By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
    ArticlesShow More
    ಅಜವಾನ ಅಜೀರ್ಣಕ್ಕೆ ಪ್ರಕೃತಿ ನೀಡಿದ ವರದಾನ
    February 1, 2026
    ಹೀಗೆ ಬಂದು ಹಾಗೆ ಹೋಗುವ ಸ್ನೇಹ ಸಾವಿರ
    February 1, 2026
    ಸಾವು ಬದುಕಿನ ನಡುವೆ
    January 28, 2026
    ವಾಸ್ತವ ವರ್ತಮಾನ
    January 24, 2026
    ಅರೋಗ್ಯ ಭಾಗ್ಯ
    January 24, 2026
  • Sports
  • National
  • International
  • Crime
Reading: ರಾಜ್ಯದಲ್ಲಿ ಭ್ರಷ್ಟಚಾರ ಮೀತಿ ಮೀರಿದೆ: ಎಚ್.ವಿಶ್ವನಾಥ್
Share
Font ResizerAa
VarthamanVarthaman
  • Home
  • Karnataka
  • Articles
  • Sports
  • National
  • International
  • Crime
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
  • Sports
  • National
  • International
  • Crime
Follow US
Varthaman > Karnataka – Latest Breaking News > Karnataka > Mysore > ರಾಜ್ಯದಲ್ಲಿ ಭ್ರಷ್ಟಚಾರ ಮೀತಿ ಮೀರಿದೆ: ಎಚ್.ವಿಶ್ವನಾಥ್
KarnatakaMysorePolitics

ರಾಜ್ಯದಲ್ಲಿ ಭ್ರಷ್ಟಚಾರ ಮೀತಿ ಮೀರಿದೆ: ಎಚ್.ವಿಶ್ವನಾಥ್

Team Varthaman
Last updated: June 24, 2025 1:29 PM
Team Varthaman
Published: June 24, 2025
Share
SHARE

ಮೈಸೂರು: ರಾಜ್ಯದಲ್ಲಿ ಭ್ರಷ್ಟಚಾರ ಮೀತಿ ಮೀರಿದೆ, ಆದರೆ,ಸಿದ್ದರಾಮಯ್ಯ ಯಾವುದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಆರೋಪಿಸಿದರು.

ಸಿದ್ದರಾಮಯ್ಯ ಯಾವುದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ.ನೀವೆ ಕಳ್ಳ ಬಿಜೆಪಿಯವರನ್ನು ಕಳ್ಳ ಎನ್ನುತ್ತೀರಾ?  ಸಿದ್ದರಾಮಯ್ಯ ರಾಜ್ಯವನ್ನು ಹರಾಜು ಹಾಕಿದ್ದಾರೆ ಎಂದು ಜಲದರ್ಶಿನಿ ಅತಿಥಿಗೃಹದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹರಿಹಾಯ್ದರು.

ವಸತಿ ಮನೆಗಳ ಹಂಚಿಕೆಯಲ್ಲಿ ಆಶ್ರಯ ಸಮಿತಿಯೇ ಪರಮೋಚ್ಚ. ಆಶ್ರಯ ಸಮಿತಿ, ಶಾಸಕರ ಹಂತದಲ್ಲೇ ಮನೆಗಳು ಮಾರಾಟ ಆಗುತ್ತವೆ.ಕಾಮಗಾರಿಯಲ್ಲಿ ಸಚಿವರಿಗೆ ಶೇ.10 ಕಮಿಷನ್ ಹೋಗುತ್ತದೆ. ಕೆಲಸ ಮುಗಿಸುವವರೆಗೆ ಶೇ.25 ಆಗುತ್ತದೆ. ಮನೆಗಳ ಹಂಚಿಕೆಯಲ್ಲಿ ಆಶ್ರಯ ಸಮಿತಿ ಗ್ರಾಮಸಭೆ ಮೂಲಕ ಆಯ್ಕೆ ಆಗಬೇಕು ಎಂದರು.

