By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
    ArticlesShow More
    ದ್ವೇಷಕ್ಕೆ ಬೆಂಕಿ ಹಚ್ಚಬೇಕು
    March 8, 2026
    ಮಹಿಳಾ ದಿನಾಚರಣೆ
    March 8, 2026
    ಮಹಿಳಾ ದಿನಾಚರಣೆ ವಿಶೇಷ
    March 8, 2026
    ಸ್ತ್ರೀ ಚಿತ್ರ-ಕಾವ್ಯ
    March 8, 2026
    ಆರೋಗ್ಯ ಭಾಗ್ಯ
    March 1, 2026
  • Sports
  • National
  • International
  • Crime
Reading: ಮಹಿಳಾ ದಿನಾಚರಣೆ
Share
Font ResizerAa
VarthamanVarthaman
  • Home
  • Karnataka
  • Articles
  • Sports
  • National
  • International
  • Crime
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
  • Sports
  • National
  • International
  • Crime
Follow US
Varthaman > Karnataka – Latest Breaking News > Articles > ಮಹಿಳಾ ದಿನಾಚರಣೆ
Articles

ಮಹಿಳಾ ದಿನಾಚರಣೆ

Team Varthaman
Last updated: March 8, 2026 12:18 PM
Team Varthaman
Published: March 8, 2026
Share
SHARE

ಒಂದು ವಿಭಿನ್ನ ಒಳನೋಟ.

ಮಾರ್ಚ್ ಎಂಟು ಬಂತೆಂದರೆ ಇಡೀ ಜಗತ್ತಿನಾದ್ಯ0ತ ಮಹಿಳಾ ದಿನಾಚರಣೆಯ ಕುರಿತಾದ ಸ್ಲೋಗನ್ ಗಳು ಅಪಾರ. ಎಲ್ಲಿ ನೋಡಿದರಲ್ಲಿ ಹೆಣ್ಣು ಮಕ್ಕಳನ್ನು, ಅವರ ಅಸ್ಮಿತೆಯನ್ನು ಹೊಗಳುವ ಪರಿ ಅಪರಂಪಾರ.

 ಇಡೀ ತಿಂಗಳು ಮಹಿಳೆಯರನ್ನು ಅವರ ಕಾರ್ಯ ಚಟುವಟಿಕೆಗಳನ್ನು ಹೊಗಳಿ ಹೊನ್ನ ಶೂಲಕ್ಕೆ ಏರಿಸುವ ಮೂಲಕ ಆಕೆಯ ಮೇಲೆ ಮತ್ತಷ್ಟು ಹೊರಿಸುತ್ತಾರೆ ಭಾರ.

