By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
    ArticlesShow More
    ಅಜವಾನ ಅಜೀರ್ಣಕ್ಕೆ ಪ್ರಕೃತಿ ನೀಡಿದ ವರದಾನ
    February 1, 2026
    ಹೀಗೆ ಬಂದು ಹಾಗೆ ಹೋಗುವ ಸ್ನೇಹ ಸಾವಿರ
    February 1, 2026
    ಸಾವು ಬದುಕಿನ ನಡುವೆ
    January 28, 2026
    ವಾಸ್ತವ ವರ್ತಮಾನ
    January 24, 2026
    ಅರೋಗ್ಯ ಭಾಗ್ಯ
    January 24, 2026
  • Sports
  • National
  • International
  • Crime
Reading: ಪ್ರೋಟೀನ್‌ಗಳ ಪವರ್ ಹೌಸ್ : ಮೊಳಕೆ ಕಾಳುಗಳು
Share
Font ResizerAa
VarthamanVarthaman
  • Home
  • Karnataka
  • Articles
  • Sports
  • National
  • International
  • Crime
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
  • Sports
  • National
  • International
  • Crime
Follow US
Varthaman > Karnataka – Latest Breaking News > Articles > ಪ್ರೋಟೀನ್‌ಗಳ ಪವರ್ ಹೌಸ್ : ಮೊಳಕೆ ಕಾಳುಗಳು
Articles

ಪ್ರೋಟೀನ್‌ಗಳ ಪವರ್ ಹೌಸ್ : ಮೊಳಕೆ ಕಾಳುಗಳು

Team Varthaman
Last updated: July 11, 2025 7:04 AM
Team Varthaman
Published: July 11, 2025
Share
SHARE

ಮೊಳಕೆ ಬರಿಸಿದ ಕಾಳುಗಳು ಅತ್ಯಂತ ಆರೋಗ್ಯಕರ ಆಹಾರ ಪದಾರ್ಥಗಳಲ್ಲಿ ಒಂದಾಗಿದ್ದು ದೇಹಕ್ಕೆ ಬಹಳಷ್ಟು ಉತ್ತಮ. ಮೊಳಕೆ ಬರಿಸಿದ ಕಾಳುಗಳನ್ನು ಬೆಳಗ್ಗೆ ತಿನ್ನುವುದು ತುಂಬಾನೇ ಒಳ್ಳೆಯದು ಎಂದು ವೈದ್ಯರು ಕೂಡ ಸಲಹೆ ನೀಡುತ್ತಾರೆ. ಮೊಳಕೆ ಕಾಳುಗಳು ಸಸ್ಯಾಹಾರಿ ಪ್ರೋಟೀನ್ ಮೂಲಗಳಲ್ಲಿ ಒಂದಾಗಿದ್ದು, ಹುರುಳಿ, ಹೆಸರು, ಕಡಲೆ, ಮುಂತಾದ ಕಾಳುಗಳನ್ನು ಮೊಳಕೆ ಬರಿಸಿ ಸೇವಿಸಿದರೆ ಅನೇಕ ಸಮಸ್ಯೆಗಳು ನಿವಾರಣೆ ಆಗುತ್ತದೆ. ಇವು ಪ್ರೋಟೀನ್, ಕ್ಯಾಲ್ಸಿಯಂ, ಫೈಬರ್, ವಿಟಮಿನ್​ಗಳಂತಹ ಪ್ರಮುಖ ಪೋಷಕಾಂಶಗಳನ್ನು ಒಳಗೊಂಡಿದ್ದು, ಮಕ್ಕಳಿಗೆ, ಗರ್ಭಿಣಿಯರಿಗೆ, ವೃದ್ಧರಿಗೆ ಸೇರಿದಂತೆ ಎಲ್ಲಾ ವಯೋಮಾನದವರು ಸೇವಿಸಬಹುದು. ಇವುಗಳನ್ನು ಬೆಳಗಿನ ಉಪಾಹಾರವಾಗಿ ಸೇವಿಸುವುದರಿಂದ ರೋಗ ನೀರೋಧಕ ಶಕ್ತಿಯು ಹೆಚ್ಚುತ್ತದೆ. ಜತೆಗೆ ಕ್ಯಾನ್ಸರ್‌ನಂತಹ ಹಲವು ಗಂಭೀರ ಕಾಯಿಲೆಯನ್ನು ತಡೆಯಲು ಸಹಾಯ ಮಾಡುತ್ತದೆ.

