ಮೆಟ್ರೋ ದರ ಏರಿಕೆ ಇಲ್ಲ: ತೇಜಸ್ವಿ ಸೂರ್ಯ
ಬೆಂಗಳೂರು: ಸದ್ಯಕ್ಕೆ ಸೋಮವಾರದಿಂದ ಮೆಟ್ರೋ ಟಿಕೆಟ್ ದರ ಏರಿಕೆ ಜಾರಿಯಾಗುವುದಿಲ್ಲ ಎಂದು ಸಂಸದ ತೇಜಸ್ವಿ ಸೂರ್ಯ…
ಭಕ್ತಿಯ ಮೌಲ್ಯವನ್ನು ಸಾರಿದ ಶಬರಿ
ನಾವು ಚಿಕ್ಕವರಿರುವಾಗಿ ನಮ್ಮ ಪಠ್ಯಪುಸ್ತಕದದಲ್ಲಿ ವಿ. ಸೀತಾರಾಮಯ್ಯನವರ “ಕಾದಿರುವಳು ಶಬರಿ, ರಾಮ ಬರುವನೆಂದು, ತನ್ನ ಪೂಜೆಗೊಳುವನೆಂದು”…
ಒಬ್ಬರಿಗೆ ” ಟೇಕನ್ ಫ಼ಾರ್ ಗ್ರಾಂಟೆಡ್ ” ಆಗುವ ಮುನ್ನ
ನಮ್ಮ ನಡುವಿನ ಬಹುತೇಕರ ಒಂದು ಕಾಮನ್ ಅಪ್ರೋಚ್ ಏನು ಗೊತ್ತಾ..? ನೀವು ಯಾರಿಗಾದರೂ ಯಾವುದೇ ವಿಚಾರಕ್ಕೆ…
ಬಿಸಿಲಿನ ತಾಪಕ್ಕೆ ತಂಪು ಪಾನೀಯ ವರದಾನ
ಸೂರ್ಯ ತನ್ನ ಪ್ರಖರತೆಯನ್ನು ಪ್ರದರ್ಶಿಸುತ್ತಿದ್ದಾನೆ. ಬಿಸಿಲಿನ ಝಳ ದಿನ ದಿನಕ್ಕೆ ಹೆಚ್ಚುತ್ತಲೇ ಇದೆ. ಬಿಸಿಲ ತಾಪ…
ಡಿಕೆಶಿ ಶೀಘ್ರವೇ ಮುಖ್ಯಮಂತ್ರಿ: ಶಾಸಕ ಇಕ್ಬಾಲ್
ರಾಮನಗರ: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಶೀಘ್ರದಲ್ಲೇ ಮುಖ್ಯಮಂತ್ರಿಯಾಗಲಿದ್ದಾರೆ. ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ನೋಡುವ ನಮ್ಮ…
ತಿರುಪತಿ ಲಡ್ಡು ಕಲಬೆರಕೆ: ನಾಯ್ಡು ಗಂಭೀರ ಆರೋಪ
ಅಮರಾವತಿ: ತಿರುಪತಿ ಲಡ್ಡು ಪ್ರಸಾದ ತಯಾರಿಕೆ ಕುರಿತ ಕಲಬೆರಕೆ ವಿವಾದ ಮತ್ತೊಂದು ತಿರುವು ಪಡೆದಿದೆ. ಹಿಂದಿನ…
ಮ್ಯೂಲ್ ಅಕೌಂಟ್ ಸೈಬರ್ ದಂಧೆ ಭೇದನೆ: CID ದಾಳಿ
ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಸೈಬರ್ ಅಪರಾಧಗಳ ಹಿನ್ನೆಲೆ, ಮ್ಯೂಲ್ ಅಕೌಂಟ್‌ಗಳ ಮೂಲಕ ನಡೆಯುತ್ತಿದ್ದ ಭಾರೀ ಸೈಬರ್…
ಪಂಚಾಯತ್ ಚುನಾವಣೆ ಬ್ಯಾಲೆಟ್ ಪೇಪರ್‌ನಲ್ಲಿ: ಸಂಪುಟ ಒಪ್ಪಿಗೆ
ಬೆಂಗಳೂರು: ಗ್ರಾಮ ಪಂಚಾಯತ್, ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಯನ್ನು ಇನ್ನು ಮುಂದೆ ಎಲೆಕ್ಟ್ರಾನಿಕ್ ಮತಯಂತ್ರಗಳ…
