By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
    ArticlesShow More
    ತನು -ಮನ ತಂಪಾಗಿಸೋ ತಂಪು ಬೀಜಗಳು
    March 21, 2026
    ಪತ್ರಿಕೋದ್ಯಮದ ದಿಗ್ಗಜ ಬ್ರಹ್ಮಪುರಿಯ ಅಲೆಮಾರಿ
    March 17, 2026
    ಅತಿಥಿ ದೇವೋಭವ 
    March 15, 2026
    ಖನಿಜದ ಆಗರ ಅಳಿವೆ ( ಹಲೀಮ್ ಸೀಡ್ಸ್ )
    March 15, 2026
    ದ್ವೇಷಕ್ಕೆ ಬೆಂಕಿ ಹಚ್ಚಬೇಕು
    March 8, 2026
  • Sports
  • National
  • International
  • Crime
Reading: ಆಪರೇಷನ್ ಸಿಂಧೂರ ಯಶಸ್ವಿ: ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ್‌ಮೈಂಡ್ ಅಬ್ದುಲ್ ರೌಫ್ ಅಜರ್ ದುರ್ಮರಣ
Share
Font ResizerAa
VarthamanVarthaman
  • Home
  • Karnataka
  • Articles
  • Sports
  • National
  • International
  • Crime
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
  • Sports
  • National
  • International
  • Crime
Follow US
Varthaman > Karnataka – Latest Breaking News > Latest News > ಆಪರೇಷನ್ ಸಿಂಧೂರ ಯಶಸ್ವಿ: ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ್‌ಮೈಂಡ್ ಅಬ್ದುಲ್ ರೌಫ್ ಅಜರ್ ದುರ್ಮರಣ
Latest NewsTrending

ಆಪರೇಷನ್ ಸಿಂಧೂರ ಯಶಸ್ವಿ: ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ್‌ಮೈಂಡ್ ಅಬ್ದುಲ್ ರೌಫ್ ಅಜರ್ ದುರ್ಮರಣ

Team Varthaman
Last updated: May 8, 2025 10:59 AM
Team Varthaman
Published: May 8, 2025
Share
SHARE

ಇಸ್ಲಾಮಾಬಾದ್ : ಭಾರತ ನಡೆಸಿದ ಖಚಿತ ಗುರಿ ದಾಳಿ “ಆಪರೇಷನ್ ಸಿಂಧೂರ” ನಲ್ಲಿ ಜೈಶ್-ಎ-ಮೊಹಮ್ಮದ್ ಸಂಘಟನೆಯ ಭಯೋತ್ಪಾದಕ ಮತ್ತು ಕಂದಹಾರ್ ವಿಮಾನ ಹೈಜಾಕ್‌ನ ಪ್ರಮುಖ ಮಾಸ್ಟರ್‌ಮೈಂಡ್ ಅಬ್ದುಲ್ ರೌಫ್ ಅಜರ್ ಸಾವಿಗೀಡಾದ ವಿಚಾರವನ್ನು ಭಾರತೀಯ ಗುಪ್ತಚರ ಸಂಸ್ಥೆಗಳು ದೃಢಪಡಿಸಿವೆ.

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಬಹವಾಲ್ಪುರದಲ್ಲಿ ನಡೆದ ಏರ್‌ಸ್ಟ್ರೈಕ್ ವೇಳೆ ಅಜರ್ ಮಸೂದ್‌ನ ಕುಟುಂಬದ 13 ಮಂದಿ ಹತರಾಗಿದ್ದು, ಈ ಪೈಕಿ ರೌಫ್ ಅಜರ್ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಈ ದಾಳಿಯು ಭದ್ರತಾ ದೃಷ್ಟಿಯಿಂದ ಮಹತ್ವದ್ದಾಗಿದ್ದು, ಹಲವಾರು ಭಯೋತ್ಪಾದನಾ ಶಕ್ತಿಗಳಿಗೆ ದೊಡ್ಡ ಹೊಡೆತ ನೀಡಿದ ಕಾರ್ಯಾಚರಣೆಯಾಗಿದೆ.

