ಬೆಂಗಳೂರು, ಆಗಸ್ಟ್ 12: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಕರ್ನಾಟಕ ಸರ್ಕಾರದ ನೂತನ ಸಚಿವರಿಗೆ ಕೊನೆಗೂ ಖಾತೆ ಹಂಚಿಕೆ ಮಾಡಲಾಗಿದೆ. ಆಗಸ್ಟ್ 3ರಂದು ಸಚಿವ ಸಂಪುಟಕ್ಕೆ ಸೇರ್ಪಡೆಯಾಗಿದ್ದ ಸಚಿವರಿಗೆ ವಿಧಾನಮಂಡಲದ ಮುಂಗಾರು ಅಧಿವೇಶನ ಆರಂಭಕ್ಕೂ ಮುನ್ನವೇ ಇಲಾಖಾವಾರು ಜವಾಬ್ದಾರಿಗಳನ್ನು ನೀಡಲಾಗಿದೆ.
ಸಚಿವ ಸಂಪುಟ ವಿಸ್ತರಣೆಯ ಬಳಿಕ ಖಾತೆ ಹಂಚಿಕೆ ವಿಳಂಬವಾಗಿದ್ದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಟೀಕೆ ಮಾಡಿದ್ದವು. ಆಗಸ್ಟ್ 13ರಿಂದ 27ರವರೆಗೆ ವಿಧಾನಮಂಡಲದ ಮುಂಗಾರು ಅಧಿವೇಶನ ನಡೆಯಲಿರುವ ಹಿನ್ನೆಲೆಯಲ್ಲಿ, ಅಧಿವೇಶನ ಆರಂಭದ ಮುನ್ನಾ ದಿನವೇ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ.
ಯಾರಿಗೆ ಯಾವ ಖಾತೆ?
- ಎನ್. ಚಲುವರಾಯಸ್ವಾಮಿ — ಕೃಷಿ ಇಲಾಖೆ
- ರಿಜ್ವಾನ್ ಅರ್ಷದ್ — ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ
- ಕೆ.ಹೆಚ್. ಮುನಿಯಪ್ಪ — ಸಮಾಜ ಕಲ್ಯಾಣ ಇಲಾಖೆ
- ಸಂತೋಷ್ ಲಾಡ್ — ಕಾರ್ಮಿಕ ಇಲಾಖೆ
- ಕೆ.ಎಸ್. ಬಸವಂತಪ್ಪ — ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ
- ಮಧು ಬಂಗಾರಪ್ಪ — ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ
- ಬಸವರಾಜ ರಾಯರೆಡ್ಡಿ — ಉನ್ನತ ಶಿಕ್ಷಣ ಇಲಾಖೆ
- ಜಮೀರ್ ಅಹ್ಮದ್ ಖಾನ್ — ವಸತಿ ಇಲಾಖೆ
- ಲಕ್ಷ್ಮಣ ಸವದಿ — ಸಹಕಾರ ಇಲಾಖೆ
- ಡಾ. ಅಜಯ್ ಸಿಂಗ್ — ಅರಣ್ಯ ಇಲಾಖೆ
- ಎಸ್.ಎಸ್. ಮಲ್ಲಿಕಾರ್ಜುನ — ಗಣಿ ಮತ್ತು ಭೂವಿಜ್ಞಾನ ಇಲಾಖೆ
- ಹೆಚ್.ಸಿ. ಬಾಲಕೃಷ್ಣ — ಸಣ್ಣ ನೀರಾವರಿ ಇಲಾಖೆ
- ಪುಟ್ಟರಂಗ ಶೆಟ್ಟಿ — ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
ಮುನಿಯಪ್ಪ ಖಾತೆ ಬದಲಾವಣೆ
ಸಚಿವ ಕೆ.ಹೆಚ್. ಮುನಿಯಪ್ಪ ಅವರ ಖಾತೆಯಲ್ಲಿ ಬದಲಾವಣೆ ಮಾಡಲಾಗಿದೆ. ಈ ಹಿಂದೆ ಅವರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನೀಡಲಾಗಿತ್ತು. ಇದೀಗ ಆ ಖಾತೆಯನ್ನು ರಿಜ್ವಾನ್ ಅರ್ಷದ್ ಅವರಿಗೆ ನೀಡಲಾಗಿದ್ದು, ಮುನಿಯಪ್ಪ ಅವರಿಗೆ ಸಮಾಜ ಕಲ್ಯಾಣ ಇಲಾಖೆಯ ಜವಾಬ್ದಾರಿ ವಹಿಸಲಾಗಿದೆ.ಇದನ್ನು ಓದಿ –ಮುಂಬೈ ಭೂಕುಸಿತ: ಇಬ್ಬರು ಸಾವು, ಹಲವರು ಸಿಲುಕಿರುವ ಶಂಕೆ
ನೂತನ ಸಚಿವರಿಗೆ ಖಾತೆ ಹಂಚಿಕೆಯಾಗಿರುವ ಹಿನ್ನೆಲೆಯಲ್ಲಿ, ಇದೀಗ ಅವರು ತಮ್ಮ ಇಲಾಖೆಗಳ ಜವಾಬ್ದಾರಿ ವಹಿಸಿಕೊಂಡು ಆಡಳಿತ ಕಾರ್ಯಗಳಿಗೆ ಚಾಲನೆ ನೀಡಲಿದ್ದಾರೆ. ವಿಧಾನಮಂಡಲದ ಮುಂಗಾರು ಅಧಿವೇಶನದ ಹಿನ್ನೆಲೆಯಲ್ಲಿ ನೂತನ ಸಚಿವರಿಗೆ ಈ ಖಾತೆ ಹಂಚಿಕೆ ಮಹತ್ವ ಪಡೆದಿದೆ.








