By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
    ArticlesShow More
    ಅಜವಾನ ಅಜೀರ್ಣಕ್ಕೆ ಪ್ರಕೃತಿ ನೀಡಿದ ವರದಾನ
    February 1, 2026
    ಹೀಗೆ ಬಂದು ಹಾಗೆ ಹೋಗುವ ಸ್ನೇಹ ಸಾವಿರ
    February 1, 2026
    ಸಾವು ಬದುಕಿನ ನಡುವೆ
    January 28, 2026
    ವಾಸ್ತವ ವರ್ತಮಾನ
    January 24, 2026
    ಅರೋಗ್ಯ ಭಾಗ್ಯ
    January 24, 2026
  • Sports
  • National
  • International
  • Crime
Reading: ಆರೋಗ್ಯಕ್ಕೆ ಅಭ್ಯಂಜನ
Share
Font ResizerAa
VarthamanVarthaman
  • Home
  • Karnataka
  • Articles
  • Sports
  • National
  • International
  • Crime
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
  • Sports
  • National
  • International
  • Crime
Follow US
Varthaman > Karnataka – Latest Breaking News > Articles > ಆರೋಗ್ಯಕ್ಕೆ ಅಭ್ಯಂಜನ
ArticlesTrending

ಆರೋಗ್ಯಕ್ಕೆ ಅಭ್ಯಂಜನ

Team Varthaman
Last updated: October 18, 2025 10:04 AM
Team Varthaman
Published: October 18, 2025
Share
SHARE

ಆರೋಗ್ಯ ವೃದ್ಧಿ ಹಾಗೂ ರಕ್ಷಣೆಗೆ ಕಲಶಪ್ರಾಯವಾದ ವಿಚಾರವೆಂದರೆ ಅಭ್ಯಂಗ ಅಥವಾ ಅಭ್ಯಂಜನ.
ಅಭ್ಯಂಗ ಎಂಬ ಪದದ ಅರ್ಥ “ಇಡೀ ದೇಹಕ್ಕೆ ಎಣ್ಣೆ ಹಚ್ಚುವುದು.” ಅಭ್ಯಂಗಸ್ನಾನ ಎಂದರೆ ಸೂರ್ಯೋದಯಕ್ಕೆ ಮುಂಚೆ, ಇಡೀ ದೇಹಕ್ಕೆ ಎಣ್ಣೆ ಹಚ್ಚಿ, ಅದು ಚರ್ಮದಲ್ಲಿ ಹೀರಲ್ಪಡುವವರೆಗೆ ಮಸಾಜ್ ಮಾಡಿ, ನಂತರ ಬೆಚ್ಚಗಿನ ನೀರಿನ ಸ್ನಾನ. ಈ ಪ್ರಕ್ರಿಯೆಯಲ್ಲಿ ಮೊದಲು ದೇಹದ ಮೇಲೆ ಎಣ್ಣೆಯನ್ನು ಹಚ್ಚಿ ಮೃದುವಾದ ಮಸಾಜ್ ಮಾಡಿ ಸ್ನಾನಮಾಡುವುದೇ ” ಅಭ್ಯಂಗ ಸ್ನಾನ”. 

