By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
    ArticlesShow More
    ಕೋಪವೆಂಬುದನರ್ಥ
    July 2, 2026
    ಉಡುಗೊರೆ ಹೊರೆಯಾಗದಿರಲಿ
    May 16, 2026
    ಅಸಹಾಯಕತೆಗೆ ಸ್ಪಂದಿಸುವ ಕನ್ನಡಿಗರ ಸೌಜನ್ಯಕ್ಕೆ ಸಾಟಿಯುಂಟೇ……?
    May 16, 2026
    ” ರಿಜೆಕ್ಷನ್ ಟು ರೆವಲ್ಯೂಷನ್ “
    May 5, 2026
    “ಸೂರ್ಯನಿಗೆ ಸವಾಲೆಸೆದವರು”
    May 3, 2026
  • Sports
  • National
  • International
  • Crime
Reading: ಗಾನಕೋಗಿಲೆ ಎಸ್‌. ಜಾನಕಿ ನಿಧನ
Share
Font ResizerAa
VarthamanVarthaman
  • Home
  • Karnataka
  • Articles
  • Sports
  • National
  • International
  • Crime
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
  • Sports
  • National
  • International
  • Crime
Follow US
Varthaman > Karnataka – Latest Breaking News > Karnataka > Mysore > ಗಾನಕೋಗಿಲೆ ಎಸ್‌. ಜಾನಕಿ ನಿಧನ
KarnatakaMysoreTrending

ಗಾನಕೋಗಿಲೆ ಎಸ್‌. ಜಾನಕಿ ನಿಧನ

Team Varthaman
Last updated: July 11, 2026 9:32 PM
Team Varthaman
Published: July 11, 2026
Share
SHARE

ಮೈಸೂರು: ಖ್ಯಾತ ಹಿನ್ನೆಲೆ ಗಾಯಕಿ ಹಾಗೂ ‘ಗಾನಕೋಗಿಲೆ’ ಎಂದೇ ಜನಪ್ರಿಯರಾಗಿದ್ದ ಎಸ್‌. ಜಾನಕಿ ಅವರು ವಯೋಸಹಜ ಅನಾರೋಗ್ಯದಿಂದ ಮೈಸೂರಿನಲ್ಲಿ ನಿಧನರಾಗಿದ್ದಾರೆ.

ಚಿಕಿತ್ಸೆಗಾಗಿ ನಗರದ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಮೂಲಗಳ ಪ್ರಕಾರ, ಪುತ್ರನ ನಿಧನದ ಬಳಿಕ ಎಸ್‌. ಜಾನಕಿ ಅವರು ಮೈಸೂರಿನ ಬೋಗಾದಿಯಲ್ಲಿರುವ ಆಪ್ತರ ನಿವಾಸದಲ್ಲಿ ವಾಸವಾಗಿದ್ದರು. ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಭಾರತೀಯ ಚಿತ್ರರಂಗದ ಅತ್ಯಂತ ಶ್ರೇಷ್ಠ ಹಿನ್ನೆಲೆ ಗಾಯಕಿಯರಲ್ಲಿ ಒಬ್ಬರಾದ ಎಸ್‌. ಜಾನಕಿ ಅವರು 1980ರ ದಶಕದಲ್ಲಿ ಅಪಾರ ಜನಪ್ರಿಯತೆ ಗಳಿಸಿದ್ದರು. ‘ಭಾರತದ ನೈಟಿಂಗೇಲ್’ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಅವರು ಸುಮಾರು 48 ಸಾವಿರಕ್ಕೂ ಹೆಚ್ಚು ಹಾಡುಗಳಿಗೆ ಧ್ವನಿಯಾಗಿದ್ದರು.

Join WhatsApp Group

ಆಂಧ್ರಪ್ರದೇಶದಲ್ಲಿ ಜನಿಸಿದರೂ ಕರ್ನಾಟಕದೊಂದಿಗೆ ವಿಶೇಷ ನಂಟು ಹೊಂದಿದ್ದ ಅವರು, ಕನ್ನಡದಲ್ಲಿ ಅತ್ಯಧಿಕ ಗೀತೆಗಳನ್ನು ಹಾಡಿ ಕನ್ನಡಿಗರ ಮನಗೆದ್ದಿದ್ದರು. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಸೇರಿದಂತೆ ಹಲವು ಭಾರತೀಯ ಭಾಷೆಗಳಲ್ಲಿ ತಮ್ಮ ಸುಮಧುರ ಕಂಠದ ಮೂಲಕ ಅಸಂಖ್ಯಾತ ಅಮರ ಗೀತೆಗಳನ್ನು ನೀಡಿದ್ದಾರೆ.

ಸಂಗೀತ ಕ್ಷೇತ್ರಕ್ಕೆ ನೀಡಿದ ಅಪಾರ ಕೊಡುಗೆಗಾಗಿ ಅವರು ನಾಲ್ಕು ರಾಷ್ಟ್ರೀಯ ಪ್ರಶಸ್ತಿಗಳು, 33ಕ್ಕೂ ಹೆಚ್ಚು ರಾಜ್ಯ ಪ್ರಶಸ್ತಿಗಳು, ಮೈಸೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳಿಗೆ ಭಾಜನರಾಗಿದ್ದರು.

