ಬೆಂಗಳೂರು: ನಗರದಲ್ಲಿ ಬಹಿರಂಗಗೊಂಡಿದ್ದ ನಂದಿನಿ ತುಪ್ಪ ಕಲಬೆರಕೆ ಪ್ರಕರಣದಲ್ಲಿ ಮಹತ್ವದ ಪ್ರಗತಿ ಸಂಭವಿಸಿದ್ದು, ಸಿಸಿಬಿ ಪೊಲೀಸರು ಪ್ರಕರಣದ ಮುಖ್ಯ ಸೂತ್ರಧಾರರಾದ ದಂಪತಿಯನ್ನು ಬಂಧಿಸಿದ್ದಾರೆ.
ನಕಲಿ ತುಪ್ಪ ತಯಾರಿಕೆ ಮತ್ತು ಮಾರಾಟ ಜಾಲವನ್ನು ನಡೆಸುತ್ತಿದ್ದ ಶಿವಕುಮಾರ್ ಮತ್ತು ಅವರ ಪತ್ನಿ ರಮ್ಯಾ ಈ ಕಲಬೆರಕೆ ರ್ಯಾಕೆಟ್‌ನ ಕಿಂಗ್ ಪಿನ್‌ಗಳೆಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರನ್ನೂ ಬಂಧಿಸಿರುವ ಸಿಸಿಬಿ ತಂಡ ಇದೀಗ ಪ್ರಕರಣದ ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿದೆ.
ಇತ್ತೀಚೆಗೆ ತಮಿಳುನಾಡಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಕಲಿ ನಂದಿನಿ ತುಪ್ಪ ತಯಾರಿಕಾ ಘಟಕದ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು. ಅಲ್ಲಿಂದ ಮಹತ್ತರ ಪ್ರಮಾಣದ ನಕಲಿ ತುಪ್ಪ ಹಾಗೂ ಉತ್ಪಾದನೆಯಲ್ಲಿ ಬಳಸುತ್ತಿದ್ದ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದರು.ಇದನ್ನು ಓದಿ –ಅವಕಾಶ ಸಿಕ್ಕರೆ ದಲಿತ ಸಿಎಂ: ಸಚಿವ ಕೆ.ಜೆ. ಜಾರ್ಜ್
ದಂಪತಿಯ ಬಂಧನದೊಂದಿಗೆ ಪ್ರಕರಣಕ್ಕೆ ಸಂಬಂಧಿಸಿದ ಹಲವು ಅಂಶಗಳು ಈಗ ಸ್ಪಷ್ಟವಾಗುವ ನಿರೀಕ್ಷೆ ವ್ಯಕ್ತವಾಗಿದೆ.