ಮನುಷ್ಯನ ಸಮಗ್ರ ಆರೋಗ್ಯಕ್ಕೆ ಉಪಯುಕ್ತವಾಗುವಂಥ ವಿಟಮಿನ್ ಹಾಗೂ ಖನಿಜಾಂಶಗಳಿಂದ ಮೊಳಕೆ ಕಾಳುಗಳು ಸಮೃದ್ಧವಾಗಿರುತ್ತವೆ. ಯಾವುದೇ ಬೀಜ ಅಥವಾ ಕಾಳುಗಳನ್ನು ನೀರಲ್ಲಿ ನೆನೆಸಿಟ್ಟಾಗ ಅವು ಮೊಳಕೆಯೊಡೆದು ಬೆಳೆಯಲಾರಂಭಿಸುತ್ತವೆ. ಈ ಕ್ರಿಯೆಯನ್ನು ಮೊಳಕೆಯೊಡೆಯುವಿಕೆ ಎಂದು ಕರೆಯಲಾಗುತ್ತದೆ. ಮೊಳಕೆಕಾಳು ತಯಾರಿಸುವುದು ಹಾಗೂ ಅವನ್ನು ಆಹಾರದಲ್ಲಿ ಬಳಸುವುದು ತುಂಬಾ ಸುಲಭ ಹಾಗೂ ಅರೋಗ್ಯದಾಯಕವು.

Join WhatsApp Group

ಮೊಳಕೆಕಾಳುಗಳಲ್ಲಿರುವ ಪೌಷ್ಟಿಕಾಂಶಗಳ ವಿವರಗಳು

ಕಾಳು, ಬೀಜ ಅಥವಾ ಧಾನ್ಯಗಳು ಮೊಳಕೆಯೊಡುವ ಸಂದರ್ಭದಲ್ಲಿ ಅವುಗಳಲ್ಲಿನ ಪೌಷ್ಟಿಕಾಂಶಗಳ ಪ್ರಮಾಣ ದುಪ್ಪಟ್ಟಾಗುತ್ತದೆ. ಹೀಗಾಗಿ ಇವು ಪ್ರೊಟೀನ್, ಮೆಗ್ನೇಶಿಯಂ, ಫಾಸ್ಫರಸ್, ಮ್ಯಾಂಗನೀಸ್, ಫೊಲೇಟ್, ವಿಟಮಿನ್ ಸಿ ಹಾಗೂ ವಿಟಮಿನ್ ಕೆ ಗಳಿಂದ ಸಮೃದ್ಧವಾಗಿರುತ್ತವೆ. ಮೊಳಕೆಯೊಡುವುದರಿಂದ ಕಾಳಿನಲ್ಲಿನ ಪ್ರೊಟೀನ್ ಅಂಶ ಹೆಚ್ಚಾಗುತ್ತದೆ ಎಂಬುದು ಸಂಶೋಧನೆಗಳಿಂದ ತಿಳಿದು ಬಂದಿದೆ. ಅಲ್ಲದೆ ಮೊಳಕೆಕಾಳುಗಳು ಆಂಟಿ ಆಕ್ಸಿಡೆಂಟ್‌ಗಳು ಹಾಗೂ ಅಮಿನೋ ಆಸಿಡ್ಸ್‌ಗಳನ್ನು ಹೇರಳ ಪ್ರಮಾಣದಲ್ಲಿ ಒಳಗೊಂಡಿರುತ್ತವೆ. ಮೊಳಕೆ ಬರಿಸುವ ಸಂದರ್ಭದಲ್ಲಿ ಕಾಳುಗಳಲ್ಲಿ ಉತ್ಪತ್ತಿಯಾಗುವ ಪ್ರೊಟೀನ್‌ಗಳನ್ನು ದೇಹ ಬಲುಬೇಗ ಹಾಗೂ ಸುಲಭವಾಗಿ ಜೀರ್ಣಿಸಿಕೊಂಡು ಅವುಗಳಲ್ಲಿನ ಪೋಷಕಾಂಶಗಳನ್ನು ಹೀರಿಕೊಳ್ಳುತ್ತದೆ.