Join WhatsApp Group

ವಸತಿ ಇಲಾಖೆಯಲ್ಲಿ ನಡೆಯುತ್ತಿರುವ ಅವ್ಯವಹಾರದ ಬಗ್ಗೆ ಸ್ವತಃ ಶಾಸಕ ಬಿ.ಆರ್. ಪಾಟೀಲ್ ಧ್ವನಿ ಎತ್ತಿದ್ದಾರೆ.ಶಾಸಕ ರಾಜುಕಾಗೆ ಕೂಡ ರಾಜ್ಯ ಸರಕಾರದ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದಾರೆ. ಸಿದ್ದರಾಮಯ್ಯ ಭ್ರಷ್ಟಚಾರದ ವಿರುದ್ದ ಯಾಕೆ ಮಾತನಾಡುತ್ತಿಲ್ಲವೆಂದು ಪ್ರಶ್ನಿಸಿದರು.

ಮದ್ಯದ ಬೆಲೆ ಜಾಸ್ತಿ ಮಾಡಿದ್ದು ಕುಡಿಯೋರು ಕಡಿಮೆ ಆಗಲಿ ಅಂತಾ ಮಾಡಿದ್ದು ಅಂತಾರೆ. ಮದ್ಯದ ಬೆಲೆ ಏರಿಕೆ ಮಾಡಿದ ಮಾತ್ರಕ್ಕೆ ಕುಡಿಯುವವರು ಕಡಿಮೆಯಾಗಿಲ್ಲ.ಯುವಕರು ಗಾಂಜಾ ಅಫೀಮು ಮೊರೆ ಹೋಗುತ್ತಿದ್ದಾರೆ.ಗಾಂಜಾ ಅಫೀಮು ಎಲ್ಲಾ ಕಡೆ ಹೆಚ್ಚಾಗಿದೆ. ಇದರ ಚಟ ಯುವಕರನ್ನು ಬಲಿ ತೆಗೆದು ಕೊಳ್ಳುತ್ತಿದೆ,ಸಿಗರೇಟು ಸೇದುತ್ತಿದ್ದವರು ಗಾಂಜಾ ಹೊಡೆಯುತ್ತಿದ್ದಾರೆ.ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ರಾಜ್ಯ ಹಾಳಾಗಿ ಹೋಯಿತು ಎಂದು ಕಿಡಿಕಾರಿದರು.

26ನೆ ತಾರೀಖು ದಸರಾ ಆಚರಣೆ ಸಂಬಂಧ ಹೈ ಪರ್ವ ಕಮಿಟಿ ಮೀಟಿಂಗ್ ಇದೆ.
ಅಧಿಕಾರಿಗಳು ಸಿಎಂ ಅವರನ್ನೇ ಗಣನೆಗೆ ತೆಗೆದುಕೊಳ್ಳುತ್ತಿಲ್ಲ.ಅರಮನೆಗೆ ಉಪನಿರ್ದೇಶಕರೇ ಲೀಡರ್ ಆಗಿದ್ದಾರೆ.ಅರಮನೆ ನಿರ್ವಹಣೆಯನ್ನು ಮಹಾರಾಜರಿಗೆ ಕೊಡೋದು ಒಳ್ಳೆಯದು ಎಂದರು.

ಅರಮನೆ ಆಡಳಿತ ಮಂಡಳಿಗೆ ಕೆಎಎಸ್ ಅಧಿಕಾರಿಯನ್ನು ನೇಮಕ ಮಾಡಬೇಕು ಅಂತ ಇದೆ. ಆದರೆ ಆ ವ್ಯಕ್ತಿಯನ್ನು ಬದಲು ಮಾಡಲು ಇವರು ಬಿಡುತ್ತಿಲ್ಲ.ಅರಮನೆಗೆ ಬರುವ ಪ್ರವಾಸಿಗರ ಟಿಕೆಟ್ ದರ ಏರಿಕೆ ಮಾಡಲಾಗಿದೆ.ಇದನ್ನು ಕೇಳುವವರೇ ಯಾರು ಇಲ್ಲ ಎಂದು ಕಿಡಿಕಾರಿದರು.

