By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
    ArticlesShow More
    ಅಜವಾನ ಅಜೀರ್ಣಕ್ಕೆ ಪ್ರಕೃತಿ ನೀಡಿದ ವರದಾನ
    February 1, 2026
    ಹೀಗೆ ಬಂದು ಹಾಗೆ ಹೋಗುವ ಸ್ನೇಹ ಸಾವಿರ
    February 1, 2026
    ಸಾವು ಬದುಕಿನ ನಡುವೆ
    January 28, 2026
    ವಾಸ್ತವ ವರ್ತಮಾನ
    January 24, 2026
    ಅರೋಗ್ಯ ಭಾಗ್ಯ
    January 24, 2026
  • Sports
  • National
  • International
  • Crime
Reading: ಸರಸ್ವತಿ – ಜ್ಞಾನ ಮತ್ತು ಕಲೆಯ ಪ್ರತೀಕ
Share
Font ResizerAa
VarthamanVarthaman
  • Home
  • Karnataka
  • Articles
  • Sports
  • National
  • International
  • Crime
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
  • Sports
  • National
  • International
  • Crime
Follow US
Varthaman > Karnataka – Latest Breaking News > Articles > ಸರಸ್ವತಿ – ಜ್ಞಾನ ಮತ್ತು ಕಲೆಯ ಪ್ರತೀಕ
Articles

ಸರಸ್ವತಿ – ಜ್ಞಾನ ಮತ್ತು ಕಲೆಯ ಪ್ರತೀಕ

Team Varthaman
Last updated: September 27, 2025 11:27 PM
Team Varthaman
Published: September 28, 2025
Share
SHARE

ಸರಸ್ವತಿ ವೀಣೆ ಹಿಡಿದಿರುವುದು ಸಂಗೀತ ಮತ್ತು ಕಲೆಗಳ ಪ್ರತೀಕ. ಅಕ್ಷರ ಮಾಲೆ ತಪಸ್ಸು, ಏಕಾಗ್ರತೆ ಮತ್ತು ಜ್ಞಾನಪ್ರಾಪ್ತಿಯ ಸಂಕೇತ. ಗ್ರಂಥವು ವಿದ್ಯೆ ಮತ್ತು ಶಾಸ್ತ್ರದ ಸೂಚಕ. ಹಂಸವು ಶುದ್ಧತೆ, ವಿವೇಕ ಹಾಗೂ ನಿಜ–ಅನೃತವನ್ನರಿಯುವ ಶಕ್ತಿಯನ್ನು ತೋರಿಸುತ್ತದೆ.

ಅವಳ ಬಿಳಿ ವಸ್ತ್ರವು ಸತ್ಯ, ಜ್ಞಾನ ಮತ್ತು ಪಾವಿತ್ರ್ಯದ ಸಂಕೇತವಾಗಿದೆ .ಹಿಂದೂ ಧರ್ಮದಲ್ಲಿ ಜ್ಞಾನ, ಕಲೆ, ವಾಗ್ವೈಭವ ಮತ್ತು ವಿದ್ಯೆಯ ದೇವತೆ ತಾಯಿ ಸರಸ್ವತಿ ದೇವಿ. ಸರಸ್ವತಿಯನ್ನು ಬ್ರಹ್ಮದೇವರ ಪತ್ನಿಯೆಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಆದರೆ ಕೇವಲ ಪತ್ನಿಯ ರೂಪಕ್ಕಿಂತಲೂ ಹೆಚ್ಚಾಗಿ, ಅವಳು ಬ್ರಹ್ಮನ “ಶಕ್ತಿ” ಎಂದೇ ಪರಿಗಣನೆಗೆ ಒಳಪಟ್ಟಿದ್ದಾಳೆ. ಜ್ಞಾನವಿಲ್ಲದೆ ಸೃಷ್ಟಿಯೇ ಸಾಧ್ಯವಿಲ್ಲ ಎಂಬ ತತ್ತ್ವವನ್ನು ಪ್ರತಿಬಿಂಬಿಸುವ ಈ ಪರಿಕಲ್ಪನೆ ಅತಿ ಮಹತ್ವದ್ದು.