Join WhatsApp Group

ಅಭ್ಯಂಗಸ್ನಾನವು ಚರ್ಮದಲ್ಲಿ ಎಣ್ಣೆಯನ್ನು ಹೀರಿಕೊಳ್ಳಲು ಅನುಕೂಲವಾಗುವಂತೆ ಎಣ್ಣೆ ಮಸಾಜ್ ಅನ್ನು ಒಳಗೊಂಡಿದೆ. ಎಣ್ಣೆಯನ್ನು ಚರ್ಮದಲ್ಲಿ ಹೀರಿಕೊಂಡ ನಂತರ, ಬೆಚ್ಚಗಿನ ನೀರಿನ ಸ್ನಾನವನ್ನು ಮಾಡಲಾಗುತ್ತದೆ. ಚರ್ಮಕ್ಕೆ ಎಣ್ಣೆ ಹಚ್ಚುವುದರಿಂದ ಅದು ಸ್ಥಿತಿಸ್ಥಾಪಕತ್ವವನ್ನು ಉಳಿಸಿಕೊಳ್ಳುತ್ತದೆ. ಬೆಚ್ಚಗಿನ ನೀರು ದೇಹಕ್ಕೆ ಶುಭ ಮತ್ತು ಆಹ್ಲಾದಕರವಾಗಿರುತ್ತದೆ. ಎಣ್ಣೆ ಮಸಾಜ್ ನಂತರ ಸ್ನಾನ ಮಾಡುವುದರಿಂದ ಚರ್ಮ ಮತ್ತು ಕೂದಲಿಗೆ ಅಗತ್ಯವಿರುವಷ್ಟು ಎಣ್ಣೆಯುಕ್ತತೆ ಮಾತ್ರ ಉಳಿಯುತ್ತದೆ. ಆದ್ದರಿಂದ ಸ್ನಾನದ ಮೊದಲು ಎಣ್ಣೆ ಮಸಾಜ್ ಅಗತ್ಯ. ಸ್ನಾನದ ನಂತರ ಚರ್ಮಕ್ಕೆ ಎಣ್ಣೆ ಹಚ್ಚುವುದು ಪ್ರಯೋಜನಕಾರಿಯಲ್ಲ.

ಅಭ್ಯಂಗಕ್ಕೆ ಸೂಕ್ತ ಎಣ್ಣೆಗಳು

ಎಳ್ಳೆಣ್ಣೆ, ನೀಲಗಿರಿ ಎಣ್ಣೆ, ಕೊಬ್ಬರಿ ಎಣ್ಣೆ, ಹರಳೆಣ್ಣೆ, ಸೂರ್ಯಕಾಂತಿ ಎಣ್ಣೆ ಸೂಕ್ತ. ಈ ಎಣ್ಣೆಗಳು ದೇಹವನ್ನು ಶುದ್ಧೀಕರಿಸಲು ಮತ್ತು ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತವೆ. ಅವು ಸ್ನಾಯುಗಳು ಮತ್ತು ಕೀಲುಗಳನ್ನು ವಿಶ್ರಾಂತಿ ಮಾಡಲು ಸಹ ಸಹಾಯ ಮಾಡುತ್ತವೆ. ದೇಸಿ ತುಪ್ಪ ಸೇರಿದಂತೆ ಎಣ್ಣೆಯಿಂದ ಸ್ನಾನ ಮಾಡಲು ಬಳಸಬಹುದಾದ ಹಲವಾರು ಎಣ್ಣೆಗಳಿದ್ದರೂ, ನೀಲಗಿರಿ ಎಣ್ಣೆ ಮತ್ತು ಎಳ್ಳೆಣ್ಣೆ ಹಲವಾರು ಪ್ರಯೋಜನಗಳನ್ನು ಹೊಂದಿರುವುದರಿಂದ ಎಲ್ಲಾ ಎಣ್ಣೆಗಳಲ್ಲಿ ಅಭ್ಯಂಗಕ್ಕೆ ಶ್ರೇಷ್ಠವಾಗಿದ್ದು ಇವುಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ.

ಯಾವ ಸಮಯ ಸೂಕ್ತ?

ಬೆಳಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಅಂದರೆ 4.30– 5.30 ರೊಳಗೆ ಏಳುವುದು ಉತ್ತಮ ಎನ್ನುತ್ತದೆ ಶಾಸ್ತ್ರ.  ಬ್ರಹ್ಮಮುಹೂರ್ತದ ಸಮಯದಲ್ಲಿ ಭೂಮಿಯ ಕಕ್ಷೆಯಲ್ಲಿ ದೈವಿಕ ತೇಜ ಪ್ರಧಾನವಾದ ಚೈತನ್ಯ ಆವರ್ತನಗಳ ಪ್ರವೇಶವು ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಆದ್ದರಿಂದ, ಬ್ರಹ್ಮಮುಹೂರ್ತದ ಸಮಯದಲ್ಲಿ ದೇಹವನ್ನು ಪರಿಮಳಯುಕ್ತ ಎಣ್ಣೆಯಿಂದ ಮಸಾಜ್ ಮಾಡುತ್ತಾರೆ..

