By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
    ArticlesShow More
    ಅಜವಾನ ಅಜೀರ್ಣಕ್ಕೆ ಪ್ರಕೃತಿ ನೀಡಿದ ವರದಾನ
    February 1, 2026
    ಹೀಗೆ ಬಂದು ಹಾಗೆ ಹೋಗುವ ಸ್ನೇಹ ಸಾವಿರ
    February 1, 2026
    ಸಾವು ಬದುಕಿನ ನಡುವೆ
    January 28, 2026
    ವಾಸ್ತವ ವರ್ತಮಾನ
    January 24, 2026
    ಅರೋಗ್ಯ ಭಾಗ್ಯ
    January 24, 2026
  • Sports
  • National
  • International
  • Crime
Reading: ಇಂದಿನ ಬದುಕಿಗೆ ಗೀತೆಯ ಅವಶ್ಯಕತೆ
Share
Font ResizerAa
VarthamanVarthaman
  • Home
  • Karnataka
  • Articles
  • Sports
  • National
  • International
  • Crime
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
  • Sports
  • National
  • International
  • Crime
Follow US
Varthaman > Karnataka – Latest Breaking News > Articles > ಇಂದಿನ ಬದುಕಿಗೆ ಗೀತೆಯ ಅವಶ್ಯಕತೆ
Articles

ಇಂದಿನ ಬದುಕಿಗೆ ಗೀತೆಯ ಅವಶ್ಯಕತೆ

Team Varthaman
Last updated: November 29, 2025 10:50 PM
Team Varthaman
Published: November 30, 2025
Share
SHARE
  • ಗೀತಾ ಜಯಂತಿ ವಿಶೇಷ

ಯುಗಾಂತರಗಳಿಂದ ಸಾಗುತ್ತಿರುವ ಮನುಷ್ಯನ ಜೀವನದಲ್ಲಿ ಬದಲಾವಣೆಗಳು ಸಂಭವಿಸದೆ ಇರುವ ದಿನವೇ ಇಲ್ಲ. ತಂತ್ರಜ್ಞಾನದ ಪ್ರಗತಿ, ಸಮಾಜದ ಬೆಳವಣಿಗೆ, ಜ್ಞಾನವಿಸ್ತರಣೆ ಎಲ್ಲವೂ ಒಂದೇ ಕಡೆ ಮನುಷ್ಯನ ಬದುಕನ್ನು ಸುಲಭಗೊಳಿಸಿರುವಂತೆ ಕಾಣುತ್ತದೆ. ಆದರೆ ಅದಕ್ಕೆ ವಿರುದ್ಧವಾಗಿ, ಮನುಷ್ಯನ ಮನಸ್ಸು ಎದೆಯೊಳಗೆ ತಾನೇ ತಾನೇ ಕುಸಿಯುತ್ತಿರುವುದು ವಿಸ್ಮಯಕಾರಿ. ಹೊರಗಿನ ಲೋಕ ಬಲಿಷ್ಠವಾಗುತ್ತಿದ್ದಂತೆ, ಒಳಗಿನ ಮನಸ್ಸು ಬಲಹೀನವಾಗುತ್ತಿದೆ. ಸಾಧನೆಗಳು ಹೆಚ್ಚಿದಂತೆ, ಆತಂಕವೂ ಹೆಚ್ಚುತ್ತಿದೆ. ಸೌಕರ್ಯಗಳು ಹೆಚ್ಚಿದಂತೆ, ಸಂಬಂಧಗಳು ದೂರವಾಗುತ್ತಿವೆ. ಜ್ಞಾನ ಹೆಚ್ಚಾದಂತೆ, ಶಾಂತಿ ಕಡಿಮೆಯಾಗುತ್ತಿದೆ. ನಾವಿಂದು ವಾಸ್ತವವಾಗಿ ಎದುರಿಸುತ್ತಿರುವ ಹೋರಾಟ, ಹೊರಗಿನ ಜಗತ್ತಿನಲ್ಲಲ್ಲ ಅದು ನಮ್ಮ ಮನಸ್ಸಿನೊಳಗಿನ “ ಕುರುಕ್ಷೇತ್ರ”.