ಹೀಗೆ ಹೇಳಲು ಕಾರಣ ಇದೆ… ಹೆಣ್ಣು ತಾಯಿಯಾಗಿ, ಸಹೋದರಿಯಾಗಿ, ಸ್ನೇಹಿತೆಯಾಗಿ, ಪತ್ನಿಯಾಗಿ, ಮಗಳಾಗಿ ನಮ್ಮೆಲ್ಲರ ಬದುಕಿನಲ್ಲಿ ತನ್ನದೇ ಆದ ಪಾತ್ರಗಳನ್ನು ನಿಭಾಯಿಸುತ್ತಾಳೆ. ಈ ಎಲ್ಲ ಪಾತ್ರಗಳನ್ನು ನಮ್ಮ ಸಾಮಾಜಿಕ ವ್ಯವಸ್ಥೆಯು ತನ್ನ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತದೆ. ಆಯಾ ವಯೋಮಾನದ ಆದ್ಯತೆಗೆ ಅನುಗುಣವಾಗಿ ಅವರನ್ನು ಅವಲಂಬಿಸುತ್ತದೆ, ಅವರಿಂದ ಪೊರೆಯಲ್ಪಡುತ್ತದೆ ಮತ್ತು ಅನವಶ್ಯಕ ಎನಿಸಿದಾಗ ಅವರಿಂದ ದೂರ ಸರಿಯುತ್ತದೆ ಕೂಡ. ಚಿಕ್ಕಂದಿನಲ್ಲಿ ಎಲ್ಲಾ ಅವಶ್ಯಕತೆಗಳನ್ನು ಪೂರೈಸುವ ತಾಯಿಯನ್ನು ಅವಲಂಬಿಸುವ ಮಗು, ಬೆಳೆದು ದೊಡ್ಡವನಾಗುತ್ತಿದ್ದಂತೆ ಒಡಹುಟ್ಟಿದ ಸಹೋದರಿಯರನ್ನು, ವಿವಾಹದ ನಂತರ ಪತ್ನಿಯನ್ನು ನಂತರ ತಮ್ಮ ಹೆಣ್ಣು ಮಕ್ಕಳು ಹಾಗೂ ವಯಸ್ಸಾದ ಸಮಯದಲ್ಲಿ  ಸೊಸೆಯನ್ನು ಅವಲಂಬಿಸುತ್ತಾರೆ.  ತಾನು ಅವರಿಗೆ ಹೊರೆಯಾದರೂ ಕೂಡ ಪ್ರೀತಿಯಿಂದ ಸಲಹುವ ಅವರನ್ನು, ತನಗೆ ಅವರು ಹೊರೆ ಎಂಬ ಭಾವ ಉದ್ಭವವಾದಾಗ ಅಸಹನೆ, ಅಸಮಾಧಾನಗಳು ಸಹಜ.

Join WhatsApp Group

 ಅರೆ ಇದೇನಿದು ಹೀಗೆ ಹೇಳುತ್ತಾರಲ್ಲ ಹೆಣ್ಣು ಮಕ್ಕಳನ್ನು ನಾವು  ಕೌಟುಂಬಿಕವಾಗಿ, ಸಾಮಾಜಿಕವಾಗಿ,ಆರ್ಥಿಕವಾಗಿ ಸಲಹುವುದಿಲ್ಲವೇ ಎಂದು ಕೇಳಬಹುದು. ಖಂಡಿತವಾಗಿಯೂ ನಿಮ್ಮ ಮಾತು ಸರಿ.

ನೀವು ಹೆಣ್ಣು ಮಕ್ಕಳನ್ನು ತಾಯಿಯಾಗಿ, ಒಡಹುಟ್ಟಿದವಳಾಗಿ, ಪತ್ನಿಯಾಗಿ, ಮಗಳಾಗಿ, ಸ್ನೇಹಿತರಾಗಿ ಖಂಡಿತವಾಗಿಯೂ ಸಲ್ಲಿಸುತ್ತೀರಿ ಆದರೆ ಓರ್ವ ಹೆಣ್ಣು ಮಕ್ಕಳನ್ನು ಕೇವಲ ಓರ್ವ ಸ್ತ್ರೀಯಾಗಿ 

ಭಾವಿಸಿ ಸಲಹುತ್ತೀರಾ ಎಂದು ಕೇಳಿದರೆ ನಿಮ್ಮ ಉತ್ತರ ಗೊಂದಲದಿಂದ ಕೂಡಿರುತ್ತದೆ ಅಥವಾ ಉತ್ತರಿಸಲು ಪದಗಳು ದೊರೆಯದೆ ಕಕ್ಕಾಬಿಕ್ಕಿ ಆಗುತ್ತೀರಿ.