ಬೆಳಿಗ್ಗೆ 5–6ರ ಒಳಗೆ ಅಭ್ಯಂಗ ಮಾಡುವುದು ಒಳಿತು. ಆಗಲಿಲ್ಲ ಎಂದರೆ ಚಿಂತೆ ಬೇಡ. ದಿನದ 24 ಗಂಟೆಗಳಲ್ಲಿ ಸೂಕ್ತ ಸಮಯವನ್ನು ನೀವೇ ಆರಿಸಿಕೊಳ್ಳಿ. ಆದರೆ ಒಂದು ಮುಖ್ಯ ವಿಚಾರ. ಆಹಾರ ಸೇವಿಸಿದ ತಕ್ಷಣ ಅಭ್ಯಂಗ ಮಾಡುವಂತಿಲ್ಲ. ಆಹಾರ ಜೀರ್ಣಗೊಂಡ ಬಳಿಕ, ಉದಾ: ಬೆಳಿಗ್ಗೆ 11–12, ಸಂಜೆ 5–6, ಹೀಗೆ ಅವರವರಿಗೆ ಸೂಕ್ತವಾದ ಸಮಯದಲ್ಲಿ ಆರೋಗ್ಯ ಹಿತಕ್ಕಾಗಿ ಅಭ್ಯಂಗ ಆಚರಣೆ ಉತ್ತಮ.

ಅಭ್ಯಂಗ ಸ್ನಾನವನ್ನು ಮಾಡಲೇ ಬೇಕಾದ ವರ್ಷದ ಅತ್ಯುತ್ತಮ ಐದು ದಿನಗಳು

  1. ಹೊಸ ವರ್ಷದ ಆರಂಭದಿನ / ಯುಗಾದಿ (ಸಂವತ್ಸರ),
  2. ವಸಂತ (ವಸಂತ) ಋತುವಿನ ಆಚರಣೆಗಳ ಮೊದಲ ದಿನ.
  3. ದೀಪಾವಳಿಯ ಮೂರು ದಿನಗಳು.

ಅಭ್ಯಂಗ ಸ್ನಾನ ಮಾಡುವ ವಿಧಾನ

ಸೂಕ್ತ ಎಣ್ಣೆಯನ್ನು (ಒಂದು ಭಾಗ ಎಳ್ಳೆಣ್ಣೆಗೆ ಒಂದು ಭಾಗ ಕೊಬ್ಬರಿ ಎಣ್ಣೆ ಬೆರೆಸಿ ಬಳಸುವುದು ಸರ್ವಕಾಲಕ್ಕೂ ಹಿತ), ಕೇವಲ 4-5 ಚಮಚ ತೆಗೆದುಕೊಂಡು ಸ್ವಲ್ಪ ಬಿಸಿ ಮಾಡಿ ಅದನ್ನು ಸೂಕ್ತ ರೀತಿಯಲ್ಲಿ ದೇಹದ ಅಂಗಗಳಿಗೆ ಅನುಲೋಮ ರೀತಿಯಲ್ಲಿ ಅಂದರೆ ಮೇಲಿನಿಂದ ಕೆಳಕ್ಕೆ ಹಾಗೂ ಸಂಧಿಗಳಲ್ಲಿ ವರ್ತುಲಾಕಾರವಾಗಿ ಎಣ್ಣೆಯನ್ನು ಹಚ್ಚಿಕೊಳ್ಳುವುದು ಸೂಕ್ತ. ತಲೆಗೆ, ಕಿವಿಗಳಿಗೆ ಹಾಗೂ ಪಾದಗಳಿಗೆ ಸೂಕ್ತ ರೀತಿಯಲ್ಲಿ ಅಭ್ಯಂಗವನ್ನು ಮಾಡಿಕೊಳ್ಳಬೇಕು. ಹಲವರು ಕಿವಿಗಳಿಗೆ ಎಣ್ಣೆ ಹಾಕಿಕೊಳ್ಳುವುದಕ್ಕೆ ಹೆದರುತ್ತಾರೆ.

