By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
    ArticlesShow More
    ” ರಿಜೆಕ್ಷನ್ ಟು ರೆವಲ್ಯೂಷನ್ “
    May 5, 2026
    “ಸೂರ್ಯನಿಗೆ ಸವಾಲೆಸೆದವರು”
    May 3, 2026
    ಸ್ವಭಾವದ ಸ್ವರೂಪ
    May 3, 2026
    “ರೈಟ್ ಟು ಡ್ರೈ”
    May 3, 2026
    ಸುಡುವ ಸೂರ್ಯನಿಗೊಂದು ಪತ್ರ
    May 3, 2026
  • Sports
  • National
  • International
  • Crime
Reading: ಕಸಾಪದಲ್ಲಿ ಅವ್ಯವಹಾರ : ಅಧ್ಯಕ್ಷ ಜೋಶಿ ವಿರುದ್ದ ತನಿಖೆಗೆ ವಿಚಾರಣಾಧಿಕಾರಿ ನೇಮಕ
Share
Font ResizerAa
VarthamanVarthaman
  • Home
  • Karnataka
  • Articles
  • Sports
  • National
  • International
  • Crime
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
  • Sports
  • National
  • International
  • Crime
Follow US
Varthaman > Karnataka – Latest Breaking News > Karnataka > Bengaluru > ಕಸಾಪದಲ್ಲಿ ಅವ್ಯವಹಾರ : ಅಧ್ಯಕ್ಷ ಜೋಶಿ ವಿರುದ್ದ ತನಿಖೆಗೆ ವಿಚಾರಣಾಧಿಕಾರಿ ನೇಮಕ
BengaluruKarnatakaTrending

ಕಸಾಪದಲ್ಲಿ ಅವ್ಯವಹಾರ : ಅಧ್ಯಕ್ಷ ಜೋಶಿ ವಿರುದ್ದ ತನಿಖೆಗೆ ವಿಚಾರಣಾಧಿಕಾರಿ ನೇಮಕ

Team Varthaman
Last updated: July 3, 2025 10:50 AM
Team Varthaman
Published: July 3, 2025
Share
SHARE

ಬೆಂಗಳೂರು:ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ (ಕಸಾಪ) ನಡೆದಿದೆ ಎನ್ನಲಾದ ಹಣಕಾಸಿನ ಅವ್ಯವಹಾರ ಹಾಗೂ ಅಧಿಕಾರ ದುರ್ಬಳಕೆಯ ಆರೋಪಗಳನ್ನು ಕುರಿತು ವಿಚಾರಣೆ ನಡೆಸಲು ಸಹಕಾರ ಇಲಾಖೆ ಆದೇಶ ಹೊರಡಿಸಿದೆ.

ಬೆಂಗಳೂರು ನಗರ ಜಿಲ್ಲೆಯ ಸಹಕಾರ ಸಂಘಗಳ ಉಪ ನಿಬಂಧಕ ಪಿ.ಶಶಿಧರ್ ಅವರನ್ನು ವಿಚಾರಣಾಧಿಕಾರಿಯನ್ನಾಗಿ ನೇಮಿಸಿದೆ.

ಕಸಾಪ ಕಾರ್ಯಚಟುವಟಿಕೆಗಳನ್ನು ಕುರಿತು ಹಲವು ದೂರುಗಳ ಸತ್ಯಾಸತ್ಯತೆ ಅರಿಯಲು ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960ರ ಕಲಂ 25ರ ಅಡಿ 17 ಅಂಶಗಳ ಬಗ್ಗೆ ವಿಚಾರಣೆ ನಡೆಸಲು ನಿರ್ಧರಿಸಿ ಆದೇಶ ಹೊರಡಿಸಲಾಗಿದೆ.

Join WhatsApp Group

ವಿಚಾರಣೆಗೆ 45 ದಿನಗಳ ಕಾಲಮಿತಿ ವಿಧಿಸಲಾಗಿದೆ. ಅಷ್ಟರೊಳಗೆ ವಿಚಾರಣೆ ನಡೆಸಿ, ವರದಿ ಸಲ್ಲಿಸಬೇಕು ಎಂದು ಸಂಘಗಳ ಜಿಲ್ಲಾ ನೋಂದಣಾಧಿಕಾರಿ ಹಾಗೂ ಸಹಕಾರ ಸಂಘಗಳ ಉಪ ನಿಬಂಧಕರು ತಿಳಿಸಿದ್ದಾರೆ.

ಪರಿಷತ್ತಿನ ನಿಯಮ ಹಾಗೂ ನಿಬಂಧನೆಗಳ ಪ್ರಕಾರ ಆಯ್ಕೆಗೊಂಡಿರುವ ಆಡಳಿತ ಮಂಡಳಿಯ ಪದಾಧಿಕಾರಿಗಳಿಗೆ ಮತ್ತು ಜಿಲ್ಲಾ ಪದಾಧಿಕಾರಿಗಳಿಗೆ ಕಸಾಪ ಅಧ್ಯಕ್ಷರು ನಿಯಮ ಬಾಹಿರವಾಗಿ ನೋಟಿಸ್ ಜಾರಿ ಮಾಡುತ್ತಿರುವ ಬಗ್ಗೆ ಮತ್ತು 2022–23ನೇ ಸಾಲಿನಿಂದ ಈವರೆಗೆ ವಾಹನಗಳ ಖರೀದಿ ಮತ್ತು ಮಾರಾಟ ಮಾಡುವಲ್ಲಿ ಆಗಿರುವ ಹಣಕಾಸಿನ ದುರುಪಯೋಗದ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.