1938ರ ಏಪ್ರಿಲ್‌ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಪಲ್ಲಪಟ್ಲ ಗ್ರಾಮದಲ್ಲಿ ಜನಿಸಿದ ಎಸ್‌. ಜಾನಕಿ ಅವರಿಗೆ ಬಾಲ್ಯದಿಂದಲೇ ಸಂಗೀತದ ಮೇಲೆ ಅಪಾರ ಆಸಕ್ತಿ ಇತ್ತು. ಯಾವುದೇ ಔಪಚಾರಿಕ ಸಂಗೀತ ಶಿಕ್ಷಣವಿಲ್ಲದೆ ತಮ್ಮ ಸಹಜ ಪ್ರತಿಭೆ, ಪರಿಶ್ರಮ ಮತ್ತು ಸಮರ್ಪಣೆಯ ಮೂಲಕ ಭಾರತೀಯ ಸಂಗೀತ ಲೋಕದ ಅತ್ಯಂತ ಯಶಸ್ವಿ ಹಾಗೂ ಜನಪ್ರಿಯ ಹಿನ್ನೆಲೆ ಗಾಯಕಿಯಾಗಿ ಗುರುತಿಸಿಕೊಂಡಿದ್ದರು.

  • ಗಾನಕೋಗಿಲೆ ಎಸ್‌. ಜಾನಕಿ ನಿಧನ
    by Team Varthaman
  • ಅ. 11ರಂದು ಮೈಸೂರು ದಸರಾ ಉದ್ಘಾಟನೆ, 21ಕ್ಕೆ ಜಂಬೂಸವಾರಿ
    by Team Varthaman
  • ಚೆನ್ನೈನಲ್ಲಿ ಮೊದಲ ಬಾರಿಗೆ ಬಿಗ್ ಬ್ಯಾಷ್ ಲೀಗ್ ಉದ್ಘಾಟನಾ ಪಂದ್ಯ
    by Team Varthaman
  • ಲಂಚ ಪ್ರಕರಣ: ತಹಶೀಲ್ದಾರ್‌ಗೆ 4 ವರ್ಷ ಜೈಲು ಶಿಕ್ಷೆ
    by Team Varthaman
  • ರಾಜ್ಯದ ಹಲವೆಡೆ ಇಂದು ಭಾರೀ ಮಳೆ ಸಾಧ್ಯತೆ
    by Team Varthaman
ಬೆಂಗಳೂರಲ್ಲಿ RCB ಪಂದ್ಯಕ್ಕೆ ಅನುಮತಿ ನೀಡಿಲ್ಲ :ಸಚಿವ ಪರಮೇಶ್ವರ್
ಅಕ್ರಮ ವಲಸಿಗರ ಪತ್ತೆ–ಗಡಿಪಾರಿಗೆ ವಿಶೇಷ ತಂಡ ರಚನೆ: ರಾಜ್ಯ ಸರ್ಕಾರ
ಅಧಿಕಾರ ಹಂಚಿಕೆ ಮಾದ್ಯಮ ಸೃಷ್ಠಿ: ಸಿಎಂ ಸಿದ್ಧರಾಮಯ್ಯ
ಬೆಂಗಳೂರಿನ ಹೈಕೋರ್ಟ್ ಸೇರಿ 6 ಕಡೆ RDX ಬೆದರಿಕೆ ಇ-ಮೇಲ್
ಖಾಸಗಿ ಹೆಲಿಕಾಪ್ಟರ್ ಪತನ: ಐವರು ದುರ್ಮರಣ, ಇಬ್ಬರು ಗಾಯಾಳು
TAGGED:breakingnewslatestnewsS. Janakiಎಸ್‌. ಜಾನಕಿಗಾನಕೋಗಿಲೆ
Share This Article
Facebook Email Print
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
Articles

ಗುಲಾಬಿ ಪ್ರೀತಿಯ ಸಂಕೇತವಷ್ಟೇ ಅಲ್ಲ, ಉತ್ತಮ ಆರೋಗ್ಯಕ್ಕೂ ವರದಾನ

Team Varthaman
Team Varthaman
February 13, 2026
“ಇಂದು ರಾತ್ರಿ ನಾಗರಿಕತೆ ಅಂತ್ಯವಾಗಬಹುದು”; ಇರಾನ್‌ಗೆ ಟ್ರಂಪ್ ಎಚ್ಚರಿಕೆ
BMTC ಬಸ್ ಅಪಘಾತ: ಇಬ್ಬರು ದುರ್ಮರಣ, ಚಾಲಕ-ನಿರ್ವಾಹಕ ಪರಾರಿ
RCB ಮಹಿಳಾ ತಂಡಕ್ಕೆ ಎರಡನೆ ಕಿರೀಟ
ಅಂತರರಾಷ್ಟ್ರೀಯ ಯೋಗ ದಿನಾಚರಣೆ: ನಾಳೆ ವಿಶಾಖಪಟ್ಟಣಂನಲ್ಲಿ ಪ್ರಧಾನಿ ಮೋದಿ
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?