ಯಾವುದೇ ಭಯ ಬೇಡ. ಕೊಬ್ಬರಿ ಅಥವ ಎಳ್ಳೆಣ್ಣೆಯನ್ನು 5-6 ತೊಟ್ಟು ಬೆಚ್ಚಗೆ ಮಾಡಿ ಕಿವಿಗಳಿಗೆ ಹಾಕಿಕೊಳ್ಳುವುದು ಅತಿ ಮುಖ್ಯ. ಕಿವಿ ಸೋರಿಕೆಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಮಾತ್ರ ಇದು ವರ್ಜ್ಯ. ಕಿವಿಗಳಿಗೆ ಎಣ್ಣೆ ಸ್ಪರ್ಶವಾದರೆ ಸಹಜವಾಗಿ ಕಿವುಡುತನ ಬಾಧಿಸುವುದಿಲ್ಲ. ಪಾದಗಳಿಗೆ ಅಭ್ಯಂಗ ಮಾಡುವುದರಿಂದ ಚಲನೆ ಮತ್ತು ದೃಷ್ಟಿಗೆ ಲಾಭದಾಯಕ. ಎಲ್ಲಕಿಂತ ಮುಖ್ಯವಾಗಿ ಸಕಲ ಜ್ಞಾನೇಂದ್ರಿಯಗಳು ಶಿರದಲ್ಲೇ ವಾಸವಿರುವ ಕಾರಣ ಅವುಗಳ ಉತ್ತಮ ಕಾರ್ಯನಿರ್ವಹಣೆಗೆ ಶಿರೋಭ್ಯಂಗ ಪ್ರಮುಖವಾದುದು.

ಯಾರಿಗೆ ಅಭ್ಯಂಗ ಹಿತವಲ್ಲ

ಜ್ವರದಿಂದ ಬಳಲುತ್ತಿರುವವರು, ಶ್ವಾಸಕೋಶ ಸಮಸ್ಯೆಯಿರುವವರು, ಆಮವಾತ (ರುಮಟೈಡ್ ಸಂಧಿವಾತ) ಉಳ್ಳವರು, ಸ್ನಾನ ಮಾಡಿಕೊಳ್ಳಲು ಬಿಸಿನೀರಿಗೆ ಕೊರತೆಯುಳ್ಳವರು ಅಭ್ಯಂಗಕ್ಕೆ ವರ್ಜ್ಯರು.

ಅಭ್ಯಂಜನ ಸ್ನಾನದಿಂದ ನಮ್ಮ ಆರೋಗ್ಯಕ್ಕೆ ಅನೇಕ ಅನುಕೂಲಕರ ಪ್ರಯೋಜನಗಳು ಉಂಟಾಗುತ್ತವೆ. ಬನ್ನಿ ಅಭ್ಯಂಜನ ಸ್ನಾನ ದಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಎಂಬುದನ್ನು ಒಂದೊಂದಾಗಿ ತಿಳಿದುಕೊಳ್ಳುತ್ತಾ ಸಾಗೋಣ..