RCB ಮಹಿಳಾ ತಂಡಕ್ಕೆ ಎರಡನೆ ಕಿರೀಟ
ವಡೋದರಾ: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ವರ್ಷಗಳ ಕಾಲ ಟ್ರೋಫಿಗಾಗಿ ಹೋರಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ…
ಮೈಸೂರು: ಏಳು ಕಡೆ ಲೋಕಾಯುಕ್ತ ದಾಳಿ
ಮೈಸೂರು: ಆದಾಯಕ್ಕಿಂತ ಅಧಿಕ ಆಸ್ತಿ ಗಳಿಸಿದ ಆರೋಪದ ಮೇರೆಗೆ ಮೈಸೂರು ಲೋಕಾಯುಕ್ತ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ಏಕಕಾಲದಲ್ಲಿ ಇಬ್ಬರು ಅಧಿಕಾರಿಗಳ ಮನೆ ಹಾಗೂ ಕಚೇರಿಗಳನ್ನು ಸೇರಿ ಒಟ್ಟು ಏಳು ಕಡೆ ಶೋಧ ನಡೆಸಿದರು. ಮೈಸೂರು ಮಹಾನಗರ ಪಾಲಿಕೆ ಹಾಗೂ ಟಿ.ನರಸೀಪುರ ಪುರಸಭೆಯ ಜೂನಿಯರ್ ಎಂಜಿನಿಯರ್ ಕೆ.ಆರ್. ಚಂದ್ರಶೇಖರ್ ಅವರಿಗೆ ಸೇರಿದ ಮೈಸೂರಿನ ವಿಜಯನಗರ, ಕೆ.ಜಿ. ಕೊಪ್ಪಲು ನಿವಾಸಗಳು ಹಾಗೂ ಟಿ.ನರಸೀಪುರ ಕಚೇರಿ ಸೇರಿ ನಾಲ್ಕು ಸ್ಥಳಗಳಲ್ಲಿ ಏಕಕಾಲದಲ್ಲಿ ಶೋಧ ನಡೆಸಲಾಗಿದೆ. ಶೋಧದ ವೇಳೆ ಚಂದ್ರಶೇಖರ್ ಅವರ ಬಳಿ ಸುಮಾರು 1,37,00,000 ರೂ. ಮೌಲ್ಯದ ಸ್ಥಿರ ಆಸ್ತಿ,55 ಲಕ್ಷ ರೂ. ಮೌಲ್ಯದ ಎರಡು ನಿವೇಶನಗಳು,82 ಲಕ್ಷ ರೂ. ಮೌಲ್ಯದ ಒಂದು ಮನೆ ಹಾಗೂ ಕೃಷಿ ಭೂಮಿ ಸೇರಿದಂತೆ ಒಟ್ಟು 2,75,10,300 ರೂ. ಮೌಲ್ಯದ ಚಲಿಸಬಲ್ಲ ಆಸ್ತಿ ಇರುವುದಾಗಿ ದಾಖಲೆಗಳು ಪತ್ತೆಯಾಗಿವೆ. ಇದಲ್ಲದೆ ಶೋಧದ ಸಂದರ್ಭದಲ್ಲಿ 62,00,400 ರೂ. ನಗದು,2,02,39,900 ರೂ. ಮೌಲ್ಯದ ಚಿನ್ನಾಭರಣ,10,70,000 ರೂ. ಮೌಲ್ಯದ ವಾಹನ ಸೇರಿ ಒಟ್ಟು 2,54,10,300 ರೂ. ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡಿದ್ದಾರೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ. ಇನ್ನೊಂದೆಡೆ, ಡೆಪ್ಯೂಟಿ ಎಲೆಕ್ಟ್ರಿಕಲ್ ಇಂಜಿನಿಯರ್ ಅಲ್ತಾಫ್ ಹುಸೇನ್ ಜಕಾರ್ತಿಗೆ ಸಂಬಂಧಿಸಿದಂತೆ ಎರಡು ಮನೆ ಹಾಗೂ ಕಚೇರಿಯಲ್ಲಿ ಶೋಧ ನಡೆಸಲಾಗಿದೆ. ಇವರ ಬಳಿ ಸುಮಾರು 2,34,10,000 ರೂ. ಮೌಲ್ಯದ ಸ್ಥಿರ ಆಸ್ತಿ, 1,03,10,000 ರೂ. ಮೌಲ್ಯದ ನಾಲ್ಕು ನಿವೇಶನಗಳು, 1,31,00,000 ರೂ. ಮೌಲ್ಯದ ಮನೆ ಸೇರಿದಂತೆ ಒಟ್ಟು 1,10,02,829 ರೂ. ಮೌಲ್ಯದ ಚರ ಆಸ್ತಿ ಇರುವುದಾಗಿ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಶೋಧದ ವೇಳೆ 1,45,340 ರೂ. ನಗದು,75,46,800 ರೂ. ಮೌಲ್ಯದ ಆಭರಣ,19,55,000 ರೂ. ಮೌಲ್ಯದ ವಾಹನ ಹಾಗೂ ಇತರೆ 13,55,689 ರೂ. ಸೇರಿ ಒಟ್ಟು 2,41,77,849 ರೂ. ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆಯಲಾಗಿದೆ. ಲೋಕಾಯುಕ್ತ ಎಸ್ಪಿ ಉದ್ದೇಶ್ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ.ಈ ಚಂದ್ರಶೇಖರ್ ಯಾರು? ಕೆ.ಆರ್. ಚಂದ್ರಶೇಖರ್ ಅವರು ಮೊದಲಿಗೆ ಗುಲ್ಬರ್ಗದಲ್ಲಿ ಜೂನಿಯರ್ ಎಂಜಿನಿಯರ್ ಆಗಿ ನೇಮಕಗೊಂಡಿದ್ದರು. ಬಳಿಕ ಪಾಂಡವಪುರ ತಾಲ್ಲೂಕು ಹಾಗೂ ಮೈಸೂರು ಮಹಾನಗರ ಪಾಲಿಕೆಯಲ್ಲಿ ಜೆಇ ಆಗಿ ಕಾರ್ಯನಿರ್ವಹಿಸಿದ್ದರು. 2021ರಲ್ಲಿ ಮಹಿಳೆಯೊಬ್ಬರಿಂದ 5 ಸಾವಿರ ರೂ. ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತರ ಬಲೆಗೆ ಸಿಕ್ಕಿಬಿದ್ದ ಆರೋಪವೂ ಇವರ ಮೇಲಿದೆ. ಬಳಿಕ ಕೆ.ಆರ್.ನಗರ ಜೆಇ ಆಗಿ ವರ್ಗಾವಣೆಗೊಂಡ ಚಂದ್ರಶೇಖರ್, ನಂತರ ಮತ್ತೆ ಮೈಸೂರು ಮಹಾನಗರ ಪಾಲಿಕೆಯ ವಲಯ ಕಛೇರಿ-6 ಹಾಗೂ ಟಿ.ನರಸೀಪುರ ತಾಲ್ಲೂಕಿನ ಜೆಇ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಇವರ ಮಗ ಹಾಗೂ ಸೊಸೆಯೂ ಸಹ ಜೂನಿಯರ್ ಎಂಜಿನಿಯರ್ ಆಗಿದ್ದು, ಸದ್ಯ ಲೋಕಾಯುಕ್ತ ಶೋಧಕ್ಕೆ ಒಳಗಾಗಿದ್ದಾರೆ.



