ನವದೆಹಲಿ: ಇನ್ಮುಂದೆ IPL ಟೂರ್ನಿಯನ್ನು ಮಾರ್ಚ್-ಮೇ ತಿಂಗಳ ಬದಲು ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ನಡೆಸುವ ಕುರಿತು ಬಿಸಿಸಿಐ ಚಿಂತನೆ ನಡೆಸುತ್ತಿದೆ.
ಈ ಬಗ್ಗೆ ಮಾತನಾಡಿರುವ ಐಪಿಎಲ್ ಮುಖ್ಯಸ್ಥ ಅರುಣ್ ಧುಮಾಲ್, ವೇಳಾಪಟ್ಟಿ ಬದಲಾವಣೆ ಕುರಿತು ಪ್ರಸಾರಕರ ಜೊತೆ ಚರ್ಚೆ ನಡೆಸಬೇಕಿದೆ ಎಂದು ತಿಳಿಸಿದ್ದಾರೆ.
ದೀಪಾವಳಿ ಸಮಯದಲ್ಲಿ ಜಾಹೀರಾತು ಮತ್ತು ವ್ಯವಹಾರಿಕ ಲಾಭ ಹೆಚ್ಚು ಇರುವುದರಿಂದ ಸೆಪ್ಟೆಂಬರ್-ಅಕ್ಟೋಬರ್ ಅವಧಿ ಸೂಕ್ತವಾಗಿರಬಹುದು ಎಂದು ಹೇಳಿದ್ದಾರೆ.
ಮೇ ತಿಂಗಳಲ್ಲಿ ಬಿಸಿಲಿನ ತೀವ್ರತೆ ಹೆಚ್ಚಿರುವುದರಿಂದ ಆಟಗಾರರ ಮೇಲೂ ಪರಿಣಾಮ ಬೀರುತ್ತದೆ. ಹೀಗಾಗಿ ಫೆಬ್ರವರಿ-ಏಪ್ರಿಲ್ ಅವಧಿಯನ್ನೂ ಪರಿಗಣಿಸಬಹುದು ಎಂದಿದ್ದಾರೆ.ಇದನ್ನು ಓದಿ –ಸರ್ಕಾರದ ಸಾಧನೆ ಕನ್ನಡಿಗರಿಗೆ ಅರ್ಪಣೆ: ಸಿದ್ದರಾಮಯ್ಯ
ಆದರೆ ವೇಳಾಪಟ್ಟಿ ಬದಲಾವಣೆಯಿಂದ ಜಾಗತಿಕ ಕ್ರಿಕೆಟ್ ಟೂರ್ನಿ ಹಾಗೂ ದ್ವಿಪಕ್ಷೀಯ ಸರಣಿಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಈ ಕುರಿತು ವಿಸ್ತೃತ ಚರ್ಚೆ ಅಗತ್ಯ ಎಂದು ತಿಳಿಸಿದ್ದಾರೆ.