  • ಎಣ್ಣೆಯ ಮಜ್ಜನ ಮಾಡಿಕೊಳ್ಳುವುದರಿಂದ ಚರ್ಮದ ಕಾಂತಿಯು ಹೆಚ್ಚುತ್ತದೆ. ಇದಲ್ಲದೆ ಚರ್ಮದ ಮೇಲೆ ಮೂಡಿರುವ ಸುಕ್ಕು, ಸ್ಟ್ರೆಚ್ ಮಾರ್ಕ್ ನಿವಾರಣೆಯಾಗುತ್ತದೆ.
  • ಎಣ್ಣೆಯ ಸ್ನಾನದಿಂದ ದೇಹದ ಉಷ್ಣತೆ ನಿಯಂತ್ರಣದಲ್ಲಿ ಇರುತ್ತದೆ. ಇದಲ್ಲದೇ ಚಳಿಗಾಲವು ಆರಂಭವಾಗಿರುವುದರಿಂದ ಚರ್ಮದಲ್ಲಿ ಕಾಣಿಸಿಕೊಳ್ಳುವ ಬಿರುಕುಗಳು ನಿವಾರಣೆಯಾಗುತ್ತದೆ.
  • ಅಭ್ಯಂಜನ ಸ್ನಾನ ಮಾಡುವುದರಿಂದ ದೇಹದಲ್ಲಿ ಶೇಖರಣೆಯಾದ ಜಿಡ್ಡಿನ ಅಂಶ ದೂರವಾಗುತ್ತದೆ. ಇದರೊಂದಿಗೆ ದೇಹದ ರೋಗನಿರೋಧಕ ಶಕ್ತಿಯು ವೃದ್ಧಿಯಾಗಲು ಸಹಕಾರಿಯಾಗಿದೆ.
  • ತಲೆ ನೋವು, ಕೈ-ಕಾಲು ನೋವು, ದೇಹದ ಸೆಳೆತದ ತೊಂದರೆಗಳು ಅತೀ ಶೀಘ್ರದಲ್ಲಿಯೇ ನಿವಾರಣೆಯಾಗುತ್ತದೆ. ನೋವು ಕಾಡುತ್ತಿರುವ ಭಾಗಕ್ಕೆ ಎಣ್ಣೆಯನ್ನು ಹಚ್ಚಿಕೊಂಡು ಸ್ವಲ್ಪ ಸಮಯದ ನಂತರ ಸ್ನಾನವನ್ನು ಮಾಡುವುದರಿಂದ ಮುಕ್ತಿ ದೊರೆಯುತ್ತದೆ.
  • ಅಸ್ವಸ್ಥತೆ, ಕೂದಲಿನ ಸಮಸ್ಯೆ, ದೃಷ್ಟಿ ದೋಷ ಸಮಸ್ಯೆಗಳಿಂದ ನಮ್ಮನ್ನು ದೂರಗೊಳಿಸಿ, ಆರೋಗ್ಯ ವೃದ್ಧಿಗೆ ಸಹಕಾರಿಯಾಗಿದೆ.
  • ಕಷ್ಟದ ಕೆಲಸಗಳನ್ನು ಮಾಡಿ, ಬಳಲಿರುವ ಮಾಂಸಖಂಡಗಳಿಗೆ ಪುನಶ್ಚೇತನ ನೀಡಲು ಅಭ್ಯಂಜನ ಸ್ನಾನ ತುಂಬಾ ಸಹಕಾರಿಯಾಗಿದೆ.
  • ಎಣ್ಣೆಯ ಸ್ನಾನದಿಂದ ದೇಹದ ಮೂಳೆಗಳು ಬಲಗೊಳ್ಳುತ್ತವೆ. ನಮ್ಮ ದೇಹಕ್ಕೆ ಬೇಕಾದಂತಹ ಪುಷ್ಟಿಕರವಾದ ಆರೋಗ್ಯ ನೀಡಲು ಇದು ಸಹಕಾರಿಯಾಗಿದೆ.
  • ಎಣ್ಣೆಯ ಸ್ನಾನವು ನರಗಳ ಚೇತರಿಕೆಗೆ ಸಹಕಾರಿಯಾಗುತ್ತದೆ. ನರಗಳ ಸಮಸ್ಯೆಯಿಂದ ಬಳಲುವವರು ಪ್ರತಿದಿನ ಎಣ್ಣೆಯಿಂದ ಮಸಾಜ್ ಮಾಡಿಕೊಂಡು ಸ್ನಾನ ಮಾಡುವುದರಿಂದ ಶೀಘ್ರವೇ ಗುಣವಾಗುವುದು.
  • ಎಣ್ಣೆಯ ಸ್ನಾನವನ್ನು ಮಾಡುವುದರಿಂದ, ಪಾದಗಳಿಗೆ ಎಣ್ಣೆಯನ್ನು ಹಚ್ಚಿಕೊಳ್ಳುವುದರಿಂದ ನಿದ್ರೆಯ ಸಮಸ್ಯೆ ದೂರವಾಗುತ್ತದೆ. ಇದರಿಂದಾಗಿ ಉತ್ತಮ ನಿದ್ರೆಯು ಬರುತ್ತದೆ.
