ಬೆಂಗಳೂರು:ನಗರದ ಅಮೃತಹಳ್ಳಿ ಪ್ರದೇಶದಲ್ಲಿ ನಡೆದ ಮಾದಕ ವಸ್ತು ಪ್ರಕರಣದಲ್ಲಿ ಪೊಲೀಸರು ಬರೋಬ್ಬರಿ 3 ಕೋಟಿ ರೂ ಮೌಲ್ಯದ ಡ್ರಗ್ಸ್ ಹಾಗೂ ಗಾಂಜಾವನ್ನು ಜಪ್ತಿ ಮಾಡಿದ್ದಾರೆ. ಈ ವೇಳೆ ನೈಜೀರಿಯನ್ ಮೂಲದ ವ್ಯಕ್ತಿಯನ್ನು ಬಂಧಿಸಲಾಗಿದೆ.
ಅಮೃತಹಳ್ಳಿಯಲ್ಲಿ ಎಂಡಿಎಂಎ ಕ್ರಿಸ್ಟಲ್ ಮತ್ತು ಗಾಂಜಾ ಮಾರಾಟದಲ್ಲಿ ತೊಡಗಿದ್ದ ಪೆಪೆ ಎಂಬ ನೈಜೀರಿಯನ್ ಪ್ರಜೆ ಮೇಲೆ ಪೊಲೀಸರು ಬಲೆ ಬೀಸಿದ್ದು, ಬಂಧನಕ್ಕೊಳಪಡಿಸಿದ್ದಾರೆ. ಆರೋಪಿಯಿಂದ ಮೂರು ಕೆಜಿ ಗಾಂಜಾ ಮತ್ತು ಇತರೆ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ, ಇದನ್ನೆಲ್ಲ 3 ಕೋಟಿ ರೂಪಾಯಿ ಮೌಲ್ಯದ ಎಂದು ಅಂದಾಜಿಸಲಾಗಿದೆ.
ಇತ್ತೀಚೆಗಷ್ಟೇ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಬೆಂಗಳೂರಿನಲ್ಲಿ ಡ್ರಗ್ಸ್ ಮಾರಾಟ ಹಾಗೂ ಸೇವನೆಗೆ ಕಡಿವಾಣ ಹಾಕಬೇಕೆಂದು ಪೊಲೀಸ್ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಇದನ್ನು ಹಿನ್ನಲೆಯಲ್ಲಿ ಪೊಲೀಸರು ಡ್ರಗ್ಸ್ ವಿರುದ್ಧ ಗಂಭೀರ ಕ್ರಮಕ್ಕೆ ಕೈ ಹಾಕಿದ್ದು, ಈಗ ಅಮೃತಹಳ್ಳಿಯ ಈ ಕಾರ್ಯಾಚರಣೆಯಿಂದ ಮತ್ತೊಮ್ಮೆ ಡ್ರಗ್ಸ್ ಜಾಲದ ವಿರುದ್ಧ ಕಠಿಣ ನಿಲುವು ತಾಳಿರುವುದು ಸ್ಪಷ್ಟವಾಗಿದೆ.ಇದನ್ನು ಓದಿ –ಆಟೋ ಮಿನಿಮಮ್ ದರ 40 ರೂಪಾಯಿಗೆ ಏರಿಕೆ ?
ಪೊಲೀಸರ ಈ ಕ್ರಮಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗುತ್ತಿದ್ದು, ಮಾದಕ ವಸ್ತುಗಳ ಜಾಲವನ್ನು ಸಂಪೂರ್ಣವಾಗಿ ಅಡೆತಡೆ ಮಾಡುವತ್ತ ಸರ್ಕಾರದ ಮತ್ತು ಪೊಲೀಸರ ಪ್ರಯತ್ನ ಮುಂದುವರಿದಿದೆ.