By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
    ArticlesShow More
    ಕೋಪವೆಂಬುದನರ್ಥ
    July 2, 2026
    ಉಡುಗೊರೆ ಹೊರೆಯಾಗದಿರಲಿ
    May 16, 2026
    ಅಸಹಾಯಕತೆಗೆ ಸ್ಪಂದಿಸುವ ಕನ್ನಡಿಗರ ಸೌಜನ್ಯಕ್ಕೆ ಸಾಟಿಯುಂಟೇ……?
    May 16, 2026
    ” ರಿಜೆಕ್ಷನ್ ಟು ರೆವಲ್ಯೂಷನ್ “
    May 5, 2026
    “ಸೂರ್ಯನಿಗೆ ಸವಾಲೆಸೆದವರು”
    May 3, 2026
  • Sports
  • National
  • International
  • Crime
Reading: ಪಾಸ್‌ಪೋರ್ಟ್ ಶುಲ್ಕ ಏರಿಕೆ: ಹೊಸ ದರಗಳು ತಕ್ಷಣದಿಂದಲೇ ಜಾರಿ
Share
Font ResizerAa
VarthamanVarthaman
  • Home
  • Karnataka
  • Articles
  • Sports
  • National
  • International
  • Crime
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
  • Sports
  • National
  • International
  • Crime
Follow US
Varthaman > Karnataka – Latest Breaking News > New Delhi > ಪಾಸ್‌ಪೋರ್ಟ್ ಶುಲ್ಕ ಏರಿಕೆ: ಹೊಸ ದರಗಳು ತಕ್ಷಣದಿಂದಲೇ ಜಾರಿ
New Delhi

ಪಾಸ್‌ಪೋರ್ಟ್ ಶುಲ್ಕ ಏರಿಕೆ: ಹೊಸ ದರಗಳು ತಕ್ಷಣದಿಂದಲೇ ಜಾರಿ

Team Varthaman
Last updated: June 25, 2026 7:35 PM
Team Varthaman
Published: June 25, 2026
Share
SHARE

ನವದೆಹಲಿ: ವಿದೇಶ ಪ್ರವಾಸ, ಉದ್ಯೋಗ ಅಥವಾ ಶಿಕ್ಷಣಕ್ಕಾಗಿ ಪಾಸ್‌ಪೋರ್ಟ್ ಪಡೆಯಲು ಮುಂದಾಗಿರುವವರಿಗೆ ಕೇಂದ್ರ ಸರ್ಕಾರ ಹೊಸ ಶುಲ್ಕ ಪರಿಷ್ಕರಣೆ ಮೂಲಕ ಹೆಚ್ಚುವರಿ ಹೊರೆ ವಿಧಿಸಿದೆ. ಪಾಸ್‌ಪೋರ್ಟ್‌ಗೆ ಹೊಸದಾಗಿ ಅರ್ಜಿ ಸಲ್ಲಿಸುವುದು ಹಾಗೂ ನವೀಕರಣಕ್ಕೆ ವಿಧಿಸಲಾಗುವ ಶುಲ್ಕವನ್ನು ಸರ್ಕಾರ ಹೆಚ್ಚಿಸಿದ್ದು, ಪರಿಷ್ಕೃತ ದರಗಳು ತಕ್ಷಣದಿಂದಲೇ ಜಾರಿಗೆ ಬಂದಿವೆ.

ಹೊಸ ದರಗಳ ಪ್ರಕಾರ, 36 ಪುಟಗಳ ಸಾಮಾನ್ಯ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಲು ಅಥವಾ ನವೀಕರಿಸಿಕೊಳ್ಳಲು ಇನ್ನು ಮುಂದೆ ₹2,500 ಶುಲ್ಕ ಪಾವತಿಸಬೇಕಾಗುತ್ತದೆ. ಈ ದರವು ವಯಸ್ಕರು ಹಾಗೂ 15ರಿಂದ 18 ವರ್ಷದೊಳಗಿನ ಅಪ್ರಾಪ್ತ ವಯಸ್ಕರಿಗೂ ಅನ್ವಯವಾಗುತ್ತದೆ.

Join WhatsApp Group

ತುರ್ತು ಅಗತ್ಯಕ್ಕಾಗಿ ತತ್ಕಾಲ್ ಯೋಜನೆಯಡಿ ಪಾಸ್‌ಪೋರ್ಟ್ ಪಡೆಯುವವರಿಗೂ ಶುಲ್ಕ ಹೆಚ್ಚಿಸಲಾಗಿದೆ. ಪರಿಷ್ಕೃತ ದರದಂತೆ ತತ್ಕಾಲ್ ಪಾಸ್‌ಪೋರ್ಟ್ ಸೇವೆಗೆ ₹5,000 ಪಾವತಿಸಬೇಕಾಗುತ್ತದೆ.