  • ನೀಲಗಿರಿ ಎಣ್ಣೆಯನ್ನು ಹಚ್ಚಿ ಮಾಡುವ ಅಭ್ಯಂಗವು ಸ್ನಾಯು ನೋವು ಮತ್ತು ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ . ಉಸಿರಾಟದ ಖಾಯಿಲೆಗಳಿಗೆ ಚಿಕಿತ್ಸೆ ನೀಡಲು ನೀಲಗಿರಿ ಎಣ್ಣೆಯನ್ನು ಶತಮಾನಗಳಿಂದ ಬಳಸಲಾಗುತ್ತಿದೆ
  • ಸೌಂದರ್ಯವರ್ಧಕಗಳಲ್ಲಿ ಬಳಸಲಾಗುವ ಅತ್ಯಂತ ಜನಪ್ರಿಯ ಎಣ್ಣೆಗಳಲ್ಲಿ ಒಂದಾಗಿರುವ ನೀಲಗಿರಿ ಎಣ್ಣೆಯನ್ನು ಹಚ್ಚಿ ಮಾಡಿದ ಸ್ನಾನವು ಚರ್ಮದ ಶುಷ್ಕತೆ ಮೊಡವೆಗಳ ಗುರುತು ಹಾಗೂ ಕಲೆಯನ್ನು ಹೋಗಲಾಡಿಸುತ್ತದೆ.
  • ಪ್ರಾಚೀನ ಕಾಲದಿಂದಲೂ ಎಳ್ಳೆಣ್ಣೆಯನ್ನು ನಂಜುನಿರೋಧಕವಾಗಿ ಬಳಸಲಾಗುತ್ತಿದೆ. ಕ್ಲಿಯೋಪಾತ್ರ ಕೂಡ ತನ್ನ ಚರ್ಮದ ಸ್ಥಿತಿಗೆ ಚಿಕಿತ್ಸೆ ನೀಡಲು ಇದನ್ನು ಬಳಸುತ್ತಿದ್ದರು. ಇಂದಿಗೂ, ಸೋಂಕುಗಳನ್ನು ತಡೆಗಟ್ಟಲು ಮತ್ತು ಗುಣಪಡಿಸುವಿಕೆಯನ್ನು ಉತ್ತೇಜಿಸಲು ಅಭ್ಯಂಗಕ್ಕೆ ಎಳ್ಳೆಣ್ಣೆಯನ್ನು ಬಳಸಲಾಗುತ್ತದೆ.
  • ಎಳ್ಳೆಣ್ಣೆಯನ್ನು ತಲೆಗೆ ಹಚ್ಚಿ ಸ್ನಾನ ಮಾಡುವುದರಿಂದ
    ಕೂದಲಿನ ಬೆಳವಣಿಗೆಯನ್ನು ಸುಧಾರಿಸಲು ಮತ್ತು ತಲೆಹೊಟ್ಟು ತಡೆಯಲು ಸಹಾಯ ಮಾಡುತ್ತದೆ ಎಂದು ತಿಳಿದುಬಂದಿದೆ.
  • ಜೀವನಶೈಲಿಗೆ ಸಂಬಂಧಿಸಿದ ಮಾನಸಿಕ ಒತ್ತಡಗಳಿಂದ ಬರುವ ಬಿ.ಪಿ., ಮಧುಮೇಹ, ಬಿಳಿಕೂದಲು, ಬಂಗು, ಸಂಧಿವಾತ, ಸೊಂಟನೋವು, ಮೈಕೈ ನೋವು ಇತ್ಯಾದಿ ಕಾಯಿಲೆಗಳನ್ನು ದೂರವಿಡುವಲ್ಲಿ ನಿಮಗೆ ಆಪ್ತ ಸಖನಂತೆ ಸಹಕರಿಸುವುದು ಅಭ್ಯಂಗ ಮಾತ್ರ. ಕ್ರಿಮಿಕೀಟಗಳು, ಬ್ಯಾಕ್ಟಿರಿಯ- ವೈರಸ್, ಫಂಗಸ್ ಇತ್ಯಾದಿಗಳು ಎಣ್ಣೆ ಸ್ಪರ್ಶಗೊಂಡರೆ ಅವು ಹೆಚ್ಚು ಕಾಲ ಉಳಿಯುವುದಿಲ್ಲ, ಇದು ಆಧುನಿಕ ವಿಜ್ಞಾನಿಗಳ ಸಂಶೋಧನೆ. ಹಾಗಾಗಿ ದೇಹದ ರಕ್ಷಣಾಕೋಟೆಯಂತಿರುವ ಚರ್ಮಕ್ಕೆ ಮತ್ತೊಂದು ಬಲಿಷ್ಠ ರಕ್ಷಾ ಕವಚವೇ ಅಭ್ಯಂಗ.