Join WhatsApp Group

ಅರ್ಜುನನು ಯುದ್ಧಭೂಮಿಯಲ್ಲಿ ನಿಂತಾಗ ತನ್ನೊಳಗಿನ ಗೊಂದಲ, ಭಯ, ಅಳಲು, ದುಃಖ, ಕರ್ತವ್ಯ ಹಾಗೂ ಸಂಬಂಧಗಳ ಮಧ್ಯದ ಸಂಘರ್ಷವನ್ನು ಅನುಭವಿಸಿದ್ದ. ನಮ್ಮ ಇಂದಿನ ಜೀವನದಲ್ಲೂ ಇದೇ ಸಂಘರ್ಷಗಳು ನಿತ್ಯ ನಡೆಯುತ್ತಿವೆ. ಜೀವಿತವು ಬಲವಂತಿತಾಗಿರುವ ಕ್ಷಣಗಳಲ್ಲಿ, ಭಯ ಮತ್ತು ಗೊಂದಲ ಮನುಷ್ಯನಿಂದ ಬಲೆಯಂತೆ ಆವರಿಸುತ್ತದೆ. ಈ ಕ್ಷಣಗಳಲ್ಲಿ ಗೀತೆಯ ಬೆಳಕೇ ಮನುಷ್ಯನಿಗೆ ಅತ್ಯಗತ್ಯವಾಗುತ್ತದೆ.

ಇಂದಿನ ಮನುಷ್ಯನು ದಿನಪತ್ರಿಕೆಯಲ್ಲಿ ಓದುತ್ತಿರುವ ಸುದ್ದಿ, ಸಮಾಜದಲ್ಲಿ ಎದುರಾದ ಸಮಸ್ಯೆಗಳು, ಮನೆಗಳಲ್ಲಿ ನಡೆಯುತ್ತಿರುವ ಒತ್ತಡ, ಕೆಲಸದ ಸ್ಥಳದ ಸ್ಪರ್ಧೆ, ಮೊಬೈಲ್ ನ ಅತಿಯಾದ ಬಳಕೆ, ಮನೋಭಾರ ಇವೆಲ್ಲವೂ ಅವನ ಮನಸ್ಸನ್ನು ಮಗ್ಗುಲುಗಳಿಗೆ ಎಳೆದಾಡುತ್ತಿವೆ. ಹೊರಗಿನ ಸುಖವನ್ನು ಪಡೆದುಕೊಂಡರೂ, ಒಳಗಿನ ಸುಖವನ್ನು ಕಳೆದುಕೊಂಡಿರುವುದು ಮಾನವಕುಲದ ದುರಂತ. ಮನಸ್ಸಿಗೆ ಶಾಂತಿ ಇರುವುದಿಲ್ಲ; ಹೃದಯಕ್ಕೆ ನೆಲೆಗುಂದಿಲ್ಲ. ಗೀತೆಯ ಮೊದಲ ವಾಕ್ಯವೇ ಇದಕ್ಕೆ ಸಮಾಧಾನ ನೀಡುವಂತೆ, “ಕ್ಲೈಬ್ಯಂ ಮಾ ಸ್ಮ ಗಮಃ ಪಾರ್ಥ” ಅರ್ಜುನನ ದುರ್ಬಲತೆಯನ್ನು ಬಲವಂತೇ ಮಾಡಿ ಕಟ್ಟಿದಂತೆ. ಮನುಷ್ಯನ ಜೀವನದಲ್ಲಿನ ಮೊದಲ ಸಮಸ್ಯೆ ದುರ್ಬಲತೆ; ಅದನ್ನು ಗುರುತಿಸುವ ಮೊದಲು ಗೀತೆ ಅದಕ್ಕೆ ಔಷಧ ನೀಡುತ್ತದೆ.

