By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
    ArticlesShow More
    ಅಜವಾನ ಅಜೀರ್ಣಕ್ಕೆ ಪ್ರಕೃತಿ ನೀಡಿದ ವರದಾನ
    February 1, 2026
    ಹೀಗೆ ಬಂದು ಹಾಗೆ ಹೋಗುವ ಸ್ನೇಹ ಸಾವಿರ
    February 1, 2026
    ಸಾವು ಬದುಕಿನ ನಡುವೆ
    January 28, 2026
    ವಾಸ್ತವ ವರ್ತಮಾನ
    January 24, 2026
    ಅರೋಗ್ಯ ಭಾಗ್ಯ
    January 24, 2026
  • Sports
  • National
  • International
  • Crime
Reading: ಕರುಳಿನ ಉತ್ತಮ ಆರೋಗ್ಯಕ್ಕೆ ಪ್ರೊಬಯೋಟಿಕ್ಸ್ ಆಹಾರಗಳು
Share
Font ResizerAa
VarthamanVarthaman
  • Home
  • Karnataka
  • Articles
  • Sports
  • National
  • International
  • Crime
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
  • Sports
  • National
  • International
  • Crime
Follow US
Varthaman > Karnataka – Latest Breaking News > Articles > ಕರುಳಿನ ಉತ್ತಮ ಆರೋಗ್ಯಕ್ಕೆ ಪ್ರೊಬಯೋಟಿಕ್ಸ್ ಆಹಾರಗಳು
Articles

ಕರುಳಿನ ಉತ್ತಮ ಆರೋಗ್ಯಕ್ಕೆ ಪ್ರೊಬಯೋಟಿಕ್ಸ್ ಆಹಾರಗಳು

Team Varthaman
Last updated: November 29, 2025 11:21 AM
Team Varthaman
Published: November 29, 2025
Share
SHARE

ಹೊಟ್ಟೆಯ ಆರೋಗ್ಯವು ಉತ್ತಮವಾಗಿದ್ದರೆ ಸಂಪೂರ್ಣ ದೇಹವು ಆರೋಗ್ಯಕಾರಿ ಆಗಿರುವುದು. ನಾವು ತಿನ್ನುವಂತಹ ಆಹಾರವನ್ನು ಸರಿಯಾಗಿ ಜೀರ್ಣಗೊಳಿಸಿ ಇದರ ಬಳಿಕ ಅದರಲ್ಲಿ ಇರುವಂತಹ ಪೋಷಕಾಂಶಗಳನ್ನು ದೇಹಕ್ಕೆ ನೀಡಿ ಕಲ್ಮಶವನ್ನು ಹೊರಗೆ ಹಾಕುವ ಕೆಲಸವನ್ನು ಜೀರ್ಣಕ್ರಿಯೆ ವ್ಯವಸ್ಥೆಯು ಮಾಡುವುದು. ಇದು ಆರೋಗ್ಯಕಾರಿ ಆಗಿದ್ದರೆ ಆಗ ಖಂಡಿತವಾಗಿಯೂ ಆರೋಗ್ಯ ಲಭ್ಯವಾಗುವುದು. ಹೊಟ್ಟೆಯನ್ನು ಎಲ್ಲಾ ರೀತಿ ಸಮಸ್ಯೆಯಿಂದ ದೂರವಿಡುವುದು ಕೂಡ ನಮ್ಮ ಆಹಾರ ಕ್ರಮದ ಪ್ರಮುಖ ಕಾರ್ಯವಾಗಿದೆ. ಇಂತಹ ಒಂದು ಅದ್ಭುತವಾದ ಕೆಲಸವನ್ನು ಮಾಡುವುದು ನಮ್ಮ ದೇಹದ
ಹೊಟ್ಟೆಯಲ್ಲಿ ಇರುವಂತಹ ಜೀವಂತ ಸೂಕ್ಷ್ಮಜೀವಿಗಳು ಅಥವಾ ಪ್ರೊಬಯೋಟಿಕ್ಸ್ ಗಳು.