ಮೊಳಕೆಕಾಳುಗಳ ಆರೋಗ್ಯ ಭಾಗ್ಯ ಗುಣಗಳು

1) ವಿಟಮಿನ್‎ಗಳಾದ ಎ,ಬಿ,ಸಿ ಮತ್ತು ಇ ಮೊಳಕೆ ಕಾಳುಗಳಲ್ಲಿದ್ದು ಕಾಳುಗಳಲ್ಲಿ ಕೆಲವೇ ದಿನಗಳಲ್ಲಿ ಹುಟ್ಟಿಕೊಳ್ಳುವ ಮೊಳೆಕಯು 20% ದಷ್ಟು ಪೋಷಕಾಂಶಗಳನ್ನು ಒಳಗೊಂಡಿರುತ್ತದೆ. ಬೀನ್ಸ್ ಕಾಳು 285% ದಷ್ಟು ವಿಟಮಿನ್ ಬಿ1 ಅನ್ನು ಒಳಗೊಂಡಿದೆ ಎಂಬುದಾಗಿ ಅಧ್ಯಯನವು ತಿಳಿಸಿದೆ.

2) ಮೊಳಕೆ ಒಡೆದ ಕಾಳುಗಳನ್ನು ಬೇಯಿಸಿ ತಿನ್ನುವುದಕ್ಕಿಂತ ಹಸಿಯಾಗಿಯೇ ಸೇವಿಸುವುದು ಉತ್ತಮ. ಯಾಕೆಂದರೆ ಮೊಳಕೆ ಕಾಳುಗಳನ್ನು ಬೇಯಿಸಿದಾಗ ಅದರ ಪೌಷ್ಟಿಕತೆ ದೇಹಕ್ಕೆ ಸಿಗಲ್ಲ.

3) ನಮ್ಮ ಕೂದಲಿನ ಆರೋಗ್ಯಕ್ಕೆ ಮೊಳಕೆ ಕಾಳುಗಳು ಅತ್ಯುತ್ತಮವಾಗಿದೆ. ವಿಟಮಿನ್ ಸಿ ಅಂಶವನ್ನು ಇದು ಒಳಗೊಂಡಿದ್ದು, ಕೂದಲನ್ನು ಉದ್ದ ಮತ್ತು ದಟ್ಟವಾಗಿಸುತ್ತಲ್ಲದೆ ಬಿಳಿ ಕೂದಲಿನ ಸಮಸ್ಯೆಯನ್ನು ದೂರಗೊಳಿಸುತ್ತದೆ.

4) ದೇಹಕ್ಕೆ ಆಮ್ಲಜನಕವನ್ನು ಪೂರೈಸುವ ಕಬ್ಬಿಣದ ಅಂಶವನ್ನು ಮೊಳಕೆ ಕಾಳುಗಳು ಒಳಗೊಂಡಿವೆ. ಮಾನವನ ದೇಹಕ್ಕೆ ಅಗತ್ಯವಾಗಿರುವ ಕಬ್ಬಿಣದ ಅಂಶವು ಮೊಳಕೆ ಕಾಳುಗಳಿಂದ ದೊರೆಯಲಿದ್ದು ದೇಹಕ್ಕೆ ಸಾಮರ್ಥ್ಯವನ್ನು ಒದಗಿಸುತ್ತದೆ.

5) ದೇಹವನ್ನು ಕ್ಷಾರೀಕರಣ ಮಾಡುವುದರಲ್ಲಿ ಮೊಳಕೆ ಕಾಳುಗಳ ಪಾತ್ರ ಹಿರಿದು. ಕ್ಯಾನ್ಸರ್‎ನಂತಹ ಪ್ರಾಣಾಂತಿಕ ಕಾಯಿಲೆಗಳೊಂದಿಗೆ ಇದು ಹೋರಾಡಿ ದೇಹದಲ್ಲಿ ಆಮ್ಲತೆಯನ್ನು ತಡೆಯುತ್ತದೆ.