ಇಂದಿನ ಯುವಕರು ಮತ್ತು ವಯಸ್ಕರು ಒತ್ತಡದಲ್ಲಿ ಬದುಕುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಗೀತೆಯ “ನಿಷ್ಕಾಮ ಕರ್ಮ” ತತ್ತ್ವವು ಅತ್ಯಂತ ಅವಶ್ಯ. ಮನುಷ್ಯನು ತನ್ನ ಕೆಲಸಕ್ಕೆ ಮಾತ್ರ ಜವಾಬ್ದಾರ, ಫಲಕ್ಕೆ ಅಲ್ಲ. ಫಲದ ಬಗ್ಗೆ ಅತಿಯಾದ ನಿರೀಕ್ಷೆ, ಫಲದ ಗಂಭೀರ ಭಯ ಇವುಗಳು ಅವನ ಮನಸ್ಸಿನ ಮೇಲೆ ಸಾವಿರ ಕಿಲೋ ಭಾರ ಹಾಕುತ್ತಿರುವಂತೆ. ಗೀತೆಯ ಸಂದೇಶ, “ಕಾರ್ಯಮಾತ್ರಕ್ಕೆ ಹಕ್ಕಿದೆ; ಫಲಕ್ಕೆ ಅಲ್ಲ,” ಎನ್ನುವುದು ಪ್ರತಿಯೊಬ್ಬರಿಗೂ ಬದುಕಿನಲ್ಲಿ ಅತ್ಯಂತ ದೊಡ್ಡ ಸ್ವಾತಂತ್ರ್ಯವನ್ನು ಕೊಡಬಲ್ಲತದ್ದು.

ಇಂದಿನ ಕಾಲದಲ್ಲಿ ಆತ್ಮವಿಶ್ವಾಸ ಕುಸಿದಿದೆ. “ನಾನು ಸಾಧ್ಯವಿಲ್ಲ,” ಎಂಬ ಭಾವನೆ ಚಿಲುಮೆಯಂತೆ ಹರಿದು ಬರುತ್ತಿದೆ. ಸಮಾಜದ ಒತ್ತಡ, ಕುಟುಂಬದ ನಿರೀಕ್ಷೆ, ತನ್ನದೇ ಇದ್ದ ಗುರಿಗಳು ಇವೆಲ್ಲ ಗುಂಡಿನಂತೆ ಮನಸ್ಸನ್ನು ಚುಚ್ಚುತ್ತಿವೆ. ಗೀತೆ, “ಉದ್ದರೇದಾತ್ಮನಾತ್ಮಾನಂ,” ಎಂದು ಹೇಳುತ್ತದೆ. “ನಿನ್ನನ್ನು ನೀನೆ ಎತ್ತಿಕೊಳ್ಳು.” ಆತ್ಮವಿಶ್ವಾಸಕ್ಕೆ ಈಷ್ಟೊಂದು ಪ್ರಚೋದನೆ ಬೇರೆ ಯಾವುದೂ ಕೊಡಲಾರದು. ಗೀತೆಯ ಜ್ಞಾನ ಮನುಷ್ಯನೊಳಗಿನ ನಿಧಾನವಾಗಿ ಕರಗುತ್ತಿರುವ ಧೈರ್ಯಕ್ಕೆ ಹೊಸ ಜೀವ ನೀಡುತ್ತದೆ.

ಸಮಾಜದ ವೇಗದ ಹಿಂದೆ ಮನುಷ್ಯನು ನಾಗರಿಕತೆಯನ್ನು ಪಡೆಯುತ್ತಿದ್ದರೂ, ಮೌಲ್ಯಗಳನ್ನು ಕಳೆದುಕೊಂಡಿದ್ದಾನೆ. ಕರುಣೆ, ವಿನಯ, ಸಹನೆ, ಸಂಯಮ ಇವು ಮನುಷ್ಯನ ಹೃದಯದಲ್ಲಿ ನಿಧಾನವಾಗಿ ಅಳಿದು ಹೋಗುತ್ತಿವೆ. ಸಂಬಂಧಗಳಲ್ಲಿ ಬಿರುಕುಗಳಾಗುತ್ತಿವೆ. ಮನುಷ್ಯನ ಮಾತು ಮೃದುತ್ವವನ್ನು ಕಳೆದುಕೊಂಡಿದೆ; ಧಾವಂತ, ಕೋಪ, ಅಹಂಕಾರ ಇವು ಜೀವನದ ಆಧಾರವಾಗುತ್ತಿದೆ. ಗೀತೆಯ ಬೋಧನೆ ಮನುಷ್ಯನ ಮನಸ್ಸಿಗೆ ಮೌನ ಮತ್ತು ಮೃದುತೆಯನ್ನು ಮತ್ತೆ ನೆನಪಿಸುತ್ತವೆ. ಗೀತೆಯ “ಸಮತ್ವ” ಎಂದರೆ ಕೇವಲ ಅನಂತ ಶಾಂತಿಯಲ್ಲ; ಅದು ಮನುಷ್ಯನ ನಡವಳಿಕೆಯ ಮೂಲ.