ನಿಜವಾದ ಆರೋಗ್ಯದ ಆನಂದವನ್ನು ಅನುಭವಿಸಬೇಕೆಂದರೆ ಪ್ರತಿನಿತ್ಯವಾಗಲಿ ಇಲ್ಲವೇ ದಿನ ಬಿಟ್ಟು ದಿನ ಅದೂ ಆಗಲಿಲ್ಲವೇ ವಾರಕ್ಕೆ ಕನಿಷ್ಠ ಒಂದೆರಡು ದಿನ ಎಣ್ಣೆ ಸ್ನಾನ ಮಾಡಿ ಉತ್ತಮ ಆರೋಗ್ಯವನ್ನು ಪಡೆಯಿರಿ.

ಸೌಮ್ಯ ಸನತ್.

  • ಅಜವಾನ ಅಜೀರ್ಣಕ್ಕೆ ಪ್ರಕೃತಿ ನೀಡಿದ ವರದಾನ
    by Team Varthaman
  • ಹೀಗೆ ಬಂದು ಹಾಗೆ ಹೋಗುವ ಸ್ನೇಹ ಸಾವಿರ
    by Team Varthaman
  • ಐಟಿ ದಾಳಿ ಭೀತಿ: ಕಾನ್ಫಿಡೆಂಟ್ ಅಧ್ಯಕ್ಷ ಡಾ.ಸಿ.ಜೆ.ರಾಯ್ ಆತ್ಮಹತ್ಯೆ
    by Team Varthaman
  • ಅಕ್ರಮ ವಲಸಿಗರ ಪತ್ತೆ–ಗಡಿಪಾರಿಗೆ ವಿಶೇಷ ತಂಡ ರಚನೆ: ರಾಜ್ಯ ಸರ್ಕಾರ
    by Team Varthaman
  • ತಿರುಪತಿ ಲಡ್ಡು ಕಲಬೆರಕೆ ಪ್ರಕರಣ: ₹234 ಕೋಟಿ ವಂಚನೆ ಬಯಲು
    by Team Varthaman
ನದಿಯಲ್ಲಿ ಈಜಲು ಹೋದ ಮೂವರು ಕಾಲೇಜು ವಿದ್ಯಾರ್ಥಿಗಳು ನೀರುಪಾಲು
ಮೂವರು ಐಎಎಸ್ ಅಧಿಕಾರಿಗಳ ವರ್ಗಾವಣೆ
ಅಮೆರಿಕ ಒತ್ತಡದ ನಡುವೆಯೂ ಭಾರತ–ರಷ್ಯಾ S-400 ಕ್ಷಿಪಣಿ ಒಪ್ಪಂದ ಚರ್ಚೆ
ಯುವ ಜನಾಂಗಕ್ಕೆ ತಾಯಿಯ ಮಹತ್ವದ ಅರಿವಿಲ್ಲವೇಕೆ?
ಜುಲೈ 25 ರಿಂದ 27ರವರೆಗೆ ಸೆಸ್ಕ್ ಆನ್‌ಲೈನ್‌ ಸೇವೆಗಳು ಅಲಭ್ಯ
TAGGED:HealthKannada ArticleOil bathಅಭ್ಯಂಜನ
Share This Article
Facebook Email Print
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
BengaluruKarnatakaWeather

ಭಾರಿ ಮಳೆ ಅಬ್ಬರ: ಹಲವು ಜಿಲ್ಲೆಗಳಿಗೆ ಅಲರ್ಟ್ ಘೋಷಣೆ

Team Varthaman
Team Varthaman
September 12, 2025
ಮೈಸೂರಿನಲ್ಲಿ ವೈಯಕ್ತಿಕ ದ್ವೇಷದಿಂದ ಯುವಕನ ಬರ್ಬರ ಹತ್ಯೆ
ಆರೋಗ್ಯಕಿಂ ಮಿಗಿಲೇನಿಹುದು
ಬೈಕ್–ಕೆಎಸ್‌ಆರ್‌ಟಿಸಿ ಬಸ್ ಅಪಘಾತ; ಮಹಿಳೆ ಮೃತ್ಯು
ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣ: ಗುರುತಿಸಿದ 13 ಸ್ಥಳಗಳಲ್ಲಿ ಅಗೆಯುವ ಕೆಲಸ ಪ್ರಾರಂಭ
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?