- ಡಿಪೋ ಮ್ಯಾನೇಜರ್ ಸೇರಿ 9 ಮಂದಿ ಅಮಾನತು
ಬೆಂಗಳೂರು: ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಚಾಲಕರು ಕುಡಿದು ಕೆಲಸಕ್ಕೆ ಬರುತ್ತಿದ್ದರೂ, ಲಂಚ ಪಡೆದು ಅವರಿಗೆ ಡ್ಯೂಟಿ ನೀಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಡಿಪೋ ಮ್ಯಾನೇಜರ್ ಸೇರಿದಂತೆ ಒಟ್ಟು 9 ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ಅಮಾನತುಗೊಂಡವರಲ್ಲಿ ಘಟಕ ವ್ಯವಸ್ಥಾಪಕ ಎಂ.ಜಿ. ಕೃಷ್ಣ, ಸಂಚಾರ ನಿರೀಕ್ಷಕ ಶ್ರೀನಿವಾಸ ಡಿ, ಸಹಾಯಕ ಲೆಕ್ಕಿಗ ಅರುಣ್ ಕುಮಾರ್ ಇ.ಎಸ್., ಕಿರಿಯ ಸಹಾಯಕಿ ಪ್ರತಿಭಾ ಕೆ.ಎಸ್., ಸಾರಿಗೆ ಹವಲ್ದಾರ್ ಮಂಜುನಾಥ ಎಂ., ಪೇದೆ ಮಂಜುನಾಥ ಎಸ್.ಜಿ., ಚೇತನ ಕುಮಾರ್, ಪುನೀತ್ ಕುಮಾರ್ ಹಾಗೂ ಲಕ್ಷ್ಮೀ ಕೆ. ಸೇರಿದ್ದಾರೆ.
ಡಿಪೋ 35 (ಕನ್ನಹಳ್ಳಿ) ಯಲ್ಲಿ ಸೇವೆ ಸಲ್ಲಿಸುತ್ತಿದ್ದ ಎಲೆಕ್ಟ್ರಿಕ್ ಬಸ್ ಚಾಲಕರು ಮದ್ಯಪಾನ ಮಾಡಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದರೆಂಬ ವೀಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ತನಿಖೆಯ ಸಮಯದಲ್ಲಿ, ಸುಮಾರು 150ಕ್ಕೂ ಹೆಚ್ಚು ಚಾಲಕರಿಂದ ಅಧಿಕಾರಿಗಳು ಸಾವಿರಾರು ರೂಪಾಯಿ ಲಂಚ ಪಡೆದು ಬಸ್ ಓಡಿಸಲು ಅನುಮತಿ ನೀಡುತ್ತಿದ್ದರೆಂಬುದು ಬಹಿರಂಗವಾಗಿದೆ.ಇದನ್ನು ಓದಿ –ಹಾಲಿನ ದರ ಏರಿಕೆ ಸಾಧ್ಯತೆ
ಈ ಘಟನೆಗಳಿಂದ ಬಸ್ ಅಪಘಾತಗಳ ಪ್ರಮಾಣವೂ ಹೆಚ್ಚಾಗಿರುವ ಹಿನ್ನೆಲೆಯಲ್ಲಿ, ಬಿಎಂಟಿಸಿ ಅಧಿಕಾರಿಗಳು ಕಠಿಣ ಕ್ರಮ ಕೈಗೊಂಡಿದ್ದು, ಸಂಬಂಧಿತ ಸಿಬ್ಬಂದಿ ವಿರುದ್ಧ ಅಮಾನತು ಆದೇಶ ಹೊರಡಿಸಿದ್ದಾರೆ.








