By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
    ArticlesShow More
    ಆರೋಗ್ಯ ಭಾಗ್ಯ
    March 1, 2026
    ಬೋರ್ಡ್ ಪರೀಕ್ಷೆಗಳು ಹಾಗೂ ಮಕ್ಕಳ ಮನಸ್ಥಿತಿ 
    February 26, 2026
    ಸರ್ವರೋಗ ನಿವಾರಿಣಿ ಬಿಲ್ವಪತ್ರೆ
    February 22, 2026
    ಮಕ್ಕಳು ತಾಯಿಯ ಪ್ರತಿಬಿಂಬ 
    February 20, 2026
    ಮಕ್ಕಳ ಬಾಲ್ಯ
    February 15, 2026
  • Sports
  • National
  • International
  • Crime
Reading: ಬಜೆಟ್‌ನಲ್ಲಿ ಪೆಟ್ರೋಲ್, ಡೀಸೆಲ್ ದರ ಏರಿಕೆ ಚಿಂತನೆ
Share
Font ResizerAa
VarthamanVarthaman
  • Home
  • Karnataka
  • Articles
  • Sports
  • National
  • International
  • Crime
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
  • Sports
  • National
  • International
  • Crime
Follow US
Varthaman > Karnataka – Latest Breaking News > Karnataka > Bengaluru > ಬಜೆಟ್‌ನಲ್ಲಿ ಪೆಟ್ರೋಲ್, ಡೀಸೆಲ್ ದರ ಏರಿಕೆ ಚಿಂತನೆ
BengaluruKarnatakaTrending

ಬಜೆಟ್‌ನಲ್ಲಿ ಪೆಟ್ರೋಲ್, ಡೀಸೆಲ್ ದರ ಏರಿಕೆ ಚಿಂತನೆ

Team Varthaman
Last updated: March 3, 2026 10:58 AM
Team Varthaman
Published: March 3, 2026
Share
SHARE

ಬೆಂಗಳೂರು: ಗ್ಯಾರಂಟಿ ಯೋಜನೆಗಳ ಆರ್ಥಿಕ ಹೊರೆ ನಡುವೆಯೇ ರಾಜ್ಯ ಸರ್ಕಾರವು ಬಜೆಟ್‌ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಹೆಚ್ಚುವರಿ ತೆರಿಗೆ ವಿಧಿಸುವ ಸಾಧ್ಯತೆಯನ್ನು ಪರಿಶೀಲಿಸುತ್ತಿದೆ. ಪ್ರತಿ ಲೀಟರ್‌ಗೆ 1 ರೂಪಾಯಿ ಹೆಚ್ಚುವರಿ ಮಾರಾಟ ತೆರಿಗೆ ಅಥವಾ ಸೆಸ್ ವಿಧಿಸುವ ಪ್ರಸ್ತಾಪ ಚರ್ಚೆಯಲ್ಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಗ್ಯಾರಂಟಿ ಯೋಜನೆಗಳಿಂದ ಸರ್ಕಾರದ ಮೇಲೆ ಆರ್ಥಿಕ ಒತ್ತಡ ಹೆಚ್ಚಿರುವುದಾಗಿ ಸಚಿವ ಸತೀಶ್ ಜಾರಕಿಹೊಳಿ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಇದೇ ವೇಳೆ, ಸಂಪನ್ಮೂಲ ಕ್ರೋಡೀಕರಣದ ಗುರಿಗಳು ಏರಿಕೆಯಾದ ಹಿನ್ನೆಲೆ ಹೊಸ ಆದಾಯ ಮೂಲಗಳನ್ನು ಹುಡುಕುವುದು ಅನಿವಾರ್ಯವಾಗಿದೆ ಎಂದು ಸರ್ಕಾರದ ವಲಯಗಳು ಸೂಚಿಸುತ್ತಿವೆ.

Join WhatsApp Group

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಣಕಾಸು ಇಲಾಖೆ ಅಧಿಕಾರಿಗಳೊಂದಿಗೆ ಈ ಕುರಿತು ಪ್ರತ್ಯೇಕ ಚರ್ಚೆ ನಡೆಸಿರುವುದಾಗಿ ತಿಳಿದುಬಂದಿದೆ. ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಪ್ರತಿ ಲೀಟರ್‌ಗೆ 1 ರೂ. ಹೆಚ್ಚುವರಿ ತೆರಿಗೆ ವಿಧಿಸಿದರೆ ಆದಾಯ ಸಂಗ್ರಹಣೆಗೆ ನೆರವಾಗಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಆದರೆ, ಇದರಿಂದ ಸಾರ್ವಜನಿಕ ವಿರೋಧ ಎದುರಾಗುವ ಸಾಧ್ಯತೆಯೂ ಇದೆ. ಇನ್ನೂ ಅಂತಿಮ ನಿರ್ಧಾರ ಕೈಗೊಳ್ಳಲಾಗಿಲ್ಲ.

