ನವದೆಹಲಿ: ಇರಾನ್ ಯುದ್ಧದ ಪರಿಣಾಮವಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗಿದ್ದು, ತೈಲ ಕಂಪನಿಗಳು ಪ್ರೀಮಿಯಂ ಪೆಟ್ರೋಲ್ ದರವನ್ನು ಪ್ರತಿ ಲೀಟರ್‌ಗೆ 2 ರೂಪಾಯಿ ಹೆಚ್ಚಿಸಿವೆ.
ಸಾಮಾನ್ಯ ಪೆಟ್ರೋಲ್ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಪ್ರೀಮಿಯಂ ಪೆಟ್ರೋಲ್ ದರ ಮಾತ್ರ ಏರಿಕೆಯಾಗಿದೆ.
ಇದನ್ನು ಓದಿ –RCB ಟಿಕೆಟ್ ಇದ್ದರೆ ಮೆಟ್ರೋ ಪ್ರಯಾಣ ಉಚಿತ
ಪ್ರೀಮಿಯಂ ಪೆಟ್ರೋಲ್‌ನಲ್ಲಿ ಆಕ್ಟೇನ್ ರೇಟಿಂಗ್ ಹೆಚ್ಚು ಇರುತ್ತದೆ. ಸಾಮಾನ್ಯ ಪೆಟ್ರೋಲ್‌ಗೆ 91 ಆಕ್ಟೇನ್ ರೇಟಿಂಗ್ ಇದ್ದರೆ, ಪ್ರೀಮಿಯಂ ಪೆಟ್ರೋಲ್‌ಗೆ ಸಾಮಾನ್ಯವಾಗಿ 93ರಿಂದ 97 ರವರೆಗೆ ಆಕ್ಟೇನ್ ರೇಟಿಂಗ್ ಇರುತ್ತದೆ. ಈ ಕಾರಣದಿಂದ ಪ್ರೀಮಿಯಂ ಪೆಟ್ರೋಲ್ ದರ ಹೆಚ್ಚು ಇರುತ್ತದೆ.