Join WhatsApp Group

ಸರಸ್ವತಿಯನ್ನು “ವಿದ್ಯಾದೇವತೆ”,”ವಾಣಿ” “ವಾಗ್ದೇವಿ “, “ವಾದ್ವಾಣಿ”, “ಶಾರದೆ” ಎಂದು ಕರೆದರೂ, ಅವಳು ಭಾರತೀಯ ಸಂಸ್ಕೃತಿಯಲ್ಲಿಯೇ ಜ್ಞಾನಪ್ರತೀಕವಾಗಿ ಸ್ಥಾನ ಪಡೆದಿದ್ದಾಳೆ. ಶ್ವೇತವಸ್ತ್ರಗಳನ್ನು ಧರಿಸಿ, ಬಿಳಿಯ ಹಂಸದ ಮೇಲೆ ಅಥವಾ ಬಿಳಿ ತಾವರೆಯ ಮೇಲೆ ಆಸೀನಳಾದ, ಕೈಯಲ್ಲಿ ವೀಣೆ, ಅಕ್ಷರಮಾಲೆ, ಗ್ರಂಥವನ್ನು ಹಿಡಿದಿರುವ ಸ್ವರೂಪವು ನಮ್ಮೇಲ್ಲರ ಮನದಲ್ಲಿ ಮೂಡುವ ಸಾಮಾನ್ಯ ರೂಪ ಚಿತ್ರ.

ವೇದಗಳಲ್ಲಿ ಸರಸ್ವತಿ ಚತುರ್ವೇದಗಳಲ್ಲಿ ಅತ್ಯಂತ ಪ್ರಾಚೀನವಾದ ಋಗ್ವೇದ. ಇಂತಹ ಋಗ್ವೇದದಲ್ಲಿಯೇ ಸರಸ್ವತಿ ಪ್ರಮುಖ ದೇವತೆಯಾಗಿ ಕಾಣಿಸಿಕೊಂಡಿದ್ದಾಳೆ. ಕ್ರಿ.ಪೂ. 3500ರಷ್ಟು ಹಳೆಯ ಇತಿಹಾಸವನ್ನು ಹೊಂದಿರುವ ಋಗ್ವೇದದಲ್ಲಿ, ಸುಮಾರು ತೊಂಬತ್ತಕ್ಕೂ ಹೆಚ್ಚು ಋಕ್ಕುಗಳಲ್ಲಿ ಸರಸ್ವತಿಯ ಸ್ತುತಿಗಳಿವೆ ಎಂದು ತಿಳಿದುಬರುವ ವಿಚಾರ. ಆರನೇ ಮಂಡಲದ 61ನೇ ಸೂಕ್ತದ ಎಲ್ಲಾ 14 ಋಕ್ಕುಗಳೂ ಸರಸ್ವತಿಗೆ ಅರ್ಪಿಸಲ್ಪಟ್ಟಿವೆ.

ವೇದಗಳಲ್ಲಿ ಅವಳನ್ನು ನದಿ ದೇವತೆ, ಯಜ್ಞದೇವತೆ, ವಾಗ್ದೇವತೆ, ರಕ್ಷಣಾ ದೇವತೆ, ಶಾಂತಿಯ ದೇವತೆ, ಅನ್ನಪೂರ್ಣೆ, ಭಾಗ್ಯದೇವತೆ, ಆರೋಗ್ಯದೇವತೆ, ಸಹೋದರಿ, ಮಗಳು ಮುಂತಾದ ವಿಭಿನ್ನ ರೂಪಗಳಲ್ಲಿ ಸ್ತುತಿಸಲಾಗಿದೆ.
ಪುರಾಣಗಳಲ್ಲಿ ಸರಸ್ವತಿ ಪುರಾಣಗಳಲ್ಲಿಯ ಸರಸ್ವತಿಯ ಚಿತ್ರಣವು ವೈವಿಧ್ಯಮಯವಾಗಿದೆ. ಕೆಲವು ಪುರಾಣಗಳಲ್ಲಿ ಅವಳನ್ನು ಬ್ರಹ್ಮನ ಪತ್ನಿ, ಮತ್ತಾವುದರಲ್ಲಿ ಬ್ರಹ್ಮನ ಮಗಳು ಎಂದು ಬಣ್ಣಿಸಲಾಗಿದೆ. ಈ ಪರಸ್ಪರ ವಿರುದ್ಧವಾದ ಉಲ್ಲೇಖಗಳು ಸಂಶೋಧಕರಿಗೆ ತಲೆಕೆಡವುವ ವಿಚಾರವಾಗಿದ್ದರೂ, ಜನಪರಂಪರೆಯಲ್ಲಿ ಅವಳನ್ನು ವೇದಮಾತೆ ಎಂದೇ ಗೌರವಿಸಲಾಗಿದೆ.
ಸರಸ್ವತೀ ರಹಸ್ಯೋಪನಿಷತ್ ಎಂಬ ಉಪನಿಷತ್ತೂ ಅವಳ ಮಹತ್ವವನ್ನು ವಿವರಿಸುತ್ತದೆ.