Join WhatsApp Group

ಭಾರತಕ್ಕೆ ಮೋಸ್ಟ್ ವಾಂಟೆಡ್ ಉಗ್ರ:

ಅಬ್ದುಲ್ ರೌಫ್ ಅಜರ್ ಹಲವು ಭಯೋತ್ಪಾದಕ ದಾಳಿಗಳ ಹಿಂದೆ ಇದ್ದ ಪ್ರಮುಖ ಸಂಚುಕೋರ. 1999ರ ಕಂದಹಾರ್ ವಿಮಾನ ಹೈಜಾಕ್, 2001ರ ಸಂಸತ್ ದಾಳಿ, ಉರಿ, ಪುಲ್ವಾಮಾ, ಪಠಾಣ್‌ಕೋಟ್ ದಾಳಿ ಹಾಗೂ ಅಕ್ಷರಧಾಮ ದಾಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ. ಲಷ್ಕರ್-ಎ-ತೈಬಾ ಹಾಗೂ ಜೈಶ್-ಎ-ಮೊಹಮ್ಮದ್ ಸಂಘಟನೆಗಳೊಂದಿಗೆ ನಂಟು ಹೊಂದಿದ್ದ ಈ ಉಗ್ರ, ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರೀ ಹಿಂಸಾತ್ಮಕ ಚಟುವಟಿಕೆಗಳನ್ನು ನಡೆಸುತ್ತಿದ್ದನು.

ಐಸಿ-814 ವಿಮಾನ ಅಪಹರಣದ ಹಿನ್ನೆಲೆ:

ಅಬ್ದುಲ್ ರೌಫ್ ಅಜರ್ 1999ರ ಡಿಸೆಂಬರ್ 24ರಂದು ನಡೆದ ಇಂಡಿಯನ್ ಏರ್‌ಲೈನ್ಸ್ ಐಸಿ-814 ವಿಮಾನ ಅಪಹರಣದ ಪ್ರಮುಖ ಮಾಸ್ಟರ್‌ಮೈಂಡ್ ಆಗಿದ್ದ. ನೇಪಾಳದ ಕಠ್ಮಂಡುವಿನಿಂದ ದೆಹಲಿಗೆ ಬರುತ್ತಿದ್ದ ವಿಮಾನವನ್ನು ಪಾಕಿಸ್ತಾನ ಮೂಲದ ಉಗ್ರರು ಅಪಹರಿಸಿ, ಅದನ್ನು ಅಫ್ಘಾನಿಸ್ತಾನದ ಕಂದಹಾರ್‌ಗೆ ತೆಗೆದುಕೊಂಡು ಹೋಗಿದ್ದರು. ವಿಮಾನದಲ್ಲಿ 176 ಪ್ರಯಾಣಿಕರಿದ್ದರು.

ಅಪಹರಣದ ನಂತರ ಉಗ್ರರು ಮೌಲಾನಾ ಮಸೂದ್ ಅಜರ್ ಸೇರಿದಂತೆ ಮೂವರು ಭಯೋತ್ಪಾದಕರನ್ನು ಬಿಡುಗಡೆ ಮಾಡಬೇಕೆಂದು ಬೇಡಿಕೆ ಇಟ್ಟಿದ್ದರು. ಏಳು ದಿನಗಳ ಕಾಲ ಯತ್ನಗಳ ನಂತರ, ವಾಜಪೇಯಿ ನೇತೃತ್ವದ ಸರ್ಕಾರ ಹತಾಶೆಯಾಗಿ ಅವರು ಬಯಸಿದ ಮೂವರು ಭಯೋತ್ಪಾದಕರನ್ನು ಬಿಡುಗಡೆ ಮಾಡಿ ಅಪಹೃತರನ್ನು ರಕ್ಷಿಸಿತು.ಇದನ್ನು ಓದಿ –ಹಲವು ಜಿಲ್ಲೆಗಳಲ್ಲಿ ಸರ್ವೇ ಸೂಪರ್‌ವೈಸರ್‌ ಮನೆ ಹಾಗೂ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ

ಅಂತರ್ಜಾತೀಯ ಮಟ್ಟದಲ್ಲಿ ಇಂತಹ ಉಗ್ರರ ನಾಶವು ಭದ್ರತೆಗೆ ಆಶಾಕಿರಣವನ್ನು ತರುತ್ತದೆ. ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಯಶಸ್ಸು ಭಾರತದ ಗಂಭೀರ ಭದ್ರತಾ ಬದ್ಧತೆಯ ಸಾಕ್ಷಿಯಾಗಿದೆ.