ಇಂದಿನ ಕಾಲದಲ್ಲಿ ಜನರು ಅನುಭವಿಸುತ್ತಿರುವ ಅತ್ಯಂತ ದೊಡ್ಡ ಸಮಸ್ಯೆ —ಸಂಬಂಧಗಳ ಕುಸಿತ. ಗಂಡ–ಹೆಂಡತಿ ಮಧ್ಯದ ಅಸಮಾಧಾನ, ಮಕ್ಕಳು–ಪೋಷಕರು ನಡುವಿನ ಬಿರುಕು, ಸ್ನೇಹಿತರ ಮಧ್ಯದ ದೂರ—ಇವುಗಳು ಮನೆಗಳ ನೆಲೆಯನ್ನು ಅಸ್ಥಿರಗೊಳಿಸುತ್ತಿವೆ. ಕುಟುಂಬದೊಳಗಿನ ವಾತಾವರಣ ದಿನದಿಂದ ದಿನಕ್ಕೆ ಭಾರವಾಗಿ ಬದಲಾಗುತ್ತಿದೆ. ಗೀತೆಯ ಸಂದೇಶ ಕುಟುಂಬಗಳಿಗೆ ಅಮೃತದಂತೆ. “ದ್ವೇಷವನ್ನು ಬಿಡು, ಮಮತೆಯನ್ನು ಹೆಚ್ಚಿಸು, ಸಹನೆಯನ್ನು ಧರಿಸು.” ಗೀತೆಯಲ್ಲಿರುವ ನೈತಿಕ ಮೌಲ್ಯಗಳು ಮನೆಗೆ ಮರಳಿ ಬಂದರೆ, ಶಾಂತಿ ಮನೆಯ ಮೂಲದ ಅಷ್ಟಮೂಲವಾಗುತ್ತದೆ.

ಯುವಜನತೆಗೆ ಗೀತೆಯ ಪಾಠ ಅವಶ್ಯಕ. ಅವರನ್ನು ಆವರಿಸಿರುವ ಗೊಂದಲ ಉದ್ಯೋಗ, ಸಂಬಂಧ, ಗುರಿ, ಭವಿಷ್ಯ, ತಮ್ಮದೇ ಅಸ್ತಿತ್ವ ಇವೆಲ್ಲವೂ ಅವರನ್ನು ದಿಕ್ಕುತಪ್ಪಿಸುತ್ತಿವೆ. ಗೀತೆಯ ಒಂದು ಸಾಲೇ ಇವರಿಗೆ ದಾರಿ ತೋರಿಸಲು ಸಾಕು: “ಕರ್ಮಣ್ಯೇವಾಧಿಕಾರಸ್ತೇ.” ಕೆಲಸ ಮಾಡು; ಉಳಿದವು ದೇವರಿಗೆ ಬಿಟ್ಟುಬಿಡು. ಈ ಮನೋಭಾವ ಯುವಕರಿಗೆ ಅಗತ್ಯ.