ಹಾವೇರಿ ಮತ್ತು ಮಂಡ್ಯ ಜಿಲ್ಲೆಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಲೆಕ್ಕಪತ್ರಗಳನ್ನು ಇದುವರೆಗೂ ಸಲ್ಲಿಸಿಲ್ಲ. ಈ ಸಂಬಂಧ ಹಣ ದುರುಪಯೋಗ ಮಾಡಿರುವ ಬಗ್ಗೆ ಪರಿಶೀಲಿಸಬೇಕು. ಪರಿಷತ್ತಿನ ಕಟ್ಟಡದ ನಿರ್ಮಾಣ ಮತ್ತು ನವೀಕರಣದಲ್ಲಿನ ಹಣ ದುರುಪಯೋಗವಾಗಿರುವ ಬಗ್ಗೆ ದೂರು ಸಲ್ಲಿಕೆಯಾಗಿದ್ದು, ವಿಚಾರಣೆ ನಡೆಸಬೇಕು ಎಂದು ಸೂಚನೆ ನೀಡಲಾಗಿದೆ

ಪರಿಷತ್ತಿನ ಅಧ್ಯಕ್ಷರು ಮತ್ತಿತರರು ನಿಯಮ ಬಾಹಿರವಾಗಿ ವಿದೇಶ ಪ್ರವಾಸ ಕೈಗೊಂಡು, ಹಣ ದುರುಪಯೋಗ ಮತ್ತು ನಷ್ಟ ಮಾಡಿರುವ ಬಗ್ಗೆ, ಪರಿಷತ್ತಿನ ಹಣವನ್ನು ಕಸಾಪ ಅಧ್ಯಕ್ಷರ ಕುಟುಂಬದ ಸದಸ್ಯರ ಕಾರ್ಯಕ್ರಮಗಳಿಗೆ ನಿಯಮ ಬಾಹಿರವಾಗಿ ಬಳಕೆ ಮಾಡಿಕೊಂಡಿರುವ ಬಗ್ಗೆಯೂ ವಿಚಾರಣೆ ನಡೆಯಲಿದೆ.

ಪರಿಷತ್ತಿನ ಚಟುವಟಿಕೆ ಹಣ ಬಳಕೆ ಹಾಗೂ ಅಧಿಕಾರ ದುರುಪಯೋಗದ ಬಗೆಗಿನ ಆರೋಪಗಳನ್ನು ಆದೇಶದಲ್ಲಿ ಉಲ್ಲೇಖಿಸಲಾಗಿದ್ದು ಆ ಬಗ್ಗೆ ವಿಚಾರಣೆ ನಡೆಸುವಂತೆ ವಿಚಾರಣಾಧಿಕಾರಿಗೆ ಸೂಚಿಸಲಾಗಿದೆ. 2022-23ರಿಂದ ಈವರೆಗೆ ಅನುಮೋದಿಸಿರುವ ತಿದ್ದುಪಡಿಗಳು ಸರ್ಕಾರ ಮತ್ತು ಇತರೆ ಮೂಲಗಳಿಂದ ಪರಿಷತ್ತಿನಲ್ಲಿ ಸಂಗ್ರಹವಾಗಿರುವ ಅನುದಾನವನ್ನು ಪಾರದರ್ಶಕವಾಗಿ ನಿರ್ವಹಿಸದೆ ಹಣ ದುರುಪಯೋಗ ಮಾಡಿರುವುದು ಬೆಳಕಿಗೆ ಬಂದಿದ್ದು ಈ ಸಂಬಂಧವೂ ತನಿಖೆ ನಡೆಯಲಿದೆ.

ವಿವಿಧ ಕಾರ್ಯಕ್ರಮಗಳಿಗಾಗಿ ಜಿಲ್ಲಾ ಘಟಕ ತಾಲ್ಲೂಕು ಘಟಕ ಮತ್ತು ಇತರೆ ಸಂಘ–ಸಂಸ್ಥೆಗಳಿಗೆ ನೀಡಿರುವ ಅನುದಾನವನ್ನು ಪಾರದರ್ಶಕವಾಗಿ ನಿರ್ವಹಿಸದೆ ಹಣ ದುರುಪಯೋಗ ಮಾಡಿರುವುದು ಹಾಗೂ ಕಂಪ್ಯೂಟರ್ ಖರೀದಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಕೆ ಅಗ್ನಿಶಾಮಕ ಉಪಕರಣದ ಅಳವಡಿಕೆ ಪುಸ್ತಕಗಳ ಮುದ್ರಣಗಳಿಗೆ ಸಂಬಂಧಿಸಿದಂತೆ ಹಣ ದುರ್ಬಳಕೆ ಮಾಡಿರುವ ಬಗ್ಗೆಯೂ ವಿಚಾರಣೆ ನಡೆಯಲಿದೆ.ಇದನ್ನು ಓದಿ –ಜಿಲ್ಲಾಸ್ಪತ್ರೆಯಲ್ಲಿ ಡೇಟಾ ಎಂಟ್ರಿ ಆಪರೇಟರ್ ಆತ್ಮಹತ್ಯೆಗೆ ಶರಣು