ಸಿಎಂ ಕ್ಷೇತ್ರದಲ್ಲಿ ಮುಡಾ ಹಾಳಾಯ್ತು, ಈಗ ಅರಮನೆ ದಿವಾಳಿ ಆಗುತ್ತಿದೆ. ಮೈಸೂರು ಅರಮನೆಗೆ ವಿಶ್ವವಿಖ್ಯಾತ ಮನ್ನಣೆ ಇದೆ.ಮೂರು ಜನ ಗುಂಪು ಕಟ್ಟಿಕೊಂಡು ದಸರಾ ಆಚರಣೆ ಮಾಡುತ್ತಾರೆ. ಎಲ್ಲಾ ಕಡೆ ಸಿದ್ದರಾಮಯ್ಯ ಶಿಷ್ಯರೇ ಕುಳಿತು ಹಾಳು ಮಾಡಿದ್ದಾರೆ. ಮಿಸ್ಟರ್ ಸಿದ್ದರಾಮಯ್ಯ ಇನ್ನೇನು ಉದ್ದಾರ ಮಾಡುತ್ತಿರಾ? ರಾಜ್ಯ ಸರಕಾರ ಮೈಸೂರು ಅರಮನೆ ಕಡೆಗೆ ಗಮನಹರಿಸಬೇಕು ಎಂದು ಒತ್ತಾಯಿಸಿದರು.

ಎಂಸಿಡಿಸಿಸಿ ಬ್ಯಾಂಕ್ ಚುನಾವಣೆಗೆ ಕೆಲ ಶಾಸಕರು ಸ್ಪರ್ಧಿಸಿರುವ ವಿಚಾರವಾಗಿ ಮಾತನಾಡಿ, ಜಿ.ಟಿ. ದೇವೇಗೌಡ, ಅವರ ಪುತ್ರ ಹರೀಶ್ ಗೌಡ ಸಹಕಾರ ಕ್ಷೇತ್ರದಲ್ಲಿ ಈ ಮೊದಲಿನಿಂದಲೂ ಇದ್ದಾರೆ.ಸಹಕಾರ ಕ್ಷೇತ್ರದಲ್ಲಿ ಇವರ ಹಿಡಿತ ತಪ್ಪಿಸಬೇಕು.ಕಾಂಗ್ರೆಸ್ಸನ್ನು ಅಧಿಕಾರಕ್ಕೆ ತರಬೇಕು ಅಂತ ಸಿದ್ದರಾಮಯ್ಯ ಈ ರೀತಿ ಮಾಡಿಸುತ್ತಿದ್ದಾರೆ ಎಂದರು.ಇದನ್ನು ಓದಿ –ಟಿಟಿಡಿಗೆ ನಂದಿನಿ ತುಪ್ಪದ ದಾಹ: 10 ಲಕ್ಷ ಕೆಜಿ ಬೇಡಿಕೆ

ಕಾರ್ಯಕರ್ತರು ಚುನಾವಣೆಗೆ ನಿಂತರೆ ಹಣದ ಕೊರತೆ ಆಗುತ್ತದೆ.ಶಾಸಕರೇ ಚುನಾವಣೆಗೆ ನಿಂತರೆ ಯಥೇಚ್ಛವಾಗಿ ಹಣ ಖರ್ಚು ಮಾಡುತ್ತಾರೆ.ಸಹಕಾರ ಕ್ಷೇತ್ರದಲ್ಲಿ ಜಿ.ಟಿ.ದೇವೇಗೌಡ ಕುಟುಂಬದ ಪ್ರಾಬಲ್ಯ ಮುಗಿಸುವುದು ಸಿಎಂ ಸಿದ್ದರಾಮಯ್ಯ ಪ್ಲಾನ್ ಇರಬೇಕು ಎಂದು ಹೇಳಿದರು.

