ಮೈಸೂರು: ಕುಲಶಾಸ್ತ್ರೀಯ ಅಧ್ಯಯನ ವರದಿ ಕುರಿತು ಸಮಾಜ ಕಲ್ಯಾಣ ಇಲಾಖೆಯ ಕಾರ್ಯದರ್ಶಿ, ಆಯುಕ್ತ ಹಾಗೂ ಹಿರಿಯ ಸಲಹೆಗಾರರೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಭರವಸೆ ನೀಡಿದರು.
ಮೈಸೂರಿನ ಜಲದರ್ಶಿನಿ ಅತಿಥಿಗೃಹದಲ್ಲಿ ಕರ್ನಾಟಕ ರಾಜ್ಯ ಶಿಳ್ಳೇಕ್ಯಾತರ (ಕಿಳ್ಳೇಕ್ಯಾತರ) ಪ.ಜಾತಿ ಅಭಿವೃದ್ಧಿ ಸಂಘದ ಮುಖಂಡರಿಂದ ಪರಿಶಿಷ್ಟ ಜಾತಿಯ ಪರ್ಯಾಯ ಪದಗಳಾದ ಕಿಳ್ಳೇಕ್ಯಾತರ, ಕಟುಬ, ಕಟುಬರ, ಬುಂಡೆಬೆಸ್ತ, ಜಲಗಾರ ಜಾತಿಗಳನ್ನು ಕುರಿತು ಡಾ.ಎಂ.ಆರ್.ಗಂಗಾಧರ್ ಅವರು ಮಾಡಿರುವ ಕುಲಶಾಸ್ತ್ರೀಯ ಅಧ್ಯಯನ ವರದಿಯನ್ನು ಯಥಾವತ್ತಾಗಿ ಜಾರಿಮಾಡುವಂತೆ ನೀಡಿದ ಅಹವಾಲನ್ನು ಸ್ವೀಕರಿಸಿ, ಅವರ ಸಮಸ್ಯೆಗಳನ್ನು ಆಲಿಸಿದರು. ಜತೆಗೆ ಈ ಬಗ್ಗೆ ಸೂಕ್ತ ಕ್ರಮವಹಿಸುವ ಭರವಸೆ ನೀಡಿದರು.
ಇದನ್ನು ಓದಿ –ಇರಾನ್ ವಿರುದ್ಧ ಮಿಲಿಟರಿ ಕ್ರಮ ಕೈಗೊಳ್ಳಬೇಡಿ – ಅಮೆರಿಕಗೆ ರಷ್ಯಾ ಎಚ್ಚರಿಕೆ
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಕೆ.ನಾಗಪ್ಪ, ಗೌರವ ಅಧ್ಯಕ್ಷರಾದ ಡಾ.ಸಣ್ಣವೀರಣ್ಣ ದೊಡ್ಡಮನಿ, ಪಿ.ರಾಮಯ್ಯ, ಮಹೆಂದರ್ ರಾವ್ ಸಾಸನಿಕ್, ಮುಖಂಡರಾದ ವಿಲಾಸ್ ಕುಮಾರ್ ಸಿಂಧೆ, ಪುಡ್ಲಿಕಪ್ಪ ಕಿಳ್ಳೇಕ್ಯಾತರ, ಹುಣಸೂರು ಸಣ್ಣಸ್ವಾಮಿ, ರಾಜಣ್ಣ, ಶಿವಣ್ಣ, ಅಣ್ಣಪ್ಪ ಸೇರಿ ಮುಂತಾದವರು ಹಾಜರಿದ್ದರು.