ನಿಜ ಪುರುಷ ಸ್ವಾಮ್ಯದ ನಮ್ಮ ಈ ಸಮಾಜದಲ್ಲಿ ಪುರುಷ ಜನಾಂಗಕ್ಕೆ ಪೂರಕವಾಗಿ ಕಾರ್ಯ ನಿರ್ವಹಿಸುವವರೆಗೆ ಮಾತ್ರ ಹೆಣ್ಣು ಮಕ್ಕಳನ್ನು ಪುರಸ್ಕರಿಸಲಾಗುತ್ತದೆ ಆಕೆಯ ಎಲ್ಲ ಪಾತ್ರಗಳನ್ನು ಕೊಂಡಾಡಲಾಗುತ್ತದೆ. ಒಂದೊಮ್ಮೆ ಆಕೆ ತನ್ನ ಅಸ್ತಿತ್ವದ ಕುರಿತು ಮಾತನಾಡಿದರೆ ತನ್ನ ವೈಯುಕ್ತಿಕ ಹಿತಾಸಕ್ತಿಯ ಕುರಿತು ಯೋಚಿಸಿದಾಗ ಆಕೆ ಸ್ವಾರ್ಥಿ ಎನಿಸಿಕೊಳ್ಳುತ್ತಾಳೆ. ಕುಟುಂಬದ ಎಲ್ಲರಿಗಿಂತ ಮೊದಲು ತನ್ನ ಯೋಗ ಕ್ಷೇಮವನ್ನು ತನ್ನ ಇಷ್ಟಾನಿಷ್ಠಗಳನ್ನು ಅರಿತು ಅದರಂತೆ ನಡೆದುಕೊಳ್ಳುವ ಹೆಣ್ಣು ಮಕ್ಕಳನ್ನು ಕೆಟ್ಟದಾಗಿ ಬಿಂಬಿಸುತ್ತಾರೆ.

 ಬಹುಶಹ ಪುರುಷ ಸ್ವಾಮ್ಯದ ಈ ಸಮಾಜದಲ್ಲಿ ಪುರುಷರ ಈ ಧೋರಣೆಗೆ ಕೆಲಮಟ್ಟಿಗೆ ಅಲ್ಲಲ್ಲ… ಬಹಳಷ್ಟು ಮಟ್ಟಿಗೆ ಹೆಣ್ಣು ಮಕ್ಕಳು ಕೂಡ ಕಾರಣ.

ಅವರೆಂದೂ ತಮ್ಮ ಕುರಿತು ತಾವು ಚಿಂತಿಸುವುದಿಲ್ಲ ಕುಟುಂಬದ ಸರ್ವ ಸದಸ್ಯರ ಆಗು ಹೋಗುಗಳಿಗೆ ತಾವೇ ಜವಾಬ್ದಾರಿಗಾಗಿ ಆ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಾ ತಾವು ಕೂಡ ಓರ್ವ ಸ್ವತಂತ್ರ ವ್ಯಕ್ತಿ ತಮಗೂ ಒಂದು ವ್ಯಕ್ತಿತ್ವವಿದೆ ತಮಗೂ ಕೂಡ ತಮ್ಮದೇ ಆದ ರೀತಿಯಲ್ಲಿ ಬದುಕಿನಲ್ಲಿ ಮುಂದುವರೆಯುವ, ಏನನ್ನಾದರೂ ಸಾಧಿಸುವ ಹಕ್ಕಿದೆ ಎಂಬುದನ್ನು ಅವರು ಮರೆತಿರುತ್ತಾರೆ…. ಅಕಸ್ಮಾತ್ ನೆನಪಿಟ್ಟು ತಮ್ಮ ಹಿತಾಸಕ್ತಿಯ ಕುರಿತು ಮಾತನಾಡಿದಾಗ ಗಂಡ, ಮನೆ, ಮಕ್ಕಳು, ಸಂಸಾರದ ಕುರಿತು ಕಿಂಚಿತ್ತು ಕಾಳಜಿ ಇಲ್ಲದ ಬೇಜವಾಬ್ದಾರಿ ಮನುಷ್ಯಳು ಎಂದು ಆಕೆಯನ್ನು ಈ ಸಮಾಜ ಬಿಂಬಿಸುತ್ತದೆ…. ಉದ್ದೇಶಪೂರ್ವಕವಾಗಿ ಅದನ್ನು ತಳ್ಳಿ ಹಾಕಲಾಗುತ್ತದೆ.