ಪಾಸ್‌ಪೋರ್ಟ್ ವಿತರಣಾ ಪ್ರಕ್ರಿಯೆಯಲ್ಲಿ ತಾಂತ್ರಿಕ ಸುಧಾರಣೆ, ಇ-ಪಾಸ್‌ಪೋರ್ಟ್ ಸೇರಿದಂತೆ ಉನ್ನತ ಭದ್ರತಾ ವ್ಯವಸ್ಥೆಗಳ ಅಳವಡಿಕೆ ಹಾಗೂ ಆಡಳಿತಾತ್ಮಕ ವೆಚ್ಚಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಶುಲ್ಕ ಪರಿಷ್ಕರಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಕಳೆದ ಹಲವು ವರ್ಷಗಳಿಂದ ಪಾಸ್‌ಪೋರ್ಟ್ ಶುಲ್ಕದಲ್ಲಿ ಯಾವುದೇ ಪ್ರಮುಖ ಬದಲಾವಣೆ ಮಾಡಲಾಗಿರಲಿಲ್ಲ. ಆದರೆ ಈಗ ಜಾರಿಗೆ ಬಂದಿರುವ ಹೊಸ ದರಗಳಿಂದ ಹೊಸದಾಗಿ ಪಾಸ್‌ಪೋರ್ಟ್ ಪಡೆಯುವವರು ಹಾಗೂ ನವೀಕರಣ ಮಾಡಿಸಿಕೊಳ್ಳುವವರು ಹೆಚ್ಚುವರಿ ವೆಚ್ಚವನ್ನು ಭರಿಸಬೇಕಾಗುತ್ತದೆ.ಇದನ್ನು ಓದಿ –ಪೋಕ್ಸೊ ಪ್ರಕರಣ: ವಚನಾನಂದ ಶ್ರೀಗಳಿಗೆ ಹಿನ್ನಡೆ

ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಲು ಬಯಸುವವರು ಅಧಿಕೃತ ಆನ್‌ಲೈನ್ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಂಡು, ಪರಿಷ್ಕೃತ ಶುಲ್ಕದ ಅನ್ವಯವೇ ಅರ್ಜಿ ಸಲ್ಲಿಸಿ ಪಾವತಿ ಮಾಡಬೇಕಾಗುತ್ತದೆ.

  • ₹72 ಕೋಟಿ ಅಕ್ರಮ ಪ್ರಕರಣ: KRDL ಎಂಜಿನಿಯರ್ ಬಂಧನ
    by Team Varthaman
  • ಭಾರತ–ಬ್ರಿಟನ್ ವ್ಯಾಪಾರ ಒಪ್ಪಂದ: ಪ್ರೀಮಿಯಂ ಮದ್ಯದ ಬೆಲೆ ಮತ್ತಷ್ಟು ಇಳಿಕೆ
    by Team Varthaman
  • ಟೆಂಡರ್ ಉಲ್ಲಂಘನೆ: ಇಬ್ಬರು ಅಧಿಕಾರಿಗಳು ಅಮಾನತು
    by Team Varthaman
  • ಕಲಬುರಗಿ ಜೈಲಿನಿಂದ ಪರಾರಿಯಾಗಿದ್ದ ಕೈದಿ ಸೆರೆ
    by Team Varthaman
  • ರಾಜ್ಯದಲ್ಲಿ 32 ಮಂದಿಗೆ ಕೋವಿಡ್ ಸೋಂಕು ದೃಢ
    by Team Varthaman
ಹೃದಯಾಘಾತದಿಂದ ಗ್ರಾಪಂ ಸದಸ್ಯ ಸಾವು
ಶೀಘ್ರವೇ ಗೃಹಲಕ್ಷ್ಮಿ ಯೋಜನೆ ಹಣ ಖಾತೆಗೆ – ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಭರವಸೆ
ಅತಿಯಾದ ವಿಶ್ವಾಸವೇ ಹಿನ್ನಡೆಗೆ ಕಾರಣ: H.D ಕುಮಾರಸ್ವಾಮಿ
೧೩೬ ಕಿ.ಮೀ. ದೀಪಾಲಂಕಾರದ ಮೆರುಗು: ಚೆಸ್ಕಾಂ ಎಂಡಿ
ಗಂಡು ಮಗುವಿಗೆ ಜನ್ಮ ನೀಡಿದ ಡಾಲಿ ಧನಂಜಯ್–ಧನ್ಯತಾ ದಂಪತಿ
TAGGED:Indian Passportlatestnewsprice hikeಶುಲ್ಕ ಏರಿಕೆ
Share This Article
Facebook Email Print
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
KarnatakaMysoreTrending

ಕೆಂಪೇಗೌಡ ಜಯಂತಿ ಪ್ರಚಾರ ರಥಕ್ಕೆ ಅದ್ಧೂರಿ ಚಾಲನೆ  

Team Varthaman
Team Varthaman
June 17, 2025
ಧರ್ಮ ಒಡೆಯಲು ಹೊರಟಿರುವ ಸಿದ್ದು: ಪ್ರತಾಪ ಸಿಂಹ
ಶೋಷಣೆಯ ಮತ್ತೊಂದು ಮುಖ 
ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಲು ನಿರ್ಧಾರ ?
ರದ್ದಾದ ಬಿಪಿಎಲ್ ಕಾರ್ಡ್ ಮರುಪಡೆಯಲು 45 ದಿನಗಳ ಅವಕಾಶ
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?