6) ಮೊಳಕೆ ಕಾಳುಗಳಲ್ಲಿ ಫ್ಯಾಟಿ ಆಸಿಡ್‎ಗಳು ಹೇರಳವಾಗಿದೆ. ನಾವು ಸೇವಿಸುವ ಆಹಾರದಲ್ಲಿ ಈ ಫ್ಯಾಟಿ ಆಸಿಡ್‎ಗಳು ಇರುವುದಿಲ್ಲ. ಮೊಳಕೆ ಕಾಳುಗಳನ್ನು ಸೇವಿಸಿ ದೇಹಕ್ಕೆ ಬೇಕಾಗಿರುವ ಈ ಪೋಷಕಾಂಶಗಳನ್ನು ನಾವು ಒದಗಿಸಬೇಕು.

7) ಮೊಳಕೆಯೊಡೆದ ಹಸಿರು ಬಟಾಣಿಗಳನ್ನು ಸೇವಿಸುವುದು ಮಧುಮೇಹಿಗಳಿಗೆ ತುಂಬಾ ಪ್ರಯೋಜನಕಾರಿ. ಈ ಬೇಳೆಕಾಳುಗಳನ್ನು ಪ್ರತಿದಿನ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನದಲ್ಲಿಡಬಹುದು.

8) ಹೃದ್ರೋಗಗಳನ್ನು ತಪ್ಪಿಸಲು ಮೊಳಕೆಯೊಡೆದ ಹೆಸರು ಕಾಳುಗಳನ್ನು ಸೇವಿಸುವುದು ಬಹಳ ಮುಖ್ಯ. ಇದನ್ನು ತೆಗೆದುಕೊಳ್ಳುವುದರಿಂದ ಗಂಭೀರ ಕಾಯಿಲೆಗಳನ್ನು ತಡೆಯಬಹುದು. ಹಾಗೆಯೇ ನಿಮ್ಮ ಹೃದಯವೂ ಆರೋಗ್ಯವಾಗಿರುತ್ತದೆ.

9) ಮೊಳಕೆಯೊಡೆದ ಹೆಸರು ಕಾಳುಗಳು ತಾಯಿಯ ಗರ್ಭದಲ್ಲಿರುವ ಮಗುವಿನ ಬೆಳವಣಿಗೆಗೆ ಕೆಲಸ ಮಾಡುತ್ತದೆ. ಹಾಗಾಗಿ ಗರ್ಭಿಣಿಯರು ವಾರಕ್ಕೆ ಎರಡು ಬಾರಿಯಾದರೂ ಮೊಳಕೆ ಬರಿಸಿದ ಕಡಲೆಯನ್ನು ತಿನ್ನಬಹುದು. ಆದರೆ ಸೇವಿಸುವ ಮೊದಲು ವೈದ್ಯರನ್ನು ಸಂಪರ್ಕಿಸಲು ಮರೆಯದಿರಿ.

10) ಮೊಳಕೆಯೊಡೆದ ಕಡಲೆಯನ್ನು ತಿನ್ನುವುದು ತೂಕ ನಷ್ಟಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಇದು ಅನಗತ್ಯ ಕೊಬ್ಬಿನ ಶೇಖರಣೆಯನ್ನು ತಡೆಯುತ್ತದೆ. ಅಲ್ಲದೆ, ಇದರ ಸೇವನೆಯು ದೀರ್ಘಕಾಲದವರೆಗೆ ಹಸಿವನ್ನು ಉಂಟುಮಾಡುವುದಿಲ್ಲ, ಹೀಗಾಗಿ ತೂಕವನ್ನು ಸಮತೋಲನಗೊಳಿಸುತ್ತದೆ.