ಹೆಣ್ಣು ಸರ್ವ ಶಕ್ತಿವಂತಳು ನಿಜ… ಆಕೆ ಏಕಕಾಲದಲ್ಲಿ ಮನೆ, ಮಕ್ಕಳು, ಪತಿ ಕುಟುಂಬ ಹಾಗೂ ತನ್ನ ವೃತ್ತಿಯನ್ನು ವಿಭಾಯಿಸಬಲ್ಲಳು. ಎಲ್ಲವನ್ನು ನಿಭಾಯಿಸಿಯು ಕೂಡ ಪತಿಯ ಅಸಡ್ಡೆ,, ಅಸಹನೆಗಳು ಅತ್ತೆ ಮಾವರ ಕಿರಿಕಿರಿ ಮತ್ತು ಹೀಯಾಳಿಕೆಗಳು, ಮಕ್ಕಳ ಅವಕಾಶವಾದಿತನಗಳು ಆಕೆಯ ಮನಸ್ಸನ್ನು ಇನ್ನಿಲ್ಲದಂತೆ ಕಾಡುತ್ತವೆ. 

ಆರ್ಥಿಕ ಭದ್ರತೆ ಆಕೆಯಲ್ಲಿ ಧೈರ್ಯವನ್ನು ತುಂಬಬಹುದು, ಆದರೆ ಕೌಟುಂಬಿಕ ಭದ್ರತೆ ಆಕೆಗೆ ಭಾವನಾತ್ಮಕ ಬೆಂಬಲ ನೀಡುತ್ತದೆ… ಇನ್ನಷ್ಟು ಸಶಕ್ತಳಾಗಿ ಕಾರ್ಯನಿರ್ವಹಿಸಲು ಆಕೆಗೆ ಸಹಾಯಕವಾಗುತ್ತದೆ. ಆತ್ಮ ತೃಪ್ತಿಯಿಂದ ಜೀವಿಸಲು ಅನುವು ಮಾಡಿಕೊಡುತ್ತದೆ.

 ಈ ಪ್ರಕೃತಿ ಗಂಡು ಹೆಣ್ಣಿನಲ್ಲಿ ತಾರತಮ್ಯವನ್ನು ಮಾಡಿಲ್ಲ. ಬಹುಶಹ ಪುರುಷನಿಗಿಂತ ತುಸು ಹೆಚ್ಚಿನದನ್ನು ಆಕೆಗೆ ನೀಡಿದೆ   ಬದುಕು ತನಗೆ ಕೊಡ ಮಾಡಿರುವ ಎಲ್ಲ ಪಾತ್ರಗಳನ್ನು ನಿಭಾಯಿಸುತ್ತ ಆಕೆ ತನ್ನದೇ ಆದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಅನುವು ಮಾಡಿಕೊಡಿ.

ಬಹಳಷ್ಟು ಬಾರಿ ನಾವು ನೋಡಿರುವ ಕುಟುಂಬಗಳಲ್ಲಿ ಹೆಣ್ಣು ಮಕ್ಕಳನ್ನು ಅತ್ಯಂತ ರಕ್ಷಣಾತ್ಮಕವಾಗಿ ಬೆಳೆಸುತ್ತಾರೆ. ಯಾವುದೇ ರೀತಿಯ ತೊಂದರೆಗಳು ಅವರನ್ನು ಸೋಕದಂತೆ ಕಣ್ಣ ರೆಪ್ಪೆಯ ಹಾಗೆ ಅವರನ್ನು ಕಾಯುತ್ತಾರೆ.ಆದರೆ ಹೀಗೆ ಮಾಡುವ ಮೂಲಕ ಅವರು ಆಕೆಯಲ್ಲಿರುವ ಸ್ವಾಭಾವಿಕ ಪರಿಸ್ಥಿತಿಗಳನ್ನು ಎದುರಿಸುವಂತಹ ಗುಣವನ್ನು ಮೊಟಕು ಮಾಡುತ್ತಾರೆ…. ಇದು ಖಂಡಿತವಾಗಿಯೂ ಸಲ್ಲದು.