  • ಅಜವಾನ ಅಜೀರ್ಣಕ್ಕೆ ಪ್ರಕೃತಿ ನೀಡಿದ ವರದಾನ
    by Team Varthaman
    February 1, 2026
  • ಹೀಗೆ ಬಂದು ಹಾಗೆ ಹೋಗುವ ಸ್ನೇಹ ಸಾವಿರ
    by Team Varthaman
    February 1, 2026
  • ಐಟಿ ದಾಳಿ ಭೀತಿ: ಕಾನ್ಫಿಡೆಂಟ್ ಅಧ್ಯಕ್ಷ ಡಾ.ಸಿ.ಜೆ.ರಾಯ್ ಆತ್ಮಹತ್ಯೆ
    by Team Varthaman
    January 30, 2026
  • ಅಕ್ರಮ ವಲಸಿಗರ ಪತ್ತೆ–ಗಡಿಪಾರಿಗೆ ವಿಶೇಷ ತಂಡ ರಚನೆ: ರಾಜ್ಯ ಸರ್ಕಾರ
    by Team Varthaman
    January 30, 2026
  • ತಿರುಪತಿ ಲಡ್ಡು ಕಲಬೆರಕೆ ಪ್ರಕರಣ: ₹234 ಕೋಟಿ ವಂಚನೆ ಬಯಲು
    by Team Varthaman
    January 30, 2026
ಭಾರತ ವಿರುದ್ಧ ಸುಳ್ಳು ಆರೋಪ ಮಾಡಿದ ಪಾಕಿಸ್ತಾನಕ್ಕೆ ವಿಶ್ವಸಂಸ್ಥೆಯಲ್ಲಿ ಮತ್ತೆ ಮುಖಭಂಗ
ವಾಣಿಜ್ಯ LPG ಸಿಲಿಂಡರ್ ದರದಲ್ಲಿ 51 ರೂ. ಇಳಿಕೆ
ಜು. 14ರಂದು ಭೂಮಿಗೆ ವಾಪಸಾಗಲಿರುವ ಗಗನಯಾತ್ರಿ ಶುಭಾಂಶು ಶುಕ್ಲಾ ಹಾಗೂ ಆಕ್ಸಿಯಮ್-4 ಸಿಬ್ಬಂದಿ
ಟರ್ಕಿ ಸೇನಾ ವಿಮಾನಗಳ ಪಾಕ್ ಪ್ರವೇಶ: ಪ್ರಾದೇಶಿಕ ಅಸ್ಥಿರತೆಯಲ್ಲಿ ತೀವ್ರತೆ
ಕರೂರ್ ಕಾಲ್ತುಳಿತ ಪ್ರಕರಣ: ದಳಪತಿ ವಿಜಯ್‌ಗೆ ಸಿಬಿಐ ಸಮನ್ಸ್
TAGGED:H VishwanathlatestnewsMysore Newsಭ್ರಷ್ಟಚಾರ
Share This Article
Facebook Email Print
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
BellaryEducationKarnataka

ಕೆ-ಸೆಟ್ ಪರೀಕ್ಷೆಯಲ್ಲಿ ಕೆಇಎ ಎಡವಟ್ಟು

Team Varthaman
Team Varthaman
November 2, 2025
ಮೈಸೂರಲ್ಲಿ ಲಾರಿ ಸಂಚಾರ ಬಂದ್
ಬಣ್ಣದ ಬದುಕಿಗೂ ಇಹುದು ಕಷ್ಟ ಸುಖ(ಬ್ಯಾಂಕರ್ಸ್ ಡೈರಿ)
ಮುಂದಿನ ನಾಲ್ಕು ದಿನ ರಾಜ್ಯದಲ್ಲಿ ಭಾರೀ ಮಳೆಯ ಮುನ್ಸೂಚನೆ
ಜು. 14ರಂದು ಭೂಮಿಗೆ ವಾಪಸಾಗಲಿರುವ ಗಗನಯಾತ್ರಿ ಶುಭಾಂಶು ಶುಕ್ಲಾ ಹಾಗೂ ಆಕ್ಸಿಯಮ್-4 ಸಿಬ್ಬಂದಿ
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?