11) ಮೊಳಕೆಯೊಡೆದ ಕಡಲೆಕಾಯಿಯಲ್ಲಿ ಪ್ರೋಟೀನ್ ಗ ಳು, ಫೈಬರ್ ಗಳು ಕಾರ್ಬೋಹೈಡ್ರೆಟ್ಗಳು, ಕ್ಯಾಲ್ಸಿಯಂ, ಕಬ್ಬಿಣ, ಖನಿಜಗಳು ಮತ್ತು ವಿಟಮಿನ್ಗಳು ಸಮೃದ್ಧವಾಗಿವೆ. ಆದ್ದರಿಂದ ಇದರ ಸೇವನೆಯು ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.

12) ಮೊಳಕೆಯೊಡೆದ ಹೆಸರು ಕಾಳು ವಿಟಮಿನ್ ಗಳು, ಖನಿಜಗಳು ಮತ್ತು ಪ್ರೋಟೀನ್ ಗಳು ಸಮೃದ್ಧವಾಗಿದೆ. ಇದು ವಿಟಮಿನ್ ಸಿ ಮತ್ತು ವಿಟಮಿನ್ ಬಿ ನಂತಹ ಪ್ರಮುಖ ಪೋಷಕಾಂಶಗಳನ್ನು ಸಹ ಒದಗಿಸುತ್ತದೆ.

ನೆನಪಿನಲ್ಲಿಡಬೇಕಾದ ಅಂಶಗಳು

ಮೊಳಕೆಯಲ್ಲಿ ವಿಟಮಿನ್ ಗಳು ಬೇಗ ಹಾಳಾಗುವುದರಿಂದ ತಾಜಾ ಇರುವಾಗಲೇ ಸೇವಿಸುವುದು ಉತ್ತಮ ಹಾಗೂ ಮೊಳಕೆಯನ್ನು ತಯಾರಿಸಲು ಬಳಸುವ ನೀರು ಶುದ್ಧವಾಗಿರಬೇಕು. ಇಲ್ಲದಿದ್ದರೆ ಕೆಟ್ಟ ಬ್ಯಾಕ್ಟಿರಿಯಾಗಳು ದೇಹಕ್ಕೆ ಸೇರಿ ಅನಾರೋಗ್ಯ ಉಂಟುಮಾಡುತ್ತದೆ.

ಇದನ್ನು ಓದಿ –ಚಿನ್ನದ ದರದಲ್ಲಿ ಭಾರೀ ಏರಿಕೆ: 24K ಚಿನ್ನದ ದರ ಹೆಚ್ಚಳ

ಯಾರೆಲ್ಲಾ ಹೆಸರುಕಾಳು ತಿನ್ನಬಾರದು ?

ಆಯುರ್ವೇದ ತಜ್ಞ ಡಾ.ಅಲ್ಕಾ ಪ್ರಕಾರ,.  ಕಳಪೆ ಜೀರ್ಣಕ್ರಿಯೆ ಅಥವಾ ವಾತ ಅಥವಾ ಪಿತ್ತ ಪ್ರಕೃತಿ ಇರುವವರು ಅದನ್ನು ತಪ್ಪಿಸಬೇಕು. ಕಫ ಪ್ರಕೃತಿ ಹೊಂದಿರುವ ಜನರು ಮೊಳಕೆಗಳನ್ನು ಜೀರ್ಣಿಸಿಕೊಳ್ಳಲು ಸಮರ್ಥರಾಗಿದ್ದಾರೆ ಮತ್ತು ಅದನ್ನು ಹೆಚ್ಚಾಗಿ ಸೇವಿಸಬಹುದು. ಆದರೆ ವಾರಕ್ಕೆ ಒಂದು ಅಥವಾ ಎರಡು ಬಾರಿ ಮಾತ್ರ; ಅದಕ್ಕಿಂತ ಹೆಚ್ಚಾಗಿ ಸೇವಿಸಲೇಬಾರದು’ ಎಂದು ತಿಳಿಸುತ್ತಾರೆ. ಕಫದ ಸಮಸ್ಯೆ ಇರುವವರು ಹೆಸರು ಕಾಳು ಸೇವಿಸುವ ಮುನ್ನ ಹೆಚ್ಚು ಜೀರ್ಣವಾಗುವಂತೆ ಮಾಡಲು, ಸ್ವಲ್ಪ ಪ್ರಮಾಣದ ತೆಂಗಿನ ಎಣ್ಣೆ, ಅಥವಾ ತುಪ್ಪ ಅಥವಾ ಬೆಣ್ಣೆ ಮತ್ತು ಮಸಾಲೆಗಳಾದ ಜೀರಿಗೆ, ಅಜ್ವೈನ್ ಮತ್ತು ಒಣ ಶುಂಠಿ ಪುಡಿಯೊಂದಿಗೆ ಬೇಯಿಸಿ ತಿನ್ನುವ ಅಭ್ಯಾಸ ಒಳ್ಳೆಯದು.

