾವತಿಗೆ ಹೊಸ ಒಟಿಪಿ ಪರ್ಯಾಯ ನಿಯಮ
ಮೈಸೂರಲ್ಲಿ ಮೊದಲ ಆಷಾಢ ಶುಕ್ರವಾರದ ಸಂಭ್ರಮ
ಇಂದು ಬಂಗಾರ–ಬೆಳ್ಳಿ ದರ ಕುಸಿತ
ರೈಲ್ವೆ ಬೋಗಿಗಳಲ್ಲೇ ATM ಸೇವೆ: ಶೀಘ್ರದಲ್ಲಿ ಆರಂಭಗೊಳ್ಳುವ ಹೊಸ ಸೌಲಭ್ಯ
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?