  • ತನು -ಮನ ತಂಪಾಗಿಸೋ ತಂಪು ಬೀಜಗಳು
    by Team Varthaman
    March 21, 2026
  • ಕಿರುಕುಳ ಆರೋಪ: ಕಚೇರಿಯಲ್ಲೇ ಅಧಿಕಾರಿ ಆತ್ಮಹತ್ಯೆ
    by Team Varthaman
    March 21, 2026
  • ಇರಾನ್ ಜೊತೆ ಕದನ ವಿರಾಮ ಇಲ್ಲ: ಟ್ರಂಪ್ ಹೇಳಿಕೆ
    by Team Varthaman
    March 21, 2026
  • ಪ್ರೀಮಿಯಂ ಪೆಟ್ರೋಲ್ ದರ ಏರಿಕೆ
    by Team Varthaman
    March 20, 2026
  • RCB ಟಿಕೆಟ್ ಇದ್ದರೆ ಮೆಟ್ರೋ ಪ್ರಯಾಣ ಉಚಿತ
    by Team Varthaman
    March 20, 2026
BMTC ಬಸ್ ಅಪಘಾತ: ಇಬ್ಬರು ದುರ್ಮರಣ, ಚಾಲಕ-ನಿರ್ವಾಹಕ ಪರಾರಿ
ಕರ್ನಾಟಕ ಬಜೆಟ್ 2026-27 : ಜಿಲ್ಲಾವಾರು ಅನುದಾನದ ವಿವರ
ಮುಟ್ಟಿನ ಮೂಢನಂಬಿಕೆಗೆ ಪೂರ್ಣವಿರಾಮ
ಮದ್ಯದ ಬೆಲೆ ಹೆಚ್ಚಳ ಖಚಿತ, ಹೊಸ ಬೆಲೆ ಏರಿಕೆ ಅಧಿಸೂಚನೆ ಹೊರಡಿಕೆ
ತಂದೆ–ತಾಯಿ ಬೇರ್ಪಟ್ಟ ನೋವಿಗೆ ಬಾಲಕಿ ಆತ್ಮಹತ್ಯೆ
TAGGED:Abdul Rauf AzharbreakingnewsJammu & KashmirKandahar plane hijacklatestnewsOperation sindoorPahalgam attack
Share This Article
Facebook Email Print
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
New Delhi

ದೇಶದಲ್ಲಿ 10,650 ಹೊಸ MBBS ಸೀಟುಗಳಿಗೆ ಕೇಂದ್ರದ ಅನುಮೋದನೆ

Team Varthaman
Team Varthaman
October 20, 2025
ಮುಂದಿನ 6 ತಿಂಗಳಲ್ಲಿ ಪೆಟ್ರೋಲ್ ದರದಷ್ಟೇ ಇವಿ ಬೆಲೆ: ನಿತಿನ್ ಗಡ್ಕರಿ
ನಾನು ಕಂಡಂತೆ ಜೀವನ ಶೈಲಿಯಲ್ಲಿ ಬದಲಾವಣೆ.
ರಾಜಕೀಯ ನಿವೃತ್ತಿ ಘೋಷಿಸಿದ ಎಸ್‌.ಎ.ರಾಮದಾಸ್‌
ಮೈಸೂರು: ಕುಟುಂಬ ಕಲಹಕ್ಕೆ ಬೇಸತ್ತ ಪೊಲೀಸ್ ಪೇದೆ ಆತ್ಮಹತ್ಯೆ
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?