ಹಬ್ಬ – ವಸಂತ ಪಂಚಮಿ ಮತ್ತು ವಿದ್ಯಾರಂಭ
ಸರಸ್ವತಿ ಪೂಜೆಯ ಪ್ರಮುಖ ದಿನವೆಂದರೆ ವಸಂತ ಪಂಚಮಿ. ಈ ದಿನ ವಿದ್ಯಾರ್ಥಿಗಳು, ಕಲಾವಿದರು, ಪಂಡಿತರು ತಮ್ಮ ಪುಸ್ತಕ, ವಾದ್ಯಯಂತ್ರಗಳನ್ನು ದೇವಿಯ ಪಾದದಲ್ಲಿ ಇಟ್ಟು ಪೂಜಿಸುತ್ತಾರೆ. ದಕ್ಷಿಣ ಭಾರತದಲ್ಲಿ ನವರಾತ್ರಿಯ ಕೊನೆಯ ಮೂರು ದಿನಗಳನ್ನು ವಿಶೇಷವಾಗಿ ಸರಸ್ವತಿ ಪೂಜೆಗೆ ಮೀಸಲಾಗಿರುತ್ತದೆ. ಮಕ್ಕಳ ಅಕ್ಷರಾಭ್ಯಾಸ (ವಿದ್ಯಾರಂಭ) ಕೂಡಾ ಇದೇ ಸಂದರ್ಭದಲ್ಲಿ ನಡೆಯುತ್ತದೆ.


ಕಿರಣ ಜೋಶಿ
ಬೆಂಗಳೂರು

  • ಅಜವಾನ ಅಜೀರ್ಣಕ್ಕೆ ಪ್ರಕೃತಿ ನೀಡಿದ ವರದಾನ
    by Team Varthaman
    February 1, 2026
  • ಹೀಗೆ ಬಂದು ಹಾಗೆ ಹೋಗುವ ಸ್ನೇಹ ಸಾವಿರ
    by Team Varthaman
    February 1, 2026
  • ಐಟಿ ದಾಳಿ ಭೀತಿ: ಕಾನ್ಫಿಡೆಂಟ್ ಅಧ್ಯಕ್ಷ ಡಾ.ಸಿ.ಜೆ.ರಾಯ್ ಆತ್ಮಹತ್ಯೆ
    by Team Varthaman
    January 30, 2026
  • ಅಕ್ರಮ ವಲಸಿಗರ ಪತ್ತೆ–ಗಡಿಪಾರಿಗೆ ವಿಶೇಷ ತಂಡ ರಚನೆ: ರಾಜ್ಯ ಸರ್ಕಾರ
    by Team Varthaman
    January 30, 2026
  • ತಿರುಪತಿ ಲಡ್ಡು ಕಲಬೆರಕೆ ಪ್ರಕರಣ: ₹234 ಕೋಟಿ ವಂಚನೆ ಬಯಲು
    by Team Varthaman
    January 30, 2026
ತುಪ್ಪ ಎಂಬ ಮಹಾ ಔಷಧಿ
ಪವಿತ್ರ ಪುರಿ: ಜಗತ್ತಿಗೆ ಜಗನ್ನಾಥನ ದರ್ಶನ
ಕನ್ನಡ ನಾಡಿನ ಬೆಳ್ಳಿಚುಕ್ಕಿ ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮ
ಇಂದಿನ ಬದುಕಿಗೆ ಗೀತೆಯ ಅವಶ್ಯಕತೆ
ಕಮಲ ಬೀಜ ಗಳ ಅರೋಗ್ಯ ಗುಟ್ಟು
TAGGED:god saraswathiGoddessKannada Articleಸರಸ್ವತಿ
Share This Article
Facebook Email Print
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
NationalTrending

ಆಪರೇಷನ್ ಸಿಂದೂರ್‌ನಲ್ಲಿ ಮೋಸ್ಟ್ ವಾಂಟೆಂಡ್ ಉಗ್ರರು ಫಿನಿಶ್: ಇಲ್ಲಿದೆ ಭಾರತೀಯ ಸೇನೆ ಹತ್ಯೆಗೈದವರ ಲೀಸ್ಟ್

Team Varthaman
Team Varthaman
May 10, 2025
3 ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್‌
ಬಿ.ಇಡಿ ಮೌಲ್ಯಮಾಪನ ಅಕ್ರಮ: ತನಿಖೆ ಮುಂದುವರಿಕೆ
ಧರ್ಮಸ್ಥಳ ಪ್ರಕರಣ: ಇಂದು 11ನೇ ಪಾಯಿಂಟ್‌ನಲ್ಲಿ ಉತ್ಖನನ ಆರಂಭಿಸಿದ ಎಸ್‌ಐಟಿ
ಕಳೆದು ಹೋದ ಸಂಪತ್ತು ಪ್ರದಾಯಕ ‘ಅನಂತ ಪದ್ಮನಾಭ ವ್ರತ”
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?