ಪ್ರೊಬಯೋಟಿಕ್ಸ್ ಎಂದರೇನು?

ಪ್ರೋಬಯಾಟಿಕ್‌ಗಳು ಎಂದರೆ ಮೂಲತಃ ಜೀವಂತ
ಸೂಕ್ಷ್ಮಜೀವಿಗಳು/ ಬ್ಯಾಕ್ಟೀರಿಯ ಮತ್ತು ಈಸ್ಟ್‌ಗಳು ಆಗಿದ್ದು ಇವು ನಮ್ಮ ದೇಹದ ಕಾರ್ಯನಿರ್ವಹಣೆಗೆ ಮತ್ತು ನಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಅನೇಕ ಪ್ರೋಬಯಾಟಿಕ್ಗಳು ​​ನಮ್ಮ ದೇಹದಲ್ಲಿ ನೈಸರ್ಗಿಕವಾಗಿ ವಾಸಿಸುವ ಬ್ಯಾಕ್ಟೀರಿಯಾವನ್ನು ಹೋಲುತ್ತವೆ. ಇವುಗಳನ್ನು “ಉತ್ತಮ” ಅಥವಾ “ಸ್ನೇಹಿ” ಬ್ಯಾಕ್ಟೀರಿಯಾ ಎಂದು ಕರೆಯಲಾಗುತ್ತದೆ, ಏಕೆಂದರೆ ಅವುಗಳು ನಮ್ಮ ದೇಹಕ್ಕೆ ಸಹಾಯ ಮಾಡುತ್ತವೆ. ಪ್ರೊಬಯೋಟಿಕ್ಸ್ ನಮ್ಮ ದೇಹದಲ್ಲಿನ “ಉತ್ತಮ” ಬ್ಯಾಕ್ಟೀರಿಯಾಗಳ ಸಮತೋಲನವನ್ನು ಪುನಃಸ್ಥಾಪಿಸಲು ಸಹಾಯ ಮಾಡುತ್ತವೆ. ಇವುಗಳು ಮುಖ್ಯವಾಗಿ ಜೀರ್ಣಾಂಗ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತವೆ, ಜೀರ್ಣಕ್ರಿಯೆಗೆ ಸಹಾಯ ಮಾಡುತ್ತವೆ ಮತ್ತು ಇತರ ಆರೋಗ್ಯ ಸಮಸ್ಯೆಗಳನ್ನು ಕಡಿಮೆ ಮಾಡುತ್ತವೆ. 

ಪ್ರೊಬಯೋಟಿಕ್ಸ್ ಎಲ್ಲಿ ಸಿಗುತ್ತವೆ?

ಹುದುಗು ಬರೆಸಿದ ಆಹಾರಗಳು, ಮೊಸರು, ಮಜ್ಜಿಗೆ ಕಿಮ್ಚಿ (ಕೊರಿಯನ್ ಆಹಾರ )ಮತ್ತು ಕೇಫೀರ್‌ನಂತಹ (ಹಾಲಿನ ಆಹಾರ )ಆಹಾರಗಳಲ್ಲಿ ಇವುಗಳು ಸಹಜವಾಗಿ ಕಂಡು ಬರುತ್ತವೆ.

ಹೊಟ್ಟೆಯ ಉತ್ತಮ ಆರೋಗ್ಯಕ್ಕಾಗಿ ಆಹಾರದಲ್ಲಿ ಬಳಸಬಹುದಾದ ಪ್ರೊಬಯೋಟಿಕ್‌ ಆಹಾರ ಪದಾರ್ಥಗಳು.