ಪರಿಷತ್ತಿನಲ್ಲಿ ಸಂಗ್ರಹವಾಗಿರುವ ಕಾರ್ಪೊರೇಟ್‌ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿ ಎಸ್‌ ಆರ್‌) ದುರುಪಯೋಗ, ಸಿಬ್ಬಂದಿ ನೇಮಕಾತಿ ಪ್ರಕ್ರಿಯೆಯಲ್ಲಿ ದೋಷಗಳ ಪತ್ತೆ ಮಾಡುವುದು, ಸಂಘದ ಗುರುತಿನ ಚೀಟಿ (ಸ್ಮಾರ್ಟ್ ಕಾರ್ಡ್) ನೀಡುವಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ಕುರಿತು ವಿಚಾರಣೆ ನಡೆಸಲಿದ್ದಾರೆ.

  • ದರ್ಶನ್‌ಗೆ ಒಂದು ವರ್ಷ ಜಾಮೀನು ಅರ್ಜಿ ಸಲ್ಲಿಸಲು ಅವಕಾಶವಿಲ್ಲ
    by Team Varthaman
    May 15, 2026
  • ರಾಜ್ಯದಲ್ಲಿ ಮೂರು ದಿನ ಗುಡುಗು ಸಹಿತ ಮಳೆ ಸಾಧ್ಯತೆ
    by Team Varthaman
    May 15, 2026
  • ನೂತನ ಅಬಕಾರಿ ನೀತಿ: ಬಿಯರ್‌, ಪ್ರೀಮಿಯಂ ವಿಸ್ಕಿ ದರ ಇಳಿಕೆ
    by Team Varthaman
    May 15, 2026
  • ಪೆಟ್ರೋಲ್‌, ಡೀಸೆಲ್‌ ದರ ಲೀಟರ್‌ಗೆ 3 ರೂ. ಏರಿಕೆ
    by Team Varthaman
    May 15, 2026
  • ಜೂನ್‌ 21ರಂದು NEET-UG ಮರು ಪರೀಕ್ಷೆ
    by Team Varthaman
    May 15, 2026
ರಾಜ್ಯದ 12 ಜಿಲ್ಲೆಗಳಲ್ಲಿ ಜು. 29ರವರೆಗೂ ಭಾರಿ ಮಳೆಯ ಮುನ್ಸೂಚನೆ
ಮದ್ದೂರು : ಧರ್ಮಸ್ಥಳ ವಿರುದ್ಧದ ಅಪಪ್ರಚಾರ ಖಂಡಿಸಿ ಬಂದ್
ಶಾಲೆಗೆ ಮನೋವೈದ್ಯ ಮನೆಗೆ ಅಜ್ಜಿ-ತಾತ ಬೇಕು
ಅಂತರರಾಷ್ಟ್ರೀಯ ಯೋಗ ದಿನಾಚರಣೆ: ನಾಳೆ ವಿಶಾಖಪಟ್ಟಣಂನಲ್ಲಿ ಪ್ರಧಾನಿ ಮೋದಿ
ಮುಡಾ ಪ್ರಕರಣ: ಸ್ನೇಹಮಯಿ ಕೃಷ್ಣ ಬಂಧನ
TAGGED:breakingnewslatestnewsmahesh joshiಕಸಾಪ
Share This Article
Facebook Email Print
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
BengaluruKarnataka

ಮುಂಗಾರು ಆರ್ಭಟ :ಪ್ರಮುಖ ಡ್ಯಾಂಗಳಲ್ಲಿ ನೀರಿನ ಮಟ್ಟ

Team Varthaman
Team Varthaman
August 18, 2025
ಅಭಯಪ್ರದಾಯಿನಿ ಕಾಲರಾತ್ರಿ ದೇವಿ
ತಿರುಪತಿ ಹುಂಡಿ ಹಣ ಲೂಟಿ: 100 ಕೋಟಿಗೂ ಅಧಿಕ ಮೊತ್ತ ಕಳ್ಳತನ, CCTVಯಲ್ಲಿ ಸೆರೆ
ಜನತೆಗೆ ಸೂರು ನೀಡುವುದೇ ನನ್ನ ಆದ್ಯತೆ: ನೂತನ ಆಯುಕ್ತ ಕೆ.ಆರ್‌.ರಕ್ಷಿತ್‌
ಅನ್ನಭಾಗ್ಯ ಯೋಜನೆಗೆ ಹೊಸ ರೂಪು
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?