ಮೈಸೂರಿನ ಸಬ್‌ಅರ್ಬನ್ ಬಸ್ ನಿಲ್ದಾಣದ ಸಮೀಪದ ಮದರ್ ತೆರೆಸಾ ರಸ್ತೆ (ಬಿ.ಎನ್. ರೋಡ್)ಯಲ್ಲಿರುವ ಖಾಸಗಿ ಲಾಡ್ಜ್‌ನ ಹಿಂಭಾಗದ ಕಾರಿಡಾರ್‌ನಲ್ಲಿ ತಿ.ನರಸೀಪುರ ಸಾಮಾಜಿಕ ಅರಣ್ಯ ವಲಯದ ಆರ್‌ಎಫ್‌ಒ ( RFO) ಕಾಂತರಾಜ್ ಚೌಹಾಣ್ ಅವರ ಮೃತದೇಹ ಪತ್ತೆಯಾಗಿದೆ.
ಕಾಂತರಾಜ್ ಚೌಹಾಣ್ ಅವರು ಸುಮಾರು ಹದಿನೈದು ದಿನಗಳ ಹಿಂದೆ ತಿ.ನರಸೀಪುರಕ್ಕೆ ವರ್ಗಾವಣೆಗೊಂಡಿದ್ದರು ಎಂದು ತಿಳಿದುಬಂದಿದೆ.
ಭಾನುವಾರ ಅವರು ಗಂಗಾವತಿ ಮೂಲದ ತಮ್ಮ ಸ್ನೇಹಿತ ಮಲ್ಲನಗೌಡ ಪಾಟೀಲ್ ಅವರೊಂದಿಗೆ ಲಾಡ್ಜ್‌ಗೆ ಬಂದಿದ್ದರು. ಆದರೆ ಸೋಮವಾರ ಬೆಳಿಗ್ಗೆ ಕಾಂತರಾಜ್ ಚೌಹಾಣ್ ಅವರ ಮೃತದೇಹ ಪತ್ತೆಯಾಗಿದ್ದು, ಈ ವೇಳೆ ಮಲ್ಲನಗೌಡ ಪಾಟೀಲ್ ಸ್ಥಳದಲ್ಲಿ ಇರಲಿಲ್ಲ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.ಇದನ್ನು ಓದಿ –ಮೃಗಾಲಯದಲ್ಲಿ 4 ಚುಕ್ಕಿ ಜಿಂಕೆಗಳ ನಿಗೂಢ ಸಾವು
ಘಟನೆಯ ಮಾಹಿತಿ ಪಡೆದ ಲಷ್ಕರ್ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಾವಿನ ನಿಖರ ಕಾರಣ ಪತ್ತೆಹಚ್ಚಲು ತನಿಖೆ ಮುಂದುವರಿಸಿದ್ದಾರೆ.