ಹುದುಗು ಬರಿಸಿದ ಆಹಾರ ಸೇವನೆ

Join WhatsApp Group

ಅತೀ ಆರೋಗ್ಯಕರ ಆಹಾರಗಳಲ್ಲಿ ಹುದುಗು ಬರಿಸಿದ ಆಹಾರ ಕ್ರಮಗಳು (Fermented food) ಕೂಡ ಬಹಳ ಮುಖ್ಯವಾದುದು. ನಾವು ನಾನಾ ಬಗೆಯ ದೋಸೆ ಹಾಗೂ ಇಡ್ಲಿ ಮಾಡುವಾಗ ಹಿಟ್ಟನ್ನು ಹುದುಗು ಬರಿಸುತ್ತೇವೆ.ಈ ಹುದುಗು ಬರಿಸಿರುವ ಹಿಟ್ಟಿನಿಂದ ಮಾಡಿದ ಅಡುಗೆ ರುಚಿ ಸಿಗುವುದು ಅಲ್ಲದೆ ಆರೋಗ್ಯಕ್ಕೂ ಒಳ್ಳೆಯದು ಎಂದು ಆಹಾರ ತಜ್ಞರು ಅಭಿಪ್ರಾಯಪಡುತ್ತಾರೆ. ಹುದುಗು ಬರಿಸಿದ ಆಹಾರದಲ್ಲಿ ಪ್ರೊಬಯೋಟಿಕ್‌ ಅಂಶ ಹೆಚ್ಚಾಗಿ ಇರಲಿದ್ದು, ಇದು ಜೀರ್ಣಕ್ರಿಯೆ ಉತ್ತಮವಾಗಿ ನಡೆಯುವಂತೆ ಮಾಡುತ್ತದೆ. ಹಾಗಾಗಿ ಜೀರ್ಣಕ್ರಿಯೆ ಸಮಸ್ಯೆ ಇರುವವರು ಪ್ರೊಬಯೋಟಿಕ್‌ ಅಂಶ ಇರುವ ಆಹಾರ ಸೇವಿಸಬೇಕು.
ಉದಾ : ಇಡ್ಲಿ ದೋಸೆ. ಆದರೆ ಸೋಡಿಯಂ ಹೆಚ್ಚು ಇರುವ ಹುದುಗು ಬರಿಸಿದ ಆಹಾರದ ಅತೀಯಾದ ಸೇವನೆ ಅರೋಗ್ಯಕ್ಕೆ ಹಾನಿಕರ.

ಮೊಸರು : ಮೊಸರು ಪ್ರೋಬಯಾಟಿಕ್‌ಗಳಲ್ಲಿ ಸಮೃದ್ಧವಾಗಿದೆ, ಇದು ಕರುಳಿನ ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಬ್ಯಾಕ್ಟೀರಿಯಾವನ್ನು ಹೊಂದಿರುತ್ತದೆ. ಈ ಪ್ರೋಬಯಾಟಿಕ್‌ಗಳು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಇದರ ಸೇವನೆಯು ಕೆರಳಿಸುವ ಕರುಳಿನ ಸಹಲಕ್ಷಣಗಳಿಗೆ ಮತ್ತು ಮಲಬದ್ಧತೆ ಸಮಸ್ಯೆಗಳಿಂದ ಪರಿಹಾರವನ್ನು ಪಡೆಯಬಹುದು. ರಾತ್ರಿ ಅನ್ನವನ್ನು ಮೊಸರಿನೊಂದಿಗೆ ಮಣ್ಣಿನ ಪಾತ್ರೆಯಲ್ಲಿ ಹಾಕಿಟ್ಟು ಬೆಳಗ್ಗೆ ತಿಂದರೆ ಜೀರ್ಣಕ್ರಿಯೆಗೆ ಒಳ್ಳೆಯದು.

