ಮೈಸೂರು: ಪ್ರತಿಷ್ಠಿತ ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಎಸ್.ಎನ್.ಹೆಗ್ಡೆ ಅವರ ಪತ್ನಿ ಭಾರತಿ ಹೆಗ್ಡೆ ನಿಧನ.
78 ವರ್ಷದ ಮೃತರು ಕಳೆದ ಕೆಲದಿನಗಳಿಂದ ವಯೋಸಹಜ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದು ಗುರುವಾರ ಮಧ್ಯಾಹ್ನ ನಿಧನರಾದರು.
ಮೃತರ ಪುತ್ರಿ ವಿದೇಶದಲ್ಲಿದ್ದು, ರಾತ್ರಿ ಮೈಸೂರಿಗೆ ಆಗಮಿಸಲಿದ್ದಾರೆ. ನಾಳೆ ಬೆಳಗೆ ವಿಜಯನಗರದ ವಿದ್ಯುತ್ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಭಾರತಿ ಹೆಗ್ಡೆ ಅವರ ನಿಧನಕ್ಕೆ ಪ್ರೊ.ಎಸ್.ಎನ್. ಹೆಗ್ಡೆ ಅವರ ಒಡನಾಡಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಸಂತಾಪ ಸೂಚಿಸಿದ್ದಾರೆ.