ಮಂಡ್ಯ : ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮಂಡ್ಯ ಕೊಪ್ಪಲು ರಾಮಸ್ವಾಮಿ ನಾಲೆಯಲ್ಲಿ ಪ್ರವಾಸಕ್ಕೆ ಬಂದಿದ್ದ ವೇಳೆ ನಡೆದ ದುರಂತದಲ್ಲಿ ನಾಲ್ವರು ಮಕ್ಕಳು ಸಾವನ್ನಪ್ಪಿ, ಒಬ್ಬ ಬಾಲಕ ಅಲ್ಪಾಯುಷದಿಂದ ಪಾರಾದ ಘಟನೆ ಸಂಭವಿಸಿದೆ. ಬದುಕುಳಿದಿರುವ ಬಾಲಕ ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಘಟನೆ ಅರಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಘಟನೆ ವಿವರ:
ಶನಿವಾರ ಮೈಸೂರಿನ ಶಾಂತಿನಗರದ ಮದರಸದಿಂದ ಮೂವರು ಸಿಬ್ಬಂದಿಯೊಂದಿಗೆ 15 ಮಕ್ಕಳು ಪ್ರವಾಸಕ್ಕೆ ಬಂದಿದ್ದರು. ಶ್ರೀರಂಗಪಟ್ಟಣ ಸಮೀಪದ ಮಂಡ್ಯ ಕೊಪ್ಪಲು ನಾಲೆಗೆ ಬಂದಾಗ ಕೆಲ ಮಕ್ಕಳು ನೀರಿನಲ್ಲಿ ಆಟವಾಡಲು ಇಳಿದಿದ್ದರು. ಈ ವೇಳೆ ನೀರಿನ ರಭಸಕ್ಕೆ ಐವರು ಮಕ್ಕಳು ಕೊಚ್ಚಿ ಹೋಗಿದರು.
ಕೊಚ್ಚಿಹೋದ ಮಕ್ಕಳಲ್ಲಿ ಆಯಿಷಾ (14), ಮೊಹಮ್ಮದ್ ಆಯನ್ (4), ಹನಿ (14), ಅಫ್ರಿನ್ (13) ಹಾಗೂ ಥರ್ಬಿನ್ (13) ಸೇರಿದ್ದರು. ಸ್ಥಳೀಯರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸಹಾಯದಿಂದ ಆಯಿಷಾ ಮತ್ತು ಆಯನ್ ಅವರನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಆಯಿಷಾ ಚಿಕಿತ್ಸೆ ಫಲಿಸದೆ ಮೃತಪಟ್ಟಳು. ಆಯನ್ ಚಿಕಿತ್ಸೆಯಲ್ಲಿದ್ದಾನೆ.ಇದನ್ನು ಓದಿ –2028ರ ಬಳಿಕ ಡಿಕೆಶಿ ಸಿಎಂ ಆಗಲಿ: ಜಮೀರ್ ಅಹ್ಮದ್
ರಾತ್ರಿ ಶೋಧ ಕಾರ್ಯ ಸ್ಥಗಿತಗೊಂಡಿದ್ದರಿಂದ ಬೆಳಿಗ್ಗೆ ಮತ್ತೆ ಶೋಧ ಕಾರ್ಯ ಪ್ರಾರಂಭಿಸಲಾಯಿತು. ಬೆಳಗ್ಗೆ ಅಫ್ರಿನ್ ಶವ ಪತ್ತೆಯಾದರೆ, ಮಧ್ಯಾಹ್ನ ಹನಿ ಮತ್ತು ಥರ್ಬಿನ್ ಅವರ ಶವಗಳು ನಾಲೆಯಿಂದ ಸುಮಾರು 7 ಕಿ.ಮೀ ದೂರದಲ್ಲಿ ಪತ್ತೆಯಾಗಿವೆ. ಮೃತದೇಹಗಳನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.