ಮಾನಸಿಕ ಆರೋಗ್ಯ ಇಂದು ಜಗತ್ತಿನ ದೊಡ್ಡ ಆತಂಕ. ಔಷಧಿಗಳು, ಚಿಕಿತ್ಸೆ, ಸಲಹೆಗಳು ಎಲ್ಲವೂ ಇದ್ದರೂ ಮನಸ್ಸಿಗೆ ನಿಜವಾದ ನೆಮ್ಮದಿ ಸಿಗದೆ ಜನರು ಬಳಲುತ್ತಿದ್ದಾರೆ. ಗೀತೆಯ ಧ್ಯಾನಯೋಗ, ಮನೋನಿಗ್ರಹ, ಪ್ರಾಣಾಯಾಮ, ಏಕಾಗ್ರತೆ,ಮನಸ್ಸು ಚಂಚಲವಾದಾಗ, ಆತಂಕ ಬರುವುದನ್ನು ತಡೆಯಲು ಗೀತೆಯ ಮಂತ್ರಗಳು ಔಷಧಿ.

ಇಂದಿನ ಹೊಗಳಿಕೆ, ಸದ್ದು–ಗದ್ದಲದ ಬದುಕಿನಲ್ಲಿ ಮನುಷ್ಯನು ಮೌನವನ್ನು ಮರೆತುಬಿಟ್ಟಿದ್ದಾನೆ. ಗೀತೆಯ ಧ್ಯಾನಪಾಠ “ಯೋಗಸ್ಥಃ ಕುರು ಕರ್ಮಾಣಿ” ಎಂದು ಹೇಳುತ್ತದೆ. ಮನಸ್ಸು ಸ್ಥಿರವಾಗಿಲ್ಲದಾಗ ಮನುಷ್ಯನು ತಪ್ಪಾದ ನಿರ್ಧಾರ ಮಾಡುತ್ತಾನೆ; ಧ್ಯಾನವು ಅವನೊಳಗಿನ ತಲ್ಲಣಕ್ಕೆ ಮದ್ದು. ಗೀತೆಯ ಒಬ್ಬೊಬ್ಬ ಶ್ಲೋಕ ಮನಸ್ಸಿಗೆ ಮೌನದ ಸಂದೇಶ.

ಈ ಗದ್ದಲದ ನಡುವೆ ಮನುಷ್ಯನು ದೇಹಕ್ಕೆ ಮಾತ್ರ ಗಮನಕೊಡುತ್ತಿದ್ದಾನೆ; ಆತ್ಮಕ್ಕೆ ಅಲ್ಲ. ಆತ್ಮಜ್ಞಾನ ಮನುಷ್ಯನಿಗೆ ಅತ್ಯಂತ ಮೂಲ. “ನೀನು ದೇಹವಲ್ಲ; ನೀನು ಆತ್ಮ” ಈ ತತ್ತ್ವ ಮನುಷ್ಯನ ಭಯಗಳನ್ನು ಕರಗಿಸುತ್ತದೆ. ಮರಣದ ಭಯ, ನಷ್ಟದ ನೋವು, ಅನಿಶ್ಚಿತತೆಯ ಕತ್ತಲೆ.ಗೀತೆಯ ಜ್ಞಾನ ಹೊರಗಿನ ಕತ್ತಲೆಯನ್ನು ತೆಗೆಯುವುದಿಲ್ಲ; ಅದು ಒಳಗಿನ ಕತ್ತಲೆಯನ್ನೇ ಕರಗಿಸುತ್ತದೆ.

ಇಂದಿನ ಸಾಮಾಜಿಕ ಬಿರುಕುಗಳು ಗಾಢವಾಗುತ್ತಿವೆ. ಧರ್ಮ–ಭೇದ, ಜಾತಿ–ಭೇದ, ವೈಮನಸ್ಯ, ದ್ವೇಷ—ಇವು ಬೆಳೆಯುತ್ತಿದ್ದಂತೆ ಮನುಷ್ಯತೆ ಕುಸಿಯುತ್ತಿದೆ. ಗೀತೆಯ ಬೋಧನೆ “ಲೋಕಸಂಗ್ರಹ” ಸಮಾಜದ ಹಿತಕ್ಕಾಗಿ ಮನುಷ್ಯನು ಸ್ವಾರ್ಥದ ಸುತ್ತಲ್ಲದೆ ಸಮಾಜಕ್ಕಾಗಿ ಕೆಲಸ ಮಾಡಿದಾಗ ಜೀವನದ ಉದ್ದೇಶ ದೊಡ್ಡದಾಗುತ್ತದೆ. ಗೀತೆಯ ಮೌಲ್ಯಗಳು ಸಮಾಜದ ನಡುವೆ ಸೇತುವೆಯಂತೆ.