ಈರುಳ್ಳಿ: ಈರುಳ್ಳಿಯು ಪ್ರಿಬಯಾಟಿಕ್‌ಗಳ ಮತ್ತೊಂದು ಅತ್ಯುತ್ತಮ ಮೂಲವಾಗಿದೆ, ಈರುಳ್ಳಿಯ ಸೇವನೆ ಪ್ರೋಬಯಾಟಿಕ್‌ಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಮತ್ತು ಆರೋಗ್ಯಕರ ಕರುಳಿನ ವಾತಾವರಣವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಸಲಾಡ್‌ಗಳು, ಸೂಪ್‌ಗಳು ಮತ್ತು ಸ್ಟಿರ್-ಫ್ರೈಗಳಿಗೆ ಕಚ್ಚಾ ಅಥವಾ ಬೇಯಿಸಿದ ಈರುಳ್ಳಿ ಸೇರಿಸಿ ತಿನ್ನುವುದು ಬಹಳ ಅರೋಗ್ಯ ಕಾರಿ.

ಬೆಳ್ಳುಳ್ಳಿ: ಬೆಳ್ಳುಳ್ಳಿ ಪ್ರಬಲವಾದ ಪ್ರಿಬಯಾಟಿಕ್ ಆಗಿದೆ. ಇದು ಇನ್ಯುಲಿನ್ ಅನ್ನು ಹೊಂದಿರುತ್ತದೆ, ಇದು ಪ್ರಯೋಜನಕಾರಿ ಕರುಳಿನ ಬ್ಯಾಕ್ಟೀರಿಯಾವನ್ನು ಪೋಷಿಸುವ ಒಂದು ರೀತಿಯ ಫೈಬರ್. ಹೊಟ್ಟೆಯ ಆರೋಗ್ಯಕ್ಕೆ ಬೆಳ್ಳುಳ್ಳಿಯು ತುಂಬಾ ಪರಿಣಾಮಕಾರಿ ಆಗಿದೆ. ಇದರಲ್ಲಿ ಕೆಲವೊಂದು ನೈಸರ್ಗಿಕ ಪ್ರೊಬಯೋಟಿಕ್ ಗಳು ಇದ್ದು, ಜೀರ್ಣಕ್ರಿಯೆಗೆ ತುಂಬಾ ಸಹಕಾರಿ. ಹೀರಿಕೊಳ್ಳದ ನಾರಿನಾಂಶವನ್ನು ಹೊಂದಿರುವಂತಹ ಬೆಳ್ಳುಳ್ಳಿಯು ಹೊಟ್ಟೆಯ ಬ್ಯಾಕ್ಟೀರಿಯಾಗೆ ಸಹಕಾರಿ.

ಸೇಬು: ಸೇಬಿನಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಸಿ, ನಾರಿನಾಂಶ, ಆಂಟಿಆಕ್ಸಿಡೆಂಟ್ ಗಳಿದ್ದು, ಇದು ಕ್ಯಾಲರಿ ಕಡಿಮೆ ಮಾಡುವುದು. ಇದರಲ್ಲಿನ ನಾರಿನಾಂಶ ಮತ್ತು ಕಿಣ್ವಗಳು ಜೀರ್ಣಕ್ರಿಯೆ ವೃದ್ಧಿಸುವುದು. ಸಂಕೀರ್ಣ ಆಹಾರವನ್ನು ಇದು ವಿಘಟಿಸಲು ನೆರವಾಗುವುದು.

ಓಟ್ಸ್: ಓಟ್ಸ್ ಬೀಟಾ-ಗ್ಲುಕಾನ್‌ಗಳ ಉತ್ತಮ ಮೂಲವಾಗಿದೆ, ಇದು ಪ್ರಿಬಯಾಟಿಕ್ ಆಗಿ ಕಾರ್ಯನಿರ್ವಹಿಸುವ ಒಂದು ರೀತಿಯ ಫೈಬರ್ ಆಗಿದೆ. ನಿಯಮಿತವಾದ ಓಟ್‌ಮೀಲ್‌ನ ಸೇವನೆ ಕರುಳಿನ ಸ್ನೇಹಿ ವರ್ಧಕವಾಗುತ್ತದೆ.