ಸೌಮ್ಯ ಸನತ್. ✍️

  • ಅಜವಾನ ಅಜೀರ್ಣಕ್ಕೆ ಪ್ರಕೃತಿ ನೀಡಿದ ವರದಾನ
    by Team Varthaman
    February 1, 2026
  • ಹೀಗೆ ಬಂದು ಹಾಗೆ ಹೋಗುವ ಸ್ನೇಹ ಸಾವಿರ
    by Team Varthaman
    February 1, 2026
  • ಐಟಿ ದಾಳಿ ಭೀತಿ: ಕಾನ್ಫಿಡೆಂಟ್ ಅಧ್ಯಕ್ಷ ಡಾ.ಸಿ.ಜೆ.ರಾಯ್ ಆತ್ಮಹತ್ಯೆ
    by Team Varthaman
    January 30, 2026
  • ಅಕ್ರಮ ವಲಸಿಗರ ಪತ್ತೆ–ಗಡಿಪಾರಿಗೆ ವಿಶೇಷ ತಂಡ ರಚನೆ: ರಾಜ್ಯ ಸರ್ಕಾರ
    by Team Varthaman
    January 30, 2026
  • ತಿರುಪತಿ ಲಡ್ಡು ಕಲಬೆರಕೆ ಪ್ರಕರಣ: ₹234 ಕೋಟಿ ವಂಚನೆ ಬಯಲು
    by Team Varthaman
    January 30, 2026
ಪಿತೃ ಋಣ
ಹಕ್ಕಿಯ ಅಟೆಂಡೆನ್ಸ್  –  ಎಸ್ ಮಿಸ್
ಕರುಳಿನ ಉತ್ತಮ ಆರೋಗ್ಯಕ್ಕೆ ಪ್ರೊಬಯೋಟಿಕ್ಸ್ ಆಹಾರಗಳು
ನಾನು ಕಂಡಂತೆ ಜೀವನ ಶೈಲಿಯಲ್ಲಿ ಬದಲಾವಣೆ.
ವಿಶ್ವಮಾನ್ಯ ವಿಶ್ವವಂದಿತ ವಿಶ್ವೇಶ್ವರಯ್ಯನವರು
TAGGED:grainsKannada ArticleProtein Powerhousesproutsಮೊಳಕೆ ಕಾಳು
Share This Article
Facebook Email Print
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
KarnatakaMandya

ಜಿಲ್ಲೆಯ ಸಣ್ಣ- ಅತಿ ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ ನೀಡಿ: ಡಾ. ಕುಮಾರ

Team Varthaman
Team Varthaman
January 6, 2026
ದೆಹಲಿ ಕೆಂಪು ಕೋಟೆ ಬಳಿ ಕಾರು ಸ್ಫೋಟ : 9 ಮಂದಿ ಬಲಿ
ಸಾಸಿವೆ ಎಣ್ಣೆಯ ಒಳ್ಳೆತನ
ಅಮರನಾಥ ಯಾತ್ರೆ ಮಾರ್ಗಗಳಿಗೆ ಹಾರಾಟ ನಿಷೇಧ
ಕೆಳಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ರಸ್ತೆ ತಡೆ ನಡೆಸಿದ ರೈತರು , ಗ್ರಾಮಸ್ಥರು
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?