ಈಗಾಗಲೇ 2024ರಲ್ಲಿ ಪೆಟ್ರೋಲ್ ಮೇಲಿನ ಮಾರಾಟ ತೆರಿಗೆಯನ್ನು ಶೇ.29.84ಕ್ಕೆ ಏರಿಸಲಾಗಿತ್ತು. ಅದರ ಪರಿಣಾಮವಾಗಿ ಪ್ರತಿ ಲೀಟರ್‌ಗೆ ಸುಮಾರು 3 ರೂ. ದರ ಏರಿಕೆಯಾಗಿತ್ತು. ಆಗ ನೆರೆ ರಾಜ್ಯಗಳಿಗಿಂತ ಕರ್ನಾಟಕದಲ್ಲಿ ಕಡಿಮೆ ಪ್ರಮಾಣದ ಸೆಸ್ ವಿಧಿಸಲಾಗಿದೆ ಎಂದು ಸರ್ಕಾರ ಸಮರ್ಥಿಸಿತ್ತು.

ಮಾರ್ಚ್ 3, 2026ರಂತೆ ಬೆಂಗಳೂರಿನಲ್ಲಿ ಪೆಟ್ರೋಲ್ ದರ ಸರಿಸುಮಾರು ₹103.37 ಮತ್ತು ಡೀಸೆಲ್ ದರ ₹90.99 ಇದೆ. ಬಜೆಟ್‌ನಲ್ಲಿ ಹೆಚ್ಚುವರಿ ಸೆಸ್ ಘೋಷಣೆಯಾದರೆ, ಅದು ವಾಹನ ಸವಾರರಿಗಷ್ಟೇ ಅಲ್ಲದೆ ಸರಕು ಸಾಗಣೆ ವೆಚ್ಚ ಹೆಚ್ಚಳದ ಮೂಲಕ ಅಗತ್ಯ ವಸ್ತುಗಳ ಬೆಲೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತವಾಗಿದೆ.ಇದನ್ನು ಓದಿ –ಇರಾನ್‌ನಲ್ಲಿ 176 ಮಕ್ಕಳು ಸೇರಿ 742 ಸಾವು; ಸಂಘರ್ಷ ತೀವ್ರ

ಬಜೆಟ್ ಅಧಿವೇಶನಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇರುವ ಹಿನ್ನೆಲೆ ಸರ್ಕಾರದ ಅಂತಿಮ ನಿರ್ಧಾರ ಏನಾಗಲಿದೆ ಎಂಬುದರತ್ತ ಸಾರ್ವಜನಿಕರ ಗಮನ ಕೇಂದ್ರೀಕೃತವಾಗಿದೆ.

  • ಮಾ.6ರಂದು ಸಚಿವ ಸಂಪುಟ ವಿಶೇಷ ಸಭೆ
    by Team Varthaman
  • ಬಜೆಟ್‌ನಲ್ಲಿ ಪೆಟ್ರೋಲ್, ಡೀಸೆಲ್ ದರ ಏರಿಕೆ ಚಿಂತನೆ
    by Team Varthaman
  • ಇರಾನ್‌ನಲ್ಲಿ 176 ಮಕ್ಕಳು ಸೇರಿ 742 ಸಾವು; ಸಂಘರ್ಷ ತೀವ್ರ
    by Team Varthaman
  • ಇರಾನ್ ಪರಮಾಣು ಸೌಲಭ್ಯಕ್ಕೆ ದಾಳಿ; ವಿಕಿರಣ ಸೋರಿಕೆ ಆತಂಕ
    by Team Varthaman
  • RTO ದಂಧೆ; 10,210 ವಾಹನಗಳಿಗೆ ಅಕ್ರಮ FC, ಎಫ್‌ಐಆರ್ ದಾಖಲು
    by Team Varthaman
ಮೇ 20ರಂದು ಒಂದು ಲಕ್ಷ ಜನರಿಗೆ ಪಟ್ಟಾ ಖಾತೆ ವಿತರಣೆ
ನೈಸ್ ರಸ್ತೆಯಲ್ಲಿ ಹಿಟ್-ಅಂಡ್-ರನ್ : ಇಬ್ಬರ ದುರ್ಮರಣ
ಏರ್‌ಪೋರ್ಟ್–ರಾಮನಗರದಲ್ಲಿ 3 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ
ಆಪರೇಷನ್‌ ಸಿಂಧೂರ ಮುಂದುವರಿಯಲಿದೆ
ಬೈಕ್–ಕೆಎಸ್‌ಆರ್‌ಟಿಸಿ ಬಸ್ ಅಪಘಾತ; ಮಹಿಳೆ ಮೃತ್ಯು
TAGGED:breakingnewslatestnewspetrolState budget
Share This Article
Facebook Email Print
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
Crime

ಛತ್ತೀಸ್‌ಗಢ : ಎನ್‌ಕೌಂಟರ್‌ನಲ್ಲಿ 14 ನಕ್ಸಲೀಯರ ಹತ್ಯೆ

Team Varthaman
Team Varthaman
January 3, 2026
ಕಿರುತೆರೆ ನಟ ಶ್ರೀಧರ್ ನಾಯಕ್ ವಿಧಿವಶ
ಭಾರೀ ಮಳೆಗೆ ಭಾಗಮಂಡಲ ಜಲಾವೃತ
ಮಕರ ಸಂಕ್ರಾಂತಿ : ಸೌರಪಥದ ಬದಲಾವಣೆ
SSC CGL 2025: 14,582 ಹುದ್ದೆಗಳಿಗೆ ಅರ್ಜಿ ಆಹ್ವಾನ
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?