ಶತಾವರಿ:  ಶತಾವರಿಯು ಇನ್ಯುಲಿನ್‌ನಲ್ಲಿ ಸಮೃದ್ಧವಾಗಿದೆ, ಇದು ಅಮೂಲ್ಯವಾದ ಪ್ರಿಬಯಾಟಿಕ್ ಆಹಾರವಾಗಿದೆ. ಅದರ ಪ್ರಿಬಯಾಟಿಕ್ ಅಂಶವನ್ನು ಸಂರಕ್ಷಿಸಲು ಶತಾವರಿಯನ್ನು ಸ್ಟೀಮ್ ಅಥವಾ ಹುರಿದು ಸಲಾಡ್‌ಗಳಲ್ಲಿ ಬಳಸಬಹುದು.

ಸಾಂಪ್ರದಾಯಿಕ ಉಪ್ಪಿನಕಾಯಿ : ವಿನೇಗ‌ರ್ ಅಥವಾ ಉಪ್ಪಿನೊಂದಿಗೆ ಸೇರಿಸಿ ನೆನೆಸುವುದರಿಂದ ಇದು ಪ್ರೊಬಯೋಟಿಕ್ ಅಂಶ ಹೊಂದಿರುತ್ತದೆ.

ಸಾಂಪ್ರದಾಯಿಕ ಮಜ್ಜಿಗೆ : ಸಾಂಪ್ರದಾಯಿಕ ಮಜ್ಜಿಗೆಯು ಪ್ರೊಬಯೋಟಿಕ್ ಅಂಶ ಹೊಂದಿರುವ ಉತ್ತಮ ಆಹಾರವಾಗಿದೆ.

ಕೆಫಿರ್: ಇದು ಹಾಲಿನ ಪದಾರ್ಥ. ಇದು ಉತ್ತಮ ಪ್ರಯೋಟಿಕ್ ಅಂಶವನ್ನು ಹೊಂದಿರುತ್ತದೆ. ಇದು ಉತ್ತಮ ಗುಣಮಟ್ಟದ ಕ್ಯಾಲಿಟ್ಸಂ ಹಾಗೂ ಪ್ರೊಟೀನ್ ಅನ್ನು ಹೊಂದಿರುತ್ತದೆ.

ಬಾಳೆಹಣ್ಣುಗಳು: ಬಾಳೆಹಣ್ಣುಗಳು ಅನುಕೂಲಕರವಾದ ತಿಂಡಿ ಮಾತ್ರವಲ್ಲ, ಅವು ನಿರೋಧಕ ಪಿಷ್ಟವನ್ನು ಒಳಗೊಂಡಿರುತ್ತವೆ, ಇದು ಕರುಳಿನ ಆರೋಗ್ಯವನ್ನು ಬೆಂಬಲಿಸುವ ಪ್ರಿಬಯಾಟಿಕ್. ಸ್ವಲ್ಪ ಹಸಿರು ಬಾಳೆಹಣ್ಣುಗಳ ಸೇವನೆಯಿಂದ ಹೆಚ್ಚಿನ ಮಟ್ಟದ ನಿರೋಧಕ ಪಿಷ್ಟವನ್ನು ಪಡೆಯಬಹುದು.

ಆಹಾರ ಪೂರಕಗಳು: ಪ್ರೊಬಯೋಟಿಕ್ಸ್ ಅನ್ನು ಮಾತ್ರೆಗಳು, ಕ್ಯಾಪ್ಸೂಲ್‌ಗಳು ಅಥವಾ ಪುಡಿ ರೂಪದಲ್ಲಿ ಪೂರಕಗಳಾಗಿ ಪಡೆಯಬಹುದು. 

ಪ್ರೊಬಯೋಟಿಕ್ಸ್‌ನ ಪ್ರಯೋಜನಗಳು

1)ಜೀರ್ಣಕ್ರಿಯೆಯ ಕಾರ್ಯವನ್ನು ಸುಧಾರಿಸುತ್ತದೆ.
2)ಕೆಲವು ಅತಿಸಾರ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.
3)”ಹಾನಿಕಾರಕ” ಸೂಕ್ಷ್ಮಾಣುಜೀವಿಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
4)ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. 

