ಬೆಂಗಳೂರು: ದಸರಾ ಹಬ್ಬದ ಸಂಭ್ರಮದ ಮಧ್ಯೆ ಸಾಮಾನ್ಯ ಮತ್ತು ಮಧ್ಯಮ ವರ್ಗದ ಜನತೆಗೆ ಕೇಂದ್ರ ಸರ್ಕಾರ ದೊಡ್ಡ ಉಡುಗೊರೆ ನೀಡಿದೆ. ಹೊಸ ಜಿಎಸ್‌ಟಿ ದರಗಳು (GST Rate) ಇಂದು ಜಾರಿಯಾಗಿದೆ. ಇದರ ಪರಿಣಾಮವಾಗಿ ದಿನನಿತ್ಯ ಬಳಕೆಯ ಅನೇಕ ವಸ್ತುಗಳ ಬೆಲೆ ಕೈಗೆಟುಕುವಂತಾಗಿದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೆಪ್ಟೆಂಬರ್ 3ರಂದು ಘೋಷಿಸಿದ್ದಂತೆ, 400ಕ್ಕೂ ಹೆಚ್ಚು ವಸ್ತುಗಳ ಮೇಲಿನ ಜಿಎಸ್‌ಟಿ ದರ ಕಡಿತ ಜಾರಿಯಾಗಿದೆ. ಹಲವಾರು ವಸ್ತುಗಳು ಈಗ 5% ಅಥವಾ 18% ದರಕ್ಕೆ ಇಳಿದಿವೆ.
Contents
ಕೆಲವು ಆಹಾರ ಪದಾರ್ಥಗಳು ಶೂನ್ಯ ಜಿಎಸ್ಟಿ ವರ್ಗಕ್ಕೆ ಸೇರಿದ್ದು ,ಜೀವ ಮತ್ತು ಆರೋಗ್ಯ ವಿಮೆಗಳ ಮೇಲೂ ತೆರಿಗೆ ಶೂನ್ಯವಾಗಲಿದೆ.
ದಿನನಿತ್ಯ ಬಳಕೆಯ ವಸ್ತುಗಳ ಬೆಲೆ ಇಳಿಕೆ (ಹೊಸ GST ದರ)
| ಉತ್ಪನ್ನ | ಹಳೆಯ ದರ (₹) | ಹೊಸ ದರ (₹) |
|---|---|---|
| ವಿಕ್ಸ್ ಆಕ್ಷನ್ 500 & ಇನ್ಹೆಲರ್ | 69 | 64 |
| ಓರಲ್-ಬಿ ಟೂತ್‌ಬ್ರಷ್ | 35 | 30 |
| ಡವ್ ಸೀರಮ್ ಬಾರ್ (75ಗ್ರಾಂ) | 45 | 40 |
| ಲೈಫ್‌ಬಾಯ್ ಸೋಪ್ (75ಗ್ರಾಂ × 4) | 68 | 60 |
| LUX ಸೋಪ್ (75ಗ್ರಾಂ × 4) | 96 | 85 |
| ಕ್ಲೋಸಪ್ ಟೂತ್‌ಪೇಸ್ಟ್ (150ಗ್ರಾಂ) | 145 | 129 |
| ಲಕ್ಮೆ ಕಾಂಪ್ಯಾಕ್ಟ್ | 675 | 599 |
| ಕಿಸಾನ್ ಕೆಚಪ್ (850ಗ್ರಾಂ) | 110 | 93 |
| ಕಿಸಾನ್ ಜಾಮ್ (200ಗ್ರಾಂ) | 90 | 80 |
| ಹಾರ್ಲಿಕ್ಸ್ (200ಗ್ರಾಂ) | 130 | 110 |
| ಬೂಸ್ಟ್ (200ಗ್ರಾಂ) | 124 | 110 |
| BRU ಕಾಫಿ (75ಗ್ರಾಂ) | 300 | 270 |
| ನಾರ್ ಟೊಮೆಟೊ ಸೂಪ್ (67ಗ್ರಾಂ) | 65 | 55 |
| ಹೆಲ್‌ಮನ್ ಮೇಯನೇಸ್ (250ಗ್ರಾಂ) | 99 | 90 |
| ಬೊರೊಪ್ಲಸ್ ಆಯಿಲ್ (180ಮಿಲಿ) | 165 | 155 |
| ನವರತ್ನ ಆಯಿಲ್ (150ಗ್ರಾಂ) | 155 | 145 |
| ಡರ್ಮಿಕೂಲ್ ಪೌಡರ್ (150ಗ್ರಾಂ) | 159 | 149 |
| ಝಂಡು ಚ್ಯವನ್‌ಪ್ಲಸ್ (900ಗ್ರಾಂ) | 385 | 361 |
| ಡವ್ ಶಾಂಪೂ (340ಮಿಲಿ) | 490 | 435 |
| ಕ್ಲಿನಿಕ್ ಪ್ಲಸ್ ಶಾಂಪೂ (355ಮಿಲಿ) | 393 | 340 |
| ಸನ್‌ಸಿಲ್ಕ್ ಶಾಂಪೂ (350ಮಿಲಿ) | 430 | 370 |
| ಎಮಾಮಿ ಬೊರೊಪ್ಲಸ್ ಸೋಪ್ (125ಗ್ರಾಂ × 6) | 384 | 342 |
| ಹೆಡ್ & ಶೋಲ್ಡರ್ಸ್ ಶಾಂಪೂ (300ಮಿಲಿ) | 350 (ಸುಮಾರು) | 320 |
| ಪ್ಯಾಂಟೀನ್ ಶಾಂಪೂ (340ಮಿಲಿ) | 393 | 355 |
| ಜಿಲೆಟ್ ಶೇವಿಂಗ್ ಕ್ರೀಮ್ (30ಗ್ರಾಂ) | 45 | 40 |
| ಜಿಲೆಟ್ ಶೇವಿಂಗ್ ಬ್ರಷ್ | 85 | 75 |
| ಓಲ್ಡ್ ಸ್ಪೈಸ್ ಆಫ್ಟರ್ ಶೇವ್ (150ಮಿಲಿ) | 310 | 284 |
| ಕೇಶ್ ಕಿಂಗ್ ಎಣ್ಣೆ (100ಮಿಲಿ) | 195 | 178 |
| ಝಂಡು ಬಾಮ್ (25ಮಿಲಿ) | 130 | 118 |
ಸರ್ಕಾರದ ಕ್ರಮ
ಇದನ್ನು ಓದಿ –ತಿರುಪತಿ ಹುಂಡಿ ಹಣ ಲೂಟಿ: 100 ಕೋಟಿಗೂ ಅಧಿಕ ಮೊತ್ತ ಕಳ್ಳತನ, CCTVಯಲ್ಲಿ ಸೆರೆ
ಹೊಸ ಜಿಎಸ್‌ಟಿ ದರಗಳ ಜಾರಿಯ ನಂತರ ಪರೋಕ್ಷ ತೆರಿಗೆ ಅಧಿಕಾರಿಗಳು ಮಾರುಕಟ್ಟೆಯಲ್ಲಿನ ಬೆಲೆಗಳನ್ನು ಪರಿಶೀಲಿಸುತ್ತಿದ್ದು, ಗ್ರಾಹಕರಿಗೆ ನೇರ ಲಾಭ ತಲುಪಲು ಕ್ರಮ ಕೈಗೊಳ್ಳಲಾಗಿದೆ.