ಒಟ್ಟಿನಲ್ಲಿ ಹೆಣ್ಣು ಮಕ್ಕಳನ್ನು ಅವರು ಇರುವಂತೆಯೇ ಅವರನ್ನು ಒಪ್ಪಿಕೊಳ್ಳಬೇಕು. ಪೂಜ್ಯಶ್ರೀ ಸ್ವಾಮಿ ವಿವೇಕಾನಂದರು ಒಂದೊಮ್ಮೆ ಹೆಣ್ಣು ಮಕ್ಕಳ 

ಧೀ ಶಕ್ತಿಯ ಕುರಿತು ಹೇಳುವಾಗ ನೀವು ಹೆಣ್ಣು ಮಕ್ಕಳನ್ನು ಶಿಕ್ಷಿತರನ್ನಾಗಿ ಮಾಡಿ ಸಾಕು ಉಳಿದುದನ್ನು ಅವರೇ ನಿಭಾಯಿಸುತ್ತಾರೆ ಎಂದು ಹೇಳಿದರಂತೆ. ಅಷ್ಟು ಮಟ್ಟಿಗಿನ ವಿಶ್ವಾಸ ಅವರಿಗೆ ಭಾರತದ ಮಹಿಳಾ ಶಕ್ತಿಯ ಮೇಲೆ ಇತ್ತು. ಪ್ರತಿಯೊಬ್ಬ ತಂದೆಗೂ ತನ್ನ ಮಗಳ ಮೇಲೆ ಆ ರೀತಿಯ ವಿಶ್ವಾಸ ನಂಬಿಕೆ ಮತ್ತು ಭರವಸೆ ಇರಲೇಬೇಕು. ಹಾಗೆಯೇ ತನ್ನ ಮನೆ ಮನವನ್ನು ಬೆಳಗಲು ಬರುವ ಹೆಣ್ಣು ಮಕ್ಕಳ ಮೇಲೆ ಕೂಡ ಇರಲೇಬೇಕು.

ಹೆಣ್ಣು ಮಕ್ಕಳು ಜಗವನ್ನು ಬೆಳಗುವ ಸೂರ್ಯನ ಹಾಗೆ. ಯಾವ ರೀತಿ ಸೂರ್ಯ ಅದೆಷ್ಟೇ ಬೈಸಿಕೊಂಡರೂ ಕೂಡ ತನ್ನನ್ನು ತಾನು ಉರಿಸಿಕೊಂಡು ಜಗಕೆಲ್ಲ ಬೆಳಕು, ಅನ್ನ, ಆಹಾರ ಹಾಗೂ ಬದುಕನ್ನು ನೀಡಲು ಕಾರಣನಾಗುತ್ತಾನೆಯೋ ಹಾಗೆಯೇ ಹೆಣ್ಣು ಮಕ್ಕಳು ಕೂಡ.