ಪ್ರೊಬಯೋಟಿಕ್ ಇರುವಂತಹ ಆಹಾರಗಳನ್ನು ನಮ್ಮ ಆಹಾರದಲ್ಲಿ ಸೇರಿಸುವುದರಿಂದ ಕರುಳಿನ ಬ್ಯಾಕ್ಟೀರಿಯಾದ ವೈವಿಧ್ಯತೆ ಮತ್ತು ಸಮತೋಲನವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ, ಒಟ್ಟಾರೆ ಕರುಳಿನ ಆರೋಗ್ಯ ಮತ್ತು ಜೀರ್ಣಕ್ರಿಯೆಯನ್ನು ಬೆಂಬಲಿಸುತ್ತದೆ.

ಸೌಮ್ಯ ಸನತ್.

  • ಅಜವಾನ ಅಜೀರ್ಣಕ್ಕೆ ಪ್ರಕೃತಿ ನೀಡಿದ ವರದಾನ
    by Team Varthaman
  • ಹೀಗೆ ಬಂದು ಹಾಗೆ ಹೋಗುವ ಸ್ನೇಹ ಸಾವಿರ
    by Team Varthaman
  • ಐಟಿ ದಾಳಿ ಭೀತಿ: ಕಾನ್ಫಿಡೆಂಟ್ ಅಧ್ಯಕ್ಷ ಡಾ.ಸಿ.ಜೆ.ರಾಯ್ ಆತ್ಮಹತ್ಯೆ
    by Team Varthaman
  • ಅಕ್ರಮ ವಲಸಿಗರ ಪತ್ತೆ–ಗಡಿಪಾರಿಗೆ ವಿಶೇಷ ತಂಡ ರಚನೆ: ರಾಜ್ಯ ಸರ್ಕಾರ
    by Team Varthaman
  • ತಿರುಪತಿ ಲಡ್ಡು ಕಲಬೆರಕೆ ಪ್ರಕರಣ: ₹234 ಕೋಟಿ ವಂಚನೆ ಬಯಲು
    by Team Varthaman
ಹಣ್ಣುಗಳ ಸಾಮ್ರಾಟ ಹಲಸು
ಸಿದ್ಧಿದಾತ್ರಿ
ಚಂದ್ರಘಂಟಾದೇವಿ
ಸಂಕ್ರಾತಿ ವರ್ಷ ಭವಿಷ್ಯ
ಶ್ರಾವಣ ಮಾಸ ಬಂದಾಗ
TAGGED:gut healthKannada ArticleProbioticsProbiotics foodsಪ್ರೊಬಯೋಟಿಕ್ಸ್
Share This Article
Facebook Email Print
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
goldTrending

ಚಿನ್ನ–ಬೆಳ್ಳಿ ದರದಲ್ಲಿ ಭಾರಿ ಏರಿಕೆ

Team Varthaman
Team Varthaman
September 22, 2025
ಏಕಕಾಲಕ್ಕೆ 11 ಸಬ್‌ ರಿಜಿಸ್ಟರ್ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ
ಧರ್ಮಸ್ಥಳ ಪ್ರಕರಣ : ಸಾಕ್ಷಿ ಸಿಗದೆ ದಿಕ್ಕು ಬದಲಿಸಿದ SIT
ಬಳ್ಳಾರಿ ಬ್ಯಾನರ್ ಗಲಾಟೆ ಪ್ರಕರಣ: ಐಜಿ ವರ್ತಿಕಾ ಕಟಿಯಾರ್ ವರ್ಗಾವಣೆ
1ನೇ ತರಗತಿ ಸೇರ್ಪಡೆ : ಮಕ್ಕಳ ಮಯೋಮಿತಿ 5 ವರ್ಷ 5 ತಿಂಗಳಿಗೆ ನಿಗದಿ
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?