ಇಂದಿನ ಕಾಲದಲ್ಲಿ ಭಯವಿದೆ ಆರ್ಥಿಕ ಭಯ, ಭವಿಷ್ಯಭಯ, ಸಂಬಂಧಭಯ, ಆರೋಗ್ಯಭಯ. ಮನುಷ್ಯನು ತನ್ನ ಭವಿಷ್ಯವನ್ನು ಹಿಡಿಯಲು ಅಸಾಧ್ಯ. ಗೀತೆಯಲ್ಲಿರುವ “ಮಾ ಶುಚಃ” ಚಿಂತೆ ಮಾಡಬೇಡ ಎಂಬ ಮಾತು ಮನುಷ್ಯನ ಭಯಕ್ಕೆ ಮದ್ದು. ದೇವರಲ್ಲಿ ನಂಬಿಕೆ ಅಳಿದುಹೋಗುತ್ತಿರುವಾಗ ಗೀತೆಯ ನಂಬಿಕೆ ಜೀವನಕ್ಕೆ ಆಮ್ಲಜನಕವಾಗುತ್ತದೆ.

ಗೀತೆಯ ಅವಶ್ಯಕತೆ ಇಂದಿಗೆ ಏಕೆ ಹೆಚ್ಚಾಗಿದೆ ಎಂಬುದಕ್ಕೆ ಒಂದು ಉತ್ತರ: ಮನುಷ್ಯನು ಹೊರಗಿನ ಸಾಧನೆಗಳನ್ನು ಪಡೆದರೂ, ಒಳಗಿನ ನೆಮ್ಮದಿಯನ್ನು ಕಳೆದುಕೊಂಡಿದ್ದಾನೆ.

ಮನುಷ್ಯನು ಎಲ್ಲಾ ಯಂತ್ರಗಳನ್ನು ವಶಪಡಿಸಿಕೊಂಡಿದ್ದಾನೆ;
ಆದರೆ ಮನಸ್ಸಿನ ಯಂತ್ರವೂ ಅವನನ್ನು ವಶಪಡಿಸಿಕೊಳ್ಳುತ್ತಿದೆ.
ಅವನು ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡಿದ್ದಾನೆ;
ಆದರೆ ತನ್ನೊಳಗಿನ ಸಮಸ್ಯೆಗೆ ಪರಿಹಾರ ಕಾಣಲಾಗುತ್ತಿಲ್ಲ.

ಈ ಒಳಗಿನ ಯುದ್ಧಕ್ಕೆ ಔಷಧ ಗೀತೆ.
ಈ ಆತ್ಮದ ಬಯಕೆಗೆ ದಾರಿ ಗೀತೆ.
ಈ ಮನೋವೈಜ್ಞಾನಿಕ ಗೊಂದಲಕ್ಕೆ ಪರಿಹಾರ ಗೀತೆ.
ಈ ಬದುಕಿನ ದುಃಖಕ್ಕೆ ಮದ್ದು ಗೀತೆ.
ಗೀತೆಯನ್ನು ಓದಿದರೆ ಮನುಷ್ಯನು ಜೀವನವನ್ನು ಅರ್ಥಮಾಡಿಕೊಳ್ಳುತ್ತಾನೆ.
ಗೀತೆಯನ್ನು ಕೇಳಿದರೆ ಅವನೊಳಗಿನ ಕತ್ತಲೆಗೆ ಬೆಳಕು ಬರುತ್ತದೆ.
ಗೀತೆಯನ್ನು ಬದುಕಿದರೆ ಅವನ ಜೀವನವೇ ಪುನರ್ಜನ್ಮ ಪಡೆಯುತ್ತದೆ.

ಇಂದಿನ ಬದುಕಿಗೆ ಗೀತೆ ಅವಶ್ಯಕಲ
ಅದು ಶ್ವಾಸದಷ್ಟು ಅವಶ್ಯಕ.
ಗೀತೆಯಿಲ್ಲದೆ ಮನುಷ್ಯನು ದಾರಿ ಕಳೆದುಕೊಳ್ಳುತ್ತಾನೆ;
ಗೀತೆಯೊಂದಿಗೆ ಮನುಷ್ಯನು ದಾರಿಯನ್ನು ಮರುಪಡೆಯುತ್ತಾನೆ.