ಅವರನ್ನು ಬೇಶರತ್ತಾಗಿ ಗೌರವಿಸಿ, ಕರಾರುಗಳಿಲ್ಲದೆ ಪ್ರೀತಿಸಿ ತಕರಾರು ಮಾಡದೆ ಬಾಳಿಸಿ…. ಅವರ ನಗುವಿನಲ್ಲಿ ಜಗದ ಅಂದ ಅಡಗಿದೆ, ಅವರ ನೋವಿನಲ್ಲಿ ಜಗತ್ತು ಅಂಧಕಾರದಲ್ಲಿ ಮುಳುಗುತ್ತದೆ ಎಂಬ ಸತ್ಯವನ್ನು ಅರಿಯಿರಿ….  ಪ್ರತಿ ಮನೆಯಲ್ಲೂ ಮಹಿಳೆ ಕೇವಲ ತನ್ನ ಪ್ರೀತಿ ಮಮತೆ, ಅಕ್ಕರೆ, ಧೈರ್ಯ, ಸಹನೆ, ಪ್ರತಿಭೆ, ಶಾಂತಿ, ತಾಳ್ಮೆ ಸೌಂದರ್ಯ ಅಂದ ಚಂದಗಳ ಪ್ರತಿರೂಪವಾಗಲ್ಲದೆ  ತಾನು ತಾನಾಗಿರುವ ಸ್ವತಂತ್ರ ವ್ಯಕ್ತಿಯಾಗಿ ರೂಪುಗೊಳ್ಳಲು ಕೂಡ ಅವಕಾಶ ಮಾಡಿಕೊಡಿ….ಅದುವೇ ನಿಜವಾದ ಮಹಿಳಾ ದಿನಾಚರಣೆಗೆ ನಾಂದಿಯಾಗಲಿ.

 ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್ 

  • ಡಿಕೆಶಿ ಪರವಾಗಿ ನಾವಿದ್ದೇವೆ: ಸತೀಶ್ ಜಾರಕಿಹೊಳಿ
    by Team Varthaman
  • ರಿಯಲ್ ಎಸ್ಟೇಟ್ ಏಜೆಂಟ್ ಅಪಹರಣೆ
    by Team Varthaman
  • ದ್ವೇಷಕ್ಕೆ ಬೆಂಕಿ ಹಚ್ಚಬೇಕು
    by Team Varthaman
  • ಮಹಿಳಾ ದಿನಾಚರಣೆ
    by Team Varthaman
  • ಮಹಿಳಾ ದಿನಾಚರಣೆ ವಿಶೇಷ
    by Team Varthaman
ಹಸಿರಲ್ಲಿ ಒಂದಾದ ಸಾಲುಮರದ ತಿಮ್ಮಕ್ಕ
ಆತ್ಮಹತ್ಯೆ …. ಆಯ್ಕೆಯೇ ಅಲ್ಲ.
ಅಕ್ಷಯ ತೃತೀಯ 2025: ಅದೃಷ್ಟ ಮತ್ತು ಸಮೃದ್ಧಿಗಾಗಿ ಈ 6 ವಸ್ತುಗಳನ್ನು ಖರೀದಿಸಿ!
ಕೃಷ್ಣಾವತಾರ ಪ್ರೇರಣೆ.
ಜನರ ಅಸಹಾಯಕತೆಯಲ್ಲೂ ದುಡ್ಡು ಮಾಡುವ ದಗಲ್‌ಬಾಜಿಗಳು….!!
TAGGED:womens Day
Share This Article
Facebook Email Print
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
IPL 2025SportsTrending

IPL 2025 – ಆರ್‌ಸಿಬಿಗೆ ಶುಭಾರಂಭ, ಹಾಲಿ ಚಾಂಪಿಯನ್‌ ಕೆಕೆಆರ್‌ಗೆ ಸೋಲು!

Team Varthaman
Team Varthaman
March 22, 2025
ನೇಪಾಳದಲ್ಲಿ ಏ.22 ರಂದು ಮಾಳವಿ ಮಂಜುನಾಥ್ ಅವರಿಂದ ಪಿಟೀಲು ವಾದನ
ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧದ ಡಿನೋಟಿಫಿಕೇಷನ್ ಪ್ರಕರಣ
KSRTC ಬಸ್ – ಲಾರಿ ಡಿಕ್ಕಿ: ಚಾಲಕ ಸಾವು ,17 ಮಂದಿಗೆ ಗಾಯ
ಧರ್ಮಸ್ಥಳ ಪ್ರಕರಣ:  ದೂರುದಾರ ಅನಾಮಿಕನ ಹೆಸರು ಬಯಲು & ಬಂಧನ
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?