ಜೀವನದ ಕುರುಕ್ಷೇತ್ರ ಎಷ್ಟೇ ಗದ್ದಲವಾಗಿದ್ದರೂ,
ಒಂದು ಕೃಷ್ಣನ ನುಡಿ ಸಾಕು
ಮನಸ್ಸಿಗೆ ಶಾಂತಿ ಬರಲು,
ಬದುಕಿಗೆ ದಾರಿ ಕಾಣಲು,
ಆತ್ಮಕ್ಕೆ ನೆಲೆ ಸಿಗಲು.

ಶ್ರೀಕೃಷ್ಣಾರ್ಪಣಮಸ್ತು

ಶ್ರೀ ಪ್ರಶಾಂತ ಕುಲಕರ್ಣಿ

  • ಅಜವಾನ ಅಜೀರ್ಣಕ್ಕೆ ಪ್ರಕೃತಿ ನೀಡಿದ ವರದಾನ
    by Team Varthaman
  • ಹೀಗೆ ಬಂದು ಹಾಗೆ ಹೋಗುವ ಸ್ನೇಹ ಸಾವಿರ
    by Team Varthaman
  • ಐಟಿ ದಾಳಿ ಭೀತಿ: ಕಾನ್ಫಿಡೆಂಟ್ ಅಧ್ಯಕ್ಷ ಡಾ.ಸಿ.ಜೆ.ರಾಯ್ ಆತ್ಮಹತ್ಯೆ
    by Team Varthaman
  • ಅಕ್ರಮ ವಲಸಿಗರ ಪತ್ತೆ–ಗಡಿಪಾರಿಗೆ ವಿಶೇಷ ತಂಡ ರಚನೆ: ರಾಜ್ಯ ಸರ್ಕಾರ
    by Team Varthaman
  • ತಿರುಪತಿ ಲಡ್ಡು ಕಲಬೆರಕೆ ಪ್ರಕರಣ: ₹234 ಕೋಟಿ ವಂಚನೆ ಬಯಲು
    by Team Varthaman


ದೇಶಾದ್ಯಂತ ವ್ಯಸನ ಮುಕ್ತ ಜಾಗೃತಿ ಮೂಡಿಸಿದ ಶ್ರೀಗಳು | ಆಗಸ್ಟ್ 01 ವ್ಯಸನ ಮುಕ್ತ ದಿನ
ಕನ್ನಡ ನಾಡಿನ ಬೆಳ್ಳಿಚುಕ್ಕಿ ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮ
ಕಮಲ ಬೀಜ ಗಳ ಅರೋಗ್ಯ ಗುಟ್ಟು
“ಅಪ್ಪ” ನೆಂಬ ಆಸರೆ ಇಲ್ಲದ ಬದುಕು!!
ನೀವು ಯಾರಿಗೂ ಸರಿಯಾಗಿ ಅರ್ಥ ಆಗಿಲ್ಲವೇ..‌‌‌?
TAGGED:Kannada Articleಗೀತಾ ಜಯಂತಿ
Share This Article
Facebook Email Print
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
ChamrajnagarKarnatakaTrending

ಹುಲಿಗಳ ಸಾವಿಗೆ ಕಾರಣವಾಯಿತು ಕರ್ತವ್ಯಲೋಪ: DCF ಅಮಾನತು

Team Varthaman
Team Varthaman
July 15, 2025
ಭದ್ರತಾ ಪಡೆಗಳಿಂದ ತಪ್ಪಿಸಿಕೊಳ್ಳಲು ನದಿಗೆ ಹಾರಿ ಶಂಕಿತ ಉಗ್ರನ ಸಾವು
ಆಯಾಸವನ್ನು ನಿವಾರಿಸುವ ಪಾನೀಯಗಳು
ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ರಾಜೀನಾಮೆ
ಇಂದು ರಾಜ್ಯದ 5 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?